Englishहिन्दी മലയാളം தமிழ் తెలుగు

ಪರ್ಸ್/ವಾಲೆಟ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ...

Posted By: Siddu
Subscribe to GoodReturns Kannada

ಪರ್ಸ್ ಬಳಕೆ ಮಾಡದೆ ಇರೋರು ಯಾರು ಇಲ್ಲ ಅನ್ನಬಹುದು. ಗಂಡಸರಾಗಲಿ, ಹೆಂಗಸರಾಗಲಿ ಬೇಧವಿಲ್ಲದೆ ಪರ್ಸ್/ವಾಲೆಟ್ ಗಳನ್ನು ಉಪಯೋಗಿಸುತ್ತಾರೆ. ಮನೆಯಿಂದ ಹೊರಡುವಾಗ ಪರ್ಸ್ ಜತೆಯಲ್ಲಿ ಇಟ್ಟುಕೊಳ್ಳಲು ಜನ ಮರೆಯುವುದಿಲ್ಲ.

ಆದರೆ ಪರ್ಸ್ ತುಂಬಾ ಏನೇನೋ ತುಂಬಿಕೊಂಡಿರುತ್ತಾರೆ. ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು ಹಾಗೂ ಯಾವುದನ್ನು ಇಟ್ಟುಕೊಳ್ಳಬಾರದು ಎನ್ನುವುದು ಕೂಡ ತುಂಬಾ ಮುಖ್ಯ ಸಂಗತಿ. ಇಲ್ಲದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯಬಾರದು.

ಹಾಗಿದ್ದರೆ ಪರ್ಸ್ ಗಳಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ....

1. ಸಾಮಾಜಿಕ ಭದ್ರತಾ ಕಾರ್ಡು

ಸೊಷಿಯಲ್ ಸೆಕ್ಯುರಿಟಿ ನಂಬರ್ ಗಳ ಮಾಹಿತಿ ಒಂದು ನಿರ್ಣಾಯಕ ಅಂಶವೆನ್ನಬಹುದು. ಸಾಮಾಜಿಕ ಭದ್ರತಾ ಕಾರ್ಡುಗಳನ್ನು ಪರ್ಸ್ ನಲ್ಲಿ ಇಡುವುದಕ್ಕಿಂತ ಮನೆಯಲ್ಲಿಡುವುದು ಸುರಕ್ಷಿತ ಮತ್ತು ಕ್ಷೇಮ. ಒಂದು ವೇಳೆ ಸೊಷಿಯಲ್ ಸೆಕ್ಯುರಿಟಿ ಕಾರ್ಡುಗಳನ್ನು ಕಳೆದುಕೊಂಡರೆ ಸಾಮಾಜಿಕ ಭದ್ರತಾ ಆಡಳಿತವನ್ನು ನೇರವಾಗಿ ಸಂಪರ್ಕಿಸಬೇಕು. ಪೊಲೀಸ್ ವರದಿ ಸಲ್ಲಿಸಬೇಕು. ಮೇಲ್ವಿಚಾರಣೆ ಮಾಡುವಂತೆ ಕ್ರೆಡಿಟ್ ಬ್ಯೂರೊಗಳಿಗೆ ತಿಳಿಸಬೇಕು. ಇಷ್ಟೇಲ್ಲ ಸಮಸ್ಯೆಗಳಿಗಿಂತ ಮನೆಲಿ ಇಡುವುದು ಉತ್ತಮ ಅಲ್ಲವೆ?

