For Quick Alerts
ALLOW NOTIFICATIONS  
For Daily Alerts

5ಜಿ ಸ್ಪೆಕ್ಟ್ರಮ್‌ ಹರಾಜು: ನೆಟ್ಟಿಗರ ಮೀಮ್ಸ್‌ಗೆ ಬಿಎಸ್‌ಎನ್‌ಎಲ್ ಗುರಿ

|

ಭಾರತದ 5ಜಿ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆ ಮಂಗಳವಾರ(ಜುಲೈ 26) ಬೆಳಗ್ಗೆ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಕ್ಷೇತ್ರಕ್ಕೆ ಹೊಸದಾಗಿ ಎಂಟ್ರಿ ಕೊಟ್ಟಿರುವ ಅದಾನಿ ಡೇಟಾ ನೆಟ್‌ವರ್ಕ್‌ ನಡುವೆ ತೀವ್ರ ಪೈಪೋಟಿ ಇದೆ. ಈ ನಡುವೆ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್‌ಎನ್‌ಎಲ್ ಬಗ್ಗೆ ಮೀಮ್ಸ್ ಮಾಡುತ್ತಿದ್ದಾರೆ.

ಹೌದು, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ ಹರಾಜಿನಲ್ಲಿ ಸ್ಪರ್ಧೆಗೆ ಇಳಿದಿರುವಾಗ, ಬಿಎಸ್‌ಎನ್‌ಎಲ್‌ ಈಗ 3ಜಿ, 4ಜಿ ಬಗ್ಗೆ ಮಾತನಾಡುತ್ತಿದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

5ಜಿ ಸ್ಪೆಕ್ಟ್ರಮ್ ಹರಾಜು: ಜಿಯೋ, Vi, ಅದಾನಿ, ಏರ್‌ಟೆಲ್ ಫೈನಲ್ ಬಿಡ್ಡರ್ಸ್5ಜಿ ಸ್ಪೆಕ್ಟ್ರಮ್ ಹರಾಜು: ಜಿಯೋ, Vi, ಅದಾನಿ, ಏರ್‌ಟೆಲ್ ಫೈನಲ್ ಬಿಡ್ಡರ್ಸ್

ಇನ್ನು ಕೆಲವು ನೆಟ್ಟಿಗರು ಅದಾನಿ ಸಂಸ್ಥೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶವನ್ನು ಕೂಡಾ ಮೀಮ್ಸ್, ಕಾರ್ಟೂನ್ ಮೂಲಕ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಟ್ವಿಟ್ಟರ್‌ನಲ್ಲಿ 5ಜಿ ಸ್ಪೆಕ್ಟ್ರಮ್‌ ಹರಾಜಿಗೆ ಸಂಬಂಧಿಸಿ ಏನೆಲ್ಲಾ ಮೀಮ್ಸ್‌ಗಳು ಹರಿದಾಡುತ್ತಿದೆ ಎಂದು ನೋಡೋಣ ಮುಂದೆ ಓದಿ....

 ಮೀಮ್ಸ್‌ಗಳು ಹೇಗಿದೆ ನೋಡಿ!

ಮೀಮ್ಸ್‌ಗಳು ಹೇಗಿದೆ ನೋಡಿ!

