For Quick Alerts
ALLOW NOTIFICATIONS  
For Daily Alerts

ಜಿಡಿಪಿ ಎಂದರೇನು? ಭಾರತದ ಜಿಡಿಪಿ ಹೇಗೆ ಲೆಕ್ಕ ಹಾಕಲಾಗುತ್ತದೆ?

ಒಟ್ಟು ದೇಶಿಯ ಉತ್ಪಾದನೆ(ಜಿಡಿಪಿ)ಇದನ್ನು ಒಂದು ದೇಶದ ಆರ್ಥಿಕ ಪ್ರಗತಿಯ ಅಳತೆಗೋಲು ಎಂದೇ ಪರಿಗಣಿಸಲಾಗುತ್ತದೆ.

|

ಒಟ್ಟು ದೇಶಿಯ ಉತ್ಪಾದನೆ(ಜಿಡಿಪಿ)ಇದನ್ನು ಒಂದು ದೇಶದ ಆರ್ಥಿಕ ಪ್ರಗತಿಯ ಅಳತೆಗೋಲು ಎಂದೇ ಪರಿಗಣಿಸಲಾಗುತ್ತದೆ. ಸರಳವಾಗಿ ವಿವರಿಸುವುದಾದರೆ, ಈ ದರ ಅಥವಾ ಪ್ರಮಾಣವು ಒಂದು ನಿರ್ದಿಷ್ಟ ಅವಧಿಯಲ್ಲಿ ಉತ್ಪಾದಿಸಲಾದ ಉತ್ಪನ್ನ ಮತ್ತು ಒದಗಿಸಲಾದ ಸೇವೆಗಳ ವಹಿವಾಟಿನ ಒಟ್ಟು ಹಣಕಾಸು ಮೌಲ್ಯ.

ಜಿಡಿಪಿಯ ಪ್ರಾಮುಖ್ಯತೆ

ಜಿಡಿಪಿಯ ಪ್ರಾಮುಖ್ಯತೆ

ನಾಗರಿಕರು, ಆರ್ಥಿಕ ಪಂಡಿತರು, ರಾಜಕಾರಣಿಗಳು, ಹೂಡಿಕೆದಾರರು ಮತ್ತು ಉದ್ದಿಮೆದಾರರ ಮೇಲೆ ಜಿಡಿಪಿ ಫಲಿತಾಂಶ ಒಂದಿಲ್ಲೊಂದು ಬಗೆಯಲ್ಲಿ ಪರಿಣಾಮ ಉಂಟು ಮಾಡುತ್ತದೆ.
ಒಟ್ಟಾರೆ ಆರ್ಥಿಕ ಪ್ರಗತಿಯಲ್ಲಿ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡು ಬರದಿದ್ದಾಗ ಇಲ್ಲವೇ ಹಿನ್ನಡೆಯುಂಟಾದಾಗ ಅಥವಾ ಬೆಳವಣಿಗೆಯ ಗತಿಯಲ್ಲಿ ಅನಿಶ್ಚಿತತೆಯ ಸೂಚನೆಗಳು ದೊರೆತಾಗ ಸರಕಾರಗಳು ಸೂಕ್ತ ಬಗೆಯಲ್ಲಿ ಹಣಕಾಸು ಸಂಪನ್ಮೂಲವನ್ನು ತೊಡಗಿಸುವ ಅಥವಾ ಮರು ಹೊಂದಾಣಿಕೆ ಮಾಡುವ ಮೂಲಕ ಅಗತ್ಯ ಉತ್ತೇಜನ ನೀಡಿ ಆರ್ಥಿಕ ಚೇತರಿಕೆಯತ್ತ ಗಮನ ಹರಿಸುವ ಕೆಲಸಕ್ಕೆ ಜಿಡಿಪಿಯ ಫಲಿತಾಂಶ ಮುನ್ಸೂಚನೆ ನೀಡುತ್ತದೆ. ಹಾಗಾಗಿಯೇ ಸರ್ಕಾರಗಳು ಜಿಡಿಪಿಯನ್ನು ಮೌಲ್ಯಾತ್ಮಕ ದಿಕ್ಸೂಚಿ ಅಥವಾ ಪ್ರಗತಿಯ ಮಾನದಂಡ ಎಂದು ಮನಗಾಣುತ್ತವೆ.
ಜಿಡಿಪಿ ದರದ ಆಧಾರದ ಮೇಲೆ ಉದ್ಯಮಗಳು ತಮ್ಮ ಉತ್ಪಾದನಾ ಅಥವಾ ಸೇವೆಗಳನ್ನು ವಿಸ್ತರಿಸಲು ಅಥವಾ ಮಿತಗೊಳಿಸಲು ಅನುವಾಗುತ್ತವೆ.

