For Quick Alerts
ALLOW NOTIFICATIONS  
For Daily Alerts

ಎನ್ನಾರೈಗಳು ಆಧಾರ ಕಾರ್ಡ್ ಪಡೆಯಲು ಮಾರ್ಗಸೂಚಿ

By Mahesh
|

ಭಾರತೀಯ ರಾಷ್ಟ್ರೀಯ ಗುರುತಿನ ಚೀಟಿ ಪ್ರಾಧಿಕಾರ ನೀಡುವ 12 ಅಂಕಿಗಳ ಆಧಾರ್ ಕಾರ್ಡ್‌ ಅನಿವಾಸಿ ಭಾರತೀಯರೂ ಪಡೆಯಬಹುದಾಗಿದೆ. ವಿವಿಧ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ತಮ್ಮ ಐಡೆಂಡೆಟಿ ಪ್ರೂಫ್ ನೀಡಿ ಸುಲಭವಾಗಿ ಆಧಾರ್ ಗುರುತಿನ ಚೀಟಿ ಪಡೆಯಬಹುದಾಗಿದೆ.

ಅನಿವಾಸಿ ಭಾರತೀಯರು ಅನುಸರಿಸಬೇಕಾದ ಕೆಲ ನಿಮಯಗಳು:

ಐಡೆಂಟಿಫಿಕೇಷನ್:
ಭಾರತದ ಯಾವುದೇ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಎನ್ನಾರೈ ಎಂಬುದಕ್ಕೆ ಅಗತ್ಯ ದಾಖಲೆಯನ್ನು ನೀಡಬೇಕು. ಜೊತೆಗೆ ಜನ್ಮ ಪ್ರಮಾಣ ಪತ್ರ, ಶಾಲಾ ಪ್ರಮಾಣ ಪತ್ರ ಇನ್ನಿತರೆ ಭಾವಚಿತ್ರ ಸಹಿತ ಐಡೆಂಡೆಟಿ ನೀಡಬೇಕು. ವಿದೇಶದಲ್ಲಿ ನೆಲೆಸಿರುವುದಕ್ಕೆ ಅಗತ್ಯ ದಾಖಲೆ ಒದಗಿಸಬೇಕು.

 ಆಧಾರ್ ಕೇಂದ್ರಕ್ಕೆ ತೆರಳುವ ಮುನ್ನ

ಆಧಾರ್ ಕೇಂದ್ರಕ್ಕೆ ತೆರಳುವ ಮುನ್ನ

ಆಧಾರ್ ನೋಂದಣಿ ಕೇಂದ್ರಕ್ಕೆ ಹೋಗುವ ಮುನ್ನ ರೇಷನ್ ಕಾರ್ಡ್, ಪಾಸ್‌ಪೋರ್ಟ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಒಂದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ಆಧಾರ್ ಕೇಂದ್ರಕ್ಕೆ ತೆರಳಿದ ಮೇಲೆ

ಆಧಾರ್ ಕೇಂದ್ರಕ್ಕೆ ತೆರಳಿದ ಮೇಲೆ

* ಭಾರತದ ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ, ಅಲ್ಲಿ ಅರ್ಜಿಯನ್ನು ಪಡೆದು, ಅದನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ.
* ಇಡೀ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ.
* ಆನ್ ಲೈನ್ ಮೂಲಕ ಮೊದಲೇ ನೋಂದಣಿ ಮಾಡಿಕೊಂಡು, ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಡು ಭರ್ತಿ ಮಾಡಿ ಅದನ್ನು ನೋಂದಣಿ ಕೇಂದ್ರದಲ್ಲಿ ಹೋಗಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಿ, ಅವರು ನೀಡುವ ಸ್ವೀಕೃತಿ ಪತ್ರವನ್ನು ಪಡೆಯಬಹುದಾಗಿದೆ.

