For Quick Alerts
ALLOW NOTIFICATIONS  
For Daily Alerts

ರೂ. 500-1000 ಹಳೆ ನೋಟುಗಳ ವಿನಿಮಯ ಹೇಗೆ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ..

ಹಳೆಯ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ವಿನಿಮಯ ಮಾಡುವುದು ಹೇಗೆ? ಅದರ ನಿಯಮ, ಷರತ್ತುಗಳೇನು? ಎಲ್ಲಿ, ಯಾವಾಗ ವಿನಿಮಯ ಮಾಡಿಕೊಳ್ಳಬೇಕು? ವಿನಿಮಯ ಮಾಡುವ ಪ್ರಮಾಣ ಹಾಗೂ ಮಾನದಂಡಗಳೇನು? ಇತ್ಯಾದಿ ಗೊಂದಲಗಳು ಸಹಜವಾಗಿ ನಮ್ಮಲ್ಲಿವೆ.

By Siddu
|

ಕಪ್ಪುಹಣ, ಭ್ರಷ್ಟಾಚಾರ, ದೇಶದ ಭದ್ರತೆ ಹಾಗೂ ಖೋಟಾ ನೋಟುಗಳಿಗೆ ಕಡಿವಾಣ ಹಾಕಲು ರೂ. 500-1000 ನೋಟುಗಳ ನಿಷೇಧದಿಂದ ಈಗಾಗಲೇ ದೇಶದಾದ್ಯಂತ ಸಂಚಲನ ಸೃಷ್ಠಿಯಾಗಿದ್ದು, ಕಾಳಧನಿಕರಿಗೆ ಹಾಗೂ ಭ್ರಷ್ಟರಿಗೆ ಪ್ರಧಾನಿ ಮೋದಿ ನಡುಕ ಹುಟ್ಟಿಸಿದ್ದಾರೆ.

ಆದರೆ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಸಹಜವಾಗಿ ಗೊಂದಲ ಸೃಷ್ಟಿಯಾಗಿ, ಜನಸಾಮಾನ್ಯರಲ್ಲಿ ಹಲವಾರು ಪ್ರಶ್ನೆಗಳು ಎದುರಾಗಿವೆ. ರೂ. 500 - 1000 ನೋಟುಗಳ ರದ್ದತಿ: ತಿಳಿದುಕೊಳ್ಳಬೇಕಾದ ಅಂಶಗಳೇನು?

ಹಳೆಯ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ವಿನಿಮಯ ಮಾಡುವುದು ಹೇಗೆ? ಅದರ ನಿಯಮ, ಷರತ್ತುಗಳೇನು? ಎಲ್ಲಿ, ಯಾವಾಗ ವಿನಿಮಯ ಮಾಡಿಕೊಳ್ಳಬೇಕು? ವಿನಿಮಯ ಮಾಡುವ ಪ್ರಮಾಣ ಹಾಗೂ ಮಾನದಂಡಗಳೇನು? ಇತ್ಯಾದಿ ಗೊಂದಲಗಳು ಸಹಜವಾಗಿ ನಮ್ಮಲ್ಲಿವೆ. ರೂ. 2000 ನೋಟಿನ ವಿಶೇಷತೆಗಳೇನು? ತಪ್ಪದೆ ನೋಡಿ...

ಹೀಗಾಗಿ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇದಕ್ಕೆ ಸಂಭಂಧಿಸಿದಂತೆ ಸಂಪೂರ್ಣವಾದ ಮಾಹಿತಿಯನ್ನು ಈಗಾಗಲೇ ಜಾಹೀರಾತುಗಳ ಮೂಲಕ ಮಾದ್ಯಮಗಳಲ್ಲಿ ಪ್ರಸಾರ ಮಾಡಿದೆ. ಹೀಗಾಗಿ ನಿಮ್ಮಲ್ಲಿ ಇರುವ ಎಲ್ಲ ಗೊಂದಲ ಮತ್ತು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ...

1. ಯಾವ ನೋಟು ಹಿಂತೆಗೆದುಕೊಳ್ಳಲಾಗಿದೆ?