ಭಾರತೀಯ ಜಿಡಿಪಿಗೆ ಡೇಟಾ ಸಂಗ್ರಹಣೆ ಅನುಸರಿಸುವ ವಿಧಾನ

ಭಾರತೀಯ ಜಿಡಿಪಿಗೆ ಡೇಟಾ ಸಂಗ್ರಹಣೆ ಅನುಸರಿಸುವ ವಿಧಾನ

ಭಾರತದಲ್ಲಿ ಜಿಡಿಪಿ ದರ ಲೆಕ್ಕ ಮಾಡುವ ಕ್ರಮಕ್ಕೆ ಸುದೀರ್ಘ ಇತಿಹಾಸವಿದೆ. ಕೇಂದ್ರ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯದ ಅಧೀನ ಸಂಸ್ಥೆಯಾದ ಕೇಂದ್ರೀಯ ಅಂಕಿ ಅಂಶಗಳ ಕಾರ್ಯಾಲಯ (ಸಿಎಸ್ಒ) ಭಾರತದ ಜಿಡಿಪಿಯನ್ನು ಲೆಕ್ಕ ಹಾಕುವ ಕಾರ್ಯ ನಿರ್ವಹಿಸುತ್ತದೆ.

ಈ ಇಲಾಖೆ ದತ್ತಾಂಶ ಸಂಗ್ರಹ, ಅಂಕಿ ಅಂಶಗಳ ದಾಖಲೆಗಳ ಕ್ರೂಢೀಕರಣ ಮತ್ತು ನಿರ್ವಹಣೆಯ ಪ್ರಮುಖ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ತನ್ನ ಇತರೆ ಕಾರ್ಯಚಟುಟಿಕೆಗಳ ಜೊತೆಗೆ ಇದು ಕಾಲ ಕಾಲಕ್ಕೆ ಕೈಗಾರಿಕೆ ಮತ್ತು ಉದ್ಯಮಗಳ ಸಮೀಕ್ಷೆ ನಡೆಸಿ ಹಲವು ಬಗೆಯ ಸೂಚ್ಯಂಕಗಳ ಕ್ರೂಡೀಕರಣದಲ್ಲಿ ನಿರತವಾಗಿರುತ್ತದೆ.
ಕೈಗಾರಿಕಾ ಉತ್ಪನ್ನ ಸೂಚ್ಯಂಕ, ಸಗಟು ದರ ಸೂಚ್ಯಂಕ ಇತ್ಯಾದಿಗಳ ಸಹಾಯದಿಂದ ಜಿ.ಡಿ.ಪಿ ಸೇರಿದಂತೆ ಇನ್ನಿತರೆ ಅಂಕಿಅಂಶಗಳನ್ನು ಲೆಕ್ಕ ಹಾಕುತ್ತದೆ.
ಈ ಸಂಸ್ಥೆ ದೇಶದ ಎಲ್ಲಾ ರಾಜ್ಯ ಸರಕಾರಗಳ, ಕೇಂದ್ರಾಡಳಿತ ಪ್ರದೇಶಗಳ ಹಾಗು ಕೇಂದ್ರ ಸರಕಾರದ ವಿವಿಧ ಸಂಸ್ಥೆ ಮತ್ತು ಇಲಾಖೆಗಳೊಂದಿಗೆ ಸಮನ್ವಯತೆ ಬೆಳೆಸಿ ಮಾಹಿತಿ ಕಲೆ ಹಾಕುತ್ತದೆ.
ಉದಾಹರಣೆಗೆ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಅಂಗ ಸಂಸ್ಥೆಯಾದ ಕೈಗಾರಿಕಾ ನೀತಿ ನಿರೂಪಣೆ ಮತ್ತು ಉತ್ತೇಜನ ವಿಭಾಗವು ಕೈಗಾರಿಕಾ ಅಂಕಿ ಅಂಶಗಳ ಘಟಕದ ಮೂಲಕ ಕೈಗಾರಿಕ ಉತ್ಪನ್ನಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿತ್ತದೆ.

