For Quick Alerts
ALLOW NOTIFICATIONS  
For Daily Alerts

ಒಂದು ಗಂಟೆಯಲ್ಲಿ ನೂರು ರುಪಾಯಿ ಏರುಪೇರು, ಷೇರು ಪೇಟೆ ಮಾಯೆ ಗುರೂ

By ಕೆ.ಜಿ. ಕೃಪಾಲ್
|

ಷೇರುಪೇಟೆ ಎಂಬುದು ನಿತ್ಯವೂ ಹೊಸ ಪಾಠ ಕಲಿಸುವ, ಅಚ್ಚರಿಗೆ ದೂಡುವ, ಬುದ್ಧಿವಂತ- ದಡ್ಡ ವಿದ್ಯಾರ್ಥಿ ಎಂಬ ಭೇದ ಮಾಡದೆ ಸಮಾ ಪೆಟ್ಟು ನೀಡುವ ಕಟ್ಟು ನಿಟ್ಟಿನ ಮೇಷ್ಟ್ರು. ಈ ಮಾತನ್ನು ನನ್ನ ಅನುಭವದ ಆಧಾರದಲ್ಲಿ ಹೇಳುತ್ತಾ ಇದ್ದೀನಿ. ನಾನು ಕಲಿತ ಪಾಠದ ಆಸಕ್ತಿಕರ ಅಧ್ಯಾಯಗಳನ್ನು ನಿಮ್ಮ ಗಮನಕ್ಕೂ ತರಬೇಕು ಎಂಬುದು ನನ್ನ ಉದ್ದೇಶ.

ಷೇರುಪೇಟೆಯಲ್ಲಿ ಷೇರಿನ ಬೆಲೆಗಳು ಹೇಗೆ ಚಾಲನೆ ಪಡೆಯುತ್ತವೆ ಎಂಬುದನ್ನು ಮುಂಚಿತವಾಗಿ ನಿರ್ಧರಿಸುವುದು ಅಸಾಧ್ಯ. ಪ್ರೆಡಿಕ್ಷನ್ ಸುಲಭ. ಆದರೆ ಆ ಪ್ರೆಡಿಕ್ಷನ್ ನಂತೆ ನಡೆಯುವುದು ಸಾಧ್ಯವಿಲ್ಲ. ಏಕೆಂದರೆ, ಷೇರಿನ ಬೆಲೆಗಳ ಏರುಪೇರಿಗೆ ಹೊಸ ಹೊಸ ಕಾರಣಗಳು ಸೃಷ್ಟಿಯಾಗುತ್ತವೆ. ಟೆಕ್ನಿಕಲ್ ಅನಾಲಿಸಿಸ್ ಆಗಲಿ, ಫಂಡಮೆಂಟಲ್ ಅನಾಲಿಸಿಸ್ ಆಗಲಿ ನಿರಂತರವಾಗಿ ಅನ್ವಯವಾಗುವುದಿಲ್ಲ.

 

ಪಾಕಿಸ್ತಾನದ ಮೇಲೆ ಐಎಎಫ್ ಜೆಟ್ ದಾಳಿ, ರೂಪಾಯಿ ಮೌಲ್ಯ ಕುಸಿತ

ಕೇವಲ ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ನಿಯಮ ಸದಾ ಹಸಿರಾಗಿರುವ ಸೂತ್ರವಾಗಿದೆ. ಈ ಸಮೀಕರಣವನ್ನು ಅಳವಡಿಸಕೊಳ್ಳುವ ಮುಂಚೆ ಪೇಟೆಯ ವಾತಾವರಣವನ್ನು ಸಹ ಗಮನಿಸಬೇಕು. ಪೇಟೆಯು ಕುಸಿತದತ್ತ ಸಾಗುತ್ತಿರುವಾಗ ಪ್ರಾಫಿಟ್ ಬುಕ್ ಪ್ರಕ್ರಿಯೆಗೆ ಹೆಚ್ಚು ಮಹತ್ವ ನೀಡಿ, ಹಣವನ್ನು ಸಿದ್ಧಗೊಳಿಸಿಕೊಂಡಿದ್ದಲ್ಲಿ ಪೇಟೆಯು ಅವಕಾಶವನ್ನು ಒದಗಿಸಿದಾಗ ಉಪಯೋಗಿಸಿಕೊಳ್ಳಬಹುದು.

