ಸಿಬಿಲ್ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆಷ್ಟು ಗೊತ್ತು?

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಕ್ರೆಡಿಟ್ ಇನ್ಫಾರ್ಮೇಶನ್ ಬ್ಯೂರೋ(ಇಂಡಿಯ) ಲಿಮಿಟೆಡ್ ಸಿಬಿಲ್ ಎಂದೇ ಜನಪ್ರಿಯವಾಗಿದ್ದು, ಇದು ಭಾರತದ ಮೊದಲ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಯಾಗಿದೆ.

  ವ್ಯಕ್ತಿಗಳ ಮತ್ತು ವಾಣಿಜ್ಯ ಸಂಸ್ಥೆಗಳ ಕ್ರೆಡಿಟ್ ದಾಖಲೆಗಳ ಸಂಗ್ರಹಣೆ ಮತ್ತು ನಿರ್ವಹಣೆ ಈ ಕಂಪನಿಯ ಪ್ರಮುಖ ಉದ್ದೇಶವಾಗಿದೆ.

  ಎಲ್ಲಾ ಬ್ಯಾಂಕುಗಳು ಮತ್ತು ಸಾಲ ಸಂಸ್ಥೆಗಳು ಸಿಬಿಲ್ ಗೆ ವರದಿಯನ್ನು ಕಳುಹಿಸುತ್ತಾರೆ. ಈ ಮಾಹಿತಿಯನ್ನು ಕ್ರೆಡಿಟ್ ವರದಿಯವರು ಕ್ರೆಡಿಟ್ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ತದನಂತರ ಸಿಬಿಲ್ ಸ್ಕೋರ್ ಮೌಲ್ಯಮಾಪನ ಮಾಡಿ ಗ್ರಾಹಕರಿಗೆ ಸಾಲ ಕೊಡಲು ತೀರ್ಮಾನಿಸಲಾಗುತ್ತದೆ. ಗ್ರಾಹಕರು ಸಾಲಕ್ಕಾಗಿ ಅರ್ಜಿ ಸಲ್ಲಿಸುವಾಗ ಕ್ರೆಡಿಟ್ ಸ್ಕೋರ್ ತುಂಬಾ ಅತ್ಯಗತ್ಯ.

  ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮುನ್ನ ಸಿಬಿಲ್ ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳು ಇಲ್ಲಿ ನೀಡಲಾಗಿದೆ.

  1. ಸಿಬಿಲ್ ಚರಿತ್ರೆ

  ಸಿಬಿಲ್ ದೇಶದ ಮೊದಲ ಕ್ರೆಡಿಟ್ ಕಂಪನಿಯಾಗಿದ್ದು, ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಸಿಬಿಲ್ ಮಹತ್ತರ ಪಾತ್ರವನ್ನು ವಹಿಸುತ್ತದೆ. ಇದು ಸಾಲ ಪೂರೈಕೆ ನಿರ್ಣಯ, ಉದ್ಯಮವನ್ನು ನೋಡಿಕೊಳ್ಳಲು ಹಾಗೂ ಗ್ರಾಹಕರಿಗೆ ಕ್ರೆಡಿಟ್ ವಿಷಯದಲಿ ಸಹಾಯ ಮಾಡುತ್ತದೆ. ಬ್ಯಾಂಕಿಗೆ ಗ್ರಾಹಕರು ಸಾಲ ಅರ್ಜಿ ಸಲ್ಲಿಸಲು ಬರುವವರನ್ನು ಪರಿಶೀಲಿಸುತ್ತದೆ. ಸಾಲ ಪಡೆಯಲು ಇಚ್ಛಿಸುವ ಗ್ರಾಹಕರಿಗೆ ಹಣವನ್ನು ತಿರುಗಿಸುವ ಸಾಮರ್ಥ್ಯ ಇದೆಯೇ ಎಂದು ಪರಿಶೀಲಿಸುತ್ತದೆ.

  2. ಸಿಬಿಲ್ ಹೇಗೆ ಕೆಲಸ ಮಾಡುತದೆ?

  ಸಿಬಿಲ್ ಸಾಲವನ್ನು ಅನುಮೋದಿಸಬೇಕಾದರೆ, ಕ್ರೆಡಿಟ್ ಕೇಳುವ ಸಂಸ್ಥೆ ಅದಕ್ಕೆ ತಕ್ಕಂತೆ ಮಾಹಿತಿ ಒದಗಿಸಬೇಕು. ಹಣವನ್ನು ತಿರುಗಿಸುವ ಸಾಮರ್ಥ್ಯ ಇದ್ದರೆ ಮಾತ್ರ ಸಾಲ ಕೊಡಲಾಗುತ್ತದೆ. ಸಿಬಿಲ್ ಎಲ್ಲರ ಡೇಟಾ ಸಂಗ್ರಹಿಸಿ ಅದನ್ನು ಎಲ್ಲಾ ಬ್ಯಾಂಕುಗಳಿಗೆ ಕೊಡುತ್ತದೆ. ಇದರ ಆಧಾರದ ಮೇಲೆ ಬ್ಯಾಂಕುಗಳು ಸಾಲ ಕೊಡಬೇಕೆ ಅಥವಾ ಬೇಡವೇ ಎಂಬುದನ್ನು ತೀರ್ಮಾನಿಸುತ್ತವೆ. ಸಿಬಿಲ್ ಬ್ಯಾಂಕ್ ಗಳನ್ನು ತುಂಬ ದಕ್ಷವಾಗಿ ಕೆಲಸ ಮಾಡುವುದಕ್ಕೆ ಸಹಾಯಕವಾಗುತ್ತದೆ.

  3. ಸಿಐಆರ್(ಕ್ರೆಡಿಟ್ ಇನ್ಫಾರ್ಮೇಶನ್ ರಿಪೋರ್ಟ್)

  ಸಿಐಆರ್ ನಿಮ್ಮ ಸಿಬಿಲ್ ಸ್ಕೋರ್ ನ ವಾಸ್ತವಿಕ ವರದಿ ಹಾಗೂ ಪಾವತಿ ಬಗ್ಗೆ ಒಂದು ಸರಿಯಾದ ಚಿತ್ರಣವನ್ನು ನೀಡುತ್ತದೆ. ಇದು ನಿಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ಗುರುತು ಚೀಟಿ(ಪ್ಯಾನ್/ಚುನಾವಣಾ
  /ಪಾಸ್ಪೋರ್ಟ್) ನಂಬರ್ ಹೊಂದಿರುತ್ತದೆ. ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳು ಒದಗಿಸುವ ತಿಂಗಳ ಮತ್ತು ವಾರ್ಷಿಕ ಆದಾಯದ ಮಾಹಿತಿ ಒಳಗೊಂಡಿರುತ್ತದೆ.
  ಖಾತೆ ಮಾಹಿತಿಯ ವಿವರಗಳನ್ನು ಒಳಗೊಂಡಿದ್ದು, ಸಾಲದಾತರ ಹೆಸರು, ಸಾಲ ಸೌಲಭ್ಯಗಳ ಮಾದರಿ ಸಂಖ್ಯೆ, ಮಾಲೀಕತ್ವದ ವಿವರ, ಖಾತೆ ತೆರೆದ ದಿನಾಂಕ, ಪಾವತಿ ಕೊನೆ ದಿನಾಂಕ, ಸಾಲದ ಮೊತ್ತ, ಕರೆಂಟ್ ಬ್ಯಾಲೆನ್ಸ್ ಮತ್ತು ನಿಮ್ಮ ತಿಂಗ ತಿಂಗಳ ಪಾವತಿಯ ಮೂರು ವರ್ಷಗಳ ದಾಖಲೆ ಒಳಗೊಂಡಿರುತ್ತದೆ. ಗ್ರಾಹಕರು ಅಥವಾ ಸಂಸ್ಥೆಗಳು ಸಾಲ ಕೇಳಿದರೆ ಅವರ ಸಿಐಆರ್ ಪರಿಶೀಲಿಸಲಾಗುತ್ತದೆ. ಅದರಲ್ಲಿ ಒಂದು 9 ಅಂಕಿಗಳ ನಂಬರ್ ಇದ್ದು, ಅದು ಒಬ್ಬರ ಡೇಟಾ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

  4. ಸಿಬಿಲ್ ಸ್ಕೋರ್ ರೇಟಿಂಗ್ ಪರಿಣಾಮಗಳು

  ಇಲ್ಲಿ ಮುಖ್ಯವಾಗಿ ಎರಡು ವಿಷಯಗಳನ್ನು ನೋಡಲಾಗುತ್ತದೆ.
  ಮೊದಲನೆಯದಾಗಿ ಸಿಬಿಲ್ ಕೊಡುವ ಹಣವನ್ನು ಎಷ್ಟು ಸುಕ್ಷಮವಾಗಿ ಉಪಯೋಗಿಸುತ್ತಿದ್ದಾರೆ ಎಂದು ಲೆಕ್ಕ ಮಾಡಲಾಗುತ್ತದೆ.
  ಎರಡನೆಯದು ನಾವು ಎಷ್ಟು ಹಣ ಖರ್ಚು ಮಾಡುತ್ತೇವೆ ಎಂದು ನೋಡಲಾಗುತ್ತದೆ. ಆದರೆ ನಮ್ಮ ಕ್ರೆಡಿಟ್ ಬಳಕೆ ಅಥವಾ ಹಲವು ಬ್ಯಾಂಕುಗಳಿಂದ ಸಾಲ ಪಡೆಯುತ್ತಿದ್ದರೆ ನಮ್ಮ ಪ್ರೊಫೈಲ್ ಅಪಾಯದಲ್ಲಿದೆ ಎಂದರ್ಥ. ನಾವು ಯಾವಾಗಲಾದರೂ ಹೊಸ ಸಾಲಕ್ಕಾಗಿ ಅರ್ಜಿ ಕೊಟ್ಟರೆ ಬ್ಯಾಂಕ್ ನಮ್ಮ ಬಗ್ಗೆ ವಿಚಾರಣೆ ಮಾಡಿ, ಅದರ ಮೇಲೆ ನಮಗೆ ಕ್ರೆಡಿಟ್ ಸ್ಕೋರ್ ನೀಡುತ್ತದೆ. ಮೊದಲು ಸಿಬಿಲ್ ಗ್ರಾಹಕರ ಸಾಲ ಮಾರುಪಾವತಿ ಸಾಮರ್ಥ್ಯ ಪರಿಶೀಲನೆ ನಡೆಸುತ್ತದೆ.

  5. ಸಿಬಿಲ್ ಸ್ಕೋರ್ ಚಂದಾ

  ಸಿಬಿಲ್ ಸ್ಕೋರ್ ತಿಳಿದುಕೊಳ್ಳಲು ಬಯಸುವವರು ಸಿಬಿಲ್ ಸ್ಕೋರ್ ಚಂದಾದಾರರಾಗಬಹುದು. ಒಂದು ವರದಿಗೆ ರೂ. 550 ವೆಚ್ಚ ತಗಲುತ್ತದೆ. ಅರ್ಧವಾರ್ಷಿಕ ಚಂದಾಗೆ ರೂ. 800 ಮೊತ್ತ ತಗಲುತ್ತಿದ್ದು, ಎರಡು ವರದಿಗಳನ್ನು ಪಡೆಯಬಹುದು.

  6. ಸಾಲದ ಹೊಣೆಗಾರ

  ನೀವು ನಿಶ್ಚಿತವಾದ ಸಾಲಕ್ಕೆ ಹೊಣೆಗಾರರಾದಲ್ಲಿ ಅಥವಾ ಭದ್ರತೆ ಒದಗಿಸಿದಲ್ಲಿ ಸಾಲ ಮರುಪಾವತಿಸುವಾಗ ಸಮಾನ ಜವಾಬ್ಧಾರಿ ಹೊಂದಿರುತ್ತಿರಿ ಎಂಬುದನ್ನು ನೆನಪಿನಲ್ಲಿಡಿ. ಮೂಲ ಅರ್ಜಿದಾರ ಸಾಲ ಮರುಪಾವತಿಸುವಾಗ ವಿಫಲನಾದಲ್ಲಿ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯದಿರಿ. ಹೀಗಾಗಿ ಸಕಾಲದಲ್ಲಿ ಸಾಲ ಮರುಪಾವತಿಸುವುದು ಗ್ರಾಹಕರ ಜವಾಬ್ಧಾರಿ ಆಗಿರುತ್ತದೆ.

  English summary

  CIBIL Credit Score: All You Need To Know Before Applying For Loan

  Credit Information Bureau (India) Limited is popularly known as CIBIL which a credit information company in India. The main purpose of the company is to collect and maintain credit records of individuals and commercial entities.
  Company Search
  Enter the first few characters of the company's name or the NSE symbol or BSE code and click 'Go'
  ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more