ವಂದೇ ಭಾರತ್ ದೇಶದ ಅತ್ಯಂತ ಜನಪ್ರಿಯ ಮತ್ತು ವೇಗದ ರೈಲುಗಳಲ್ಲಿ ಒಂದಾಗಿದೆ. ಭಾರತೀಯ ರೈಲ್ವೆ ನಿಯಮಿತವಾಗಿ ವಿವಿಧ ಮಾರ್ಗಗಳಲ್ಲಿ ಹೊಸ ರೈಲುಗಳನ್ನು ಸೇರುಸುತ್ತಾ ಬಂದಿದೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಮತ್ತು ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಮೈಸೂರು, ಚೆನ್ನೈ ಅಥವಾ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ಇದು ಉತ್ತಮ ಅವಕಾಶವಾಗಿದೆ.
ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಕಾರ್ಯನಿರ್ವಹಿಸುವ ವಂದೇ ಭಾರತ್ ಸಾಪ್ತಾಹಿಕ ವಿಶೇಷ ರೈಲುಗಳ ಬಗ್ಗೆ ನೀವು ತಿಳಿದಿರಬೇಕು. ಈ ರೈಲು ಯಾವೆಲ್ಲ ದಿನ ಇರಲಿದೆ, ಎಲ್ಲಿಗೆಲ್ಲ ಪ್ರಯಾಣಿಸಲಿದೆ, ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಯಾವಾಗ ವಂದೇ ಭಾರತ್ ಸಾಪ್ತಾಹಿಕ ವಿಶೇಷ ರೈಲು?
ಮೊದಲೇ ಹೇಳಿದಂತೆ, ವಂದೇ ಭಾರತ್ ಸಾಪ್ತಾಹಿಕ ವಿಶೇಷ ರೈಲುಗಳು ಬೆಂಗಳೂರಿನ ಮೂಲಕ ಚೆನ್ನೈ ಮತ್ತು ಮೈಸೂರು ನಡುವೆ ಕಾರ್ಯನಿರ್ವಹಿಸಲಿವೆ. ದಕ್ಷಿಣ ರೈಲ್ವೆ ಹೊರಡಿಸಿದ ಹೇಳಿಕೆಯ ಪ್ರಕಾರ, ಹೆಚ್ಚುವರಿ ಜನದಟ್ಟಣೆ ಕಡಿಮೆ ಮಾಡಲು ರೈಲು ಬುಧವಾರದಂದು ಕಾರ್ಯನಿರ್ವಹಿಸುತ್ತದೆ. ರೈಲುಗಳು ಅದೇ ದಿನ ನಿರ್ಗಮಿಸುತ್ತದೆ ಮತ್ತು ನಿಗದಿತ ನಿಲ್ದಾಣಗಳನ್ನು ತಲುಪುತ್ತದೆ.
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್: ದಿನಾಂಕ, ಸಮಯ
ಚೆನ್ನೈ-ಮೈಸೂರು ವಂದೇ ಭಾರತ್ ಸಾಪ್ತಾಹಿಕ ವಿಶೇಷ ರೈಲುಗಳು ನವೆಂಬರ್ 29, ಡಿಸೆಂಬರ್ 6, ಡಿಸೆಂಬರ್ 13, ಡಿಸೆಂಬರ್ 20 ಮತ್ತು ಡಿಸೆಂಬರ್ 27, 2023 ರಂದು, ಅಂದರೆ ಪ್ರತಿ ಬುಧವಾರದಂದು ಈ ವರ್ಷಾಂತ್ಯದವರೆಗೆ ಕಾರ್ಯನಿರ್ವಹಿಸುತ್ತವೆ.
ರೈಲು ಸಂಖ್ಯೆ 06037 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5:50ಕ್ಕೆ ಹೊರಡಲಿದ್ದು, ಬೆಂಗಳೂರಿನ ಮೂಲಕ ಅದೇ ದಿನ ಮಧ್ಯಾಹ್ನ 12:20ಕ್ಕೆ ಮೈಸೂರು ತಲುಪಲಿದೆ. ರೈಲು ನಂ. 06038 ಮೈಸೂರಿನಿಂದ ಮಧ್ಯಾಹ್ನ 1:05 ಗಂಟೆಗೆ ಹೊರಡುತ್ತದೆ ಮತ್ತು ಅದೇ ದಿನ ರಾತ್ರಿ 7:20 ಕ್ಕೆ ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ತಲುಪುತ್ತದೆ.
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್: ಮೀಸಲಾತಿ
ಚೆನ್ನೈ ಮತ್ತು ಮೈಸೂರು ನಡುವೆ ಸಂಚರಿಸುವ ಎರಡೂ ರೈಲುಗಳ ರಿಸರ್ವೇಷನ್ ಇನ್ನೂ ಪ್ರಾರಂಭವಾಗಿಲ್ಲ. ಆದಾಗ್ಯೂ, ಈ ಸಾಪ್ತಾಹಿಕ ವಿಶೇಷ ರೈಲುಗಳಿಗೆ ಬುಕ್ಕಿಂಗ್ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದೆ. ರೈಲುಗಳು ಒಟ್ಟು ಎಂಟು ಕೋಚ್‌ಗಳನ್ನು ಒಳಗೊಂಡಿರುತ್ತವೆ.
'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು 2019 ರಲ್ಲಿ ಪ್ರಾರಂಭವಾಯಿತು. ಆರಂಭದಲ್ಲಿ ದೆಹಲಿಯಿಂದ ವಾರಣಾಸಿಯ ಮಾರ್ಗದ ಸಂಚಾರ ಉದ್ಘಾಟನೆ ಮಾಡಲಾಗಿದೆ. ಅದಾದ ಬಳಿಕ ಈಗ ದೇಶದ ಹಲವಾರು ನಗರಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿದೆ.


Click it and Unblock the Notifications