For Quick Alerts
ALLOW NOTIFICATIONS  
For Daily Alerts

ಆಧಾರ್ ಪೇ ಆಪ್ (ಭೀಮ್ ಆಧಾರ್ ಪೇಮೆಂಟ್ ಆಪ್) ಡೌನ್ಲೋಡ್ ಹೇಗೆ?

ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ಮೋದಿಯವರು ಆಧಾರ್ ಪೇ ಆಫ್(ಭೀಮ್ ಆಧಾರ್ ಪೇಮೆಂಟ್ ಆಪ್) ಬಿಡುಗಡೆಗೊಳಿಸಿದ್ದಾರೆ.

By Siddu
|

ಡಿಜಿಟಲ್ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ಮೋದಿಯವರು ಆಧಾರ್ ಪೇ ಆಫ್(ಭೀಮ್ ಆಧಾರ್ ಪೇಮೆಂಟ್ ಆಪ್) ಬಿಡುಗಡೆಗೊಳಿಸಿದ್ದಾರೆ.
ಭಾರತ್‌ ಇಂಟರ್ಫೇಸ್‌ ಫಾರ್‌ ಮನಿ(Bharat Interface For Money) ಇದರ ವಿಸ್ತೃತ ರೂಪ ಆಗಿದ್ದು, ರಾಷ್ಟ್ರೀಯ ಪಾವತಿ ನಿಗಮ 'ಭೀಮ್' ಆಪ್ ಅಭಿವೃದ್ಧಿ ಪಡಿಸಿದೆ. ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(UPI) ಮತ್ತು ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್‌ ಡೇಟಾ(USSD) ವ್ಯವಸ್ಥೆಯಂತೆ ಪಾವತಿ ಮಾಡಬಹುದು. ಭೀಮ್ ಆಪ್ ಸ್ಮಾರ್ಟ್‌ಫೋನ್‌ ಮತ್ತು ಸಾಮಾನ್ಯ ಫೋನ್‌ಗಳ ಮೂಲಕ ಹಣ ಪಾವತಿ ಮಾಡುವ ಮತ್ತು ಸ್ವೀಕರಿಸುವ ಸೌಲಭ್ಯ ಹೊಂದಿದೆ. 'ಭೀಮ್' ಆಪ್ ಬಳಕೆ ಹೇಗೆ? ಏನಿದರ ಉಪಯೋಗ?

ನಗದು ರಹಿತ ವಹಿವಾಟಿಗೆ ಹೊಸ ಮೊಬೈಲ್ ಪೇಮೆಂಟ್ ಆಪ್ 'ಭೀಮ್' ನೂತನ ವೇಗ ನೀಡಲಿದ್ದು, ತುಂಬಾ ಸುರಕ್ಷಿತವಾಗಿದೆ.
ಆಧಾರ್ ಪೇ ಎಲ್ಲಾ ಆಧಾರ್ ಲಿಂಕ್ಡ್ ಖಾತೆದಾರರು ಕೇವಲ ತಮ್ಮ ಹೆಬ್ಬೆಟ್ಟಿನ ಗುರುತು ಬಳಕೆಯಿಂದ ವ್ಯವಹಾರ ನಿರ್ವಹಿಸಲು ಅನುವಾಗುವಂತೆ ಮಾಡಲಾಗಿರುವ ಬಯೋಮೆಟ್ರಿಕ್ ಆಧಾರಿತ ಪಾವತಿ ವ್ಯವಸ್ಥೆ.

ಉದ್ದೇಶ

ಉದ್ದೇಶ

* ಡಿಜಿಟಲ್ ಪಾವತಿ ಮೂಲಕ ನಗದು ರಹಿತ ವ್ಯವಹಾರಕ್ಕೆ ಉತ್ತೇಜಿಸುವುದು.
* ಆರ್ಥಿಕತೆಯಲ್ಲಿ ಪಾರದರ್ಶಕತೆ ತರುವುದು'
* ಈಗಾಗಲೇ ಭಾರತ ಸರ್ಕಾರ ಯುಪಿಐ ಆಧಾರಿತ ಭೀಮ್(BHIM) ಆಪ್ ಬಿಡುಗಡೆಗೊಳಿಸಿದ್ದು, ದೇಶದಲ್ಲಿ ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುತ್ತಿದೆ.
* ನೆಟ್‌ ಬ್ಯಾಂಕಿಂಗ್‌ ಮಾದರಿಯಲ್ಲಿ ಹಣ ವರ್ಗಾವಣೆ ಮಾಡಬಹುದು.

