ಹೊಸ ಟ್ರೆಂಡ್ ನ ಜಮಾನದಲ್ಲಿರುವ ಅನೇಕರಿಗೆ ಏನಾದರೂ ಹೊಸತಾದದ್ದು ಮಾಡಬೇಕು ಎಂಬ ಕುತೂಹಲದ ಜೊತೆಗೆ ಸಾಹಸ ಮನೋಭಾವ ಇರುತ್ತದೆ. ಇಂದಿನ ಯುವಪೀಳಿಗೆ ಸೆಲ್ಪ್ ಮೇಡ್ ಬಿಲಿಯನೇರ್ ಗಳಾಗಬೇಕೆಂದು ಕನಸು ಕಾಣುವವರು!
ಹೊಸ ಟ್ರೆಂಡ್ ನ ಜಮಾನದಲ್ಲಿರುವ ಅನೇಕರಿಗೆ ಏನಾದರೂ ಹೊಸತಾದದ್ದು ಮಾಡಬೇಕು ಎಂಬ ಕುತೂಹಲದ ಜೊತೆಗೆ ಸಾಹಸ ಮನೋಭಾವ ಇರುತ್ತದೆ. ಇಂದಿನ ಯುವಪೀಳಿಗೆ ಸೆಲ್ಪ್ ಮೇಡ್ ಬಿಲಿಯನೇರ್ ಗಳಾಗಬೇಕೆಂದು ಕನಸು ಕಾಣುವವರು! ಹೊಸ ಸ್ಟಾರ್ಟಅಪ್ ಆರಂಭಿಸಿಬೇಕು ಇಲ್ಲವೇ ಮನೆಯಿಂದಲೇ ಸ್ವಂತ ಬಿಸಿನೆಸ್ ಮಾಡಬೇಕೆಂದು ಬಯಸುವವರಿಗಾಗಿ ಇಲ್ಲೊಂದು ಐಡಿಯಾ ನೀಡಲಾಗಿದೆ.. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?
ಚಾಕೋಲೆಟ್ ಬಿಸಿನೆಸ್
ಚಾಕೋಲೇಟ್ ಅಂದರೆ ಎಲ್ಲರಿಗೂ ಪ್ರಾಣ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಚಾಕೋಲೇಟ್ ಇಷ್ಟಪಡುತ್ತಾರೆ. ನಿಮಗೂ ಕೂಡ ಚಾಕೋಲೆಟ್ ಇಷ್ಟವಾಗಿದ್ದರೆ ಇದನ್ನು ವ್ಯಾಪಾರವಾಗಿ ಆರಂಭಿಸಬಹುದು. ನೀವು ಮನೆಯಲ್ಲೇ ಕುಳಿತು ಚಾಕೋಲೇಟ್ ತಯಾರಿಸಿ ಕೈತುಂಬ ಆದಾಯ ಗಳಿಕೆ ಮಾಡಬಹುದು.
10 ಸಾವಿರ ಬಂಡವಾಳ
ದೆಹಲಿಯಲ್ಲಿ ಚಾಕೋಲೇಟ್ ವ್ಯಾಪಾರ ಆರಂಭಿಸಿರುವ ಒಬ್ಬರ ಅನುಭವದ ಪ್ರಕಾರ, 8-10 ಸಾವಿರ ರೂಪಾಯಿಯಲ್ಲಿ ಚಾಕೋಲೇಟ್ ಬಿಸಿನೆಸ್ ಆರಂಭಿಸಬಹುದು. ನಿಮ್ಮ ಬಳಿ ಮೈಕ್ರೋವೇವ್ ಇಲ್ಲ ಎಂದಾದರೆ ನಿಮ್ಮ ಬಂಡವಾಳದ ಮೊತ್ತ 15 ಸಾವಿರದವರೆಗೆ ಆಗಬಹುದು. ಆರಂಭದಲ್ಲಿ ಚಿಕ್ಕದಾಗಿಯೇ ಆರಂಭಿಸಿ ತದನಂತರದಲ್ಲಿ ಇದಕ್ಕೆ ಬೆಕಾಗಬಹುದಾದ ಉಪಕರಣಗಳನ್ನು ಖರಿದಿಸಬಹುದು.
ಕಲಿಯಿರಿ ಮತ್ತು ಅಭ್ಯಾಸ ಮಾಡಿ
ಚಾಕೋಲೆಟ್ ತಯಾರಿಕೆ ಎಂಬುದು ಒಂದು ಕಲೆ ಮತ್ತು ವಿಜ್ಞಾನ. ನಿಮ್ಮ ವ್ಯವಹಾರವನ್ನು ಪ್ರಾರಂಭಿಸುವ ಮೊದಲು ಮೂಲಭೂತ ಅಂಶಗಳನ್ನು ತಿಳಿಯಬೇಕು ಹಾಗು ಅತ್ಯುತ್ತಮವಾಗಿ ಮಾಡುವವರೆಗೂ ಅಭ್ಯಾಸ ಮಾಡಬೇಕು. ಈಗಾಗಲೇ ಅದರಲ್ಲಿ ಪರಿಣಿತಿ ಪಡೆದವರಿದ್ದರೆ ಅಂತವರಿಂದ ಅಗತ್ಯ ಮಾಹಿತಿ-ಸಲಹೆ ಪಡೆಯಿರಿ.
