For Quick Alerts
ALLOW NOTIFICATIONS  
For Daily Alerts

Amul, KMF Turnover : ಅಮುಲ್, ಕೆಎಂಎಫ್ ವಹಿವಾಟು ಹೇಗಿದೆ?

|

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ವಿಲೀನವಾಗುವ ಬಗ್ಗೆ ಸಾಕಷ್ಟು ಚರ್ಚೆಗಳು ಸದ್ಯ ನಡೆಯುತ್ತಿದೆ. ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಈ ಬಗ್ಗೆ ಸ್ಪಷ್ಟಣೆ ನೀಡಿದ್ದರೂ ಕೂಡಾ ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ಇಂದಿಗೂ ವಿವಾದವಾಗಿಯೇ ಉಳಿದಿದೆ.

ಈಗಾಗಲೇ ಹಲವಾರು ಸಂಸ್ಥೆಗಳನ್ನು ವಿಲೀನಗೊಳಿಸಲಾಗಿದೆ. ಬ್ಯಾಂಕ್‌ಗಳಿಂದ ಹಿಡಿದು ಹಲವಾರು ಸಂಸ್ಥೆಗಳು ಪ್ರಮುಖವಾಗಿ ಗುಜರಾತ್ ಸಂಸ್ಥೆಗಳೊಂದಿಗೆ ವಿಲೀನವಾಗುತ್ತಿರುವುದು ಈ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮತ್ತು ಗುಜರಾತ್‌ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಡುವಿನ 'ಸಹಕಾರ' ಎಂಬ ಗೃಹ ಸಚಿವರ ಉಲ್ಲೇಖವೇ ಈ ವಿವಾದಕ್ಕೆ ನಾಂದಿ ಹಾಕಿದೆ.

Nandini Milk Price: ನಂದಿನಿ ಹಾಲು, ಮೊಸರು ದರ 2 ರೂಪಾಯಿ ಏರಿಕೆNandini Milk Price: ನಂದಿನಿ ಹಾಲು, ಮೊಸರು ದರ 2 ರೂಪಾಯಿ ಏರಿಕೆ

ಆದರೆ ಅಮುಲ್ ಹಾಗೂ ಕೆಎಂಎಫ್‌ನ ಆದಾಯ ಎಷ್ಟಿದೆ, ವಹಿವಾಟು ಎಷ್ಟಿದೆ, ಯಾವೆಲ್ಲ ಹಾಲಿನ ಉತ್ಪನ್ನಗಳನ್ನು ಈ ಸಂಸ್ಥೆಯು ಮಾರಾಟ ಮಾಡುತ್ತದೆ. ಪ್ರಸ್ತುತ ಬೆಲೆ ಎಷ್ಟಿದೆ, ವಿಲೀನದ ಸ್ಥಿತಿ ತಲುಪಿದೆಯೇ ಎಂಬ ಬಗ್ಗೆ ನಾವು ತಿಳಿಯೋಣ ಮುಂದೆ ಓದಿ...

 ಅಮುಲ್ ವಹಿವಾಟು ಹೇಗಿದೆ?

ಅಮುಲ್ ವಹಿವಾಟು ಹೇಗಿದೆ?

ಅಮುಲ್ ತನ್ನ 75ನೇ ವರ್ಷದ ಸಂಭ್ರಮದಲ್ಲಿದೆ. ದೇಶದಲ್ಲಿ ಅಮುಲ್ ಅತೀ ದೊಡ್ಡ ಹಾಲು ಉತ್ಪಾದನ ಒಕ್ಕೂಟವಾಗಿದೆ. ಹಣಕಾಸು ವರ್ಷ 2021-22ರಲ್ಲಿ ಅಮುಲ್ ಗ್ರೂಪ್‌ನ ವಹಿವಾಟು 61,000 ಕೋಟಿ ರೂಪಾಯಿಯಾಗಿದೆ. ಈ ಮೂಲಕ ದೇಶದಲ್ಲಿ ಅತೀ ದೊಡ್ಡ ಹಾಲು ಉತ್ಪಾದನ ಒಕ್ಕೂಟ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. ಪ್ರಸ್ತುತ ಅಮುಲ್ ವಿಶ್ವದ 8ನೇ ಅತೀ ದೊಡ್ಡ ಸಂಸ್ಥೆಯಾಗಿದೆ. 2021-2022ರಲ್ಲಿ ಆದಾಯಕ್ಕೆ ಸುಮಾರು 8,000 ಕೋಟಿ ಸೇರ್ಪಡೆಯಾಗಿದೆ. ಕೋವಿಡ್ ಬಳಿಕ ರೆಸ್ಟೋರೆಂಟ್, ಕ್ಯಾಟೆರಿಂಗ್ ಮೊದಲಾದೆಡೆ ಬೇಡಿಕೆ ಹೆಚ್ಚಾದಂತೆ ಆದಾಯವು ಅಧಿಕವಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ. ಅಮುಲ್ ಹಾಲು ಉತ್ಪನ್ನಗಳ ವಹಿವಾಟು ಶೇಕಡ 36ರಷ್ಟು ಏರಿಕೆಯಾಗಿದೆ. ಅಮುಲ್ ಬಟರ್ ವಹಿವಾಟು ಶೇಕಡ 17ರಷ್ಟು, ತುಪ್ಪದ ವಹಿವಾಟು ಶೇಕಡ 19ರಷ್ಟು ಏರಿಕೆಯಾಗಿದೆ.

