ಯೆಸ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಏರಿಕೆ ಮಾಡಿದೆ. 2 ಕೋಟಿ ರೂಪಾಯಿಯ ಎಫ್‌ಡಿ ಬಡ್ಡಿದರವನ್ನು ಯೆಸ್ ಬ್ಯಾಂಕ್ ಪರಿಷ್ಕರಣೆ ಮಾಡಿದ್ದು, ನಿಗದಿತ ಅವಧಿಯ ಎಫ್‌ಡಿ ಹೆಚ್ಚಳವಾಗಲಿದೆ. ಸೋಮವಾರ ಯೆಸ್ ಬ್ಯಾಂಕ್ ಈ ಬಡ್ಡಿದರ ಪರಿಷ್ಕರಣೆಯನ್ನು ಮಾಡಿದ್ದು, ಸೋಮವಾರದಿಂದಲೇ ಈ ನೂತನ ಬಡ್ಡಿದರವು ಜಾರಿಗೆ ಬರಲಿದೆ.
ಎಫ್‌ಡಿ ಬಡ್ಡಿದರ ಪರಿಷ್ಕರಣೆಯ ಬಳಿಕ ಸಾಮಾನ್ಯ ನಾಗರಿಕರಿಗೆ ಬ್ಯಾಂಕ್ 7 ದಿನಗಳಿಂದ 120 ತಿಂಗಳುಗಳ ಅವಧಿಗೆ ಶೇಕಡ 3.25ರಿಂದ ಶೇಕಡ 7ರಷ್ಟು ಬಡ್ಡಿದರವನ್ನು ನೀಡುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಇದೇ ಅವಧಿಯ ಎಫ್ಡಿ ಮೇಲೆ ಬ್ಯಾಂಕ್ ಶೇಕಡ 3.75ರಿಂದ ಶೇಕಡ 7.75ರಷ್ಟು ಬಡ್ಡಿದರ ನೀಡಲಾಗುತ್ತದೆ. ಇನ್ನು 18 ತಿಂಗಳಿನಿಂದ 36 ತಿಂಗಳುಗಳ ಅವಧಿಯ ಎಫ್ಡಿ ಮೇಲೆ ಹಿರಿಯ ನಾಗರಿಕರಿಗೆ ಬ್ಯಾಂಕ್ ಶೇಕಡ 7.75ರಿಂದ ಶೇಕಡ 8.25ರಷ್ಟು ಬಡ್ಡಿದರ ನೀಡಲಾಗುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಯೆಸ್ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್
7 ದಿನಗಳಿಂದ 14 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಮೇಲೆ ಬ್ಯಾಂಕ್ ಶೇಕಡ 3.25, 15 ದಿನಗಳಿಂದ 45 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 3.70ರಷ್ಟು ಬಡ್ಡಿದರವನ್ನು ಯೆಸ್ ಬ್ಯಾಂಕ್ ನೀಡುತ್ತದೆ. 46 ದಿನಗಳಿಂದ 90 ದಿನಗಳ ಅವಧಿಯ ಎಫ್ಡಿ ಮೇಲೆ ಯೆಸ್ ಬ್ಯಾಂಕ್ ಶೇಕಡ 4.10ರಷ್ಟು ಬಡ್ಡಿದರ ನೀಡುತ್ತದೆ. ಇನ್ನು 91 ದಿನಗಳಿಂದ 120 ದಿನಗಳವರೆಗಿನ ಎಫ್‌ಡಿ ಮೇಲೆ ಶೇಕಡ 4.75ರಷ್ಟು ಬಡ್ಡಿದರ ನೀಡಲಾಗುತ್ತದೆ.
121 ಮತ್ತು 180 ದಿನಗಳ ನಡುವಿನ ಅವಧಿಯ ಎಫ್ಡಿ ಮೇಲೆ ಈಗ ಶೇಕಡ 5.00ರಷ್ಟು ಬಡ್ಡಿದರ, 181 ರಿಂದ 271 ದಿನಗಳ ಅವಧಿಯ ಎಫ್ಡಿ ಮೇಲೆ 6.10ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಈ ಹಿಂದೆ ಶೇಕಡ 6ರಷ್ಟಿತ್ತು, ಇದೀಗ 10 ಬೇಸಿಕ್ ಪಾಯಿಂಟ್ ಹೆಚ್ಚಳವಾಗಿದೆ. 272 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಬಡ್ಡಿದರವನ್ನು ಕೂಡಾ 10 ಬಿಪಿಎಸ್ ಹೆಚ್ಚಿಸಲಾಗಿದೆ.
ಇನ್ನು "ಸಾಮಾನ್ಯ ನಾಗರಿಕರಿಗೆ ನೀಡುವ ಬಡ್ಡಿದರಕ್ಕಿಂತ ಹಿರಿಯ ನಾಗರಿಕರಿಗೆ 3 ವರ್ಷಗಳ ಅವಧಿಯ ಎಫ್ಡಿ ಮೇಲೆ ಹೆಚ್ಚುವರಿಯಾಗಿ ಶೇಕಡ 0.50ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು 3 ವರ್ಷದಿಂದ 5 ವರ್ಷದ ಅವಧಿಯ ಎಫ್ಡಿ ಮೇಲೆ ಶೇಕಡ 0.75ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ," ಎಂದು ಯೆಸ್ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಯೆಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ (ಸಾಮಾನ್ಯ ನಾಗರಿಕರು)
7-14 ದಿನಗಳು: ಶೇಕಡ 3.25 ಬಡ್ಡಿದರ
15-45 ದಿನಗಳು: ಶೇಕಡ 3.70 ಬಡ್ಡಿದರ
46-90 ದಿನಗಳು: ಶೇಕಡ 4.10 ಬಡ್ಡಿದರ
91-120 ದಿನಗಳು: ಶೇಕಡ 4.75 ಬಡ್ಡಿದರ
121-180 ದಿನಗಳು: ಶೇಕಡ 5.00 ಬಡ್ಡಿದರ
181 ದಿನದಿಂದ 271 ದಿನಗಳು: ಶೇಕಡ 6.10 ಬಡ್ಡಿದರ
272 ದಿನಗಳಿಂದ 1 ವರ್ಷ: ಶೇಕಡ 6.35 ಬಡ್ಡಿದರ
1 ವರ್ಷಕ್ಕಿಂತ ಮೇಲ್ಪಟ್ಟು 18 ತಿಂಗಳುಗಳವರೆಗೆ: ಶೇಕಡ 7.50 ಬಡ್ಡಿದರ
18 ತಿಂಗಳಿಗಿಂತ ಮೇಲ್ಪಟ್ಟು 36 ತಿಂಗಳುಗಳವರೆಗೆ: ಶೇಕಡ 7.75 ಬಡ್ಡಿದರ
36 ತಿಂಗಳಿಗಿಂತ ಮೇಲ್ಪಟ್ಟು 60 ತಿಂಗಳುಗಳವರೆಗೆ: ಶೇಕಡ 7.25 ಬಡ್ಡಿದರ
60 ತಿಂಗಳಿಗಿಂತ ಮೇಲ್ಪಟ್ಟು 120 ತಿಂಗಳುಗಳವರೆಗೆ: ಶೇಕಡ 7.00 ಬಡ್ಡಿದರ
ಯೆಸ್ ಬ್ಯಾಂಕ್ ಎಫ್‌ಡಿ ಬಡ್ಡಿದರ (ಹಿರಿಯ ನಾಗರಿಕರು)
7-14 ದಿನಗಳು: ಶೇಕಡ 3.75 ಬಡ್ಡಿದರ
15-45 ದಿನಗಳು: ಶೇಕಡ 4.20 ಬಡ್ಡಿದರ
46-90 ದಿನಗಳು: ಶೇಕಡ 4.60 ಬಡ್ಡಿದರ
91-120 ದಿನಗಳು: ಶೇಕಡ 5.25 ಬಡ್ಡಿದರ
121-180 ದಿನಗಳು: ಶೇಕಡ 5.50 ಬಡ್ಡಿದರ
181 ದಿನದಿಂದ 271 ದಿನಗಳು: ಶೇಕಡ 6.77 ಬಡ್ಡಿದರ
272 ದಿನಗಳಿಂದ 1 ವರ್ಷ: ಶೇಕಡ 7.03 ಬಡ್ಡಿದರ
1 ವರ್ಷಕ್ಕಿಂತ ಮೇಲ್ಪಟ್ಟು 18 ತಿಂಗಳುಗಳವರೆಗೆ: ಶೇಕಡ 8.24 ಬಡ್ಡಿದರ
18 ತಿಂಗಳಿಗಿಂತ ಮೇಲ್ಪಟ್ಟು 36 ತಿಂಗಳುಗಳವರೆಗೆ: ಶೇಕಡ 8.51 ಬಡ್ಡಿದರ
36 ತಿಂಗಳಿಗಿಂತ ಮೇಲ್ಪಟ್ಟು 60 ತಿಂಗಳುಗಳವರೆಗೆ: ಶೇಕಡ 8.24 ಬಡ್ಡಿದರ
60 ತಿಂಗಳಿಗಿಂತ ಮೇಲ್ಪಟ್ಟು 120 ತಿಂಗಳುಗಳವರೆಗೆ: ಶೇಕಡ 7.98 ಬಡ್ಡಿದರ
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications