For Quick Alerts
ALLOW NOTIFICATIONS  
For Daily Alerts

ಆಧಾರ್ ಜತೆ ಲಿಂಕ್ ಮಾಡಲೇಬೇಕಾದ ದಾಖಲಾತಿಗಳು ಮತ್ತು ಅವುಗಳ ಪ್ರಯೋಜನ

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಕೆಲ ಪ್ರಮುಖ ದಾಖಲಾತಿಗಳನ್ನು ಜೋಡಣೆ ಮಾಡುವುದು ಈಗ ಸರ್ಕಾರದಿಂದ ಕಡ್ಡಾಯವಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗುತ್ತಿದೆ.

|

ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಕೆಲ ಪ್ರಮುಖ ದಾಖಲಾತಿಗಳನ್ನು ಜೋಡಣೆ ಮಾಡುವುದು ಈಗ ಸರ್ಕಾರದಿಂದ ಕಡ್ಡಾಯವಾಗಿದೆ. ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗುತ್ತಿದೆ. ಆಧಾರ್ ಜೋಡಣಾ ಪ್ರಕ್ರಿಯೆ ತುಂಬಾ ಸರಳವಾಗಿದ್ದು, ಆನ್ಲೈನ್ ಅಥವಾ ಆಪ್ಲೈನ್ ಮೂಲಕ ಮಾಡಬಹುದಾಗಿದೆ.

 

ದಾಖಲಾತಿಗಳನ್ನು ನಿಮ್ಮ ಆಧಾರ್ ನೊಂದಿಗೆ ಜೋಡಣೆ ಮಾಡುವುದು ಹೇಗೆ ಮತ್ತು ಅವುಗಳ ಪ್ರಯೋಜನಗಳೇನು ಎಂಬುದನ್ನು ನೋಡೋಣ.. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

1. ಬ್ಯಾಂಕ್ ಖಾತೆ

1. ಬ್ಯಾಂಕ್ ಖಾತೆ

ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಲು ಮೊದಲು ನಿಮ್ಮ ಖಾತೆಗೆ ನೆಟ್ ಬ್ಯಾಂಕಿಂಗ್ ಸೇವೆಯನ್ನು ಸಕ್ರಿಯಗೊಳಿಸಬೇಕು.

ನೆಟ್ ಬ್ಯಾಂಕಿಂಗ್ ಗೆ ಪ್ರವೇಶಿಸಿ(ಲಾಗ್ ಇನ್ ಮಾಡಿ) ಮತ್ತು 'ಅಪ್ಡೇಟ್ ಆಧಾರ್ ಕಾರ್ಡ್ ಡಿಟೇಲ್ಸ್ ಅಥವಾ 'ಆಧಾರ್ ಕಾರ್ಡ್ ಸೀಡಿಂಗ್' ಅನ್ನು ತೆರೆಯಿರಿ. ನಂತರ ನಿಮ್ಮ ಎಲ್ಲ ಆಧಾರ್ ವಿವರಗಳನ್ನು ನಮೂದಿಸಿ, ಇನ್ನೊಮ್ಮೆ ಅದನ್ನು ಪರಿಶೀಲಿಸಿ ಸಬ್ಮಿಟ್ ಮಾಡಿ.
ನೀವು ನಮೂದಿಸಿದ ವಿವರಗಳು ಬ್ಯಾಂಕಿನಲ್ಲಿ ದೃಢಪಡಿಸಿದ ನಂತರ ಇಮೇಲ್ ಮೂಲಕ ಅಥವಾ ನೋಂದಾಯಿತ ಫೋನ್ ಸಂಖ್ಯೆಯ ಮೂಲಕ ಸೂಚನೆಯನ್ನು ಪಡೆಯುತ್ತೀರಿ. ಆಫ್ಲೈನ್ ​​ಜೋಡಣೆಗಾಗಿ, ನಿಮಗೆ ಆಧಾರ್ ಮತ್ತು ಬ್ಯಾಂಕ್ ಲಿಂಕಿಂಗ್ ಅರ್ಜಿ ಅಗತ್ಯವಿದೆ. ನೀವು ಇದನ್ನು ಡೌನ್ಲೋಡ್ ಮಾಡಬಹುದು ಅಥವಾ ನಿಮ್ಮ ಬ್ಯಾಂಕಿನಿಂದ ಪಡೆಯಬಹುದು.