1. ಯಾವ ನೋಟು ಹಿಂತೆಗೆದುಕೊಳ್ಳಲಾಗಿದೆ?

ಹೌದು. ಜನಸಾಮಾನ್ಯರಲ್ಲಿ ಸಹಜವಾಗಿ ಮೂಡುವ ಗೊಂದಲವವೇ ಇದು. ನವೆಂಬರ್ 8, 2016ರ ತನಕ ಚಾಲ್ತಿಯಲ್ಲಿದ್ದ ರೂ. 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳಲಾಗಿದೆ.

2. ರೂ. 500-1000 ಹಳೆ ನೋಟುಗಳು ಏನಾಗಲಿದೆ?

2. ರೂ. 500-1000 ಹಳೆ ನೋಟುಗಳು ಏನಾಗಲಿದೆ?

ರೂ. 500 ಹಾಗೂ 1000 ಮುಖಬೆಲೆಯ ನೋಟುಗಳ ನಿಷೇಧದ ನಂತರ ಅವುಗಳು ಏನಾಗಲಿವೆ ಎಂಬ ಪ್ರಶ್ನೆ ಕಾಡುವುದು ಸಹಜ. ಈ ನೋಟುಗಳನ್ನು ಆರ್ಬಿಐ ನ 19 ಕಚೇರಿಗಳಲ್ಲಿ ಯಾವುದಾದರೂ ಒಂದರಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಅಥವಾ ಯಾವುದಾದರೂ ಅಂಚೆ ಕಚೇರಿಗಳಲ್ಲಿ ನವೆಂಬರ್ 10 ರಿಂದ ಡಿಸೆಂಬರ್ 30, 2016ರ ಒಳಗಾಗಿ ಬದಲಾವಣೆ ಮಾಡಿಕೊಳ್ಳಬಹುದು. ಡೆಸೆಂಬರ್ 30 ರ ಒಳಗಾಗಿ ತಮ್ಮ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆಗದವರು ಆರ್ಬಿಐ ನ ನಿರ್ಧಿಷ್ಟ ಕಚೇರಿಗಳಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಾರ್ಚ್ 31, 2017ರ ಒಳಗೆ ವಿನಿಮಯ ಮಾಡಿಕೊಳ್ಳಬೇಕು.

3. ನಾನು ರೂ. 500 ಹಾಗೂ 1000 ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದೆ? ನಾನು ವಿನಿಮಯ ಮಾಡಿಕೊಳ್ಳಲು ಎಲ್ಲಿ ಹೋಗಬೇಕು?
 

3. ನಾನು ರೂ. 500 ಹಾಗೂ 1000 ಹಳೆ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದೆ? ನಾನು ವಿನಿಮಯ ಮಾಡಿಕೊಳ್ಳಲು ಎಲ್ಲಿ ಹೋಗಬೇಕು?

ನೋಟುಗಳ ವಿನಿಮಯ ಸೌಲಭ್ಯ ಆರ್ಬಿಐ ನ ಎಲ್ಲ ಪ್ರಮುಖ ಕಚೇರಿಗಳಲ್ಲಿ , ವಾಣಿಜ್ಯ ಬ್ಯಾಂಕಿನ ಶಾಖೆಗಳಲ್ಲಿ/ಆರ್ಆರ್ ಬಿಎಸ್/ ಯುಸಿಬಿ/ರಾಜ್ಯ ಸಹಕಾರಿ ಬ್ಯಾಂಕುಗಳು ಅಥವಾ ಯಾವುದೇ ಮುಖ್ಯ ಅಥವಾ ಉಪ ಅಂಚೆ ಕಚೇರಿಗಳಲ್ಲಿ ಲಭ್ಯವಿದೆ.
4000 ರೂ.ಗಳಷ್ಟು ವಿನಿಮಯಕ್ಕೆ ನೀವು ಯಾವುದೇ ಬ್ಯಾಂಕ್ ಶಾಖೆಗೆ ಮಾನ್ಯತೆ ಪಡೆದ ಗುರುತಿನ ಪತ್ರದೊಂದಿಗೆ ಹೋಗಬೇಕು. 4000 ಸಾವಿರಕ್ಕಿಂತ ಹೆಚ್ಚಿನ ಮೊತ್ತಕ್ಕಾಗಿ ನೀವು ಹಣವನ್ನು ಬ್ಯಾಂಕ್ ಖಾತೆಗೆ ಕ್ರೆಡಿಟ್ ಮಾಡಬೇಕು. ಇದಕ್ಕಾಗಿ ನೀವು ಎಲ್ಲಿ ಖಾತೆ ಹೊಂದಿದ್ದಿರೋ ಆ ಶಾಖೆಗೆ ಅಥವಾ ಆ ಬ್ಯಾಂಕಿನ ಇತರ ಶಾಖೆಗೆ ಹೋಗಬೇಕು.ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆ ಇರದ ಯಾವುದಾದರೂ ಬೇರೆ ಬ್ಯಾಂಕ್ ಗೆ ಹೋಗಬೇಕೆಂದರೆ ನೀವು ನಿಮ್ಮ ಗುರುತಿನ ಚೀಟಿ ಮತ್ತು ವಿದ್ಯುನ್ಮಾನ ಫಂಡ್ ವರ್ಗಾವಣೆಗಾಗಿ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡಬೇಕು.