2. ಕ್ರೆಡಿಟ್ ಕಾರ್ಡ್

ಪ್ರತಿ ಬಾರಿಯೂ ನಿಮ್ಮ ಕಾರ್ಡುಗಳನ್ನು ಜತೆಯಲ್ಲಿಟ್ಟುಕೊಂಡು ಆಕಸ್ಮಾತ್ ಕಳೆದುಕೊಂಡರೆ ತೊಂದರೆಗೆ ಸಿಲುಕುವುದು ಗ್ಯಾರಂಟಿ. ಕಳ್ಳರು ನಿಮ್ಮ ವಾಲೆಟ್ ಹಣವನ್ನು ಖರ್ಚುಮಾಡಬಹುದು. ಹೀಗಾಗಿ ತುರ್ತು ಅಗತ್ಯಗಳಿಗಾಗಿ ಕ್ರೆಡಿಟ್ ಕಾರ್ಡ್ ಬದಲಾಗಿ ಡೆಬಿಟ್ ಕಾರ್ಡ್ ಮತ್ತು ಬ್ಯಾಕಪ್ ಕ್ರೆಡಿಟ್ ಕಾರ್ಡ್ ಬೇಕಾದ್ರೆ ಇಟ್ಟುಕೊಳ್ಳಿ. ಇದು ನಿಮ್ಮ ಶಾಪಿಂಗ್ ಖರ್ಚನ್ನು ಕಡಿಮೆ ಮಾಡುತ್ತದೆ.

3. ಗಿಫ್ಟ್ ಕಾರ್ಡ್

ಅನೇಕರಿಗೆ ಗಿಫ್ಟ್ ಕಾರ್ಡುಗಳನ್ನು ಪರ್ಸ್ ನಲ್ಲಿಡುವ ಹವ್ಯಾಸವಿರುತ್ತದೆ. ಗಿಫ್ಟ್ ಕಾರ್ಡ್ ಗಳನ್ನು ಕಳೆದುಕೊಂಡರೆ ಮತ್ತೆ ಪಡೆಯುವುದು ಕಷ್ಟ. ಏನಾದರೂ ಖರೀದಿ ಮಾಡಲು ಯೋಚಿಸಿದಲ್ಲಿ ಮಾತ್ರ ಗಿಫ್ಟ್ ಕಾರ್ಡ್ ಗಳನ್ನು ವಾಲೆಟ್ ನಲ್ಲಿರಿಸಿ.

4. ರಸೀತಿ

ಪ್ರತಿ ಖರೀದಿ ಸಂದರ್ಭದಲ್ಲಿ ರಸೀತಿ ಚೀಟಿಗಳನ್ನು ಪಡೆಯುತ್ತೇವೆ. ಅನೇಕ ಜನರು ಅದನ್ನು ತಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುತ್ತಾರೆ. ರಸೀತಿಯಲ್ಲಿನ ಮರ್ಚಂಟ್ ಮಾಹಿತಿ, ಡೆಬಿಟ್/ಕ್ರೆಡಿಟ್ ಕಾರ್ಡುಗಳ ಕೊನೆ ನಾಲ್ಕು ಸಂಖ್ಯೆ, ನಿಮ್ಮ ಹೆಸರು ಇತ್ಯಾದಿ ಮಾಹಿತಿಗಳು ಹ್ಯಾಕ್ ಮಾಡೊರಿಗೆ ಸಹಾಯವಾಗುತ್ತದೆ. ಹೀಗಾಗಿ ಪರ್ಸ್ ಗಳಿಂದ ರಸೀತಿ ಚೀಟಿಗಳನ್ನು ದೂರವಿಡುವುದೇ ಒಳಿತು.