ಪ್ರಯೋಜನ
ಈ ಎರಡು ದಾಖಲೆಗಳನ್ನು ಆಧಾರ್ ಲಿಂಕ್ ಮಾಡುವ ಮೂಲಕ, ಪಿಂಚಣಿ, ಕಲ್ಯಾಣ ನಿಧಿಗಳು, ವಿದ್ಯಾರ್ಥಿ ವೇತನಗಳು, ಸರ್ಕಾರಿ ಕಲ್ಯಾಣ ಯೋಜನೆ ಇತ್ಯಾದಿಗಳ ಪ್ರಯೋಜನ ಪಡೆಯಬಹುದು, ಇವುಗಳು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಕ್ರೆಡಿಟ್ ಆಗುತ್ತವೆ.

2. ಪ್ಯಾನ್
 

2. ಪ್ಯಾನ್

ನಿಮ್ಮ ಆಧಾರ್ ಕಾರ್ಡ್ ನ್ನು ಪ್ಯಾನ್ ಜತೆ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಡಿಸೆಂಬರ್ 31ರ ಒಳಗಾಗಿ ಜೋಡಣೆ ಮಾಡಬೇಕು. ಆಧಾರ್ ಜತೆ ಪ್ಯಾನ್ ಲಿಂಕ್ ಮಾಡಲು htttp://www.incometaxindiaefiling.gov.in ಗೆ ಹೋಗಿ ಮತ್ತು 'ಲಿಂಕ್ ಆಧಾರ್ ಟ್ಯಾಬ್' ಮೇಲೆ ಕ್ಲಿಕ್ ಮಾಡಿ. ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆ ಅಥವಾ ಎಸ್ಸೆಮ್ಮೆಸ್ ಯುಐಡಿಪಿಎನ್ ಅನ್ನು ನಮೂದಿಸಿ ಮತ್ತು 567678 ಅಥವಾ 56161 ಗೆ ಕಳುಹಿಸಿ.

ಪ್ರಯೋಜನ:
ಆಧಾರ್ ಜತೆ ಪ್ಯಾನ್ ಲಿಂಕ್ ಮಾಡುವುದರಿಂದ ನಕಲಿ ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ತೆಗೆದು ಹಾಕುವ ಮೂಲಕ ಭ್ರಷ್ಟಾಚಾರ ಮತ್ತು ವಂಚನೆಯನ್ನು ಕಡಿಮೆ ಮಾಡಬಹುದಾಗಿದೆ. ಇದರಿಂದ ತೆರಿಗೆ ತಪ್ಪಿಸುವವರನ್ನು ಗುರುತಿಸಬಹುದು. ಕಪ್ಪು ಹಣದ ಪ್ರಸರಣ ಕಡಿಮೆಗೊಳಿಸುತ್ತದೆ.

3. ಮತದಾರರ ಗುರುತು ಚೀಟಿ

3. ಮತದಾರರ ಗುರುತು ಚೀಟಿ

ಮತದಾರರ ಗುರುತು ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ತುಂಬಾ ಸರಳವಾದ ಪ್ರಕ್ರಿಯೆ. ನಿಮ್ಮ ಫೋನ್ ಮೂಲಕ ಎಸ್ಸೆಮ್ಮೆಸ್ ಅನ್ನು ಕಳುಹಿಸುವ ಮೂಲಕ ಅಥವಾ ಕಾಲ್ ಸೆಂಟರ್ ಅನ್ನು ಸಂಪರ್ಕಿಸುವ ಮೂಲಕ ಇದನ್ನು ಆನ್ಲೈನಲ್ಲಿಯೇ ಮಾಡಬಹುದು.