ಬಯೋ ಮೆಟ್ರಿಕ್ ಐಡೆಂಟಿಟಿ

ಬಯೋ ಮೆಟ್ರಿಕ್ ಐಡೆಂಟಿಟಿ

ನೋಂದಣಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಭಾವಚಿತ್ರ, ಬೆರಳಚ್ಚು ಮಾದರಿ ಮತ್ತು ಕಣ್ಣಿನ ಪಾಪೆಯ ಚಿತ್ರವನ್ನು ತೆಗೆದುಕೊಳ್ಳುತ್ತಾರೆ.
* ವೆಬ್ ಕ್ಯಾಮ್ ಮೂಲಕ ನಿಮ್ಮ ಭಾವಚಿತ್ರ ತೆಗೆದುಕೊಳ್ಳಲಾಗುತ್ತದೆ, ಇದೇ ಚಿತ್ರ ಗುರುತಿನ ಚೀಟಿಯಲ್ಲಿ ಕಾಣಿಸಿಕೊಳ್ಳುತ್ತದೆ.
* ಬೆರಳುಗಳನ್ನು ಸ್ಕ್ಯಾನ್ ಮಾಡಲಾಗುತ್ತದೆ. ಬೆರಳಚ್ಚು ಮಾದರಿ ಕಡ್ಡಾಯವಾಗಿದೆ.
* ನಕಲಿ ಕಾರ್ಡ್ ತಡೆಯಲು ಕಣ್ಣಿನ ಪಾಪೆಯ ಚಿತ್ರವನ್ನು ತೆಗೆದುಕೊಳ್ಳಲಾಗುತ್ತದೆ.

ನಿಮ್ಮ ಮನೆಗೆ ಆಧಾರ್ ಕಾರ್ಡ್ ಬರುತ್ತದೆ

ನಿಮ್ಮ ಮನೆಗೆ ಆಧಾರ್ ಕಾರ್ಡ್ ಬರುತ್ತದೆ

ಎಲ್ಲಾ ಪ್ರಕ್ರಿಯೆ ಮುಗಿದ ಮೇಲೆ ನಿಮಗೆ ಸ್ವೀಕೃತಿ ಪತ್ರ ನೀಡುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಬರುವ ತನಕ ಈ ಸ್ವೀಕೃತಿ ಪತ್ರವನ್ನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಳ್ಳಿ. ನೀವು ನೀಡಿದ ವಿಳಾಸ, ಭಾವಚಿತ್ರ ಮುಂತಾದವುಗಳೊಂದಿಗೆ 12 ಅಂಕಿಗಳನ್ನು ಹೊಂದಿರುವ ಆಧಾರ್ ಕಾರ್ಡ್ ನೀವು ನೀಡಿರುವ ಭಾರತದ ವಿಳಾಸಕ್ಕೆ ಅಂಚೆ ಮೂಲಕ ಬಂದು ತಲುಪುತ್ತದೆ.

ಅಧಾರ್ ಕಾರ್ಡ್ ಉಪಯೋಗ

ಅಧಾರ್ ಕಾರ್ಡ್ ಉಪಯೋಗ

ಉದ್ಯೋಗ, ಶಿಕ್ಷಣ, ಪಿಂಚಣಿ ಯೋಜನೆಗಳು, ವಿಮೆ, ಮೊಬೈಲ್ ಸಿಮ್ ಖರೀದಿ, ಹೊಸ ಗ್ಯಾಸ್ ಖರೀದಿ, ಪಾಸ್ ಪೋರ್ಟ್ ಪಡೆಯವುದು ಸೇರಿದಂತೆ ಆಧಾರ್ ಕಾರ್ಡ್‌ನಿಂದ ಹಲವು ಉಪಯೋಗಗಳಿವೆ. ಇದೊಂದು ಬಹುಮುಖ್ಯವಾದ ವಿಳಾಸ ದೃಢೀಡೀಕರಣ ಪತ್ರವಾಗಿದೆ.

ಆಧಾರ್ ಕುರಿತ ಮಾಹಿತಿಗೆ ಸಂಪರ್ಕ

ಆಧಾರ್ ಕುರಿತ ಮಾಹಿತಿಗೆ ಸಂಪರ್ಕ

* ಆಧಾರ್ ಕೇಂದ್ರದ ಸಂದರ್ಶನಕ್ಕೆ ತೆರಳುವ ಮುನ್ನ ಈ ವೆಬ್ ಲಿಂಕ್ ನೋಡಿ
* ಯಾವ ದಾಖಲಾತಿಗಳನ್ನು ಬಳಸ್ಬೇಕು ಎಂಬುದರ ಪಟ್ಟಿ ಇಲ್ಲಿದೆ ತಪ್ಪದೇ ಓದಿ

Voice - 1800-180-1947
Fax - 080-2353 1947
Letters - PO Box 1947, GPO Bangalore - 560001
Email - [email protected]

English summary

Aadhaar card: How can NRIs apply for one?

The government has announced that it will issue aadhaar card for NRIs as this will provide valid identity to the NRIs in different countries. Earlier, it was only for resident Indians. Here are the procedure to get one.
Story first published: Thursday, April 23, 2015, 13:11 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X