ಸ್ವಲ್ಪ ನಗದನ್ನು ಮೀಸಲಾಗಿಡುವುದು ಉತ್ತಮ

ಸ್ವಲ್ಪ ನಗದನ್ನು ಮೀಸಲಾಗಿಡುವುದು ಉತ್ತಮ

ಅಂತೆಯೇ ಪೇಟೆಯು ಏರಿಕೆಯಲ್ಲಿದ್ದಾಗ ವ್ಯಾಲ್ಯೂ ಪಿಕ್ ಗೆ ಹೆಚ್ಚು ವೇಟೇಜ್ ನೀಡಿ, ಮೌಲ್ಯಾಧಾರಿತ ಖರೀದಿಗೆ ಹೆಚ್ಚು ಮಹತ್ವ ನೀಡಬೇಕು. ಕ್ಷಣ ಕ್ಷಣಕ್ಕೂ ಬದಲಾವಣೆ ಪ್ರದರ್ಶಿಸುವ ಈಗಿನ ಪೇಟೆಯಲ್ಲಿ ದೀರ್ಘಕಾಲೀನ ಹೂಡಿಕೆ ಎಂಬುದಕ್ಕೆ ಅವಕಾಶವಿಲ್ಲ. ಕೇವಲ ವ್ಯಾವಹಾರಿಕ ದೃಷ್ಟಿಯಿಂದ ಚಟುವಟಿಕೆ ನಡೆಸುತ್ತಿರುವ ಈಗಿನ ದಿನಗಳಲ್ಲಿ ಬಂಡವಾಳ ಸುರಕ್ಷತೆಯ ಜೊತೆಗೆ ಲಾಭ ಗಳಿಕೆಯತ್ತ ಹೆಚ್ಚು ಗಮನವಿರಬೇಕು. ನಮ್ಮ ದೇಶದ ರಕ್ಷಣಾ ವೆಚ್ಚ ಪ್ರತಿ ವರ್ಷ ಲಕ್ಷಾಂತರ ಕೋಟಿ ರುಪಾಯಿಗಳನ್ನು ಮೀಸಲಿಡುತ್ತೇವೆ. ಆದರೆ ಪ್ರತಿ ವರ್ಷವೂ ಯುದ್ಧವಾಗುವುದಿಲ್ಲ. ಯುದ್ಧವಾದರೆ ಅದಕ್ಕೆ ಸಿದ್ಧ ಎಂಬ ಕಾರಣದಿಂದ ಈ ಮೀಸಲಿಡುವ ಪದ್ಧತಿ ಬೆಳೆದುಕೊಂಡು ಬಂದಿದೆ. ಹಾಗೆಯೇ ಪೇಟೆ ಕುಸಿತ ಕಂಡಾಗ ಹೂಡಿಕೆಗೆ ಯೋಗ್ಯ ಎಂದು ಸದಾ ಸ್ವಲ್ಪ ನಗದನ್ನು ಮೀಸಲಿಡುವುದು ಒಳಿತು. ದಿನವೂ ಅವಕಾಶ ಸಿಗದು. ಆದರೆ ಸಿಗುವವರೆಗೂ ಕಾಯುವ ತಾಳ್ಮೆ ಇರಬೇಕು.

