For Quick Alerts
ALLOW NOTIFICATIONS  
For Daily Alerts

ಸಿವಿವಿ(CVV) ಏನಿದು? ಇದರ ಪ್ರಯೋಜನಗಳೇನು?

ಡೆಬಿಟ್, ಕ್ರೆಡಿಟ್ ಕಾರ್ಡುಗಳ ಮೂಲಕ ಆನ್ಲೈನ್ ವ್ಯವಹಾರ ಮಾಡಿದವರಿಗೆ ಇದರ ಬಗ್ಗೆ ಗೊತ್ತಿರುತ್ತದೆ. ಕಾರ್ಡ್ ಪರಿಶೀಲನಾ ಮೌಲ್ಯ(card verification value) ಅನ್ನು ಸಿವಿವಿ ಎನ್ನಲಾಗುತ್ತದೆ.

By Siddu
|

ಡೆಬಿಟ್, ಕ್ರೆಡಿಟ್ ಕಾರ್ಡುಗಳ ಮೂಲಕ ಆನ್ಲೈನ್ ವ್ಯವಹಾರ ಮಾಡಿದವರಿಗೆ ಇದರ ಬಗ್ಗೆ ಗೊತ್ತಿರುತ್ತದೆ. ಕಾರ್ಡ್ ಪರಿಶೀಲನಾ ಮೌಲ್ಯ(card verification value) ಅನ್ನು ಸಿವಿವಿ ಎನ್ನಲಾಗುತ್ತದೆ.

 

ಸಿವಿವಿ ನಿಮ್ಮ ಕಾರ್ಡ್ ನ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಮೋಸದಿಂದ ನಿಮ್ಮನ್ನು ತಡೆಯುತ್ತದೆ. ನೀವು ಆನ್ಲೈನ್ ಮೂಲಕ ಟ್ರಾನ್ಸಾಕ್ಷನ್ ಮಾಡಬೇಕು ಎಂದಾಗ ಕಾರ್ಡ್ ನ ಮಾಹಿತಿಗಳನ್ನು ಅಂದರೆ ಮುಗಿಯುವ ಅವಧಿ, ಕಾರ್ಡಿನ ಮೇಲಿರುವ ಹೆಸರು ಸೇರಿದಂತೆ ಇತರೆ ಮಾಹಿತಿಗಳನ್ನು ದಾಖಲು ಮಾಡಬೇಕಾಗುತ್ತದೆ. ಅಲ್ಲದೆ ಡೆಬಿಟ್, ಕ್ರೆಡಿಟ್ ಹಿಂಬದಿಯಲ್ಲಿರುವ ಸಿವಿವಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಕಾರ್ಡ್ ನ ಹಿಂಬದಿಯಲ್ಲಿರುವ ನಿಮ್ಮ ಸಹಿ ಪಕ್ಕದ ಮೂರು ಸಂಖ್ಯೆಗಳನ್ನು ಸಿವಿವಿ ಎಂದು ಕರೆಯಲಾಗುತ್ತದೆ. ಬಹಳ ಮುಖ್ಯ ಸಂಗತಿ ಅಂದರೆ ಇದನ್ನು ನೀವು ಬೇರೆ ಯಾರೊಂದಿಗೂ ಹಂಚಿಕೊಳ್ಳಬಾರದು.

