For Quick Alerts
ALLOW NOTIFICATIONS  
For Daily Alerts

ನೀವು ವಿವಾಹಿತರೇ, ಈ ಯೋಜನೆಯಲ್ಲಿ ಮಾಸಿಕ 5 ಸಾವಿರ ಪಡೆಯಿರಿ!

|

ನಮ್ಮ ಜೀವನದಲ್ಲಿ ಅದೆಷ್ಟೋ ಪ್ರಮುಖ ಘಟ್ಟಗಳನ್ನು ನಾವು ದಾಟಿರುತ್ತೇವೆ. ಆ ಪ್ರಮುಖ ಘಟ್ಟಗಳಲ್ಲಿ ಈ ವಿವಾಹ ಕೂಡಾ ಒಂದಾಗಿದೆ. ಜೀವನದ ಯಾವುದೇ ಪ್ರಮುಖ ಘಟ್ಟಗಳಲ್ಲೂ ನಮಗೆ ಹಣವು ಅತೀ ಮುಖ್ಯವಾಗಿರುತ್ತದೆ. ಅದರಂತೆಯೇ ವಿವಾಹಕ್ಕೂ ಕೂಡಾ ಹಣ ಅತೀ ಮುಖ್ಯವಾಗಿದೆ.

 

ನೀವು ವಿವಾಹಿತರಾಗಿದ್ದರೆ ಮಾಸಿಕ ಐದು ಸಾವಿರ ರೂಪಾಯಿ ನಿಮಗೆ ದೊರೆಯುತ್ತದೆ ಎಂದಾದರೆ ನೀವು ಏನು ಹೇಳುತ್ತೀರಿ? ಬೇಡ ಎನ್ನುತ್ತೀರಾ?, ಅದು ಕೂಡಾ ಈ ಹಣದುಬ್ಬರದ ಸಂಕಷ್ಟದ ಸ್ಥಿತಿಯಲ್ಲಿ? ಹೌದು ಈ ಒಂದು ಯೋಜನೆಯಲ್ಲಿ ನೀವು ವಿವಾಹಿತರಾಗಿದ್ದರೆ ಮಾಸಿಕ ಐದು ಸಾವಿರ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ.

ಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ: ವಿವರ ಇಲ್ಲಿದೆಅಟಲ್ ಪಿಂಚಣಿ ಯೋಜನೆ ನಿಯಮ ಬದಲಾವಣೆ: ವಿವರ ಇಲ್ಲಿದೆ

ಈಗಾಗಲೇ ವಿವಾಹಕ್ಕೆ ಸಾಕಷ್ಟು ಖರ್ಚಾಗಿರುವಾಗ ನೀವು ಕೂಡಾ ಈ ಯೋಜನೆಯ ಫಲಾನುಭವಿಗಳಾಗಬೇಕು ಎಂದು ಬಯಸುತ್ತೀರೇ? ಈ ಯೋಜನೆಯ ಬಗ್ಗೆ ಇಲ್ಲಿದೆ ಸಂಪೂರ್ಣ ವಿವರ ಮುಂದೆ ಓದಿ....

ಏನಿದು ಯೋಜನೆ?

ಏನಿದು ಯೋಜನೆ?

ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ವಿವಾಹಿತರಾಗಿದ್ದರೆ ಮಾತ್ರ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆ ಪ್ರಕಾರ ನೀವು ಮಾಸಿಕವಾಗಿ 5 ಸಾವಿರ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಇನ್ನು ಅಟಲ್ ಪಿಂಚಣಿ ಯೋಜನೆಯು ಅತೀ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ನೀವು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ನಿಮ್ಮಲ್ಲಿ ಬ್ಯಾಂಕ್ ಖಾತೆ ಇರಬೇಕಾಗುತ್ತದೆ. ಹಾಗೆಯೇ ಆಧಾರ್ ಕಾರ್ಡ್, ಮೊಬೈಲ್ ಫೋನ್ ಅನ್ನು ಕೂಡಾ ನೀವು ಹೊಂದಿರಬೇಕು. ಈ ಯೋಜನೆಯ ಲಾಭವನ್ನು ಪತಿ, ಪತ್ನಿ ಇಬ್ಬರೂ ಪಡೆಯಬಹುದು. ನೀವು ಈ ಯೋಜನೆಯಲ್ಲಿ ವಾರ್ಷಿಕವಾಗಿ 1.5 ಲಕ್ಷ ರೂಪಾಯಿವರೆಗೆ ಹಣವನ್ನು ಪಡೆಯಬಹುದು.

 ಯೋಜನೆಯ ಲಾಭ ಪಡೆಯುವುದು ಹೇಗೆ?

ಯೋಜನೆಯ ಲಾಭ ಪಡೆಯುವುದು ಹೇಗೆ?

ಯೋಜನೆಯ ಲಾಭವನ್ನು ನೀವು ಪಡೆಯಬೇಕಾದರೆ ಮೊದಲು ನಿಮ್ಮಲ್ಲಿ ಯಾವುದೇ ಬ್ಯಾಂಕ್ ಖಾತೆ ಇಲ್ಲವಾದರೆ ಬ್ಯಾಂಕ್ ಖಾತೆಯನ್ನು ತೆರೆಯಿರಿ. ಬಳಿಕ ಸಮೀಪದ ಅಂಚೆ ಕಚೇರಿಯಲ್ಲಿ ಅಟಲ್ ಪಿಂಚಣಿ ಯೋಜನೆಯ ಅರ್ಜಿಯನ್ನು ಭರ್ತಿ ಮಾಡಿಕೊಳ್ಳಿ. ಈ ಯೋಜನೆಯು 18 ವರ್ಷದಿಂದ 40 ವರ್ಷದೊಳಗಿನವರಿಗೆ ಆಗಿದೆ. ನೀವು ಈ ಯೋಜನೆಯ ಲಾಭವನ್ನು ಪಡೆಯಬೇಕಾದರೆ ಮೊದಲು ಹೂಡಿಕೆಯನ್ನು ಮಾಡಬೇಕಾಗುತ್ತದೆ. ಇದು ಪಿಂಚಣಿ ಆಧಾರದಲ್ಲಿ ನಿಮಗೆ ಲಭ್ಯವಾಗಲಿದೆ. ಅಂದರೆ ನಿಮಗೆ 60 ವರ್ಚವಾದಾಗ ಈ ಯೋಜನೆಯಡಿಯಲ್ಲಿ ನಿಮಗೆ ಪಿಂಚಣಿ ಲಭ್ಯವಾಗಲಿದೆ.

 ಅರ್ಜಿದಾರರ ಮರಣದ ನಂತರವೂ ಪಿಂಚಣಿ ಲಭ್ಯ!
 

ಅರ್ಜಿದಾರರ ಮರಣದ ನಂತರವೂ ಪಿಂಚಣಿ ಲಭ್ಯ!

ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿದಾರರು ಸಾವನ್ನಪ್ಪಿದರೆ ಈ ಯೋಜನೆಯ ಕಥೆಯೇನು ಎಂದು ಹಲವಾರು ಮಂದಿಗೆ ಅನಿಸಬಹುದು. ಆದರೆ ಈ ಯೋಜನೆಯಲ್ಲಿ ಅರ್ಜಿದಾರರು ಸಾವನ್ನಪ್ಪಿದರೂ ಯೋಜನೆಯ ಲಾಭ ಲಭ್ಯವಾಗಲಿದೆ. ಅಂದರೆ ವೃದ್ಧಾಪ್ಯದಲ್ಲಿ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ಅರ್ಜಿದಾರರಾದ ಪತಿ ಮರಣ ಹೊಂದಿದರೆ ಕುಟುಂಬ ಸದಸ್ಯೆಯಾದ ಪತ್ನಿಗೆ ಈ ಪಿಂಚಣಿ ಲಭ್ಯವಾಗಲಿದೆ. ಅರ್ಜಿದಾರರಾ ಪತ್ನಿ ಮರಣ ಹೊಂದಿದರೆ ಕುಟುಂಬ ಸದಸ್ಯರಾದ ಪತಿಗೆ ಪಿಂಚಣಿ ದೊರೆಯಲಿದೆ. ಒಂದು ವೇಳೆ ಪತಿ, ಪತ್ನಿ ಇಬ್ಬರೂ ಸಾವನ್ನಪ್ಪಿದರೆ ಮಕ್ಕಳಿಗೆ ಈ ಯೋಜನೆಯ ಲಾಭ ದೊರೆಯಲಿದೆ. ಆದರೆ ಕೆಲವು ಷರತ್ತುಗಳು ಕೂಡಾ ಇದೆ.

English summary

Atal Pension Yojana: You Can Get up to Rs 5000 Every Month if You're Married, Details Here

Atal Pension Yojana: What would you say if you get to know that you may receive 5,000 rupees each month once you were married?, explained in kannada. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X