ಇದೋ ಸುವರ್ಣ ಅವಕಾಶ! ಅಕ್ಷಯ ತೃತೀಯಾ ಸಂಭ್ರಮಾಚರಣೆಗಾಗಿ ಹೆಚ್ಚಿನ ಚಿನ್ನಾಭರಣ ವ್ಯಾಪಾರಿಗಳು ತಾವು ಮಾರಾಟ ಮಾಡುವ ಚಿನ್ನದ ಬೆಲೆ ಬೇರೆಯವರಿಗಿಂತ ಕಡಿಮೆ ಎಂದು ಪ್ರಚಾರ ಹೇಳಿಕೊಳ್ಳುವರು.
ಇದೋ ಸುವರ್ಣ ಅವಕಾಶ! ಅಕ್ಷಯ ತೃತೀಯ ಸಂಭ್ರಮಾಚರಣೆಗಾಗಿ ಹೆಚ್ಚಿನ ಚಿನ್ನಾಭರಣ ವ್ಯಾಪಾರಿಗಳು ತಾವು ಮಾರಾಟ ಮಾಡುವ ಚಿನ್ನದ ಬೆಲೆ ಬೇರೆಯವರಿಗಿಂತ ಕಡಿಮೆ ಎಂದು ಪ್ರಚಾರ ಮಾಡಿದರೆ, ಮತ್ತೆ ಕೆಲವರು ತಮ್ಮಲ್ಲಿ ಮೇಕಿಂಗ್ ಚಾರ್ಜಸ್ ಬಹಳ ಕಡಿಮೆ ಎಂದು ಹೇಳಿಕೊಳ್ಳುವರು. ಮತ್ತೊಂದೆಡೆ ಇಂತಿಷ್ಟು ಚಿನ್ನಕ್ಕೆ ಸ್ವಲ್ಪ ಬೆಳ್ಳಿ ಉಚಿತ ಎಂಬ ಯೋಜನೆ ತೇಲಿ ಬಿಟ್ಟಿರುತ್ತಾರೆ. ಅಕ್ಷಯ ತೃತೀಯ ಧಮಾಕಾ..! ಕೇವಲ 1 ರೂಪಾಯಿಗೆ ಚಿನ್ನ ಖರೀದಿಸಿ!!
ನಮ್ಮ ಸಂಸ್ಕೃತಿಯಂತೆ ಹಲವಾರು ಹಬ್ಬ ಹರಿದಿನಗಳಲ್ಲಿ ವಿಶೇಷವಾಗಿ ಅಕ್ಷಯ ತೃತೀಯದಂದು ಚಿನ್ನ-ಬೆಳ್ಳಿಗಳಂತಹ ಅಮೂಲ್ಯವಾದ ಲೋಹಗಳನ್ನು, ಕನಿಷ್ಟ ಪಕ್ಷ ಸಾಂಕೇತಿಕವಾಗಿಯಾದರೂ ಕೊಳ್ಳುವ ಸಂಪ್ರದಾಯ ರೂಢಿಯಲ್ಲಿದೆ. ಈ ಕಾರಣದಿಂದಾಗಿ ಅಕ್ಷಯ ತೃತೀಯಾ ಸಂದರ್ಭದಲ್ಲಿ ಚಿನ್ನದ ದರ ಹೆಚ್ಚಿನ ಏರಿಳಿತ ಕಾಣುತ್ತದೆ.(ಅಕ್ಷಯ ತೃತೀಯ)
ಏರಿಳಿತಗಳ ಊಹಾಪೋಹ
ಈ ಸಂದರ್ಭದಲ್ಲಿ 2011ರ ಏಪ್ರಿಲ್ ನಲ್ಲಿ ಅಕ್ಷಯ ತೃತೀಯ ಮುಂಚಿನ ಕೆಲವು ದಿನಗಳಲ್ಲಿ ಬೆಳ್ಳಿಯ ಬೆಲೆಯು ರೂ. 75 ಸಾವಿರದ ಗಡಿ ದಾಟಿತ್ತು. ಅಂದರೆ ಕೇವಲ ಆರು ತಿಂಗಳಲ್ಲಿ ದ್ವಿಗುಣಗೊಂಡಿತ್ತು. ಅಕ್ಟೊಬರ್ 2010ರಲ್ಲಿ ರೂ. 25 ಸಾವಿರ ರೂಪಾಯಿಗಳ ಸಮೀಪವಿದ್ದ ಬೆಳ್ಳಿ, ಏಪ್ರಿಲ್ 2011ರಲ್ಲಿ ರೂ. 75 ಸಾವಿರದ ಗಡಿ ದಾಟಿದ ಸಂದರ್ಭದಲ್ಲಿ ಬೆಳ್ಳಿಯು ಒಂದು ಲಕ್ಷ ರೂಪಾಯಿಗಳನ್ನು ತಲುಪುತ್ತದೆ ಎಂಬ ಉಹಾಪೋಹವು ಬೇಡಿಕೆ ಹೆಚ್ಚುವಂತೆ ಮಾಡಿತು.
ಪರೋಕ್ಷ ದಾನ
ಸೋಜಿಗವೆಂದರೆ ಅಕ್ಷಯ ತೃತೀಯ ಹಿಂದಿನ ದಿನದಿಂದ ಬೆಳ್ಳಿಯ ಬೆಲೆ ಕುಸಿಯಿತು. ಅಂದರೆ ಅಕ್ಷಯ ತೃತೀಯಾ ದಿನದಂದು ದಾನ ಮಾಡಬೇಕೆಂದಿರುವುದರಿಂದ ರೂ. 75 ಸಾವಿರದ ಸಮೀಪ ಬೆಳ್ಳಿ ಖರೀದಿಸಿದವರು ಪರೋಕ್ಷವಾಗಿ ದಾನ ಮಾಡಿದಂತಾಯಿತಲ್ಲವೇ? ಅಂದು ಆ ಬೆಳೆಗೆ ಖರೀದಿಸಿದ ಬೆಳ್ಳಿಯನ್ನು ಇಂದಿಗೂ ಹೋಲ್ಡ್ ಮಾಡಿರುವವರು ಸಾಕಷ್ಟು ಹೂಡಿಕೆದಾರರಿದ್ದಾರೆ.
ಡಿಮ್ಯಾಟ್ ರೂಪ
ಅಕ್ಷಯ ತೃತೀಯದಂದು ಚಿನ್ನ ಕೊಳ್ಳಬೇಕೆಂದಿರುವವರಿಗೆ ಪರ್ಯಾಯವಾದ ಮಾರ್ಗವೊಂದಿದೆ. ಅದೆಂದರೆ ಸ್ಟಾಕ್ ಎಕ್ಸ್ ಚೇಂಜ್ ಮೂಲಕ ಚಿನ್ನವನ್ನು ಒಂದೊಂದೇ ಗ್ರಾಂನಷ್ಟು ಡಿಮ್ಯಾಟ್ ರೂಪದಲ್ಲಿ ಕೊಳ್ಳಲು ಅವಕಾಶವಿದೆ. ಇದು ಬೌತಿಕ ರೂಪದಲ್ಲಿ ಇಲ್ಲದೆ ಡಿಮ್ಯಾಟ್ ರೂಪದಲ್ಲಿರುತ್ತದೆ.
ಆಭರಣ ಅಂಗಡಿಗಳ ಮುಂದೆ ನಿಲ್ಲಬೇಕಿಲ್ಲ
ಅಕ್ಷಯ ತೃತೀಯ ದಿನದಂದು ಆಭರಣಗಳ ಅಂಗಡಿಯ ಮುಂದೆ ಸರತಿಯಲ್ಲಿ ಚಿನ್ನ ಕೊಳ್ಳುವುದಕ್ಕೆ ಬದಲಾಗಿ ಷೇರು ವಿನಿಮಯ ಕೇಂದ್ರಗಳ ಸದಸ್ಯರ, ಉಪದಲ್ಲಾಲರ ಅಥವಾ ಫ್ರಾಂಚೈಸಿಗಳ ಟರ್ಮಿನಲ್‌ನ ಮೂಲಕವೂ ಚಿನ್ನ ಖರೀದಿಸಬಹುದಾಗಿದೆ.
ಇ.ಟಿ.ಎಫ್ ಚಿನ್ನ
ಷೇರು ಬ್ರೋಕರ್ ಮುಂಚಿತವಾಗಿ ಸಂಪರ್ಕಿಸಿ ಅವರಲ್ಲಿ ನೊಂದಾಯಿಸಿಕೊಳ್ಳಿರಿ. ಅವಕಾಶವಿದ್ದಾಗಲೆಲ್ಲಾ ಉಳಿತಾಯದ ಮಾದರಿಯಾಗಿ ಚಿನ್ನ ಸಂಗ್ರಹಿಸಿರಿ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮತ್ತು ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ಒಂದು ಗ್ರಾಂ ಘಟಕಗಳಲ್ಲಿ ಯೂನಿಟ್‌ಗಳನ್ನು ಪಡೆಯಬಹುದು. ಬೇಡಿಕೆ-ಪೂರೈಕೆ, ಚಿನ್ನಿವಾರ ಪೇಟೆಯನ್ನಾಧರಿಸಿ ಇ.ಟಿ.ಎಫ್.ಗಳ ಮೂಲಕ ಚಿನ್ನ ಖರೀದಿಸಬಹುದು. ಇದಕ್ಕೆ ಷೇರು ಟ್ರೇಡಿಂಗ್ ಖಾತೆಯೇ ಸಾಕಾಗುವುದು. ವಿಶೇಷ ರಿಜಿಸ್ಟ್ರೇಷನ್ ಅವಶ್ಯಕತೆಯಿಲ್ಲ. ಈ ವಿಧದಲ್ಲಿ ಚಿನ್ನವನ್ನು ಭೌತಿಕವಾಗಿ ಪರಿವರ್ತಿಸಲು ಅವಕಾಶವಿಲ್ಲ.