4. ನಾನು ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲ. ಆದರೆ ನನ್ನ ಸಂಬಂಧಿಗಳು/ಗೆಳೆಯರು ಖಾತೆ ಹೊಂದಿದ್ದಾರೆ. ನಾನು ನನ್ನ ಹಣವನ್ನು ಅವರ ಖಾತೆಗೆ ವಿನಿಮಯ ಮಾಡಿಕೊಳ್ಳಬಹುದೆ?

4. ನಾನು ಯಾವುದೇ ಬ್ಯಾಂಕ್ ಖಾತೆ ಹೊಂದಿಲ್ಲ. ಆದರೆ ನನ್ನ ಸಂಬಂಧಿಗಳು/ಗೆಳೆಯರು ಖಾತೆ ಹೊಂದಿದ್ದಾರೆ. ನಾನು ನನ್ನ ಹಣವನ್ನು ಅವರ ಖಾತೆಗೆ ವಿನಿಮಯ ಮಾಡಿಕೊಳ್ಳಬಹುದೆ?

ಇದು ತುಂಬಾ ಮುಖ್ಯವಾದ ಪ್ರಶ್ನೆ. ನಿಮ್ಮ ಸಂಬಂಧಿ/ಗೆಳೆಯನ ಲಿಖಿತ ರೂಪದಲ್ಲಿ ಒಪ್ಪಿಗೆ ನೀಡಿದರೆ ಅವರ ಖಾತೆಗೆ ಹಣದ ವಿನಿಮಯ ಮಾಡಬಹುದು. ಆದರೆ ವಿನಿಮಯ ಸಂದರ್ಭದಲ್ಲಿ ಖಾತೆದಾರ ನೀಡಿರುವ ಒಪ್ಪಿಗೆಯ ಸಾಕ್ಷ್ಯ ಮತ್ತು ನಿಮ್ಮ ಗುರುತಿನ ಪತ್ರ ನೀಡಬೇಕು.

5. ನಾನು ಎಟಿಎಂನಿಂದ ಹಣ ಪಡೆಯಬಹುದೆ?

5. ನಾನು ಎಟಿಎಂನಿಂದ ಹಣ ಪಡೆಯಬಹುದೆ?

ನೀವು ಪ್ರತಿದಿನ ಪ್ರತಿ ಕಾರ್ಡ್ ಗೆ ಗರಿಷ್ಠ ರೂ. 2000 ಹಣವನ್ನು ನವೆಂಬರ್ 18, 2016ರ ವರೆಗೆಎಟಿಎಂನಿಂದ ಪಡೆಯಬಹುದು. ಈ ಮಿತಿಯನ್ನು ನವೆಂಬರ್ 19, 2016 ರಿಂದ ಪ್ರತಿದಿನ ಪ್ರತಿಕಾರ್ಡ್ ಗೆ 4000 ರೂಗಳಿಗೆ ಏರಿಸಬಹುದು.

