For Quick Alerts
ALLOW NOTIFICATIONS  
For Daily Alerts

Budget 2023 Expectations: ಗೃಹ ಖರೀದಿದಾರರ ನಿರೀಕ್ಷೆಗಳೇನು?

|

ಮನೆ ಖರೀದಿದಾರರು ತಮ್ಮ ಹೊಸ ಮನೆ ಅಥವಾ ಫ್ಲಾಟ್ ಅನ್ನು ವಾಸಯೋಗ್ಯವನ್ನಾಗಿಸಲು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಸಿದ್ಧ ಆಸ್ತಿಯನ್ನು ಅಂದರೆ ನಿರ್ಮಾಣವಾಗಿರುವ ಮನೆಯನ್ನು ಖರೀದಿ ಮಾಡುವಾಗಲೂ ಕೂಡಾ ಮನೆಯನ್ನು ವಾಸಯೋಗ್ಯವನ್ನಾಗಿಸಲು ಹಲವಾರು ಖರ್ಚುಗಳು ಇರುತ್ತದೆ. ಆದರೆ ಈಗ ಕೇಂದ್ರ ಬಜೆಟ್ 2023-24 ಹತ್ತಿರವಾಗುತ್ತಿದ್ದಂತೆ ಮನೆ ಖರೀದಿದಾರರು ಹಲವಾರು ನಿರೀಕ್ಷೆಯನ್ನು ಹೊಂದಿದ್ದಾರೆ.

 

ಕಳೆದ ವರ್ಷವು ಗೃಹ ಸಾಲ ಪಡೆದವರು ಹಲವಾರು ನಿರೀಕ್ಷೆಗಳನ್ನು ಹೊಂದಿದ್ದರು. ಆದರೆ ಯಾವುದೇ ನಿರೀಕ್ಷೆಯು ಪೂರೈಕೆಯಾಗಿಲ್ಲ. ಅಂದಾಜಿನ ಪ್ರಕಾರ ಸುಮಾರು ಶೇಕಡ 60ಕ್ಕೂ ಅಧಿಕ ಜನರು ಗೃಹ ಸಾಲವನ್ನು ಪಡೆಯುತ್ತಿದ್ದಾರೆ. ಹಾಗಾಗಿ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳನ್ನು ಈ ಜನರು ಹೊಂದಿರುವುದು ಸಹಜವಾಗಿದೆ.

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 54 ರ ಅಡಿಯಲ್ಲಿ ಹೊಸ ಮನೆಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುವ ಮೊದಲು ಮಾಡುವ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿಯನ್ನು ಮನೆ ಮಾಲೀಕರು ಪಡೆಯಬಹುದು. ಆದರೆ ಗೃಹ ಖರೀದಿ ಮಾಡಿರುವ ಆದಾಯ ತೆರಿಗೆ ಪಾವತಿದಾರರ ಬೇರೆ ನಿರೀಕ್ಷೆಗಳೇನು, ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