 

ಜಿಡಿಪಿ ದರವನ್ನು ಲೆಕ್ಕಮಾಡುವ ವಿಧಾನ

ಜಿಡಿಪಿ ದರವನ್ನು ಲೆಕ್ಕಮಾಡುವ ವಿಧಾನ

ಜಿಡಿಪಿಯನ್ನು ಅಂದಾಜಿಸಲು ಪ್ರತಿ ದೇಶವೂ ತನ್ನಲ್ಲಿ ಲಭ್ಯವಿರುವ ವಿವಿಧ ಬಗೆಯ ನೈಸರ್ಗಿಕ ಸಂಪನ್ಮೂಲಗಳಿಂದ ಉತ್ಪತ್ತಿಯಾಗುವ ಆದಾಯ ಮತ್ತು ಉತ್ಪಾದನಾ ಹಾಗು ಸೇವಾ ವಲಯಗಳನ್ನು ಪರಿಗಣಿಸುತ್ತವೆ. ಅಂತೆಯೇ ನಮ್ಮ ದೇಶ ಅನುಸರಿಸುವ ವಿಧಾನವನ್ನು ವಿವರಿಸುವ ಪುಟ್ಟ ಪ್ರಯತ್ನದ ಪಕ್ಷಿನೋಟ ಇಲ್ಲಿದೆ.

ಭಾರತದಲ್ಲಿ ಜಿಡಿಪಿ ಲೆಕ್ಕ ಹಾಕಲು ಪ್ರಮುಖವಾಗಿ ನಾಲ್ಕು ವಿಧಾನಗಳನ್ನು ಅನುಸರಿಸಲಾಗುತ್ತದೆ ಅವುಗಳೆಂದರೆ:
1. ಪ್ಯಾಕ್ಟರ್ ವೆಚ್ಚದ ಮೇಲೆ- ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಆಧಾರದ ಮೇಲೆ ಇದನ್ನು ಕಂಡುಹಿಡಿಯಲಾಗುತ್ತದೆ
2. ಮಾರುಕಟ್ಟೆ ಬೆಲೆಗಳು- ವೆಚ್ಚಗಳ ಆಧಾರದ ಮೇಲೆ
3. ನಾಮಿನಲ್ ಜಿಡಿಪಿ- ಪ್ರಸಕ್ತ ಮಾರುಕಟ್ಟೆ ದರದ ಮೇಲೆ
4. ರಿಯಲ್ ಜಿಡಿಪಿ - ಹಣದುಬ್ಬರದ ದರದೊಂದಿಗೆ ಹೊಂದಾಣಿಕೆ ಮಾಡಿದ ಲೆಕ್ಕ

ಮೇಲ್ಕಂಡ ಎಲ್ಲಾ ನಾಲ್ಕರ ಫಲಿತಾಂಶಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.


ನಿರ್ದಿಷ್ಟ ಕಾಲಾವಧಿಗೆ ಸಂಬಂಧಿಸಿ ವಿವಿಧ ಕ್ಷೇತ್ರಗಳ ಸರಾಸರಿ ಬೆಳವಣಿಗೆ/ಬದಲಾವಣೆ ಯನ್ನು ಆಧರಿಸಿ ಫ್ಯಾಕ್ಟರ್ ಜಿಡಿಪಿಯ ದರವನ್ನು ಕಂಡುಕೊಳ್ಳಲಾಗುತ್ತದೆ.
ಉದಾಹರಣೆ ನೋಡುವುದಾದರೆ, ಜಿ.ಡಿ.ಪಿ ದರ ಶೇ. +7 ಅಂತಾದರೆ ಅದರರ್ಥ, ಎಲ್ಲ ಕ್ಷೇತ್ರಗಳಲ್ಲಿನ ಉತ್ಪನ್ನ ಮತ್ತು ಸೇವೆಗಳ ಒಟ್ಟೂ ಸರಾಸರಿ ಆರ್ಥಿಕ ಬೆಳವಣಿಗೆ ದರ ಶೇ. +7 ರಷ್ಟು ಎಂದಾಗುತ್ತದೆ.