6. ಚೆಕ್ ನೀಡಿ ನಗದು ಹಣ ಪಡೆಯಬಹುದೆ?

6. ಚೆಕ್ ನೀಡಿ ನಗದು ಹಣ ಪಡೆಯಬಹುದೆ?

ಹೌದು. ನೀವು ಹಣ ಹಿಂಪಡೆಯುವ ಚೀಟಿ ಅಥವಾ ಚೆಕ್ ಮೂಲಕ ಒಂದು ದಿನದಲ್ಲಿ 10000 ರೂ. ಪಡೆಯಬಹುದು. ಆದರೆ ವಾರಕ್ಕೆ ಗರಿಷ್ಠ 20000 ರೂ. ಮಾತ್ರ(ಎಟಿಎಂ ಸೇರಿ) ನವೆಂಬರ್ 20, 2016ರ ವರೆಗೆ ಹಿಂಪಡೆಯಲು ಸಾಧ್ಯ. ಆ ಬಳಿಕ ಈ ಮಿತಿಯಲ್ಲಿ ಬದಲಾವಣೆ ತರಲಾಗದು. ನೀವು ಎನ್ಇಎಫ್ಟಿ/ಆರ್ಟಿಜಿಎಸ್/ಐಎಂಪಿಎಸ್/ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಥವಾ ಇನ್ನಿತರ ಇಲೆಕ್ಟ್ರಾನಿಕ್/ನಗದು ರಹಿತ ಪಾವತಿಯನ್ನು ಈ ಮೊದಲಿನಂತೆ ಮಾಡಬಹುದು.

7. ನನಗೆ ತುರ್ತು ನಗದು ಅಗತ್ಯವಿದೆ. ನಾನೇನು ಮಾಡಲಿ?

7. ನನಗೆ ತುರ್ತು ನಗದು ಅಗತ್ಯವಿದೆ. ನಾನೇನು ಮಾಡಲಿ?

ನೀವು ಹಳೆಯ ನೋಟುಗಳನ್ನು ಸರ್ಕಾರಿ ಆಸ್ಪತ್ರೆಗಳು, ಔಷಧಾಲಯಗಳು, ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿ, ರೈಲ್ವೆ, ವಿಮಾನ, ಮಿಟ್ರೋ ಟಿಕೆಟ್ ಖರೀದಿ, ಹೆದ್ದ್ಆರಿ ಟೋಲ್ ಪ್ಲಾಜಾ, ರೈಲಿನೊಳಗೆ ಕೆಟರಿಂಗ್, ಎಎಸ್ಐ ಸ್ಮಾರಕ, ಎಲ್ಪಿಜಿ ಸಿಲಿಂಡರ್ ಖರೀದಿ, ಪೆಟ್ರೋಲ್ ಪಂಪ್, ಸರ್ಕಾರಿ ಸಹಕಾರಿ ಸಂಸ್ಥೆಗಳು ಮತ್ತು ಹಾಲಿನ ಅಂಗಡಿಗಳಲ್ಲಿ ನವೆಂಬರ್ 11, 2016ರ ವರೆಗೆ ಬಳಕೆ ಮಾಡಬಹುದು.

8. ಗುರುತಿನ ಪತ್ರಗಳು ಯಾವುದು?

8. ಗುರುತಿನ ಪತ್ರಗಳು ಯಾವುದು?

ಮಾನ್ಯತೆ ಪಡೆದ ಗುರುತು ಪತ್ರಗಳು ಯಾವುದೆಂದರೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಚೀಟಿ, ಪಾಸ್ಪೋರ್ಟ್, ಎನ್ಆರ್ಇಜಿಎ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಬೆಕು.

9. ಸಣ್ಣ ವರ್ತಕರು, ಗೃಹಿಣಿಯರು, ಕರಕುಶಲ ಕರ್ಮಿಗಳು, ಕಾರ್ಮಿಕರು ಮನೆಯಲ್ಲಿನ ನಗದನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು ಬಂದರೆ ಆದಾಯ ತೆರಿಗೆ ಇಲಾಖೆ ಪ್ರಶ್ನೆಗಳನ್ನು ಕೇಳುತ್ತದೆಯೆ?