ಆನ್ಲೈನ್ ​ಅಲ್ಲಿ ಈ ಪ್ರಕ್ರಿಯೆಯನ್ನು​ ಪೂರ್ಣಗೊಳಿಸಲು, ನೀವು ಅಧಿಕೃತ ಎನ್ ವಿ ಎಸ್ ಪಿ( NVSP) ವೆಬ್ಸೈಟ್ ಗೆ ಭೇಟಿ ನೀಡಬೇಕು ಅಥವಾ ಕೆಳಗಿನ ಎಸ್ಎಂಎಸ್ ಅನ್ನು 166 ಅಥವಾ 51969 ಗೆ ಕಳುಹಿಸುವ ಮೂಲಕ ಈ ಡಾಕ್ಯುಮೆಂಟ್ ಗಳನ್ನು ಲಿಂಕ್ ಮಾಡಬಹುದು.
ECILINK <ಆಧಾರ್_ಸಂಖ್ಯೆ>
ಅಥವಾ ನೀವು ವಾರದ ದಿನಗಳಲ್ಲಿ ಮೀಸಲಾದ ಕಾಲ್ ಸೆಂಟರ್ ಗಳಿಗೆ 1950ಗೆ ಕರೆ ಮಾಡಿ, ನಿಮ್ಮ ಆಧಾರ್ ವಿವರಗಳನ್ನು ಮತ್ತು ಇಪಿಐಸಿ ಸಂಖ್ಯೆ ಒದಗಿಸಬೇಕು.
ಈ ಡಾಕ್ಯುಮೆಂಟ್ ಗಳನ್ನು ಆಫ್ಲೈನ್ ನಲ್ಲಿ ಲಿಂಕ್ ಮಾಡಲು, ನಿಮ್ಮ ಬೂತ್ ಮಟ್ಟದ ಅಧಿಕಾರಿ (BLO ಬಿಎಲ್ ಒ) ಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಪ್ರಯೋಜನ
ಆಧಾರ್ ಪ್ಯಾನ್ ಕಾರ್ಡ್ ಗಳನ್ನು ಲಿಂಕ್ ಮಾಡುವುದರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚಿರುವ ಮತದಾರರ ಐಡಿ ಕಾರ್ಡುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹೀಗಾಗಿ ಮತದಾನ ವ್ಯವಸ್ಥೆಯನ್ನು ಶುಚಿಗೊಳಿಸಬಹುದಾಗಿದೆ.

 

4. ಎಲ್ಪಿಜಿ (LPG)

4. ಎಲ್ಪಿಜಿ (LPG)

ಎಲ್ಪಿಜಿ ಜತೆ ಆಧಾರ್ ಜೋಡಣೆಗಾಗಿ, ನಿಮ್ಮ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಬೇಕು.
ನೀವು ಮೊದಲಿಗೆ ಸಬ್ಸಿಡಿ ಫಾರ್ಮ್ ಅನ್ನು http://petroleum.nic.in ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು ಅಥವಾ ಭಾರತ್ ಗ್ಯಾಸ್, ಹೆಚ್ ಪಿ ಗ್ಯಾಸ್ ಅಥವಾ ಇಂಡೇನ್ ಅಧಿಕೃತ ವೆಬ್ ಸೈಟಿನಲ್ಲಿ ಈ ಫಾರ್ಮ್ ಸಿಗುತ್ತದೆ.
ಅಗತ್ಯ ಮಾಹಿತಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಿ ಹತ್ತಿರದ ಎಲ್ಪಿಜಿ ವಿತರಕರಿಗೆ ಸಲ್ಲಿಸಿ.
ಇಲ್ಲವೆ ಕಾಲ್ ಸೆಂಟರ್ ನಂಬರ್ 18000-2333-555 ಕರೆ ಮಾಡಿ ಅವರು ನೀಡುವ ಸೂಚನೆಗಳನ್ನು ಅನುಸರಿಸಿ ಕೂಡ ಲಿಂಕ್ ಮಾಡಬಹುದು.

ಪ್ರಯೋಜನ
ಸರ್ಕಾರ ಒದಗಿಸುತ್ತಿರುವ ಎಲ್ಪಿಜಿ ಸಬ್ಸಿಡಿ ಪಡೆಯಲು ಸಹಾಯ ಮಾಡುತ್ತದೆ.