ಸಿವಿವಿ ಬಗ್ಗೆ ಮಾಹಿತಿ

ಸಿವಿವಿ ಬಗ್ಗೆ ಮಾಹಿತಿ

ಕಾರ್ಡ್ ನ ಹಿಂಬದಿಯನ್ನು ನೀವು ವಿಶ್ಲೇಷಣೆ ಮಾಡಬೇಕು. ಮ್ಯಾಗೆಟಿಕ್ ಟೇಪ್ ವೊಂದು ಮೇಲಿನ ಅಂಚಿನಲ್ಲಿರುತ್ತದೆ. ಇದು ಅನೇಕ ಡಾಟಾಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿರುತ್ತದೆ. ಈ ಟೇಪ್ ನ ಕೊಂಚ ಕೆಳಭಾಗದಲ್ಲಿ ಸಂಖ್ಯೆಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಇದೆ ಸಿವಿವಿ. ಮಾಸ್ಟ್ರರ್ ಕಾರ್ಡ್ ಮತ್ತು ವೀಸಾ ಕಾರ್ಡ್ ಗಳು ಸಾಮಾನ್ಯವಾಗಿ ಮೂರು ಅಂಕೆಗಳನ್ನು ನೀಡಿದರೆ ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ 4 ಅಂಕೆಯನ್ನು ನೀಡಿರುತ್ತದೆ, ಹೊಸದಾಗಿ ನೀಡಿರುವ ರುಪೈ ಕಾರ್ಡ್ ನಲ್ಲಿ ಕೂಡ ಮೂರು ನಂಬರ್ ಗಳಿವೆ.

ಸಿವಿವಿಯ ಮಹತ್ವ

ಸಿವಿವಿಯ ಮಹತ್ವ

 ಕೇವಲ ನಿಮ್ಮ ಬಳಿಯಿಂದ ಸಿವಿವಿ ಪಡೆದುಕೊಂಡ ಮಾತ್ರಕ್ಕೆ ಅಥವಾ ನಿಮ್ಮ ಕಾರ್ಡ್ ನ ಸಿವಿವಿ ಸಿಕ್ಕಿದರೆ ಮೋಸ ಮಾಡಲು ಸಾಧ್ಯ ಎಂದು ಹೇಳಲಾಗುವುದಿಲ್ಲ. ಇದು ಒಂದು ಸುರಕ್ಷಾ ತಂತ್ರ ಅಷ್ಟೇ. ಸಿವಿವಿ ಸಲ್ಲಿಕೆ ಮಾಡಿದರೂ ಸಹ ನಿಮ್ಮ ಮೊಬೈಲ್ ಗೆ ಬರುವ ಒಟಿಪಿಯನ್ನು ಸಲ್ಲಿಕೆ ಮಾಡಿದ ಮೇಲೆ ಮಾತ್ರ ಹಣ ರವಾನೆ ಕೆಲಸ ಅಂತಿಮವಾಗುತ್ತದೆ. ಆದರೆ ಯಾವ ಕಾರಣಕ್ಕೂ ಸಿವಿವಿ, ಮೊಬೈಲ್ ಸಂಖ್ಯೆ ಎಲ್ಲವನ್ನು ನೀಡುವಾಗ ಎರಡು ಸಾರಿ ಯೋಚನೆ ಮಾಡುವುದು ಒಳಿತು.

ಕಾರ್ಡ್ ಸೆಕ್ಯುರಿಟಿ ಕೋಡ್
 

ಕಾರ್ಡ್ ಸೆಕ್ಯುರಿಟಿ ಕೋಡ್

ಸಿವಿವಿ ನಂಬರ್ ಅನ್ನು ಕಾರ್ಡ್ ಸೆಕ್ಯುರಿಟಿ ಕೋಡ್(card security code) ಎಂಬುದಾಗಿ ಕರೆಯಲಾಗುತ್ತದೆ. ಜತೆಗೆ ಸಿವಿವಿ2 ಅಂತಲೂ ಕರೆಯಲಾಗುತ್ತದೆ. ಸಿವಿವಿ ನಂಬರ್ ಅಂದರೆ ನಿಮ್ಮ ಕಾರ್ಡ್ ನ ಸಿಕ್ರೆಟ್ ಪಿನ್ ನಂಬರ್ ಅಲ್ಲ. ಸಿವಿವಿ ಸಂಖ್ಯೆ ನಮೂದಿಸಲು ಹೇಳಿದಾಗ ಪಿನ್ ನಂಬರ್ ಒದಗಿಸಲಾರದು.

English summary

What Is CVV Or Card Verification Value? What is the use of CVV?

If you are doing a banking transaction online, there is very little chance that you would not have to key in the Card Verification Value or the CVV. This is one line of measure that helps you to protect your card against any fraud when transacting online.
Story first published: Tuesday, June 13, 2017, 12:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X