9. ಸಣ್ಣ ವರ್ತಕರು, ಗೃಹಿಣಿಯರು, ಕರಕುಶಲ ಕರ್ಮಿಗಳು, ಕಾರ್ಮಿಕರು ಮನೆಯಲ್ಲಿನ ನಗದನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು ಬಂದರೆ ಆದಾಯ ತೆರಿಗೆ ಇಲಾಖೆ ಪ್ರಶ್ನೆಗಳನ್ನು ಕೇಳುತ್ತದೆಯೆ?

ಇದು ಜನಸಾಮಾನ್ಯರಲ್ಲಿ ಅತಿಹೆಚ್ಚು ಗೊಂದಲಕ್ಕೆ ಎಡೆ ಮಾಡಿರುವ ಪ್ರಶ್ನೆ. ಈ ವರ್ಗಕ್ಕೆ ಸೇರಿದ ಜನರು ಸಣ್ಣ ಮೊತ್ತವಾದ 1.5 ರಿಂದ 2 ಲಕ್ಷದಷ್ಟು ಹಣವನ್ನು ಬ್ಯಾಂಕ್ ನಲ್ಲಿ ಠೇವಣಿ ಇಡಲು ಆತಂಕ ಪಡುವ ಅಗತ್ಯ ಇಲ್ಲ. ಏಕೆಂದರೆ ಇದು ತೆರಿಗೆ ವ್ಯಾಪ್ತಿಯ ಮಿತಿಗಿಂತ ಕಡಿಮೆ ಇದೆ. ಈ ಮೊತ್ತಕ್ಕೆ ತೆರಿಗೆ ಇಲಾಖೆಯು ಕಿರುಕುಳ ನೀಡದು.

10. ಈ ಸಂದರ್ಭದಲ್ಲಿ ಮಾಡಿದ ನಗದು ಠೇವಣಿಯನ್ನು ಐಟಿ ವಿಭಾಗ ಪರಿಶೀಲಿಸಲಿದೆಯೆ?

10. ಈ ಸಂದರ್ಭದಲ್ಲಿ ಮಾಡಿದ ನಗದು ಠೇವಣಿಯನ್ನು ಐಟಿ ವಿಭಾಗ ಪರಿಶೀಲಿಸಲಿದೆಯೆ?

ನವೆಂಬರ್ 10ರಿಂದ ಡಿಸೆಂಬರ್ 30 ರವರೆಗೆ 2.5. ಲಕ್ಷಕ್ಕಿಂತ ಹೆಚ್ಚು ಹಣವನ್ನು ಇಡುವ ಪ್ರತಿ ಖಾತೆಯ ನಗದು ಠೇವಣಿಯನ್ನು ಐಟಿ ಇಲಾಖೆ ಪರಿಶೀಲಿಸಲಿದೆ. ಇಲಾಖೆಯು ಠೇವಣಿದಾರ ನೀಡಿದ ರಿಟರ್ನ್ಸ್ ಜತೆ ಇದನ್ನು ಹೋಲಿಸಲಿದೆ.

11. ನನಗೆ ಹೆಚ್ಚಿ ಮಾಹಿತಿ ಎಲ್ಲಿ ಸಿಗಲಿದೆ?

11. ನನಗೆ ಹೆಚ್ಚಿ ಮಾಹಿತಿ ಎಲ್ಲಿ ಸಿಗಲಿದೆ?

ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿದಿಕೊಳ್ಳಲು ಬಯಸಿದಲ್ಲಿ ವೆಬ್ಸೈಟ್ https://rbi.org.in ಮತ್ತು ttps://finmin.nic.in ಅಥವಾ ಆರ್ಬಿಐ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ. ದೂರವಾಣಿ ಸಂಖ್ಯೆ: 022 22602201 / 022 22602944

English summary

How to Exchange Old 500, 1000 Notes? That's the answer to your question ..

In a move to curb the black money menace, PM Narendra Modi declared that from midnight currency notes of Rs 1000 and Rs 500 denomination will not be legal tender. People can deposit notes of Rs 1000 and Rs 500 in their banks from November 10 till December 30, 2016.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X