Englishहिन्दी മലയാളം தமிழ் తెలుగు

ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

Written By: Siddu
Subscribe to GoodReturns Kannada

ಮೊಬೈಲ್ ವಾಲೆಟ್ ಎನ್ನುವುದು ವ್ಯವಹಾರ ಕ್ಷೇತ್ರದಲ್ಲಿನ ಒಂದು ಹೊಸ ಕ್ರಾಂತಿ. ಬಿಲ್ ಪಾವತಿ, ರೀಚಾರ್ಜ್ ಮತ್ತು ಹಣ ರವಾನೆ ಮಾಡಲು ಪರಿಚಯಿಸಿದ ಮೊಬೈಲ್ ವಾಲೆಟ್ ಗಳು ಅಲ್ಪಾವಧಿಯಲ್ಲಿ ತುಂಬಾ ಜನಪ್ರಿಯತೆ ಗಳಿಸಿವೆ.

ಇದು ನಗದು ಇಲ್ಲದ ಯುಗ. ಅಂದರೆ ನಗದು ಹಣ ಇಲ್ಲದೆಯೂ ಸಹ ವ್ಯವಹಾರ ಮಾಡುವ ಕಾಲ ಇದು. ಮೊಬೈಲ್ ವಾಲೆಟ್ ಗಳನ್ನು ಗ್ರಾಹಕರು ಹಲವು ವಿಧದ ಪ್ರಯೋಜನಗಳಿಗಾಗಿ ಬಳಸಬಹುದು. ಬೆಸ್ಟ್ ಆನ್ಲೈನ್ ಯುಟಿಲಿಟಿ ಬಿಲ್ ಪಾವತಿ ಸೇವೆ

ಮೊಬೈಲ್ ರಿಚಾರ್ಜ್, ಟ್ಯಾಕ್ಸಿ ಪೇಮೆಂಟ್, ಡಿಶ್ ಟಿವಿ, ಬಿಲ್ ಪಾವತಿ, ಶಾಪಿಂಗ್ ಹೀಗೆ ಅನೇಕ ಸಂದರ್ಭಗಳಲ್ಲಿ ಬಳಸಬಹುದು. ಕ್ಯಾಶ್ ಬ್ಯಾಕ್, ಡಿಸ್ಕೌಂಟ್ ನಂತಹ ಆಫರ್ ಗಳ ಕೊಡುಗೆಯನ್ನು ತನ್ನ ಗ್ರಾಹಕರಿಗೆ ನೀಡುತ್ತವೆ.

ಮೊಬೈಲ್ ವಾಲೆಟ್ ಗಳನ್ನು ಬಳಸಲು ಗೂಗಲ್ ಪ್ಲೇ ಸ್ಟೋರ್ ಅಥವಾ ಗೂಗಲ್ ಆಪ್ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ವಾಲೆಟ್ ಗೆ ಹಣ ವರ್ಗಾವಣೆ ಮಾಡಿ ಅದನ್ನು ಪಾವತಿ ಮಾಡಲು ಬಳಸಬಹುದು.
ಇಂದು ಭಾರತದಲ್ಲಿ ಜನಪ್ರಿಯವಾಗಿರುವ ಪ್ರಮುಖ ಮೊಬೈಲ್ ವಾಲೆಟ್ ಗಳನ್ನು ಇಲ್ಲಿ ವಿವರಿಸಲಾಗಿದೆ.

1. ಪೇಟಿಎಂ (Paytm)

ಪೇಟಿಎಂ ದೇಶದ ಇ-ಕಾಮರ್ಸ್ ಕ್ಷೇತ್ರದ ಅತಿದೊಡ್ಡ ವೇದಿಕೆ ಆಗಿದ್ದು, ಡಿಜಿಟಲ್ ವಾಲೆಟ್ ಸೌಲಭ್ಯ ಒದಗಿಸುತ್ತಿದೆ. ಪ್ರಸ್ತುತ ಅತ್ಯಧಿಕ ವ್ಯವಹಾರ ಕೈಗೊಳ್ಳುತ್ತಿದೆ. ಪ್ರಾರಂಭದಲ್ಲಿ ಮೊಬೈಲ್ ರೀಚಾರ್ಜ್ ಮತ್ತು ಯುಟಿಲಿಟಿ ಬಿಲ್ ಪಾವತಿ ಮೂಲಕ ಕಾರ್ಯ ಆರಂಭಿಸಿದ ಪೇಟಿಎಂ ಇಂದು ಮೊಬೈಲ್ ಆಪ್ ಮೂಲಕ ಎಲ್ಲ ಮಾರುಕಟ್ಟೆಯನ್ನು ಆಕ್ರಮಿಸುತ್ತಿದೆ.

