For Quick Alerts
ALLOW NOTIFICATIONS  
For Daily Alerts

Budget 2023 Expectations: ತೆರಿಗೆ ವಿನಾಯಿತಿ, ಕೃಷಿ ವಲಯದ ಬಜೆಟ್ ನಿರೀಕ್ಷೆಗಳೇನು?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲಿದ್ದಾರೆ. ಈ ಬಜೆಟ್‌ 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುತ್ತಿರುವ ಬಜೆಟ್ ಇದಾದ ಕಾರಣ ಎಲ್ಲ ವಲಯಗಳು ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ. ಕೃಷಿ ವಲಯವು ಕೂಡಾ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಹೊಂದಿದೆ.

ಸಾಮ್ಕೋ ಸೆಕ್ಯೂರಿಟೀಸ್‌ನ ವಿಶ್ಲೇಷಕ ಊರ್ವಿ ಶಾ ಪ್ರಕಾರ ಜಾಗತಿಕವಾಗಿ ಉಂಟಾಗಿರುವ ಆಹಾರ ಬಿಕ್ಕಟ್ಟು ಭಾರತದ ಕೃಷಿ ವಲಯದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ಈ ಬಜೆಟ್ ವೇಳೆ ಕೃಷಿ ವಲಯಕ್ಕೆ ಅಧಿಕ ಆದ್ಯತೆಯನ್ನು ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕೃಷಿ ಬೆಳವಣಿಗೆಗೆ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ ಎಂಬುವುದು ಐಸಿಆರ್‌ಎ ನಿರೀಕ್ಷೆಯಾಗಿದೆ.

Budget 2023: ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಬೇಡ; ಕಾರ್ಬನ್ ಕ್ರೆಡಿಟ್ ಮಾರಲು ಬಿಡಿ: ರೈತರ ಒತ್ತಾಯBudget 2023: ಕೃಷಿ ಉತ್ಪನ್ನಗಳ ರಫ್ತಿಗೆ ನಿಷೇಧ ಬೇಡ; ಕಾರ್ಬನ್ ಕ್ರೆಡಿಟ್ ಮಾರಲು ಬಿಡಿ: ರೈತರ ಒತ್ತಾಯ

ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (Mahatma Gandhi National Rural Employment Guarantee Act) (MGNREGA) ಮೇಲಿನ ಬಜೆಟ್ ಹಂಚಿಕೆಯನ್ನು ಹೆಚ್ಚಳ ಮಾಡುವ ಸಾಧ್ಯತೆಯಿದೆ. ಕೃಷಿಯೇತರ ಕಾರ್ಯಗಳಿಗೂ ಸರ್ಕಾರ ಸಹಾಯವಾಗುವ ಯೋಜನೆ ಜಾರಿ ಮಾಡಲಿದೆ ಎಂಬ ನಿರೀಕ್ಷೆಯಿದೆ. ಹಾಗಾದರೆ ಬಜೆಟ್ ವಲಯದ ನಿರೀಕ್ಷೆಗಳೇನು, ಮುಂದೆ ಓದಿ...

 ಕೃಷಿ ವೃತ್ತಿ ಮಾಡುವವರಿಗೆ ತೆರಿಗೆ ವಿನಾಯಿತಿ

ಕೃಷಿ ವೃತ್ತಿ ಮಾಡುವವರಿಗೆ ತೆರಿಗೆ ವಿನಾಯಿತಿ

ಕೃಷಿ ವಲಯಕ್ಕೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ವ್ಯಾಪಾರಗಳಿಗೂ ತೆರಿಗೆ ವಿನಾಯಿತಿ ನೀಡಬೇಕು ಎಂಬುವುದು ಸೋಹನ್ ಲಾಲ್ ಕಮೋಡಿಟಿ ಮ್ಯಾನೇಜ್‌ಮೆಂಟ್‌ ಗ್ರೂಪ್‌ನ ಅಭಿಪ್ರಾಯವಾಗಿದೆ. ಎಸ್‌ಎಲ್‌ಸಿಎಂ ಗ್ರೂಪ್ ಕೃಷಿ ಉತ್ಪನ್ನಗಳಿಗೆ ಗೋದಾಮು, ಉಗ್ರಾಣ ವ್ಯವಸ್ಥೆಯನ್ನು ಮಾಡುವ ಸಂಸ್ಥೆಯಾಗಿದೆ. ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಸರಳೀಕರಿಸಬೇಕು ಎಂಬುವುದು ಎಸ್‌ಎಲ್‌ಸಿಎಂ ಗ್ರೂಪ್‌ನ ಸಿಇಒ ಸಂದೀಪ್ ಸುಬ್ರಾವಾಲ್ ಆಗ್ರಹವಾಗಿದೆ.