 ಮೊದಲ ಬಾರಿಗೆ ಮನೆ ಖರೀದಿಗೆ ತೆರಿಗೆ ವಿನಾಯಿತಿ, ಬಡ್ಡಿದರ ಕಡಿತ

ಮೊದಲ ಬಾರಿಗೆ ಮನೆ ಖರೀದಿಗೆ ತೆರಿಗೆ ವಿನಾಯಿತಿ, ಬಡ್ಡಿದರ ಕಡಿತ

ಗೃಹ ಖರೀದಿದಾರರ ಹಲವಾರು ನಿರೀಕ್ಷೆಗಳಲ್ಲಿ ತೆರಿಗೆ ವಿನಾಯಿತಿ ಕೂಡಾ ಒಂದಾಗಿದೆ. ಮೊದಲ ಬಾರಿಗೆ ಮನೆ ಖರೀದಿ ಮಾಡುವವರು, ಗೃಹ ಸಾಲವನ್ನು ಪಡೆದಾಗ ಅವರಿಗೆ ತೆರಿಗೆ ವಿನಾಯಿತಿ ಅಥವಾ ತೆರಿಗೆ ಕಡಿತವನ್ನು ನೀಡಬೇಕು ಎಂಬುವುದು ನಿರೀಕ್ಷೆಯಾಗಿದೆ. ಕೇಂದ್ರ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಅಥವಾ ತೆರಿಗೆ ಕಡಿತ ಕ್ರಮವನ್ನು ಕೈಗೊಂಡರೆ ಮೊದಲ ಬಾರಿಗೆ ಗೃಹ ಖರೀದಿ ಮಾಡುವವರಿಗೆ ಸಹಾಯವಾಗಲಿದೆ ಎಂಬ ಅಭಿಪ್ರಾಯವಿದೆ. ಹಾಗೆಯೇ ಬಡ್ಡಿದರವನ್ನು ಕಡಿತ ಮಾಡಬೇಕು ಎಂಬುವುದು ಕೂಡಾ ಬೇಡಿಕೆಯಾಗಿದೆ. ಇತ್ತೀಚೆಗೆ ರೆಪೋ ದರ ಹೆಚ್ಚಾದಂತೆ ಗೃಹ ಸಾಲದ ಬಡ್ಡಿದರವು ಕೂಡಾ ಹೆಚ್ಚಾಗಿದೆ. ಆದ್ದರಿಂದ ಬಡ್ಡಿದರವನ್ನು ಕಡಿತ ಮಾಡಬೇಕು ಎಂಬುವುದು ಗೃಹ ಖರೀದಿದಾರರ ನಿರೀಕ್ಷೆಯಾಗಿದೆ. ಇದರಿಂದಾಗಿ ಗೃಹ ಖರೀದಿದಾರರಿಗೆ ಗೃಹ ಸಾಲದ ಹೊರೆ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವಿದೆ.

 ಗೃಹ ಯೋಜನೆಗಳಿಗೆ ಅಧಿಕ ಮೊತ್ತ ಘೋಷಣೆ

ಗೃಹ ಯೋಜನೆಗಳಿಗೆ ಅಧಿಕ ಮೊತ್ತ ಘೋಷಣೆ

ಗೃಹ ಯೋಜನೆಗಳಿಗೆ ಅಧಿಕ ಮೊತ್ತ ಘೋಷಣೆ ಮಾಡಬೇಕೆಂಬುವುದು ಗೃಹ ಖರೀದಿದಾರರ ಹಲವಾರು ನಿರೀಕ್ಷೆಗಳಲ್ಲಿ ಒಂದಾಗಿದೆ. ಇದರಿಂದಾಗಿ ಗೃಹ ಖರೀದಿದಾರರಿಗೆ ತಮ್ಮ ಕೈಗೆಟಕುವ ಮನೆಯನ್ನು ಖರೀದಿ ಮಾಡಲು ಸಹಾಯವಾಗಲಿದೆ. ಹಲವಾರು ಗೃಹ ಯೋಜನೆಗಳು ಇದ್ದು ಅದಕ್ಕೆ ಬಜೆಟ್‌ನಲ್ಲಿ ಅಧಿಕ ಮೊತ್ತ ಹಂಚಿಕೆ ಮಾಡಬೇಕು ಎಂಬ ಬೇಡಿಕೆಯಿದೆ. ಇನ್ನು ಇದರೊಂದಿಗೆ ಸರ್ಕಾರವು ಮಾರ್ಗ, ಸಾರ್ವಜನಿಕ ಸಾರಿಗೆ, ಇತರೆ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಬೇಕು. ಎಲ್ಲ ಕಡೆಗಳಲ್ಲಿ ಈ ಅಭಿವೃದ್ಧಿ ನಡೆಯಬೇಕು. ಇದರಿಂದಾಗಿ ಗೃಹ ಖರೀದಿದಾರರಿಗೆ ಸುಲಭವಾಗಲಿದೆ. ಹಾಗೆಯೇ ಆ ಜಾಗದ ಮೌಲ್ಯವು ಹೆಚ್ಚಾಗಲಿದೆ.