ಪೇಟಿಎಂ ವಾಲೆಟ್ ನಲ್ಲಿ ಗ್ರಾಹಕರ ನಂಬರ್ ನಮೂದಿಸಿ ಬಿಲ್ ಪಾವತಿ ಮಾಡಬಹುದಾಗಿದ್ದು, ಪೇಟಿಎಂ ವಾಲೆಟ್ ಮೂಲಕ ಯುಟಿಲಿಟಿ ಬಿಲ್ ಪಾವತಿಸಿದವರಿಗೆ ಕ್ಯಾಶ್ ಬ್ಯಾಕ್ ನೀಡುತ್ತದೆ.

ಪೇಟಿಎಂ ವಾಲೆಟ್ ಮೂಲಕ ಯುಟಿಲಿಟಿ ಬಿಲ್ ಪಾವತಿಸುವುದು ಹೇಗೆ ನೋಡೋಣ...
1. ಪೇಟಿಎಂ ಆಪ್ ಅಥವಾ ವೆಬ್ಸೈಟ್ ನಲ್ಲಿ ಎಲೆಕ್ಟ್ರಿಸಿಟಿ ಐಕಾನ್ ಆಯ್ಕೆ ಮಾಡಿ.
2. ಎಲೆಕ್ಟ್ರಿಸಿಟಿ ಬೋರ್ಡ್ ಆಯ್ಕೆ ಮಾಡಿ
3. ವಿದ್ಯುತ್ ಬಿಲ್ ಮೇಲೆ ನಮೂದಿಸಿರುವಂತೆ ಗ್ರಾಹಕರ ಹೆಸರನ್ನು ನಮೂದಿಸಿ.
4. ಬಿಲ್ ಮಾಹಿತಿ ಪಡೆಯಲು Proceed ಮೇಲೆ ಕ್ಲಿಕ್ ಮಾಡಿ.
5. ಬಿಲ್ ವಿವರವನ್ನು ಪರಿಶೀಲಿಸಿ.
6. ನಿಶ್ಚಿತ ಮೊತ್ತವನ್ನು ನಮೂದಿಸಿ ಪಾವತಿಸಿ.
7. ನಂತರ ಕೂಪನ್ಸ್/ಪ್ರೋಮೊ ಕೋಡ್ ಸ್ಕ್ರೀನ್ ಗೆ ಹೊಗುವಿರಿ.
8. ಪ್ರೋಮೊ ಕೋಡ್ ಇದ್ದವರು ಈ ಸ್ಕ್ರೀನ್ ಮೇಲೆ ಅಪ್ಲೈ ಮಾಡಿ. ಅದೇ ರೀತಿ ಕೂಪನ್ಸ್ ಮೇಲೆ ಆಸಕ್ತಿ ಇದ್ದರೆ ಅದನ್ನು ಆಯ್ಕೆ ಮಾಡಿ.
9. ಪಾವತಿಯ ವಿಧಾನ ಆಯ್ಕೆ ಮಾಡಿ ಮತ್ತು ವಿವರವನ್ನು ನಮೂದಿಸಿ.
10 ಬಿಲ್ ಪಾವತಿಯ ವಿವರವನ್ನು ಪಡೆಯಿರಿ.