5. ರೇಷನ್ ಕಾರ್ಡ್

5. ರೇಷನ್ ಕಾರ್ಡ್

ಇತರ ದಾಖಲೆಗಳಂತೆ, ಪಡಿತರ ಮತ್ತು ಆಧಾರ್ ಕಾರ್ಡ್ ಗಳನ್ನು ಆನ್ಲೈನ್ ​​ಮತ್ತು ಆಫ್ಲೈನ್ ಮೂಲಕ ಲಿಂಕ್ ಮಾಡಬಹುದು.
ಆಧಾರ್ ಸೀಡಿಂಗ್ ವೆಬ್ಸೈಟ್ ಮೂಲಕ ಮಾಡಬೇಕು. ಮೊದಲಿಗೆ 'ಪ್ರಾರಂಭಿಸು' (ಸ್ಟಾರ್ಟ್ ನೌ) ಗೆ ಕ್ಲಿಕ್ ಮಾಡಿ ಮತ್ತು ಎಲ್ಲಾ ಅಗತ್ಯ ವಿವರಗಳನ್ನು ನಮೂದಿಸಿ. ನಂತರ ನಿಮ್ಮ ನೋಂದಾಯಿತ ಫೋನ್ ನಂಬರ್ ಗೆ ಒಟಿಪಿ ಸಂಖ್ಯೆ ಬರುತ್ತದೆ. ಈ ಸಂಖ್ಯೆಯನ್ನು ನಮೂದಿಸಿದ ನಂತರ, ನಿಮ್ಮ ಅರ್ಜಿಯನ್ನು ಕ್ರೀಯಾಶೀಲಗೊಳಿಸಲಾಗುವುದು. ಇದಾದ ನಂತರ ನೀವು ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ.

ರೇಷನ್ ಕಾರ್ಡ್ ಆಫ್ಲೈನ್ ನಲ್ಲಿ ಲಿಂಕ್ ಮಾಡಲು, ನಿಮ್ಮ ಕುಟುಂಬದ ಸದಸ್ಯರ ಮತ್ತು ನಿಮ್ಮ ಆಧಾರ್ ಪ್ರತಿಯನ್ನು ನಿಮ್ಮ ರೇಷನ್ ಕಾರ್ಡುಗಳ ಫೋಟೋ ಕಾಪಿಗಳು ಬೇಕಾಗುತ್ತವೆ.
ಕುಟುಂಬದ ಮುಖ್ಯಸ್ಥನ ಪಾಸ್ಪೋರ್ಟ್ ಛಾಯಾಚಿತ್ರ ಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಆಧಾರ್ ಗೆ ಲಿಂಕ್ ಮಾಡದಿದ್ದರೆ ನಿಮ್ಮ ಬ್ಯಾಂಕ್ ಪಾಸ್ ಬುಕ್ ಫೋಟೊ ಕಾಪಿ ಕೂಡ ಬೇಕಾಗುತ್ತದೆ.
ಇವುಗಳನ್ನು ಪಡಿತರ ಕಚೇರಿಗೆ ಸಲ್ಲಿಸಿ. ದಾಖಲೆಗಳು ಸಂಬಂಧಿತ ವಿಭಾಗಕ್ಕೆ ತಲುಪಿದ ನಂತರ ನಿಮಗೆ ಎಸ್ಸೆಮ್ಮೆಸ್ ಅಥವಾ ಇಮೇಲ್ ಮೂಲಕ ತಿಳಿಸಲಾಗುತ್ತದೆ.

ಪ್ರಯೋಜನ:
ಪಡಿತರ ಚೀಟಿಗಳ ದುರುಪಯೋಗವನ್ನು ಇದು ತಡೆಯುತ್ತದೆ.