 ರಿಯಲ್‌ ಎಸ್ಟೇಟ್‌ ನಿಯಂತ್ರಣ,  ಅಗತ್ಯ ವಸ್ತುಗಳ ಲಭ್ಯತೆ
 

ರಿಯಲ್‌ ಎಸ್ಟೇಟ್‌ ನಿಯಂತ್ರಣ, ಅಗತ್ಯ ವಸ್ತುಗಳ ಲಭ್ಯತೆ

ಪ್ರಮುಖವಾಗಿ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ನಿಯಂತ್ರಣ ಮಾಡುವಂತಹ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು ಎಂಬ ಬಜೆಟ್ ನಿರೀಕ್ಷೆಯಿದೆ. ಹಣದುಬ್ಬರದ ನಡುವೆ ಗೃಹ ದರವನ್ನು ಹೆಚ್ಚಿಸುವುದಕ್ಕೂ ಕಡಿವಾಣ ಹಾಕಬೇಕು, ಇದರಿಂದಾಗಿ ಗೃಹ ಖರೀದಿದಾರರಿಗೆ ಸುಲಭವಾಗಲಿದೆ ಎಂಬುವುದು ಗೃಹ ಖರೀದಿದಾರರ ಅಭಿಪ್ರಾಯವಾಗಿದೆ. ಹಾಗೆಯೇ ಗೃಹ ನಿರ್ಮಾಣಕ್ಕೆ ಬೇಕಾದ ಅಗತ್ಯ ವಸ್ತುಗಳ ಲಭ್ಯತೆಯು ಸರಳವಾಗಿರುಬೇಕು. ಇದಕ್ಕಾಗಿ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಗೃಹ ನಿರ್ಮಾಣಕ್ಕೆ ಬೇಕಾದ ವಸ್ತುಗಳ ಲಭ್ಯತೆಯು ಸರಳವಾದರೆ, ಜನರು ಕಡಿಮೆ ವೆಚ್ಚದಲ್ಲಿ, ಯಾವುದೇ ತಾಪತ್ರಯವಿಲ್ಲದೆ ಗೃಹ ನಿರ್ಮಾಣ ಮಾಡಬಹುದು. ಅಗತ್ಯ ವಸ್ತುಗಳ ಲಭ್ಯತೆ ಕಡಿಮೆಯಾದಂತೆ, ಅದರ ಬೇಡಿಕೆ ಹೆಚ್ಚಾಗಿ ಬೆಲೆಯು ಹೆಚ್ಚಾಗುತ್ತದೆ. ಇದು ಗೃಹ ಖರೀದಿದಾರರ ಅಥವಾ ಗೃಹ ನಿರ್ಮಾಣ ಮಾಡುವವರ ಮೇಲೆ ನೆಗೆಟಿವ್ ಪ್ರಭಾವ ಬೀರುತ್ತದೆ ಎಂಬುವುದು ಅಭಿಪ್ರಾಯವಾಗಿದೆ.

 ಗೃಹ ಸಾಲ ಪಡೆಯುವ ನಿಯಮ ಸಡಿಲಿಕೆ

ಗೃಹ ಸಾಲ ಪಡೆಯುವ ನಿಯಮ ಸಡಿಲಿಕೆ

ಜನರು ಯಾವುದೇ ಒಂದು ಸಾಲವನ್ನು ಪಡೆಯಬೇಕಾದರೂ ಅದಕ್ಕೆ ಕೆಲವೊಂದು ಮಾನದಂಡಗಳು ಇರುತ್ತದೆ. ನಾವು ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ ನಮ್ಮಲ್ಲಿ ಉದ್ಯೋಗ ಇರುವುದು ಎಷ್ಟು ಮುಖ್ಯವಾಗಿರುತ್ತದೆಯೋ ಹಾಗೆಯೇ, ಗೃಹ ಸಾಲಕ್ಕೂ ಅದರದ್ದೆ ಆದ ಕೆಲವೊಂದು ಮಾನದಂಡಗಳು ಇದೆ. ಅರ್ಹತೆ ಆಧಾರದಲ್ಲಿ ಗೃಹ ಸಾಲವನ್ನು ನೀಡಲಾಗುತ್ತದೆ. ಆದರೆ ಈ ನಿಯಮವನ್ನು ಸಡಿಲಿಕೆ ಮಾಡಬೇಕು ಎಂಬುವುದು ಗೃಹ ಖರೀದಿದಾರರ ಬೇಡಿಕೆಯಾಗಿದೆ.

English summary

Budget 2023 Expectations: Home Buyers Expectation From The budget 2023, Details in Kannada

Union Budget 2023: Home buyers in India may have many expectations from the Union budget, here we list out some expectations, Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X