For Quick Alerts
ALLOW NOTIFICATIONS  
For Daily Alerts

ಫೋನ್ ಪೇ ಮೂಲಕ ಫಂಡ್ ವರ್ಗಾವಣೆ ಹೇಗೆ?

ಫೋನ್ ಪೇ ಆನ್ಲೈನ್ ವಾಲೆಟ್ ಆಪ್ ಆಗಿದ್ದು, ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧ ಪಡಿಸಿದೆ.

By Siddu
|

ಫೋನ್ ಪೇ ಆನ್ಲೈನ್ ವಾಲೆಟ್ ಆಪ್ ಆಗಿದ್ದು, ಹಣ ನಿರ್ವಹಣೆಗಾಗಿ ಬಳಸಲಾಗುತ್ತದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯ(NPCI) ಅಭಿವೃದ್ಧಿಪಡಿಸಿದೆ. ಫೋನ್ ಪೇ ಆಪ್ ಫ್ಲಿಪ್ಕಾರ್ಟ್ ಆಗಸ್ಟ್ ನಲ್ಲಿ ಲಾಂಚ್ ಮಾಡಿದ್ದು, ಯುಪಿಐ ಆಧರಿತ ಆಪ್ ಹಣ ನಿರ್ವಹಣೆಯನ್ನು ತುಂಬಾ ಸುರಕ್ಷಿತ ರೀತಿಯಲ್ಲಿ ನಿರ್ವಹಿಸುತ್ತದೆ. ಬೆಸ್ಟ್ ಮೊಬೈಲ್ ವಾಲೆಟ್ ಆಪ್ ಯಾವವು ಗೊತ್ತೆ?

ಫೋನ್ ಪೇ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಫೋನ್ ಪೇ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಯುಪಿಐ ಆಧರಿತ ಫೋನ್ ಪೇ ಮೂಲಕ ನಿಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಬಹುದು. ಮೊಬೈಲ್ ಸಂಖ್ಯೆ ಅಥವಾ ಯುಪಿಐ ಸಂಖ್ಯೆ ಬಳಸಿ ಶೀಘ್ರದಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ಮಾಡಬಹುದು.

ಫೋನ್ ಪೇ ಆಪ್ ಪಡೆಯುವುದು ಹೇಗೆ?

ಫೋನ್ ಪೇ ಆಪ್ ಪಡೆಯುವುದು ಹೇಗೆ?

ಗೂಗಲ್ ಪ್ಲೇ ಸ್ಟೋರ್ ನಿಂದ ಆಪ್ ಡೌನ್ಲೋಡ್ ಮಾಡಿ. ಫೋನ್ ಪೇ ಆಪ್ ಆನ್ಲೈನ್ ವಾಲೆಟ್ ಆಗಿ ಹಣ ವ್ಯವಹಾರಕ್ಕಾಗಿ ಬಳಸಬಹುದು. ಫ್ಲೀಕಾರ್ಟ್ ಮನಿ ಮತ್ತು ಮಿಂತ್ರ ಕ್ಯಾಶ್ ಬ್ಯಾಕ್ ಜಾಗವನ್ನು ಫೋನ್ ಪೇ ಆಕ್ರಮಿಸಿದೆ. ಈಗ ಎಲ್ಲ ಗ್ರಾಹಕರು ಫೋನ್ ಪೇ ಬಳಸಿ ರಿಫಂಡ್ಸ್ ಮಾಡಬಹುದು. ಶೀಘ್ರದಲ್ಲಿ ವಾಲೆಟ್ ಬ್ಯಾಲೆನ್ಸ್ ಖರ್ಚು ಮಾಡಬಹುದು ಅಥವಾ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ವಿತ್ ಡ್ರಾ ಮಾಡಬಹುದು.

ಫೋನ್ ಪೇ ಮೂಲಕ ಏನು ಮಾಡಬಹುದು?

ಫೋನ್ ಪೇ ಮೂಲಕ ಏನು ಮಾಡಬಹುದು?

* ಯಾವ ಸಮಯದಲ್ಲಾದರೂ ಹಣ ಕಳುಹಿಸಬಹುದು ಮತ್ತು ಪಡೆಯಬಹುದು.
* ದೇಶದಾದ್ಯಂತ ಪ್ರಿಪೇಡ್ ಮೊಬೈಲ್, ಡೇಟಾ ಕಾರ್ಡ್, ಡಿಟಿಎಚ್ ರೀಚಾರ್ಜ್ ಮಾಡಬಹುದು.
* ಪೋಸ್ಟ್ ಪೇಯ್ಡ್ ಲ್ಯಾಂಡ್ ಲೈನ್ ಬಿಲ್, ಡೇಟಾಕಾರ್ಡ್, ಮೊಬೈಲ್ ಬಿಲ್ಲುಗಳನ್ನು ಪಾವತಿಸಬಹುದು.
* ಯುಟಿಲಿಟಿ ಬಿಲ್(ವಿದ್ಯುತ್, ಗ್ಯಾಸ್ ಬಿಲ್) ಪಾವತಿಸಬಹುದು.
* ಫ್ಲೀಕಾರ್ಟ್ ನಲ್ಲಿ ಶಾಪಿಂಗ್ ಮಾಡಬಹಹುದು.

ಫೋನ್ ಪೇ ಆಪ್ ನಲ್ಲಿ ಮತ್ತೇನಿದೆ?

ಫೋನ್ ಪೇ ಆಪ್ ನಲ್ಲಿ ಮತ್ತೇನಿದೆ?

1. ಫೋನ್ ಪೇ ಬಳಸಿ Myntra, Jabong ಮತ್ತು ಇನ್ನಿತರ ಎಲ್ಲ ಆನ್ಲೈನ್ ಕೇಂದ್ರಗಳಲ್ಲಿ ಶಾಪಿಂಗ್ ಮಾಡಬಹುದು.
2. 24*7 ರೂ. 1 ಲಕ್ಷದ ವರೆಗೆ ವ್ಯವಹಾರ ನಡೆಸಬಹುದು.
3. ಶೀಘ್ರದಲ್ಲಿ ಫೋನ್ ಪೇ ವಾಲೆಟ್ ಗೆ ಪಾಲುದಾರರಿಂದ ರಿಫಂಡ್ಸ್ ಮತ್ತು ಕ್ಯಾಶ್ ಬ್ಯಾಕ್ ಪಡೆಯಬಹುದು.
4. ಖಾತೆ ಮತ್ತು ಕಾರ್ಡುಗಳನ್ನು ಲಿಂಕ್ ಮಾಡಿ ಪಾವತಿಸಿ. ಬಳಕೆದಾರರು ಯುಪಿಐ ಆಧರಿತ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್/ಡೆಬಿಟ್ ಕಾರ್ಡ್ ಫೋನ ಪೇ ವಾಲೆಟ್ ಗೆ ಲಿಂಕ್ ಮಾಡಬಹುದು.

ಫಂಡ್ಸ್ ವರ್ಗಾವಣೆ

ಫಂಡ್ಸ್ ವರ್ಗಾವಣೆ

ಯುಪಿಐ ಆಧರಿತ ಬ್ಯಾಂಕ್ ಖಾತೆ ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸಿ ಫೋನ ಪೇ ಮೂಲಕ ವೇಗವಾಗಿ ನಿಮ್ಮ ಕುಟುಂಬ, ಸ್ನೇಹಿತ ಅಥವಾ ಪ್ರತಿನಿತ್ಯದ ಪೇಮೆಂಟ್ಸ್ ಮಾಡಬಹುದು.

ಭಾಷೆಗಳು

ಭಾಷೆಗಳು

ಗ್ರಾಹಕರು ಸ್ಥಳೀಯ ಭಾಷೆಗಳಲ್ಲೂ ವ್ಯವಹರಿಸುವ ಅವಕಾಶ ಕಲ್ಪಿಸಲಾಗಿದೆ. ಪ್ರಸ್ತುತ ಹಿಂದಿ, ತಮಿಳು, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ಇನ್ನೂ ಹೆಚ್ಚಿನ ಭಾಷೆಗಳಲ್ಲಿ ಫೋನ್ ಪೇ ಬರಲಿದೆ.

Read more about: digital payments paytm money
English summary

PhonePe: How To Use It For Payment Transfer?

PhonePe is an online wallet app to handle money. The PhonePe app is one of the first app based on government backed Unified Payment's Interface developed by the National Payments Corporation of India (NPCI) and is powered by YES Bank.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X