 ಕೃಷಿ ವಲಯದಲ್ಲಿ ಆಧುನಿಕ ಹೆಜ್ಜೆ

ಕೃಷಿ ವಲಯದಲ್ಲಿ ಆಧುನಿಕ ಹೆಜ್ಜೆ

ಡಿಲಾಯ್ಟ್‌ ಇಂಡಿಯಾ ವರದಿಯ ಪ್ರಕಾರ 2031ರ ವೇಳೆಗೆ 270 ಬಿಲಿಯನ್ ಡಾಲರ್ ಹೂಡಿಕೆ ಮಾಡಿ 800 ಬಿಲಿಯನ್ ಡಾಲರ್ ಆದಾಯವನ್ನು ಪಡೆಯುವಂತಹ ಸಾಮರ್ಥ್ಯವನ್ನು ಕೃಷಿ ವಲಯವು ಹೊಂದಿದೆ. ವರದಿಯ ಪ್ರಕಾರ ಕೃಷಿ ವಲಯದಲ್ಲಿ ಆಧುನಿಕ ಯಂತ್ರಗಳ ಬಳಕೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಹಾಗೆಯೆ ಸಣ್ಣ ಕೃಷಿ ಭೂಮಿಯನ್ನು ಹೊಂದಿರುವವರಿಗೆ ಸಹಾಯವಾಗುವಂತಹ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು. ಕೃಷಿ-ತಂತ್ರಜ್ಞಾನ ಜೊತೆಯಾದ ಸ್ಟಾರ್ಟ್‌ಅಪ್ ಸಂಸ್ಥೆಗಳ ಅಭಿವೃದ್ಧಿಗೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡಬೇಕು. ರೈತರು ಆಧುನಿಕ ಯಂತ್ರಗಳ ಸಹಾಯವನ್ನು ಹೆಚ್ಚಾಗಿ ಪಡೆಯಬೇಕು.

 ಕೃಷಿ ರಾಸಾಯನಿಕ ಸಂಸ್ಥೆಗಳಿಗೆ ಸಹಾಯ

ಕೃಷಿ ರಾಸಾಯನಿಕ ಸಂಸ್ಥೆಗಳಿಗೆ ಸಹಾಯ

ಮುಂದಿನ ಬಜೆಟ್‌ ವೇಳೆ ಸರ್ಕಾರವು ಕೃಷಿ ರಾಸಾಯನಿಕ ಉತ್ಪಾದನೆ ಮಾಡುವ ಸಂಸ್ಥೆಗಳಿಗೆ ಅಧಿಕ ಮೊತ್ತವನ್ನು ಹಂಚಿಕೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಾಮ್ಕೋ ಸೆಕ್ಯೂರಿಟೀಸ್‌ನ ವಿಶ್ಲೇಷಕ ಊರ್ವಿ ಶಾ ಪ್ರಕಾರ ಬಜೆಟ್‌ನಲ್ಲಿ ಕೃಷಿ ರಸಗೊಬ್ಬರಗಳನ್ನು ಉತ್ಪಾದನೆ ಮಾಡುವ ಸಂಸ್ಥೆಗಳಿಗೆ ನಿಧಿ ಹಂಚಿಕೆ ಅಧಿಕವಾಗಿ ಮಾಡುವ ನಿರೀಕ್ಷೆಯಿದೆ. ಹಾಗೆಯೇ ಸಬ್ಸಿಡಿಗಳನ್ನು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆಯಿದೆ.

English summary

Union Budget 2023: Agriculture Sector Expectation From The Budget, Details in Kannada

Union Budget 2023: Agriculture Sector in India may have many expectations from the Union budget, here we list out some expectations, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X