5. ಚೆಕ್

ಜತೆಯಲ್ಲಿ ಚೆಕ್ ಇಟ್ಟುಕೊಳ್ಳುವ ಹವ್ಯಾಸ ನಿಮ್ಮದಾಗಿದಲ್ಲಿ ಅದನ್ನು ನಿಲ್ಲಿಸಿ. ಒಂದು ವೇಳೆ ಚೆಕ್ ಬುಕ್ ಕಳೆದುಕೊಂಡರೆ ದೊಡ್ಡ ತಲೆನೋವು. ಸಂಬಂಧಪಟ್ಟ ಬ್ಯಾಂಕಿಗೆ ಕರೆ ಮಾಡಿ ಚೆಕ್ ನಂಬರ್ ಬ್ಲಾಕ್ ಮಾಡುವಂತೆ ಹೇಳಬೇಕು. ಕಳೆದುಕೊಂಡ ಚೆಕ್ ಬುಕ್ ಹ್ಯಾಕ್ ಮಾಡೋರಿಗೆ ಒಂದು ವರದಾನ. ಯಾಕೆಂದರೆ ವ್ಯಕ್ತಿಯ ಖಾತೆ ಸಂಖ್ಯೆ ಸೇರಿದಂತೆ ಇನ್ನಿತರ ವಿವರ ಇರುತ್ತದೆ.

6. ಪಾಸ್ವರ್ಡ್ ಚೀಟಿ

ಹೆಚ್ಚಿನವರಿಗೆ ಕ್ರೆಡಿಟ್/ಡೆಬಿಟ್ ಕಾರ್ಡುಗಳ ನಂಬರ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟಕರ ಸಂಗತಿ. ಹೀಗಾಗಿ ಪರ್ಸ್ ಗಳಲ್ಲಿ ಪಿನ್ ನಂಬರ್ ಚೀಟಿಗಳಲ್ಲಿ ಬರೆದಿಟ್ಟುಕೊಳ್ಳುತ್ತಾರೆ. ಒಂದು ವೇಳೆ ಪರ್ಸ್ ಕಳೆದುಕೊಂಡಲ್ಲಿ ಕಳ್ಳರಿಗೆ ಸುಲಭವಾಗುತ್ತದೆ. ಹೀಗಾಗಿ ಸ್ಮಾರ್ಟ್ಫೋನ್ ಗಳಲ್ಲಿ ಪಾಸ್ವರ್ಡ್ ಗಳನ್ನು ಸಂರಕ್ಷಿಸಿಡುವುದು ಉತ್ತಮ.

7. ಕೀಲಿಗಳು

ಕಾರ್, ಬೈಕ್, ಮನೆ ಕೀಲಿ ಕೈಗಳನ್ನು ವಾಲೆಟ್ ಗಳಲ್ಲಿ ಇಡುವುದು ಅಪಾಯಕಾರಿ. ಕೀಲಿಗಳ ತುಂಬಾ ಜಾಗರೂಕತೆ ಅತ್ಯಗತ್ಯ. ನಿಮ್ಮ ಆಸ್ತಿಯನ್ನು, ಕುಟುಂಬವನ್ನು ಅಪಾಯದಲ್ಲಿ ಸಿಲುಕಿಸಬೇಡಿ.

8. ಅನಗತ್ಯ ವಸ್ತುಗಳು

ಎಟಿಎಂ ಸ್ಲಿಪ್, ರಸೀತಿ, ನೋಟ್ ಮಾಡಿಕೊಂಡ ಚೀಟಿಗಳು, ಹಳೆ ಟಿಕೇಟ್, ಚಾಕ್ಲೇಟ್ ರ್ಯಾಪರ್ ಗಳು... ಮೊದಲಾದ ಅಗತ್ಯವಿಲ್ಲದವುಗಳನ್ನು ಪರ್ಸ್ ಗಳಲ್ಲಿ ಇಡಬಾರದು. ಪರ್ಸ್ ಯಾವಾಗಲೂ ಶುಭ್ರವಾಗಿರುವಂತೆ ನೋಡಿಕೊಳ್ಳಿ. ಕ್ಯಾನ್ಸಲ್ಡ್ ಚೆಕ್(Cancelled Cheque) ಯಾವಾಗೆಲ್ಲ ಬೇಕು?

English summary

Why these things you should never carry in your wallet?

From cash to credit card, identity proofs we keep everything in our wallets. But when we can't find the wallet we start to panic, thinking about the valuable things you lost. It is difficult to avoid carrying all important stuff in wallets, but certainly, it can save you a lot of money and time.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns