For Quick Alerts
ALLOW NOTIFICATIONS  
For Daily Alerts

ಡಿಡಿಎ ಹೌಸಿಂಗ್ ಯೋಜನೆ 2019: 10 ಸಾವಿರಕ್ಕೆ ಮನೆ ಬುಕಿಂಗ್ ಮಾಡಲು ಅರ್ಜಿ ಸಲ್ಲಿಕೆ ಹೇಗೆ?

|

ಅಂದದ ಚೆಂದದ ಸ್ವಂತದ ಸೂರು ಪ್ರತಿಯೊಬ್ಬ ವ್ಯಕ್ತಿಯ ಕನಸು. ಗ್ರಾಮೀಣ ಭಾಗ ಹಾಗು ನಗರ/ಮೆಟ್ರೊ ಪ್ರದೇಶಗಳಲ್ಲಿ ಮನೆ ಕಟ್ಟಿಸಿಕೊಳ್ಳಲು ಹಲವಾರು ಯೋಜನೆಗಳಿವೆ. ಆದರೂ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಸ್ವಂತದ ಮನೆ ಕಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ನಗರ/ಮೆಟ್ರೋ ಗಳಲ್ಲಿ ಸ್ವಂತ ಮನೆ ಹೊಂದುವ ಕನಸು ಯಾರಿಗೆ ತಾನೇ ಇರಲ್ಲ ಹೇಳಿ? ಆದರೆ ಹಣದ ಸಮಸ್ಯೆಇದಕ್ಕೆ ಅಡ್ಡಿಯಾಗುತ್ತದೆ.
ಆದರೆ ದೆಹಲಿ ಡೆವಲಪ್ಮೆಂಟ್ ಆಥಾರಿಟಿ (ಡಿಡಿಎ) ಇಂತಹ ನಿಮ್ಮ ಕನಸನ್ನು ಸಾಕಾರಗೊಳಿಸಲು ಹೊಸ ಯೋಜನೆ ಆರಂಭಿಸಿದ್ದು, ಅದರ ವಿವರ ಇಲ್ಲಿ ನೀಡಲಾಗಿದೆ.

ಜೂನ್ 10ರ ವರೆಗೆ ಅರ್ಜಿ ಸಲ್ಲಿಕೆ
 

ಜೂನ್ 10ರ ವರೆಗೆ ಅರ್ಜಿ ಸಲ್ಲಿಕೆ

ಡಿಡಿಎ ವಸತಿ ಯೋಜನೆಯಡಿ ರಾಜಧಾನಿ ದೆಹಲಿ ನಿವಾಸಿಗಳು ತಮ್ಮ ಕನಸನ್ನು ಈಗ ಪೂರೈಸಿಕೊಳ್ಳಬಹುದು. ಡಿಡಿಎ ವಸತಿ ಯೋಜನೆಯಡಿ ಮನೆ ಖರೀದಿ ಮಾಡಲು ಮಾರ್ಚ್ 25 ರಿಂದ ಮೇ 10 ರ ವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಈ ಅವಧಿಯನ್ನು ಜೂನ್ 10 ರವರೆಗೆ ವಿಸ್ತರಿಸಲಾಗಿದೆ.

ಒಟ್ಟು 18000 ಫ್ಲಾಟ್

ಮಾರ್ಚ್ 25 ಲಾಂಚ್ ಮಾಡಲಾದ ಈ ಯೋಜನೆಯಡಿ, ಒಟ್ಟು 18000 ಫ್ಲಾಟ್ ಗಳು ಮಾರಾಟಕ್ಕಿದ್ದು, ನರೇಲಾ ಮತ್ತು ವಸಂತ್ ಕುಂಜ್ ನಲ್ಲಿ ಫ್ಲಾಟ್ ಲಭ್ಯವಿವೆ. ಈ ಯೋಜನೆಯಡಿ ವಸಂತ್ ಕುಂಜ್ ನ ಎ -ಬ್ಲಾಕ್ ನಲ್ಲಿ ಅತಿ ಹೆಚ್ಚು ಮನೆಗಳಿವೆ. ಈ ಫ್ಲಾಟ್ ಗಾಗಿ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಫ್ಲಾಟ್ ಕೆಟಗರಿ

488 (ಎಚ್ಐಜಿ), 1,555 (ಎಂಐಜಿ), 8,383 (ಎಲ್ಜಿಜಿ) ಮತ್ತು 7,496 (ಇಡಬ್ಲ್ಯುಎಸ್) ಎಂಬ ನಾಲ್ಕು ಕೆಟಗರಿಗಳಲ್ಲಿ ಫ್ಲಾಟ್ ಲಭ್ಯವಿವೆ. economic weaker section (ಇಡಬ್ಲ್ಯೂಎಸ್) ವಿಭಾಗಕ್ಕೆ ಅರ್ಜಿ ಶುಲ್ಕ ರೂ. 25,000, ಎಲ್ಐಜಿ ವಿಭಾಗಕ್ಕೆ ರೂ. 1 ಲಕ್ಷ ಮತ್ತು ಎಂಐಜಿ ಮತ್ತು ಎಚ್ಐಜಿ ಕೆಟಗರಿ ಶುಲ್ಕ ರೂ. 2 ಲಕ್ಷ ಇದೆ. ಹೀಗೆ ಈ ಮೇಲಿನ ನಾಲಕ್ಉ ಕೆಟಗರಿಗಳಲ್ಲಿ ಫ್ಲಾಟ್ ಗಳನ್ನು ಖರೀದಿಸಬಹುದು.

ಬುಕಿಂಗ್ ಮಾಡೋದು ಹೇಗೆ?
 

ಬುಕಿಂಗ್ ಮಾಡೋದು ಹೇಗೆ?

ಡಿಡಿಎ ವಸತಿ ಯೋಜನೆಯ ಮಾಹಿತಿ ಪ್ರಕಾರ, ಈ ನಿವೇಶನಗಳನ್ನು ಯಾವುದೇ ಆದಾಯ ವರ್ಗದ ವ್ಯಕ್ತಿಗಳು ಬುಕ್ ಮಾಡಬಹುದು. ಮೊದಲು ಬನ್ನಿ, ಮೊದಲು ಪಡೆಯಿರಿ(पहले आओ-पहले पाओ ) ಘೋಷಣೆಯೊಂದಿಗೆ ಫ್ಲಾಟ್ ಬುಕಿಂಗ್ ಅವಕಶ ಕಲ್ಪಿಸಲಾಗಿತ್ತು. ಆಸಕ್ತರು www.dda.org.in ಆನ್ಲೈನ್ ನಲ್ಲಿ ಫ್ಲಾಟ್ ಬುಕ್ ಮಾಡಬಹುದು.
ಜನತಾ ಫ್ಲಾಟ್ ಅನ್ನು 10 ಸಾವಿರಕ್ಕೆ ಹಾಗೂ 1BHK ಮನೆಯನ್ನು 15 ಸಾವಿರಕ್ಕೆ ಬುಕ್ಕಿಂಗ್ ಮಾಡಬಹುದು. ಉಳಿದ ಹಣವನ್ನು ಮೂರು ತಿಂಗಳ ನಂತರ ಪಾವತಿ ಮಾಡಬೇಕಾಗುತ್ತದೆ.

ಬುಕಿಂಗ್ ಮಾಡುವ ವಿಧಾನ

ಡಿಡಿಎ ನೀಡಿದ ಮಾಹಿತಿಯ ಪ್ರಕಾರ, ಈ ಯೋಜನೆಯಲ್ಲಿ ಫ್ಲಾಟ್ ತೆಗೆದುಕೊಳ್ಳುಲು ಬಯಸುವವರು www.dda.org.in ಗೆ ಲಾಗ್ ಇನ್ ಆಗಬೇಕು. ಇಲ್ಲಿ ಎಡಭಾಗದಲ್ಲಿ ಮೇಲೆ ಇರುವ ಹಾಟ್ ಲಿಂಕ್ಸ್ ಪುಟ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡುವುದರಿಂದ ಹೊಸ ಪುಟ ತೆರೆಯುತ್ತದೆ. ಈ ಪುಟದಲ್ಲಿರುವ DDA Online Housing Scheme 2019 ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಇಲ್ಲಿ ಕ್ಲಿಕ್ ಮಾಡಿದ ನಂತರ ಹೊಸ ಪುಟ ತೆರೆಯುತ್ತದೆ. ನಿಮ್ಮ ಇಚ್ಛೆಗೆ ಅನುಗುಣವಾಗಿ ನರೇಲಾ, ರಾಮಗಢ ಮತ್ತು ಸಿರಸಪುರದಲ್ಲಿ ಲಭ್ಯವಿರುವ ಫ್ಲಾಟ್ ಬಗ್ಗೆ ಮಾಹಿತಿ ಪಡೆಯಬಹುದು. ಜೊತೆಗೆ ಫ್ಲಾಟ್ ಬುಕಿಂಗ್ ಮಾಡಬಹುದು. ಇಲ್ಲಿ ಕೇಳಲಾಗುವ ಸಂಪೂರ್ಣ ಮಾಹಿತಿಯನ್ನು ತುಂಬಿರಿ.

ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು

ವಸತಿ ಯೋಜನೆ ಫಾರ್ಮ್ ಗಳನ್ನು ಆನ್ಲೈನ್ ನಲ್ಲಿ ಮಾತ್ರ ಭರ್ತಿ ಮಾಡಬಹುದು. ಇದಕ್ಕೆ ಹೆಚ್ಚುವರಿಯಾಗಿ, ಡಿಡಿಎದ ವೆಬ್ಸೈಟ್ ಹೊರತುಪಡಿಸಿ, 13 ಬ್ಯಾಂಕುಗನ್ನು ಟೈಅಪ್ ಮಾಡಲಾಗಿದೆ.
ಈ ಬ್ಯಾಂಕುಗಳಲ್ಲಿ ಯೋಜನೆಯ ಬ್ರೌಸರ್, ಇನ್ಸ್ಟ್ರಕ್ಷನ್, ಇತರೆ ಎಲ್ಲಾ ರೀತಿಯ ಮಾಹಿತಿ ಲಭ್ಯವಿರುತ್ತವೆ. ಇವುಗಳಲ್ಲಿ ಎಚ್ಡಿಎಫ್ಸಿ, ಐಸಿಐಸಿಐ, ಕಾರ್ಪೊರೇಷನ್ ಬ್ಯಾಂಕ್, IndusInd ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಬಿಐ, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಡಿಎಫ್ಸಿ ಬ್ಯಾಂಕ್ ಒಳಗೊಂಡಿವೆ. ಪ್ರಧಾನ ಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

Read more about: home loan pmay money
English summary

DDA Housing Scheme 2019: How to apply for DDA Flat?

The Delhi Development Authority’s new online scheme, which was launched in March, has been extended by a month till June 10, officials said
Story first published: Thursday, May 9, 2019, 16:43 [IST]
Company Search
Enter the first few characters of the company's name or the NSE symbol or BSE code and click 'Go'

Find IFSC

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more