ನೂರು ರುಪಾಯಿಗಳಷ್ಟು ಏರಿಳಿತ ಕಂಡಿತು
 

ನೂರು ರುಪಾಯಿಗಳಷ್ಟು ಏರಿಳಿತ ಕಂಡಿತು

ಮ್ಯೂಚುಯಲ್ ಫಂಡ್ ಸರಿ ಇದೆ ಎನ್ನುವವರಿಗೆ ಇದು ಅವಶ್ಯವಾಗಿ ಅರಿಯಲೇಬೇಕಾದ ಅಂಶ. ಮೊನ್ನೆ ಶುಕ್ರವಾರ ದಿನದ ಆರಂಭಿಕ ಕ್ಷಣಗಳಲ್ಲಿ ಎಸ್ ಬಿಐ ಲೈಫ್ ಇನ್ಷೂರೆನ್ಸ್ ಕಂಪನಿ ಲಿಮಿಟೆಡ್ ಷೇರಿನ ಬೆಲೆ ರೂ.510 ರವರೆಗೆ ಕುಸಿದಿತ್ತು. ಹಿಂದಿನ ದಿನ ರೂ.580.50 ರಲ್ಲಿದ್ದ ಷೇರು ದಿನದ ಆರಂಭದಲ್ಲೇ ಭಾರಿ ಕುಸಿತಕ್ಕೊಳಗಾಗಿ ಹೂಡಿಕೆದಾರರಿಗೆ ದಿಗ್ಭ್ರಮೆಯುಂಟುಮಾಡಿತ್ತು. ಸೋಜಿಗವೆಂದರೆ ಕೇವಲ 35 ನಿಮಿಷಗಳೊಳಗೆ ಚೇತರಿಸಿಕೊಂಡು, ರೂ.580 ತಲುಪಿತು. ಆ ನಂತರ ಮತ್ತೆ 15 ನಿಮಿಷಗಳಲ್ಲಿ ರೂ.620 ತಲುಪಿತು. ರೂ.612ರ ಸಮೀಪ ದಿನದ ಅಂತ್ಯ ಕಂಡಿತು. ಈ ರೀತಿಯ ಭಾರಿ ಕುಸಿತಕ್ಕೆ ಮೂಲ ಕಾರಣ ಬಿಎನ್ ಪಿ ಪಾರಿಬಾಸ್ ಕಾರ್ಡಿಫ್ ವಿಮಾ ಕಂಪನಿ ತನ್ನಲ್ಲಿರುವ 9.22 ಕೋಟಿ ಷೇರುಗಳನ್ನು ಭಾರಿ ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಿದೆ. ಈ ಮಾರಾಟದ ಪ್ರಭಾವದಿಂದ ಷೇರಿನ ಬೆಲೆ ರೂ.510ರ ವರೆಗೂ ಕುಸಿದು, ಆ ನಂತರ ಮೌಲ್ಯಾಧಾರಿತ ಖರೀದಿಯ ಕಾರಣ ದಿಢೀರ್ ಚೇತರಿಕೆ ಕಂಡುಕೊಂಡಿದೆ.