ಕರ್ಕೂಲ್ ಹರಿಕಾ ಎಂಬ ಟ್ವಿಟ್ಟಿಗರು, "ಭಾರತದ ಅತೀ ದೊಡ್ಡ ಸ್ಪೆಕ್ಟ್ರಮ್‌ ಹರಾಜು ಪ್ರಕ್ರಿಯೆ ಆರಂಭವಾಗಿದೆ. ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ ಹರಾಜಿನ ಸ್ಪರ್ಧೆಯಲ್ಲಿದೆ. ಆದರೆ ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್‌," ಎಂದು ಉಲ್ಲೇಖ ಮಾಡಿ ಓರ್ವ ವ್ಯಕ್ತಿ ಕಣ್ಣು ಮಿಟಿಕಿಸಿ ನೋಡುವ ಜಿಫ್ ಹಾಕಿದ್ದಾರೆ. ಇನ್ನೋರ್ವ ಟ್ವಿಟ್ಟಿಗರು ಜಿಯೋದೊಂದಿಗೆ ಏರ್‌ಟೆಲ್, ವೋಡಾಫೋನ್, ಐಡಿಯಾ ಯುದ್ಧಕ್ಕೆ ಬಂದಿದ್ದು ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಮಾತ್ರ ಕಾಲ ಬುಡದಲ್ಲಿಇರುವಂತೆ ತೋರಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇನ್ನು ಬಜೆಟ್ ವಿಚಾರದಲ್ಲಿ ನೆಟ್ಟಿಗರು ಬಿಎಸ್‌ಎನ್‌ಎಲ್ ಕಾಲೆಳೆದಿದ್ದಾರೆ. ಅದಾನಿ ಅಂಬಾನಿ ಬಳಿ ಕಂತೆ ಕಂತೆ ಹಣವಿದ್ದರೆ, ವೋಡಾಫೋನ್ ಐಡಿಯಾ ಬಳಿ ಅದಕ್ಕಿಂತ ಕಡಿಮೆ, ಬರೀ ಪರ್ಸ್‌ನಲ್ಲಿ ಒಂಚೂರು ಹಣವಿದೆ. ಆದರೆ ಬಿಎಸ್‌ಎನ್‌ಎಲ್‌ ಕೈಯಲ್ಲಿ ನಾಣ್ಯಗಳು ಮಾತ್ರ ಇದೆ ಎಂಬಂತಹ ದೃಶ್ಯವನ್ನು ಮೀಮ್ ಮಾಡಿದ್ದಾರೆ.

ಎಲ್‌ಐಸಿ ಐಪಿಒ ನಡುವೆ ರೆಪೋ ಏರಿಕೆ: ಬಾಹುಬಲಿಗೆ ಕಟ್ಟಪ್ಪನಿಂದಾದ ಮಿತ್ರದ್ರೋಹ!ಎಲ್‌ಐಸಿ ಐಪಿಒ ನಡುವೆ ರೆಪೋ ಏರಿಕೆ: ಬಾಹುಬಲಿಗೆ ಕಟ್ಟಪ್ಪನಿಂದಾದ ಮಿತ್ರದ್ರೋಹ!

 

ಬಿಎಸ್‌ಎನ್‌ಎಲ್ ಕಾಲೆಳೆದ ನೆಟ್ಟಿಗರು

ಗೌರವ್ ಸಿಂಗ್ ರಾವತ್ ಎಂಬ ನೆಟ್ಟಿಗರು, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ, ಅದಾನಿ ಡೇಟಾ ನೆಟ್‌ವರ್ಕ್‌ 5ಜಿ ಸ್ಪೆಕ್ಟ್ರಮ್‌ ಹರಾಜಿನಲ್ಲಿರುವಾಗ ಮಾಧ್ಯಮಗಳು ಬಿಎಸ್‌ಎನ್‌ಎಲ್‌ಗೆ ಪ್ರಶ್ನೆ ಕೇಳಿದರೆ ಅದರ ಪ್ರತಿಕ್ರಿಯೆ ಹೇಗೆ ಇರುತ್ತದೆ ಎಂದು ಮೀಮ್ಸ್ ಮಾಡಿದ್ದಾರೆ. "ಇದೆಲ್ಲ ಏನು ಆಗುತ್ತದೆ?. ನಮಗೆ ಏನು ಗೊತ್ತು?," ಎಂದು ಮಾಧ್ಯಮದವರನ್ನೇ ಬಿಎಸ್‌ಎನ್‌ಎಲ್‌ ಪ್ರಶ್ನೆ ಮಾಡುವಂತೆ ಮೀಮ್ಸ್ ಮಾಡಿದ್ದಾರೆ. ಬೇರೆ ಎಲ್ಲಾ ಟೆಲಿಕಾಂ ಸಂಸ್ಥೆಗಳು 5ಜಿ ಸ್ಪೆಕ್ಟ್ರಮ್‌ ಹರಾಜಿನಲ್ಲಿದ್ದರೆ ಬಿಎಸ್‌ಎನ್‌ಎಲ್ ಮಾತ್ರ ತನ್ನಷ್ಟಕ್ಕೆ ಬರೀದಾದ ದಾರಿಯಲ್ಲಿ ಏಕಾಂಗಿಯಾಗಿ ಸಾಗುತ್ತಿದೆ ಎಂದು ತೋರಿಸುವ ಮೀಮ್ಸ್ ಅನ್ನು ಕೂಡಾ ನೆಟ್ಟಿಗರು ಹಂಚಿಕೊಂಡಿದ್ದಾರೆ. ಇನ್ನು ಎಲ್ಲಾ ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸ್ಪೆಕ್ಟ್ರಮ್ ಬಗ್ಗೆ ಮಾತನಾಡುವಾಗ ಬಿಎಸ್‌ಎನ್‌ಎಲ್ ಮಾತ್ರ 2ಜಿಯನ್ನು ಫಿಕ್ಸ್ ಮಾಡುವಲ್ಲಿ ತೊಡಗಿದ್ದಾರೆ ಎಂದು ಅಕ್ಷಯ್ ಭಾತ್ರಾ ಎಂಬವರು ಟ್ವೀಟ್ ಮಾಡಿದ್ದಾರೆ.

ಅದಾನಿ ಸಂಸ್ಥೆ ಬಗ್ಗೆ ಟ್ವೀಟ್

ಇನ್ನು ಭವ್ಯಾ ಎಂಬ ನೆಟ್ಟಿಗರೊಬ್ಬರು ಅದಾನಿ ಸಂಸ್ಥೆ ಎಂಬುವುದು ಭೂತವೆಂಬವಂತೆ ಟ್ವೀಟ್ ಮಾಡಿದ್ದಾರೆ. ಅದಾನಿ ಸಂಸ್ಥೆಯು ಮೊದಲು ಈಗಾಗಲೇ ಏರ್‌ಪೋರ್ಟ್, ಸಿಮೆಂಟ್ ಮೊದಲಾದ ಕ್ಷೇತ್ರಕ್ಕೆ ನುಗ್ಗಿದೆ. ಈಗ ಟೆಲಿಕಾಂ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದೆ ಎಂದು ತೋರಿಸುವ ಚಿತ್ರ ಹಂಚಿಕೊಂಡಿದ್ದಾರೆ. ಇನ್ನು ಕೆಲವು ನೆಟ್ಟಿಗರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೌತಮ್ ಅದಾನಿ ಅಪ್ಪಿಕೊಂಡಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಈ ಹರಾಜಿನಲ್ಲಿ ಅದಾನಿ ಸಂಸ್ಥೆಗೆ ಗೆಲುವು ಖಚಿತ ಎಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.

 ಏನಿದು 5ಜಿ ಸ್ಪೆಕ್ಟ್ರಮ್‌ ಹರಾಜು?

ಏನಿದು 5ಜಿ ಸ್ಪೆಕ್ಟ್ರಮ್‌ ಹರಾಜು?

ಇದು 600 MHz, 700 MHz, 800 MHz, 900 MHz, 1800 MHz, 2100 MHz, 2300 MHz, 2500 MHz, 3300 MHz ಹಾಗೂ 26 GHz ಅನ್ನು ಬಳಕೆ ಮಾಡುವ ಹಕ್ಕಿಗೆ ಸಂಬಂಧಿಸಿ ನಡೆಯುವ ಹರಾಜು ಇದಾಗಿದೆ. ಹರಾಜಿನಲ್ಲಿ ಗೆಲುವು ಸಾಧಿಸಿದ ಸಂಸ್ಥೆಯು 20 ವರ್ಷಗಳ ಕಾಲ 5ಜಿ ಸ್ಪೆಕ್ಟ್ರಮ್ ಬಳಕೆಯ ಹಕ್ಕು ಹೊಂದಲಿದ್ದಾರೆ. 20 ಕಂತಿನ ಮೂಲಕ ಬಿಡ್ ಗೆದ್ದವರು ಹಣವನ್ನು ಪಾವತಿ ಮಾಡಬಹುದು. ಪ್ರತಿ ವರ್ಷದ ಆರಂಭದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ.

English summary

5G Spectrum Auction Begins from today : Check out the Funny Memes in Twitter

5G Spectrum Auction Begins in India from today : Check out the Funny Memes in Twitter. Read on.
Story first published: Tuesday, July 26, 2022, 14:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X