ಮಾರಾಟ ಮಾಡಬಹುದು
ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳ ಯೂನಿಟ್‌ಗಳನ್ನು ಹೂಡಿಕೆದಾರರು ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ರೀತಿ ನಿಯತಕಾಲಿಕ ಹೂಡಿಕೆ ಮಾಡಿ ಸುಭದ್ರವಾದ ಹೂಡಿಕೆ ರೂಪಿಸಿಕೊಳ್ಳಬಹುದಾಗಿದೆ. ಹಣದ ಅವಶ್ಯಕತೆಯಿದ್ದಾಗ ಈ ಇ.ಟಿ.ಎಫ್ ಗೋಲ್ಡ್ ಯುನಿಟ್ ಗಳನ್ನು ಸ್ಟಾಕ್ ಎಕ್ಸ್ ಚೇಂಜ್ ಗಳಲ್ಲಿ ಮಾರಾಟ ಮಾಡಬಹುದಾಗಿದೆ.
ಸಂಜೆ 4.30-7ರ ವರೆಗೆ ವಹಿವಾಟಿಗೆ ಅವಕಾಶ
ಸ್ಟಾಕ್ ಎಕ್ಸ್ ಚೇಂಜ್ ಗಳು ಗೋಲ್ಡ್ ಇಟಿಎಫ್ ಗಳ ಮೂಲಕ ಚಿನ್ನ ಖರೀದಿಸುವವರಿಗೆ ಅನುಕೂಲವಾಗಲೆಂದು ಕೇವಲ ಗೋಲ್ಡ್ ಇಟಿಎಫ್ ಗಳಲ್ಲಿ ವ್ಯವಹರಿಸಲು ಸಂಜೆ 4-30ರಿಂದ 7 ಗಂಟೆಯವರೆಗೂ ವಹಿವಾಟಿಗೆ ವಿಶೇಷ ಅವಕಾಶ ಮಾಡಿಕೊಟ್ಟಿವೆ. ಈ ಅಕ್ಷಯ ತೃತೀಯದಂದು ಡಿಮ್ಯಾಟ್ ರೂಪದ ಚಿನ್ನ ಕೊಳ್ಳಲು ಅಡಿಪಾಯ ಹಾಕಿ.
More From GoodReturns

Silver Rate Today: ಭಾರತದಲ್ಲಿ ಸ್ಥಿರವಾದ ಬೆಳ್ಳಿ ದರ; ಎಷ್ಟಿದೆ ಗೊತ್ತಾ ಇಂದಿನ ದರ?

Gold Price Bengaluru: ಚಿನ್ನಪ್ರಿಯರಿಗೆ ಇಂದು ‘ಶುಕ್ರದೆಸೆ’…ಬಂಗಾರದ ದರದಲ್ಲಿ 7,700 ರೂ. ಕುಸಿತ!

Gold Rate Bengaluru: ಮಹಿಳಾ ದಿನಾಚರಣೆಯಂದೇ ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ಗೊತ್ತಾ ಬೆಲೆ?

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ



Click it and Unblock the Notifications