ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಆದರೆ ಕಳೆದ ಎರಡು ಎಂಪಿಸಿ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಈ ನಡುವೆ ಯೆಸ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಅವಧಿಯ ಎಫ್‌ಡಿ ಬಡ್ಡಿದರವನ್ನು ಏರಿಸಿದೆ.
ಹೌದು ಹಲವಾರು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರ ಇಳಿಸುತ್ತಿರುವಾಗ ಯೆಸ್ ಬ್ಯಾಂಕ್ ಏರಿಸಿದೆ. ಪರಿಷ್ಕರಣೆಯ ನಂತರ ಬ್ಯಾಂಕ್ ಈಗ 18 ತಿಂಗಳಿಂದ 24 ತಿಂಗಳ ಅವಧಿಗೆ ಶೇಕಡ 7.75 ರಷ್ಟು ಬಡ್ಡಿದರವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಬ್ಯಾಂಕ್ ಎಫ್‌ಡಿಗಳ ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಪೆನಾಲ್ಟಿ ದರಗಳನ್ನು 25 ಬಿಪಿಎಸ್ ಹೆಚ್ಚಿಸಿದೆ. ಇಲ್ಲಿದೆ ವಿವರ ಮುಂದೆ ಓದಿ...

ಯೆಸ್ ಬ್ಯಾಂಕ್ ಎಫ್‌ಡಿ ದರಗಳು
7-14 ದಿನಗಳ ನಡುವೆ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 3.25 ಬಡ್ಡಿಯನ್ನು ನೀಡುತ್ತಿದೆ. ಆದರೆ ಯೆಸ್ ಬ್ಯಾಂಕ್ ಪ್ರಸ್ತುತ 15-45 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 3.70 ರಷ್ಟು ಬಡ್ಡಿಯನ್ನು ನೀಡುತ್ತಿದೆ.
ಯೆಸ್ ಬ್ಯಾಂಕ್ ಈಗ 91 ದಿನಗಳಿಂದ 120 ದಿನಗಳ ಅವಧಿಯ ಡೆಪಾಸಿಟ್‌ಗಳಿಗೆ ಶೇಕಡ 4.75 ರಷ್ಟು ಮತ್ತು 46 ದಿನಗಳಿಂದ 90 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 4.10 ಬಡ್ಡಿದರಗಳನ್ನು ಒದಗಿಸುತ್ತಿದೆ.
121 ದಿನಗಳಿಂದ 180 ದಿನಗಳವರೆಗೆ ಅವಧಿಯಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಯೆಸ್ ಬ್ಯಾಂಕ್ ಶೇಕಡ 5 ರಷ್ಟು ಬಡ್ಡಿಯನ್ನು ನೀಡುತ್ತದೆ. 181 ದಿನಗಳಿಂದ 271 ದಿನಗಳವರೆಗೆ ಮೆಚ್ಯೂರಿಟಿ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 6.10 ಬಡ್ಡಿದರವನ್ನು ನೀಡುತ್ತದೆ.
ಬ್ಯಾಂಕ್ 272 ದಿನಗಳಿಂದ 1 ವರ್ಷದವರೆಗೆ ಮೆಚ್ಯೂರ್ ಆಗುವ ಎಫ್‌ಡಿಗಳ ಮೇಲೆ ಶೇಕಡ 6.35 ಬಡ್ಡಿಯನ್ನು ನೀಡುತ್ತದೆ. ಯೆಸ್ ಬ್ಯಾಂಕ್ ಪ್ರಸ್ತುತ 1 ವರ್ಷದಲ್ಲಿ ಮೆಚ್ಯೂರ್ ಆಗುವ ಶೇಕಡ 7.25 ಬಡ್ಡಿಯನ್ನು ನೀಡುತ್ತಿದೆ.
ಯೆಸ್ ಬ್ಯಾಂಕ್ ಈಗ 18 ಮತ್ತು 24 ತಿಂಗಳ ನಡುವಿನ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಶೇಕಡ 7.75 ಬಡ್ಡಿದರವನ್ನು ನೀಡುತ್ತದೆ. 1 ವರ್ಷ 1 ದಿನ ಮತ್ತು 18 ತಿಂಗಳ ನಡುವೆ ಅವಧಿಯಲ್ಲಿ ಮಾಡಿದ ಫಿಕ್ಸಿಡ್ ಡೆಪಾಸಿಟ್ ಡೆಪಾಸಿಟ್‌ಗಳ ಮೇಲೆ ಯೆಸ್ ಬ್ಯಾಂಕ್ ಶೇಕಡ 7.50 ಬಡ್ಡಿದರವನ್ನು ನೀಡುತ್ತದೆ.
24 ಮತ್ತು 60 ತಿಂಗಳ ನಡುವೆ ಮೆಚ್ಯೂರ್ ಆಗುವ ಡೆಪಾಸಿಟ್‌ಗಳಿಗೆ ಯೆಸ್ ಬ್ಯಾಂಕ್ ಶೇಕಡ 7.25 ಬಡ್ಡಿದರವನ್ನು ನೀಡುತ್ತವೆ. ಆದರೆ 60 ಮತ್ತು 120 ತಿಂಗಳ ನಡುವಿನ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.00 ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.
ಅಕಾಲಿಕ್ ಎಫ್‌ಡಿ ವಿತ್‌ಡ್ರಾ ದಂಡ
181 ದಿನಗಳಿಗಿಂತ ಕಡಿಮೆ ಇರುವ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಪೆನಾಲ್ಟಿ ಶುಲ್ಕವನ್ನು 25 ಬಿಪಿಎಸ್ ಹೆಚ್ಚಳ ಮಾಡಿದೆ. ಶೇಕಡ 0.50 ರಿಂದ ಶೇಕಡ 0.75ಕ್ಕೆ ಈ ಪೆನಾಲ್ಟಿಯನ್ನು ಹೆಚ್ಚಳ ಮಾಡಿದೆ. ಆದರೆ 182 ದಿನಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಮೇಲೆ ಯೆಸ್ ಬ್ಯಾಂಕ್ ಪೆನಾಲ್ಟಿ ದರಗಳನ್ನು 25 ಬಿಪಿಎಸ್ ಹೆಚ್ಚಿಸಿದ್ದು ಈ ಹಿಂದೆ ಇದ್ದ ಶೇಕಡ 0.75 ರಿಂದ ದರ ಶೇಕಡ 1.00 ಕ್ಕೆ ಹೆಚ್ಚಳವಾಗಿದೆ.
ಈ ಫಿಕ್ಸಿಡ್ ಡೆಪಾಸಿಟ್‌ಗಳ ಅಕಾಲಿಕ ವಿತ್‌ಡ್ರಾ ಮೇಲಿನ ಪರಿಷ್ಕೃತ ದಂಡ ಶುಲ್ಕಗಳು ನವೆಂಬರ್ 3 ರಿಂದ ಜಾರಿಗೆ ಬರುತ್ತದೆ. ಅಕಾಲಿಕವಾಗಿ ಭಾಗಶಃ ಮತ್ತು ಪೂರ್ಣ ಪ್ರಮಾಣದಲ್ಲಿ ಎಫ್‌ಡಿ ಹಿಂಪಡೆಯುವುದಾದರೆ ಬಡ್ಡಿ ಮೇಲೆ ಶುಲ್ಕ ವಿಧಿಸಲಾಗುತ್ತದೆ.


Click it and Unblock the Notifications