For Quick Alerts
ALLOW NOTIFICATIONS  
For Daily Alerts

ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗುವಂತೆ ಮಾಡಬಹುದಾದ 5 ಸಾಮಾನ್ಯ ತಪ್ಪುಗಳು

|

ನೀವು ಒಂದು ವೇಳೆ ಸಾಲ ಪಡೆಯುವ ಆಲೋಚನೆಯಲ್ಲಿ ಇದ್ದೀರಾ ಅಂದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ ಎಂಬುದು ಈಗಾಗಲೇ ಗೊತ್ತಿರಬಹುದು. ಸಾಲಕ್ಕೆ ಅರ್ಹತೆಯನ್ನು ನಿಗದಿ ಮಾಡುವುದರಲ್ಲಿ ಇದು ತುಂಬ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೆಡಿಟ್ ಸ್ಕೋರ್ ಜಾಸ್ತಿ ಇದ್ದಲ್ಲಿ ಸಾಲ ಸಿಗುವ ಸಾಧ್ಯತೆಯೂ ಹೆಚ್ಚು, ಬಡ್ಡಿ ದರವೂ ಕಡಿಮೆ. ಆದ್ದರಿಂದ ಕ್ರೆಡಿಟ್ ಸ್ಕೋರ್ ನಿರ್ಲಕ್ಷ್ಯ ಮಾಡಿದಲ್ಲಿ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ,

ಈ ಕ್ರೆಡಿಟ್ ಸ್ಕೋರ್ ಅಂದರೇನು? ಇದು ಮೂರಂಕಿಯಲ್ಲಿ ಇರುತ್ತದೆ. ಒಬ್ಬ ವ್ಯಕ್ತಿ ಸಾಲ ಪಡೆದದ್ದು ಹಾಗೂ ಹಿಂತಿರುಗಿಸಿದ್ದರ ಇತಿಹಾಸದ ಆಧಾರದ ಮೇಲೆ ಕ್ರೆಡಿಟ್ ಬ್ಯುರೋಗಳು ಅಂಕವನ್ನು ನೀಡುತ್ತವೆ. ಕ್ರೆಡಿಟ್ ಸ್ಕೋರ್ 300ರಿಂದ 900ರ ತನಕ ಇರಬಹುದು. 750ಕ್ಕಿಂತ ಹೆಚ್ಚಿದ್ದಲ್ಲಿ ಅಂಥವರಿಗೆ ಸಾಲ ನೀಡಲು ಹಣಕಾಸು ಸಂಸ್ಥೆಗಳು ಆದ್ಯತೆ ನೀಡುತ್ತವೆ.

ನಿಮ್ಮ ಆದಾಯಕ್ಕೂ ಹಾಗೂ ನಿವ್ವಳ ಆಸ್ತಿಗೂ ಈ ಕ್ರೆಡಿಟ್ ಸ್ಕೋರ್ ಗೂ ಯಾವುದೇ ನೇರ ಸಂಬಂಧ ಇಲ್ಲ. ನಿಮಗೆ ಒಳ್ಳೆ ಸಂಬಳ ಬರುತ್ತಿದ್ದರೂ ಕ್ರೆಡಿಟ್ ಸ್ಕೋರ್ ಕಡಿಮೆ ಇರಬಹುದು. ಹಾಗಂತ ಈಗ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದಲ್ಲಿ ಅದು ಕಡಿಮೆಯಾಗಲ್ಲ ಅಂತಲೂ ಅಲ್ಲ. ಆದ್ದರಿಂದ ಆಗಾಗ ಕ್ರೆಡಿಟ್ ಸ್ಕೋರ್ ಪರಿಶೀಲಿಸಿಕೊಳ್ಳುತ್ತಿರಬೇಕು.

ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವುದು ಹೇಗೆ ಗೊತ್ತಾ?ಕ್ರೆಡಿಟ್ ಕಾರ್ಡ್ ಮೂಲಕ ಕ್ರೆಡಿಟ್ ಸ್ಕೋರ್ ಉತ್ತಮ ಮಾಡಿಕೊಳ್ಳುವುದು ಹೇಗೆ ಗೊತ್ತಾ?

ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಎಂದಾದಲ್ಲಿ ಇಲ್ಲಿ ಪ್ರಸ್ತಾಪಿಸುವ ಕೆಲವು ತಪ್ಪುಗಳನ್ನು ಮಾಡಬಾರದು. ಇದರಿಂದ ಉತ್ತಮ ಕ್ರೆಡಿಟ್ ಸ್ಕೋರ್ ನಿರ್ವಹಣೆ ಮಾಡಬಹುದು. ಯಾವುವು ಆ ತಪ್ಪುಗಳು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಪದೇಪದೇ ಹಣ ಪಾವತಿ ವಿಳಂಬ

ಪದೇಪದೇ ಹಣ ಪಾವತಿ ವಿಳಂಬ

ಸಾಲದ ಇಎಂಐಗಳು ಅಥವಾ ಕ್ರೆಡಿಟ್ ಕಾರ್ಡ್ ಬಾಕಿಯನ್ನು ಸರಿಯಾದ ಸಮಯಕ್ಕೆ ಕಟ್ಟದೇ ಹೋದಲ್ಲಿ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಒಮ್ಮೆ ಅಥವಾ ಎರಡು ಬಾರಿ ಹೀಗಾದರೆ ಕ್ರೆಡಿಟ್ ಸ್ಕೋರ್ ಮೇಲೆ ಹೆಚ್ಚಿನ ಪರಿಣಾಮ ಬೀರದಿರಬಹುದು. ಆದರೆ ಪದೇಪದೇ ಹೀಗೆ ಆಗುತ್ತಿದ್ದಲ್ಲಿ ಖಂಡಿತವಾಗಿಯೂ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಆಗುತ್ತದೆ, ಆದ್ದರಿಂದ ಯಾವುದೇ ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ ತಪ್ಪಿಸದಂತೆ ನೋಡಿಕೊಳ್ಳಿ. ಪಾವತಿ ದಿನಾಂಕ ಇನ್ನೂ ಇರುವಂತೆಯೇ ಖಾತೆಯಿಂದ ಹಣ ವರ್ಗಾವಣೆ ಆಗುವಂತೆ ವ್ಯವಸ್ಥೆ ಮಾಡಿದಲ್ಲಿ ಮತ್ತೂ ಉತ್ತಮ.

ವಿಪರೀತ ಸಾಲ ಬಾಕಿ

ವಿಪರೀತ ಸಾಲ ಬಾಕಿ

ಸಾಲ ಕಟ್ಟದೆ ಬಾಕಿ ಉಳಿಸಿಕೊಳ್ಳುವ ಅಭ್ಯಾಸ ಇದ್ದಲ್ಲಿ ಅದರಿಂದಲೂ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಅನ್ ಸೆಕ್ಯೂರ್ಡ್ ಲೋನ್ (ಯಾವುದೇ ಅಡಮಾನ ಅಥವಾ ಗಿರವಿ ಇಡದೆ ಪಡೆದ ಪರ್ಸನಲ್ ಲೋನ್ ನಂಥ ಸಾಲ) ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಆಗಲು ಕಾರಣ ಆಗುತ್ತದೆ. ದೊಡ್ಡ ಮೊತ್ತದ ಸಾಲವನ್ನು ಕಟ್ಟದೆ ಹಾಗೇ ಬಾಕಿ ಉಳಿಸಿಕೊಂಡಿದ್ದಲ್ಲಿ ಮರುಪಾವತಿ ಸಾಮರ್ಥ್ಯ ಬಗ್ಗೆ ಹಾಗೂ ಸಾಲ ಕಟ್ಟುವುದಿಲ್ಲವೇನೋ ಎಂಬ ಅನುಮಾನ ಮೂಡುವಂತೆ ಮಾಡುತ್ತದೆ. ಒಂದು ತಿಂಗಳಲ್ಲಿ ನಿಮಗಿರುವ ಸಾಲ (ಇಎಂಐ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ ಎಲ್ಲ ಸೇರಿ) ನಿವ್ವಳ ಸಂಬಳ ಶೇಕಡಾ 50ಕ್ಕಿಂತ ಹೆಚ್ಚಿದ್ದದಲ್ಲಿ ಅದರಿಂದ ಕ್ರೆಡಿಟ್ ಸ್ಕೋರ್ ಇಳಿಯುತ್ತದೆ. ಸಾಲ ಮಂಜೂರಾಗುವುದು, ಕ್ರೆಡಿಟ್ ಕಾರ್ಡ್ಸ್ ದೊರೆಯುವುದು ಕಷ್ಟವಾಗುತ್ತದೆ. ಆದ್ದರಿಂದ ವಿಪರೀತ ಸಾಲ ಮಾಡುವುದನ್ನು ನಿಲ್ಲಿಸಬೇಕು. ಸಾಲ ಮಾಡುವುದನ್ನು ಕೊನೆ ಆಯ್ಕೆಯಾಗಿಟ್ಟುಕೊಳ್ಳಬೇಕು.

ಕ್ರೆಡಿಟ್ ಗರಿಷ್ಠ ಬಳಕೆ

ಕ್ರೆಡಿಟ್ ಗರಿಷ್ಠ ಬಳಕೆ

ಪದೇ ಪದೇ ಕ್ರೆಡಿಟ್ ಕಾರ್ಡ್ ಮಿತಿಯನ್ನು ಗರಿಷ್ಠವಾಗಿ ಬಳಸುವುದು ಒಳ್ಳೆ ಸೂಚನೆಯಲ್ಲ. ಇದರಿಂದ ಕ್ರೆಡಿಟ್ ಸ್ಕೋರ್ ಗೆ ಪೆಟ್ಟು ಬೀಳುತ್ತದೆ. ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಒಂದು ಲಕ್ಷ ಇದ್ದು, ಪ್ರತಿ ತಿಂಗಳು ಅರವತ್ತು ಸಾವಿರ ರುಪಾಯಿ ಬಳಸುತ್ತಿದ್ದಲ್ಲಿ ಕ್ರೆಡಿಟ್ ಯುಟಿಲೈಸೇಷನ್ ರೇಷಿಯೋ (ಸಿಯುಆರ್) 60% ಆಗುತ್ತದೆ. ಆಗ ಸ್ಕೋರ್ ಕಡಿಮೆ ಆಗುತ್ತದೆ. ಸಾಮಾನ್ಯವಾಗಿ ಸಿಯುಆರ್ ಮೂವತ್ತು ಪರ್ಸೆಂಟ್ ಗಿಂತ ಕಡಿಮೆ ಇರಬೇಕು. ಪ್ರತಿ ತಿಂಗಳು ಸಿಯುಆರ್ ಮೂವತ್ತು ಪರ್ಸೆಂಟ್ ಅಥವಾ ಅದಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳುವುದು ಅತ್ಯುತ್ತಮ. ಇದರಿಂದ ಕ್ರೆಡಿಟ್ ಸ್ಕೋರ್ ಉತ್ತಮವಾಗುತ್ತದೆ.