ಹಬ್ಬಕ್ಕೂ ಮುನ್ನ ಹಾಲಿನ ದರ 2 ರೂಪಾಯಿ ಹೆಚ್ಚಿಸಿದ ಅಮುಲ್ಹಬ್ಬಕ್ಕೂ ಮುನ್ನ ಹಾಲಿನ ದರ 2 ರೂಪಾಯಿ ಹೆಚ್ಚಿಸಿದ ಅಮುಲ್

 ಕೆಎಂಎಫ್ ವಹಿವಾಟು ಹೇಗಿದೆ?

ಕೆಎಂಎಫ್ ವಹಿವಾಟು ಹೇಗಿದೆ?

ಹಣಕಾಸು ವರ್ಷ 2022ರಲ್ಲಿ ಕರ್ನಾಟಕ ಹಾಲು ಒಕ್ಕೂಟದ ಆದಾಯವು 4924.5 ಕೋಟಿ ರೂಪಾಯಿ ಆಗಿದೆ. ಕೆಎಂಎಫ್‌ನ ವಾರ್ಷಿಕ ವಹಿವಾಟು 19784 ಕೋಟಿ ರೂಪಾಯಿ ಆಗಿದೆ. 2020ರಲ್ಲಿ ಆದಾಯವು 4725.6 ಕೋಟಿ ರೂಪಾಯಿ ಆಗಿತ್ತು. ಆದರೆ 2021ರಲ್ಲಿ ಆದಾಯವು ಕೊಂಚ ಏರಿಕೆಯಾಗಿ, 5356.2 ಕೋಟಿ ರೂಪಾಯಿಗೆ ತಲುಪಿತ್ತು. ಆದರೆ 2022ರಲ್ಲಿ ಆದಾಯ ಕುಸಿದಿದೆ. ಆದರೆ ಭಾರತದ ಎರಡನೇ ಅತೀ ದೊಡ್ಡ ಹಾಲು ಉತ್ಪಾದಕ ಸಂಸ್ಥೆಯಾಗಿದೆ.

 ಕೆಎಂಎಫ್, ಅಮುಲ್‌ ಉತ್ಪಾದನೆಗಳು

ಕೆಎಂಎಫ್, ಅಮುಲ್‌ ಉತ್ಪಾದನೆಗಳು

ಕೆಎಂಫ್‌ ಸಂಸ್ಥೆಯು ಹಾಲು, ಮೊಸರು, ತುಪ್ಪ, ಬೆಣ್ಣೆ, ಐಸ್ ಕ್ರೀಮ್, ಚಾಲೊಕೇಟ್‌ ಹಾಗೂ ಮತ್ತು ಸಿಹಿತಿಂಡಿ (ಕಾಜು ಕಟ್ಲಿ, ಬೇಸನ್ ಲಡ್ಡೂ, ಮೈಸೂರು ಪಾಕ್, ಪೇಡಾ, ಇತ್ಯಾದಿ) ಮಾರಾಟ ಮಾಡುತ್ತದೆ. ಇದು ನಂದಿನಿ ಬ್ರ್ಯಾಂಡ್‌ ಹೆಸರಲ್ಲಿ ಖ್ಯಾತಿ ಪಡೆದಿದೆ. ಅಮುಲ್‌ ಸಂಸ್ಥೆಯು ಹಾಲಿನ ಪುಡಿ, ಹಾಲು, ಬೆಣ್ಣೆ, ತುಪ್ಪ, ಗಿಣ್ಣು, ಮಸ್ತಿ ದಾಹಿ, ಮೊಸರು, ಮಜ್ಜಿಗೆ ಚಾಕೊಲೇಟ್, ಐಸ್ ಕ್ರೀಂ,ಶ್ರೀಖಂಡ್, ಪನೀರ್(ತಾಜಾ ಗಿಣ್ಣು), ಗುಲಾಬ್ ಜಾಮೂನುಗಳು ಮುಂತಾದವುಗಳನ್ನು ಮಾರಾಟ ಮಾಡುತ್ತದೆ. ಕೆಎಂಎಫ್‌ ಅಡಿ 17014 ನೋಂದಾಯಿತ ಸಂಘಗಳಿವೆ. 15043 ಸಂಘಗಳು ಸಕ್ರಿಯವಾಗಿವೆ. 4143 ಮಹಿಳಾ ಸಂಘಗಳು ಕಾರ್ಯಾಚರಣೆಯಲ್ಲಿವೆ. ಅಮುಲ್‌ ಅಡಿಯಲ್ಲಿ 13, 141 ಗ್ರಾಮೀಣ ಡೈರಿ ಸಹಕಾರ ಸಂಘಗಳನ್ನು ಹೊಂದಿದೆ.

English summary

Amul and KMF Turnover Differences and Operating Income Details in Kannada

Turnover and Operating income of Karnataka Milk Federation, Amul. details in kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X