ಆಧಾರ್ ಪೇ ಮೆಂಟ್ ಡೌನ್ಲೋಡ್ ಹೇಗೆ?

ಆಧಾರ್ ಪೇ ಮೆಂಟ್ ಡೌನ್ಲೋಡ್ ಹೇಗೆ?

* ನಿಮ್ಮ ಡೆಸ್ಕ್ಟಾಪ್ ಅಥವಾ ಮೊಬೈಲ್ ಮೂಲಕ ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ.
* ಗೂಗಲ್ ಪ್ಲೇ ಸ್ಟೋರ್ ಹೋಗಿ ಆಧಾರ್ ಪೇ ಅಥವಾ ಭೀಮ್ ಆಧಾರ್ ಪೇ ಎಂಬುದಾಗಿ ಟೈಪ್ ಮಾಡಿ ಆಪ್ ಡೌನ್ಲೋಡ್ ಮಾಡಿಕೊಳ್ಳಿ.
* ಭೀಮ್ ಆಪ್ ಡೌನ್ಲೋಡ್ ಆದ ನಂತರ ಇನ್ ಸ್ಟಾಲ್ ಮಾಡಿ.
* ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.(ಇಂಗ್ಲೀಷ, ಹಿಂದಿ)
* ವರ್ತಕರು ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನೊಂದಾಯಿಸಬೇಕು.
* ನಾಲ್ಕು ಅಂಕೆಗಳ ಪಾಸ್ವರ್ಡ್ ನಮೂದಿಸಿ ಮತ್ತು ಖಚಿತಪಡಿಸಿ.

ಆಧಾರ್ ಪೇ ಪ್ರಯೋಜನ

ಆಧಾರ್ ಪೇ ಪ್ರಯೋಜನ

* ಕ್ರೆಡಿಟ್/ಡೆಬಿಟ್ ಪಾವತಿಗಳ ಬಳಕೆ ಸಂಪೂರ್ಣವಾಗಿ ಕಡಿಮೆ ಮಾಡುವುದು.
* ಖಾಸಗಿ ಬ್ಯಾಂಕಿಂಗ್ ಮಾಹಿತಿ ವಿವರಗಳ ಕಳ್ಳತನವಾಗುವ ಪ್ರಮಾಣ ಕಡಿಮೆ ಮಾಡುತ್ತದೆ.
* ಆಧಾರ್ ಪೇ ಆಪ್ ಮೂಲಕ ಪಾವತಿಸುವುದರಿಂದ ಬೇರೆ ಯಾವುದೇ ಆಪ್ ಗಳನ್ನು ಇನ್ ಸ್ಟಾಲ್ ಮಾಡಬೇಕಿಲ್ಲ.
* ಗ್ರಾಹಕರು ಖಾತೆ ಸಂಖ್ಯೆಯೊಂದಿಗೆ ಆಧಾರ್ ಲಿಂಕಿಂಗ್ ಮಾಡಿಕೊಂಡಿದ್ದರೆ ಹೆಬ್ಬೆಟ್ಟು ಗುರುತು ಕೊಡುವುದರ ಮೂಲಕ ಪಾವತಿಸಬಹುದು.
* ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳು ಇದ್ದಲ್ಲಿ ಆಪ್ ಪರದೆ ಮೇಲೆ ಕಾಣುವ ಲಿಸ್ಟ್ ನಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬಹುದು.
* ಎಲ್ಲಾ ವ್ಯವಹಾರಗಳ ಧೃಢೀಕರಣಕ್ಕೆ ಫಿಂಗರ್ ಪ್ರಿಂಟ್ ನ್ನು ಭದ್ರತಾ ಪಾಸ್ವರ್ಡ್ ಆಗಿ ಬಳಕೆ ಮಾಡಬಹುದು.

English summary

How to Download & How to Use Aadhar Pay – BHIM Aadhar Payment App

Aadhar Pay is a new mobile app to be launched by the central government to promote the use of digital payments. BHIM Aadhar Pay app would be a merchant app which will allow customers to pay using their thumb impression.
Story first published: Saturday, April 15, 2017, 15:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X