6. ಮೊಬೈಲ್ ಸಂಖ್ಯೆ

6. ಮೊಬೈಲ್ ಸಂಖ್ಯೆ

2017 ರ ಮಾರ್ಚ್ ನಿಂದ ಟೆಲಿಕಾಂ ಇಲಾಖೆಯ (DoT) ಪ್ರಕಾರ, ಹೊಸ ಮೊಬೈಲ್ ಸಂಪರ್ಕವನ್ನು ಪಡೆಯುವ ಮೊದಲು ಕೆವೈಸಿ (ನಿಮ್ಮ ಗ್ರಾಹಕ ತಿಳಿದುಕೊಳ್ಳಿ) ಕಡ್ಡಾಯವಾಗಿದೆ. ಅಸ್ತಿತ್ವದಲ್ಲಿರುವ ಸಂಪರ್ಕಗಳಿಗೂ ಕೂಡ ಇದನ್ನು ಅನುಸರಿಸಬೇಕಾಗಿ ಟೆಲಿಕಾಂ ಕಂಪೆನಿಗಳು ಹೇಳಿವೆ.
ಆಧಾರ್ ಕಾರ್ಡ್ ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಮತ್ತು ಪರಿಶೀಲಿಸಲು ಹತ್ತಿರದ ಅಂಗಡಿಯನ್ನು ಭೇಟಿ ಮಾಡಬೇಕೆಂದು ಗ್ರಾಹಕರು ತಮ್ಮ ಸೇವಾ ಪೂರೈಕೆದಾರರಿಂದ ಸಂದೇಶಗಳನ್ನು ಸ್ವೀಕರಿಸಿರುತ್ತಾರೆ.
ಒಟಿಪಿ ಸಕ್ರಿಯಗೊಳಿಸಲು ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಸೇರಿಸಬೇಕು ಎಂದು ಗಮನಿಸುವುದು ಮುಖ್ಯವಾಗಿದೆ. ನಿಮ್ಮ ಆಧಾರ್ ಅನ್ನು ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ಆನ್ಲೈನ್ ನಲ್ಲಿ ನವೀಕರಿಸಲು ನೀವು ಅನುಸರಿಸಬಹುದಾದ ಹಂತಗಳು ಈ ಕೆಳಗಿನಂತಿವೆ.

ವೆಬ್ಸೈಟ್ ಮೂಲಕ ಆಧಾರ್ ಅಪ್ಡೇಟ್ /ಕರೆಕ್ಷನ್ ಫಾರ್ಮ್ ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ಅಜಿಯಲ್ಲಿ ಅಗತ್ಯವಾದ ಮಾಹಿತಿ ತುಂಬಿ. ದಾಖಲೆಯ ಮೇಲೆ ಸಹಿ ಅಥವಾ ಹೆಬ್ಬೆರಳ ಗುರುತನ್ನು ಒತ್ತಬೇಕು. ಆ ಬಳಿಕ ಅರ್ಜಿಯನ್ನು ಆಧಾರ್ ಕಚೇರಿಗೆ ಮೇಲ್ ಕಳುಹಿಸಬೇಕು.

ಆಧಾರ್ ಕೇಂದ್ರವನ್ನು ಸ್ವತಃ ಭೇಟಿ ನೀಡುವ ಮೂಲಕ ಈ ಕೆಲಸವನ್ನು ಪೂರ್ಣಗೊಳಿಸಬಹುದು, ಅಲ್ಲಿ ಅರ್ಜಿ ತುಂಬುವುದರ ಜೊತೆಗೆ, ನಿಮ್ಮ ಬಯೋಮೆಟ್ರಿಕ್ ಗಳನ್ನು ದಾಖಲಿಸಲಾಗುತ್ತದೆ ಹಾಗು ಪರಿಶೀಲಿಸಲಾಗುತ್ತದೆ.

ಉಪಯೋಗ:
ಇದು ನಿಮ್ಮನ್ನು ಗುರುತಿಸುವಲ್ಲಿ ಮತ್ತು ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ಬ್ಯಾಂಕಿನ ಖಾತೆಗಳನ್ನು ಸಕ್ರಿಯವಾಗಿಡಲು ಮತ್ತು ಐಟಿಆರ್ ಫೈಲಿಂಗ್ ನಂತಹ ವಿಷಯಗಳಿಗೆ ಸಹಾಯ ಮಾಡುತ್ತದೆ.

ಕೊನೆ ಮಾತು

ಕೊನೆ ಮಾತು

ಇದರ ಜತೆಗೆ ಹಲವಾರು ಯೋಜನೆಗಳಿಗೆ, ವ್ಯವಹಾರಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿದೆ. ವಾಹನ ನೊಂದಣಿ ಮತ್ತು ಚಾಲನಾ ಪರವಾನಗಿಯನ್ನು ಪಡೆದುಕೊಳ್ಳಲು ಆಧಾರ್ ಕಾರ್ಡುಗಳನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಆದೇಶಿಸಿದೆ. ರಾಷ್ಟ್ರೀಯ ಡೇಟಾಬೇಸ್ ರಚಿಸಲು ಮತ್ತು ನಕಲಿ ಪರವಾನಗಿ ಸಮಸ್ಯೆಯನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ.

English summary

Which Documents that must be linked with your Aadhaar card

Linking certain documents with your Aadhaar card has now been made compulsory by the government. These measures are being put into place to ensure that benefits from all government schemes reach the people.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X