2. ಫ್ರೀ ಚಾರ್ಜ್(FreeCharge)

ಈಗಾಗಲೇ 2 ಕೋಟಿ ನೋಂದಾಯಿತ ಬಳಕೆದಾರರನ್ನು
ಫ್ರೀಚಾರ್ಜ್ ಹೊಂದಿದೆ. ಇದು ದೇಶದಲ್ಲಿ ತುಂಬಾ ಪಾಪ್ಯೂಲರ್ ಆಗಿರುವ ಇನ್ನೊಂದು ಮೊಬೈಲ್ ವಾಲೆಟ್.
ಪ್ರೀಪೇಡ್ ವಾಲೆಟ್ ಪ್ರೀಪೇಡ್ ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್, ಗ್ಯಾಸ್ ಬಿಲ್ ಪಾವತಿ, ಮೆಟ್ರೋ ಸ್ಮಾರ್ಟ್ ಕಾರ್ಡ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿ ಮತ್ತು ಲ್ಯಾಂಡ್ ಲೈನ್ ಬಿಲ್ ಪಾವತಿ ಸೇವೆಗಳನ್ನು ಒದಗಿಸುತ್ತದೆ.
ಮೊಬೈಲ್ ಮತ್ತು ಡಿಟಿಎಚ್ ರೀಚಾರ್ಜ್ ಗಳ ಮೇಲೆ ಫ್ರೀ ಚಾರ್ಜ್ ಡಿಸ್ಕೌಂಟ್ ಕೂಪನ್ ಆಫರ್ ಗಳನ್ನು ನೀಡುತ್ತದೆ. ಕೆಎಫ್ಸಿ, ಮ್ಯಾಕ್ ಡೋನಾಲ್ಡ್ ಮತ್ತು ಪೀಟರ್ ಇಂಗ್ಲೆಂಡ್ ನಂತಹ ಕಂಪನಿಗಳೊಂದಿಗೆ ಇದು ಸಹಯೋಗ ಹೊಂದಿದೆ.

3. ಆಕ್ಸಿಜನ್ ವಾಲೆಟ್

2004ರಲ್ಲಿ ಅಸ್ತಿತ್ವಕ್ಕೆ ಬಂದ ಇದು ದೇಶದ ಮೊದಲ ಮತ್ತು ದೊಡ್ಡ ಮೊಬೈಲ್ ಪೇಮೆಂಟ್ ಪೂರೈಕೆದಾರ ಸಂಸ್ಥೆ. ಆಕ್ಸಿಜನ್ ಸರ್ವಿಸಸ್(ಇಂಡಿಯ) ಪ್ರೈ. ಲಿಮಿಟಿಡ್ ಈ ಸೇವೆಯನ್ನು ಕೊಡಮಾಡುತ್ತಿದೆ. ಆರು ಅಂಕೆಯ ಒಟಿಪಿ ಮೂಲಕ ನೀವು ಹಣ ರವಾನೆ ಮಾಡಬಹುದಾಗಿದ್ದು, ತುಂಬಾ ಸುರಕ್ಷವಾಗಿರುವ ವಾಲೆಟ್ ಇದಾಗಿದೆ. 60 ಕ್ಕೂ ಅಧಿಕ ಬ್ಯಾಂಕ್ ಗಳು ಆಕ್ಸಿಜನ್ ವಾಲೆಟ್ ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ. ಆರ್ ಬಿಐ ಮುಖೇನ ಮಾನ್ಯತೆ ಪಡೆದ ಪ್ರಪ್ರಥಮ ವಾಲೆಟ್ ಇದಾಗಿದೆ.

4. ಮೊಬಿಕ್ವಿಕ್

ಮೊಬಿಕ್ವಿಕ್ ವಾಲೆಟ್ ಸೇವೆ 50,000 ಕ್ಕಿಂತ ಹೆಚ್ಚಿನ ಆನ್ಲೈನ್ ಮತ್ತು ಆಪ್ಲೈನ್ ಮಾರ್ಗಗಳ ಮೂಲಕ ಲಭ್ಯವಿದೆ. ಡೆಸ್ಕ್ ಟಾಪ್ ಸೈಟ್ ಮತ್ತು ಮೊಬೈಲ್ ಸೈಟ್ ಮೂಲಕ ಇದರ ಸೇವೆಗಳು ಲಭ್ಯ ಇವೆ. 2.5 ಕೋಟಿ ಬಳಕೆದಾರರನ್ನು ಹೊಂದಿದ್ದು, 50,000 ಚಿಲ್ಲರೆದಾರರೊಂದಿಗೆ (ರಿಟೆಲರ್ಸ್) ಟೈ ಅಪ್ ಆಗಿದೆ. ಗೊಂದಲವಿಲ್ಲದೇ ಸುಲಭವಾಗಿ ಪೇಮೆಂಟ್ ಮಾಡಲು ಮೊಬಿಕ್ವಿಕ್ ಬೆಸ್ಟ್ ಎಂದು ಹೆಸರು ಪಡೆದಿದೆ. ಇದು ಆರ್ಬಿಐ ನಿಂದ ಮಾನ್ಯತೆ ಪಡೆದುಕೊಂಡಿದೆ.

5. ಸಿಟ್ರಸ್ ಪೇ(Citrus Pay)

ಬಿಲ್ ಪಾವತಿ ಮತ್ತು ಹಣ ವರ್ಗಾವಣೆ ಮಾಡಬಹುದಾದ ಇನ್ನೊಂದು ಇ-ವಾಲೆಟ್ ವ್ಯವಸ್ಥೆ ಸಿಟ್ರಸ್ ಪೇ. ಇದು ಹಲವು ಆನ್ಲೈನ್ ರಿಟೆಲರ್ಸ್ ನೊಂದಿಗೆ ಟೈ ಅಪ್ ಆಗಿದ್ದು, ವೂಹೂ(Woohoo) ಸಹಭಾಗಿತ್ವ ಹೊಂದಿದೆ. ಇದರ ಬಳಕೆದಾರರು 5,000 ಆಪ್ಲೈನ್ ಸ್ಟೋರ್ಸ್ ಗಳ ಮೂಲಕ ಶಾಪಿಂಗ್ ಮಾಡುತ್ತಿದ್ದಾರೆ.

6. ಪೇಯು ಮನಿ(PayUmoney)

ಇದು ಮೊಬೈಲ್ ವಾಲೆಟ್ ಸೇವೆ ಒದಗಿಸುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ. ಪೆಯು ಮನಿ ಲಂಡನ್ ಮತ್ತು ಜೋಹಾನ್ಸ ಬರ್ಗ್ ಮಾರುಕಟ್ಟೆಯಲ್ಲಿಯೂ ಪೆ ಯು ಮನಿ ಸ್ಥಾನ ಪಡೆದುಕೊಂಡಿದೆ. ಭಾರತದ ನಾಸ್ಪರ್ಸ್ ಸಮೂಹದೊಂದಿಗೆ ಗುರುತಿಸಿಕೊಂಡಿರುವ ಪೆ ಯು ಮನಿ ಅತಿಹೆಚ್ಚು ಕ್ಯಾಶ್ ಬ್ಯಾಕ್ ನೀಡುವುದಕ್ಕೆ ಪ್ರಸಿದ್ಧಿ ಪಡೆದಿದೆ.

7. ವೋಡಾಫೋನ್ ಎಂ-ಪೈಸಾ

ಎಂ-ಪೈಸಾ ತುಂಬಾ ವೇಗ, ಸುರಕ್ಷಿತ ಮತ್ತು ಅನುಕೂಲಕರವಾದ ವ್ಯವಹಾರ ವ್ಯವಸ್ಥೆಯನ್ನು ಹೊಂದಿದೆ. ಎಂ-ಪೈಸಾ ಐಸಿಐಸಿಐ ಬ್ಯಾಂಕಿನೊಂದಿಗೆ ಸಹಯೋಗ ಹೊಂದಿದೆ. ವೋಡಾಫೋನ್ ಎಂ ಪೈಸಾ ನಿಮ್ಮ ವೋಡಾಫೋನ್ ಸಂಪರ್ಕದಿಂದ ಈ ಸೌಲಭ್ಯ ಪಡೆದುಕೊಳ್ಳಬಹುದು. ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ನಿಂದ ಮಾನ್ಯತೆ ಪಡೆದಿದೆ.

English summary

Best Mobile Wallet Apps In India

In the cashless era, mobile wallets are making their way. Individuals use wallet for different purpose from mobile reharge mobile or to make taxi payments and even shopping.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC