ಬ್ಯಾಂಕ್ ಖಾತೆ ಮುಚ್ಚುವ ಮುನ್ನ ಇಲ್ಲೊಮ್ಮೆ ನೋಡಿ...

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡಿ ಮತ್ತೊಂದು ಹೊಸ ಖಾತೆ ತೆರೆಯಲು ಯೋಚಿಸುತ್ತಿದ್ದೀರಾ? ನಿರ್ಧಾರ ಮಾಡುವ ಮುನ್ನ ಖಾತೆ ಬದಲಾವಣೆ ನಿಜವಾಗಿ ನಿಮಗೆ ಲಾಭ ತರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

  ಇದರ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿಕೊಂಡು ಪರಶೀಲನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ನಿಮಗೆ ಲಾಭ ಎಂದೆನಿಸಿದರೆ ಮಾತ್ರ ಖಾತೆ ಬದಲಾವಣೆ ಮಾಡುಕೊಳ್ಳುವುದು ಉತ್ತಮ.

  ಖಾತೆ ಬದಲಾವಣೆ ನಿಮ್ಮ ನಿರ್ಧಾರವಾಗಿದ್ದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಕ್ಲೋಸ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ..

  1. ಸ್ವಯಂ ಚಾಲಿತ ಪಾವತಿಗಳನ್ನು ನಿಲ್ಲಿಸಿ

  ಖಾತೆ ಬದಲಾವಣೆ ಮಾಡುವ ಮುನ್ನ ವಿವಿಧ ಸಂಗತಿಗಳಿಗೆ ಸಂಬಂಧಿಸಿ ಬ್ಯಾಂಕ್ ಗೆ ನಿಮ್ಮಿಂದ ಸ್ವಯಂಚಾಲಿತವಾಗಿ ಹಣ ಪಾವತಿಯಾಗುತ್ತಿದ್ದರೆ ಮೊದಲು ಅದನ್ನು ನಿಲ್ಲಿಸಲು ಹಳೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಿ. ನಿಮ್ಮಿಂದ ಅಥವಾ ನಿಮಗೆ ಸಲ್ಲಿಕೆಯಾಗಬೇಕಿರುವ ಯಾವುದೆ ರೀತಿಯ ಹಣವನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ. ವಿಶೇಷವಾಗಿ ಸ್ವಯಂ ನವೀಕರಣ, ಮತ್ತು ತ್ರೈಮಾಸಿಕ, ವಾರ್ಷಿಕ ಅಥವಾ ದ್ವೈ ವಾರ್ಷಿಕ ವಿಮಾ ಪಾವತಿಗಳಿದ್ದರೆ ಖಚಿತಪಡಿಸಿಕೊಳ್ಳಿ.

  2. ಖಾತೆಯ ಎಲ್ಲ ವಿವರ ಪಡೆದುಕೊಳ್ಳಿ

  ಈ ಹಂತವನ್ನು ಯಾವ ಕಾರಣಕ್ಕೂ ಮರೆಯಬೇಡಿ. ನಿಮ್ಮ ಉಳಿಯತಾಯ ಖಾತೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಭದ್ರವಾಗಿ ಇಟ್ಟುಕೊಳ್ಳಿ. ಸಂದರ್ಭ ಒದಗಿ ಬಂದಾಗ ಈ ಮಾಹಿತಿಗಳೆಲ್ಲ ಬೇಕಾಗಬಹುದು. ಅಗತ್ಯವಿದ್ದರೆ ಒಂದು ಸಾಫ್ಟ್ ಕಾಪಿ ಇಲ್ಲವೇ ಪ್ರಿಂಟ್ ಔಟ್ ತಡೆಗೆದಿಟ್ಟುಕೊಳ್ಳಿವುದು ಒಳಿತು.

  3. ಹೊಸ ಖಾತೆ ತೆರೆಯಿರಿ

  ನಿಮಗಿಷ್ಟವಾದ ಬ್ಯಾಂಕ್ ನಲ್ಲಿ ಹೊಸ ಖಾತೆಯನ್ನು ತೆರೆಯಿರಿ. ಆದರೆ ನಿಮಗೆ ಡೆಬಿಟ್ ಕಾರ್ಡ್, ಪಿನ್, ಚೆಕ್ ಬುಕ್ ಮತ್ತು ಸಂಬಂಧಿಸಿದ ಎಲ್ಲ ಡಾಕ್ಯುಮೆಂಟ್ಸ್ ಸಿಗುವವರೆಗೆ ಯಾವ ಕಾರಣಕ್ಕೂ ಅಷ್ಟೂ ಹಣವನ್ನು ವರ್ಗಾವಣೆ ಮಾಡಬೇಡಿ.

  4. ಬ್ಯಾಲೆನ್ಸ್ ಚೆಕ್ ಮಾಡಿ

  ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ, ಅಗತ್ಯವಿರುವಷ್ಟು ಮೊತ್ತ ಪಾವತಿಸುವವರೆಗೂ ಖಾತೆಯನ್ನು ಕ್ಲೋಸ್ ಮಾಡಲು ಬ್ಯಾಂಕುಗಳು ಅವಕಾಶ ನೀಡುವುದಿಲ್ಲ. ಬ್ಯಾಂಕ್ ಗಳು ಸೂಚಿಸಿದಂತೆ ಮಿನಿಮಮ್ ಬ್ಯಾಲೆನ್ಸ್ ಇದ್ದರೆ ಮಾತ್ರ ಖಾತೆಗೆ ಅಂತ್ಯ ಹಾಡಲು ಸಾಧ್ಯವಾಗುತ್ತದೆ.

  5. ಸ್ವಯಂಚಾಲಿತ ಪಾವತಿ ಆಯ್ಕೆ ಮಾಡಿ

  ಹಳೆ ಖಾತೆಯನ್ನು ಕ್ಲೋಸ್ ಮಾಡುವ ಮುನ್ನ ಹೊಸ ಖಾತೆಗೆ ಸ್ವಯಂಚಾಲಿತ ಹಣ ಪಾವತಿ ವಿಧಾನವನ್ನು ಅಳವಡಿಕೆ ಮಾಡಲಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಹೊಸ ಖಾತೆಯಲ್ಲಿ ಇಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ, ಕ್ರೆಡಿಟ್ ಕಾರ್ಡ್ ಬಿಲ್ ನಂಥವು ಮಿಸ್ ಆಗುವ ಸಾಧ್ಯತೆಯಿರುತ್ತದೆ.

  6. ಅಕೌಂಟ್ ನಂಬರ್ ನಮೂದಿಸಿ

  ನಿಮ್ಮ ಹೊಸ ಖಾತೆಯ ನಂಬರ್ ಅನ್ನು ಕೆಲಸ ಮಾಡುತ್ತಿರುವ ಕಂಪನಿಗೆ ನೀಡಲು ಮರೆಯದಿರಿ. ಸುಲಭವಾಗಿ ನಿಮ್ಮ ವೇತನದ ಹಣ ಯಾವುದೇ ಗೊಂದಲವಿಲ್ಲದೇ ಖಾತೆ ಸೇರಲು ಇದು ನೆರವಾಗುತ್ತದೆ. ಉಳಿದಂತೆ ಅಗತ್ಯವಿರುವೆಡೆ ನಿಮ್ಮ ಹೊಸ ಖಾತೆ ಸಂಖ್ಯೆ ನೀಡಿ.
  ಈ ಎಲ್ಲ ಮಾಹಿತಿಗಳನ್ನು ಇನ್ನೊಮ್ಮೆ ಪರಿಶೀಲಿಸಿ, ಎಲ್ಲವೂ ಸರಿಯಾಗಿದೆ ಎಂದು ದೃಢಪಟ್ಟ ನಂತರವಷ್ಟೇ ನಿಮ್ಮ ಹಳೆಯ ಬ್ಯಾಂಕ್ ಶಾಖೆಗೆ ತೆರಳಿ ಅಕೌಂಟ್ ಕ್ಲೋಸ್ ಮಾಡುವಂತೆ ತಿಳಿಸಿ.

  English summary

  Things to Keep in Mind Before Closing Savings Bank Account

  Are you planning to close your savings bank account and open one another bank? Before making a decision make sure whether is it worth a change or not. Do you homework and get to know what other banks are offering. Here is a checklist to follow before you close your bank account.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more