ತೀರುವಳಿ (ಸೆಟ್ಲ್ ಮೆಂಟ್) ಆಯ್ಕೆ

ತೀರುವಳಿ (ಸೆಟ್ಲ್ ಮೆಂಟ್) ಆಯ್ಕೆ

ಹಣಕಾಸಿನ ಸಮಸ್ಯೆ ಇದ್ದಾಗ ಸಾಮಾನ್ಯವಾಗಿ ಮಾಡುವುದೇನೆಂದರೆ, ಒಂದೋ ಕ್ರೆಡಿಟ್ ಕಾರ್ಡ್ ಬಾಕಿ ಹಣ ಪಾವತಿ ತಡ ಮಾಡಲಾಗುತ್ತದೆ ಅಥವಾ ಕನಿಷ್ಠ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಎರಡೂ ಸಂದರ್ಭದಲ್ಲಿ ಸಾಲ ಹೆಚ್ಚುತ್ತಲೇ ಹೋಗುತ್ತದೆ. ಒಂದು ಹಂತದಲ್ಲಿ ಕುತ್ತಿಗೆಗೆ ಬಂದು ಕೂರುತ್ತದೆ. ಅಂಥ ಸಂದರ್ಭದಲ್ಲಿ ಹಲವು ಸಾಲಗಾರರು ತೀರುವಳಿಗೆ ಮುಂದಾಗುತ್ತಾರೆ. ಒಟ್ಟು ಪಾವತಿಸಬೇಕಿರುವ ಅಸಲು, ಬಡ್ಡಿಯಲ್ಲಿ ಭಾಗಶಃ ಹಣ ಪಾವತಿಸುತ್ತಾರೆ. ಹೀಗೆ ಮಾಡುವುದರಿಂದ ಕ್ರೆಡಿಟ್ ಸ್ಲೋರ್ ಇಳಿಯುತ್ತದೆ ಹಾಗೂ ಭವಿಷ್ಯದಲ್ಲಿ ಸಾಲ ದೊರೆಯುವುದು ಕಷ್ಟವಾಗುತ್ತದೆ. ಆದ್ದರಿಂದ ಕ್ರೆಡಿಟ್ ಕಾರ್ಡ್ ಸಾಲವೋ ಮತ್ತೊಂದೋ ಬೆಳೆಯದಿರುವಂತೆ ಸಮಯಕ್ಕೆ ಸರಿಯಾಗಿ ಪಾವತಿಸಿ. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಸಾಲ ಮಾಡಿ. ಅದು ಕೂಡ ಸ್ನೇಹಿತರು- ಸಂಬಂಧಿಕರಿಂದ ಪಡೆಯಿರಿ. ಈಗಾಗಲೇ ಸಾಲ ಮಾಡಿದ್ದಲ್ಲಿ ಸೆಟ್ಲ್ ಮೆಂಟ್ ಅಂತಲ್ಲದೆ ಪೂರ್ಣವಾಗಿ ಪಾವತಿ ಮಾಡಿ.

ಕ್ರೆಡಿಟ್ ಸ್ಕೋರ್ ಪರಿಶೀಲನೆ

ಕ್ರೆಡಿಟ್ ಸ್ಕೋರ್ ಪರಿಶೀಲನೆ

ಆಗಾಗ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುತ್ತಿರಬೇಕು. ಒಂದು ವೇಳೆ ರಿಪೋರ್ಟಿಂಗ್ ಹಂತದಲ್ಲಿ ಅಥವಾ ಬೇರೆಲ್ಲೋ ಕಣ್ತಪ್ಪಿನಿಂದಾಗಿ ಆದ ಯಡವಟ್ಟಿನ ಕಾರಣಕ್ಕೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಆಗಾಗ ಪರಿಶೀಲನೆ ಮಾಡುತ್ತಿದ್ದಲ್ಲಿ ಅಂಥ ತಪ್ಪುಗಳಾಗಿದ್ದಲ್ಲಿ ಗಮನಕ್ಕೆ ಬರುತ್ತದೆ ಹಾಗೂ ತಿದ್ದುಪಡಿಗೂ ಅವಕಾಶ ಇರುತ್ತದೆ. ಈ ರೀತಿ ಕ್ರೆಡಿಟ್ ಸ್ಕೋರ್ ಪರಿಶೀಲಿಸುವುದನ್ನು 'ಸಾಫ್ಟ್ ಎನ್ ಕ್ವೇರಿ' ಎಂದು ಪರಿಗಣಿಸಲಾಗುತ್ತದೆ. ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಯಾವ ಪರಿಣಾಮ ಆಗಲ್ಲ. ಒಂದು ವೇಳೆ ಯಾವುದೋ ತಪ್ಪಾದ ವರದಿ ಆಗಿ, ಅದು ಹಾಗೇ ಉಳಿದುಕೊಂಡು ಬಿಟ್ಟಲ್ಲಿ ದೀರ್ಘಾವಧಿಗೆ ಮುಂದುವರಿಯುತ್ತದೆ ಹಾಗೂ ಸಮಸ್ಯೆಯಾಗಿ ಪರಿಣಾಮ ಬೀರುತ್ತದೆ.

English summary

5 Common Mistakes Which Lead To Lower Your Credit Score

Here is the list of 5 common mistakes which lead to lower your credit score.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X