ಜಿಡಿಪಿ ಲೆಕ್ಕಾಚಾರಕ್ಕೆ ಕೆಳಕಂಡ 8 ವಿವಿಧ ಕ್ಷೇತ್ರಗಳನ್ನು ಪರಿಗಣಿಸಲಾಗುತ್ತದೆ

ಜಿಡಿಪಿ ಲೆಕ್ಕಾಚಾರಕ್ಕೆ ಕೆಳಕಂಡ 8 ವಿವಿಧ ಕ್ಷೇತ್ರಗಳನ್ನು ಪರಿಗಣಿಸಲಾಗುತ್ತದೆ

1. ಕೃಷಿ, ಅರಣ್ಯ ಮತ್ತು ಮೀನುಗಾರಿಕೆ
2. ಗಣಿಗಾರಿಕೆ ಮತ್ತು ಕ್ವಾರಿ ಚಟುವಟಿಕೆಗಳು
3. ಉತ್ಪಾದನೆ
4. ವಿದ್ಯುತ್, ಅನಿಲ, ನೀರು ಸರಬರಾಜು ಮತ್ತು ಇತರೆ ನಾಗರಿಕ ಸೇವೆಗಳು
5. ನಿರ್ಮಾಣ ಚಟುವಟಿಕೆಗಳು
6. ವ್ಯಾಪಾರ, ಹೊಟೇಲ್, ಸಾರಿಗೆ, ಸಂವಹನ ಮತ್ತು ಪ್ರಸಾರಕ್ಕೆ ಸಂಬಂಧಿಸಿದ ಸೇವೆಗಳು
7. ಆರ್ಥಿಕ, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು
8. ಸಾರ್ವಜನಿಕ ಆಡಳಿತ, ರಕ್ಷಣಾ ಇಲಾಖೆ ಮತ್ತು ಇತರೆ ಸೇವೆಗಳು

ಭಾರತದ ಜಿಡಿಪಿ ದರವನ್ನು ಪ್ರತಿ ತ್ರೈಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ಲೆಕ್ಕ ಮಾಡಲಾಗುವುದು.

ಕೊನೆಯ ಮಾತು

ಕೊನೆಯ ಮಾತು

ಜಿಡಿಪಿಯನ್ನು ಒಂದು ದೇಶದ ಆರ್ಥಿಕ ಅರೋಗ್ಯದ ದಿಕ್ಸೂಚಿ ಎಂದು ಅರ್ಥೈಸಬಹುದು. ಇದು ಆ ಕಾಲಘಟ್ಟದಲ್ಲಿನ ದೇಶದ ಹಣಕಾಸು ಆರೋಗ್ಯವನ್ನು ತಿಳಿಸುವುದರ ಜೊತೆಗೆ ದೇಶದ ಆರ್ಥಿಕ ಪರಿಸ್ಥಿತಿ ಸಾಗುತ್ತಿರುವ ಹಾದಿಯ ಕಡೆಗೂ ಸ್ಪಷ್ಟ ತಿಳುವಳಿಕೆಯನ್ನು ನೀಡುತ್ತದೆ. ಇದರಿಂದ ಜನಸಮಾನ್ಯರು ಮತ್ತು ಆರ್ಥಿಕ ಕ್ಷೇತ್ರದ ಇತರೆ ಆಸಕ್ತರಿಗೆ ಪ್ರಸ್ತುತ ಮತ್ತು ಮುಂಬರುವ ದಿನಗಳ ಅರ್ಥ ವ್ಯವಸ್ಥೆಯ ಕುರಿತು ಚಿತ್ರಣ ದೊರೆತು ತಮ್ಮ ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಹಣಕಾಸು ಸಂಬಂಧಿ ನಿರ್ಧಾರಗಳನ್ನು ತಳೆಯಲು ನೆರವು ನೀಡುತ್ತದೆ.

English summary

What is GDP? How is India's GDP Calculated?

Gross Domestic Product (GDP) is commonly used to judge the performance of a country's economy. This number represents the monetary value of all the goods and services produced within the country for a given period of time.
Story first published: Saturday, April 28, 2018, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X