ಚಾಕೋಲೇಟ್ ರುಚಿ ಮತ್ತು ಸುವಾಸನೆ
ಚಾಕೋಲೇಟ್ ತಯಾರಿಸುವವರು ಅದರ ರುಚಿ, ಕಲರ್, ಸುವಾಸನೆ ಬಗ್ಗೆ ಗಮನ ಹರಿಸಬೇಕು. ಹೊಸ ರುಚಿ ಹಾಗೂ ಪರಿಮಳ ಗ್ರಾಹಕರನ್ನು ಸೆಳೆಯುತ್ತದೆ. ಆರಂಭದಲ್ಲಿಯೇ ದೊಡ್ಡ ಮಟ್ಟದ ಆದಾಯ ನಿರೀಕ್ಷೆ ತಪ್ಪಾಗುತ್ತದೆ. ಬ್ಲೂಮ್ ಮತ್ತು ಆಮ್ಲೀಯ ಅಂಶಗಳ ಲೋಪದೋಷ ಮತ್ತು ಸುವಾಸನೆಯನ್ನು ಗುರುತಿಸುವಂತರಾಗಬೇಕು. ಇದಕ್ಕೆ ಸಂಬಂಧಪಟ್ಟಂತೆ ಪ್ರಪಂಚದಾದ್ಯಂತ ಸಾಕಷ್ಟು ಮಾಹಿತಿ ಲಭ್ಯವಿದೆ.
ಆದಾಯ ಗಳಿಕೆ
ಸಣ್ಣ ಪ್ರಮಾಣದಲ್ಲಿ ಆರಂಬಿಸಿರುವ ಬಿಸಿನೆಸ್ ಮೂಲಕ ಎರಡು ಮೂರು ತಿಂಗಳಿನಲ್ಲಿ ರೂ. 30-35 ಸಾವಿರ ಆದಾಯ ಗಳಿಕೆ ಮಾಡಬಹುದಾಗಿದೆ. ನಿಮ್ಮ ಚಾಕೋಲೇಟ್ ರುಚಿ ಹಾಗೂ ಪರಿಮಳ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರೆ ನೀವು ಗದ್ದಂತೆ! ಎರಡು ಮೂರು ವರ್ಷಕ್ಕೆ ವಾರ್ಷಿಕ ವಹಿವಾಟು ರೂ. 12-15 ಲಕ್ಷ ಮಾಡಬಹುದು.
ಮಾರ್ಕೆಟಿಂಗ್ ಹೇಗೆ?
ನೀವು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವುದು ಕೂಡ ಒಂದು ಕಲೆ. ಮನೆಯಲ್ಲಿ ತಯಾರಿರಿಸಿರುವ ಹೋಮ್ ಮೇಡ್ ಚಾಕೋಲೆಟ್ ಮಾರಾಟಕ್ಕಾಗಿ ಉತ್ತಮ ಸ್ಟ್ರಾಟಜಿ ತಯಾರಿಸಿ. ಚಾಕೋಲೆಟ್ ಪ್ಯಾಕೇಜಿಂಗ್ ತುಂಬಾ ಮುಖ್ಯ. ಪ್ಯಾಕಿಂಗ್ ಹಾಗು ಕ್ವಾಲಿಟಿ ಚೆನ್ನಾಗಿದ್ದರೆ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ಸೆಳೆಯಬಹುದು.
- ನೀವು ತಯಾರಿಸಿದ ಚಾಕೋಲೇಟ್ ಗಳನ್ನು ಆನ್ಲೈನ್ ಮೂಲಕ, ಚಿಲ್ಲರೆ ಅಂಗಡಿಗಳಲ್ಲಿ, ಬೇಕರಿಗಳಲ್ಲಿ ಮಾರಾಟ ಮಾಡಬಹುದು.
- ಫೇಸ್ಬುಕ್, ಟ್ವೀಟರ್, ವಾಟ್ಸಅಪ್ ಗಳ ಸಹಾಯ ಪಡೆಯಬಹುದಾಗಿದೆ. ಚಾಕೋಲೇಟ್ ತಯಾರಿಸಲು ಅತಿ ಮುಖ್ಯ ಪ್ಯಾಕಿಂಗ್.
ಪರವಾನಗಿ ಅಗತ್ಯತೆ
ಒಂದು ಉದ್ಯಮ ಕಾನೂನಿನ ಚೌಕಟ್ಟಿನಲ್ಲಿರಲು ಹಾಗು ಉತ್ಪನ್ನಗಳ ಗುಣಮಟ್ಟ ಕಾಯ್ದುಕೊಂಡು ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಪರವಾನಗಿ ಅಗತ್ಯವಾಗಿರುತ್ತದೆ. ಪರವಾನಗಿ ಪಡೆದರೆ ಸ್ಥಳೀಯ ಆರೋಗ್ಯ ಇಲಾಖೆಯೊಮದಿಗೆ ಕೆಲಸ ಮಾಡಬಹುದು.
ನಿಮ್ಮ ಚಾಕೋಲೆಟ್ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಬಯಸಿದರೆ ವಾಣಿಜ್ಯಾತ್ಮಕ ಅಡುಗೆ ಮನೆ ಅಥವಾ ಕಟ್ಟಡ ಬಾಡಿಗೆಗೆ ಪಡೆಯುವುದು ಸೂಕ್ತವಾಗುತ್ತದೆ. ನಿಮ್ಮ ಭಾಗದ ಮಾರುಕಟ್ಟೆ ಹಾಗು ಗ್ರಾಹಕರನ್ನು ಆಧರಿಸಿ ಹೆಜ್ಜೆ ಇಡಿ.. ಅತಿ ಕಡಿಮೆ ಬಂಡವಾಳದಲ್ಲಿ ನಡೆಸಬಹುದಾದ 10 ಉದ್ಯಮ


Click it and Unblock the Notifications