ಕೇಂದ್ರ ಬಜೆಟ್ 2019: ಷೇರುದಾರರಿಗೆ ಖುಷಿ ನೀಡಿದ ರೈತ ಪರ ಘೋಷಣೆ

ಮ್ಯೂಚ್ಯುಯಲ್ ಫಂಡ್ ಗೂ ಅನ್ವಯ ಆಗುತ್ತದೆ

ಮ್ಯೂಚ್ಯುಯಲ್ ಫಂಡ್ ಗೂ ಅನ್ವಯ ಆಗುತ್ತದೆ

ಇಂತಹ ಭಾರಿ ಕುಸಿತವು ಅನಿರೀಕ್ಷಿತವಾದುದಾಗಿದ್ದು, ಈ ಮಧ್ಯೆ 'ಸ್ಟಾಪ್ ಲಾಸ್' ಆರ್ಡರ್ ಗಳೇನಾದರೂ ಇದ್ದರೆ ಅಂತಹ ವಹಿವಾಟು ಟಾಪ್ ಲಾಸ್ ಆಗುವುದರಲ್ಲಿ ಸಂಶಯವೇ ಇಲ್ಲ. ಇದು ಒಂದು ರೀತಿಯ ಸರ್ಜಿಕಲ್ ಸ್ಟ್ರೈಕ್ ರೀತಿ ದಿಢೀರ್ ಬದಲಾವಣೆ ಪ್ರದರ್ಶಿಸಿರುವುದು ಹೊಸದೇನಲ್ಲ. ಈ ಹಿಂದೆ ಅಂದರೆ ಫೆಬ್ರವರಿ ಹದಿನೈದರಂದು ಡಾಕ್ಟರ್ ರೆಡ್ಡಿ ಲ್ಯಾಬ್ ಪ್ರದರ್ಶಿಸಿದ ಇದೇ ರೀತಿಯ ಕುಸಿತ ಮತ್ತು ಚೇತರಿಕೆ ಸಹ ಗಾಬರಿ ಮೂಡಿಸುವಂತಿತ್ತು. ಇದು ಇನ್ಷೂರೆನ್ಸ್ ಕಂಪನಿಯ ಡೀಲ್ ಆದರೂ ಮ್ಯೂಚುಯಲ್ ಫಂಡ್ ಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಗಜಗಾತ್ರದ ವಹಿವಾಟಿನಲ್ಲಿಯು ಚೌಕಾಶಿ ವ್ಯವಹಾರ ಹೆಚ್ಚಿರುತ್ತದೆ.

ಡಾ ರೆಡ್ಡೀಸ್ ಲ್ಯಾಬ್ ಕೂಡ ಕುಸಿತ ಕಂಡಿತ್ತು

ಡಾ ರೆಡ್ಡೀಸ್ ಲ್ಯಾಬ್ ಕೂಡ ಕುಸಿತ ಕಂಡಿತ್ತು

ಹೋಲ್ ಸೆಲ್ ವ್ಯಾಪಾರವಾದಂತಾಗಿದೆಯಾದರೂ ವಹಿವಾಟಿನ ಬೆಲೆ ಮತ್ತು ಮಾರುಕಟ್ಟೆಯ ಬೆಲೆಗಳಲ್ಲಿ ಭಾರಿ ಅಂತರವಿದ್ದಲ್ಲಿ ಅದು ಅಸಹಜ ಚಟುವಟಿಕೆ ಎನಿಸುತ್ತದೆ. ಕಾರಣಗಳು ಅನೇಕವಾದರೂ ಪರಿಣಾಮ ಮಾತ್ರ ಗಂಭೀರವಾಗಿರುತ್ತದೆ. ನಡೆಸಬೇಕಾದ ಚಟುವಟಿಕೆಗಳು ಪೂರ್ವ ನಿರ್ಧಾರಿತವಾಗಿರದೆ, ಸಂದರ್ಭಕ್ಕನುಗುಣವಾಗಿ ಅಶು ಕವಿತೆಯ ರೀತಿ 'ಅಶು ನಿರ್ಧಾರ' ವಾಗಿರಬೇಕು ಎಂಬಂತಾಗಿದೆ. ಫೆಬ್ರವರಿ 15 ರಂದು ಬೆಳಗ್ಗೆ 10.12 ರಲ್ಲಿ ಡಾಕ್ಟರ್ ರೆಡ್ಡಿಸ್ ಲ್ಯಾಬ್ ಷೇರಿನ ಬೆಲೆ ರೂ.2,470ರಲ್ಲಿ ವಹಿವಾಟಾಗುತ್ತಿತ್ತು. 10.22ರಲ್ಲೂ ಇದೇ ದರದಲ್ಲಿತ್ತು. ಆದರೆ ಈ 10 ನಿಮಿಷದ ಅಂತರದಲ್ಲಿ ಷೇರಿನ ಬೆಲೆ ರೂ.2,065 ರವರೆಗೂ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಕುಸಿತ ಕಂಡು ಪುಟಿದೆದ್ದರೆ, ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಷೇರಿನ ಬೆಲೆ ರೂ.1,873 ರವರೆಗೂ ಕುಸಿದು ಚೇತರಿಕೆ ಕಂಡಿದೆ.

English summary

How volatile Stock market is? Here is the lesson with example

What is the best strategy to follow in stock market? Value pick and profit book is the best policy, explained by market expert and columnist K.G.Krupal.
Story first published: Monday, March 4, 2019, 13:08 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more