For Quick Alerts
ALLOW NOTIFICATIONS  
For Daily Alerts

NBFC or Bank for Home Loan : ಸಾಲಕ್ಕೆ ಆಯ್ಕೆಗಳು; ಬ್ಯಾಂಕ್‌ಗಿಂತ ಎನ್‌ಬಿಎಫ್‌ಸಿ ಉತ್ತಮವಾ?

|

ಭಾರತದಲ್ಲಿ ಸಾಲ ಮಾಡದವರು ಬಹಳ ವಿರಳ. ಪ್ರತಿಯೊಬ್ಬರು ತಮ್ಮ ಜೀವಮಾನದಲ್ಲಿ ಒಂದಿಲ್ಲೊಂದು ಬಾರಿ ಸಾಲ ಮಾಡುವುದು ತಪ್ಪಲ್ಲ. ಹಿಂದೆಲ್ಲಾ ಸಾಲ ಮಾಡಬೇಕೆಂದರೆ ಖಾಸಗಿ ಫೈನಾನ್ಷಿಯರ್‌ಗಳಿಂದ ದುಬಾರಿ ಬಡ್ಡಿ ತೆತ್ತು ಸಾಲ ಮಾಡಬೇಕಿತ್ತು. ಈಗಲೂ ತಿಂಗಳಿಗೆ 10 ಪರ್ಸೆಂಟ್ ಬಡ್ಡಿ ಹೀರುವ ಫೈನಾನ್ಷಿಯರ್‌ಗಳು ಸಿಗುತ್ತಾರೆ. ಆದರೆ, ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಈಗ ತಿಂಗಳಿಗೆ ಶೇ. 2ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತವೆ.

 

ಆದರೆ, ಗೃಹ ಸಾಲದ ವಿಷಯಕ್ಕೆ ಬಂದರೆ ಜನರು ಗಂಭೀರವಾಗಿ ಯೋಚಿಸಬೇಕಾಗುತ್ತದೆ. ಮನೆ ಹೊಂದುವುದು ಎಲ್ಲರ ಜೀವನದ ಬಹಳ ಮುಖ್ಯ ಹಂತ. ಮನೆ ಕಟ್ಟಲು ಕನಿಷ್ಠ 15 ಲಕ್ಷವಾದರೂ ಬೇಕು. ಅಷ್ಟು ಮೊತ್ತದ ಗೃಹ ಸಾಲ ಮಾಡಿದರೆ ಅದನ್ನು ವಾಪಸ್ ಮಾಡುವ ಶಕ್ತಿ ಇದೆಯಾ ಎಂಬುದು ಮೊದಲು ಯೋಚಿಸಬೇಕಾದ ಸಂಗತಿ.

MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?MICR Code of bank: ಎಂಐಸಿಆರ್ ಕೋಡ್ ಎಂದರೇನು, ಅದನ್ನು ಪತ್ತೆಹಚ್ಚುವುದು ಹೇಗೆ?

ಈಗ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್‌ಸಿ) ಗೃಹ ಸಾಲಗಳನ್ನು ನೀಡುತ್ತವೆ. ನೀವು ಗೃಹ ಸಾಲಕ್ಕೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬುದು ನೀವು ಕೈಗೊಳ್ಳುವ ಪ್ರಮುಖವಾದ ಆರಂಭಿಕ ಹೆಜ್ಜೆ.

ಎನ್‌ಬಿಎಫ್‌ಸಿ ಮತ್ತು ಬ್ಯಾಂಕ್ ಮಧ್ಯೆ ವ್ಯತ್ಯಾಸವೇನು?

ಎನ್‌ಬಿಎಫ್‌ಸಿ ಮತ್ತು ಬ್ಯಾಂಕ್ ಮಧ್ಯೆ ವ್ಯತ್ಯಾಸವೇನು?

ಬ್ಯಾಂಕುಗಳು ಆರ್‌ಬಿಐ ಬ್ಯಾಂಕಿಂಗ್ ಕಾಯ್ದೆ ಅಡಿ ನೊಂದಾಯಿತವಾಗಿರುತ್ತವೆ. ಎನ್‌ಬಿಎಫ್‌ಸಿಗಳು 1956ರ ಕಂಪನಿ ಕಾಯ್ದೆ ಅಡಿ ನೊಂದಾಯಿತವಾದ ಹಣಕಾಸು ಸಂಸ್ಥೆಗಳಾಗಿವೆ. ಬ್ಯಾಂಕುಗಳಂತೆಯೇ ಎನ್‌ಬಿಎಫ್‌ಸಿಗಳೂ ಕಾರ್ಯನಿರ್ವಹಿಸಬಹುದು. ಬ್ಯಾಂಕುಗಳು ಆರ್‌ಬಿಐನ ಸಂಪೂರ್ಣ ನಿಯಂತ್ರಣದಲ್ಲಿರುತ್ತವೆ. ಆದರೆ, ಎನ್‌ಬಿಎಫ್‌ಸಿಗಳಿಗೆ ಕೆಲ ಹೆಚ್ಚಿನ ಸ್ವಾತಂತ್ರ್ಯ ಇರುತ್ತದೆ.

ಆರ್‌ಬಿಐ ಕಾಯ್ದೆ ಅಡಿ ಬರುವ ಕಮರ್ಷಿಯಲ್ ಬ್ಯಾಂಕುಗಳು ಕ್ಯಾಷ್ ರಿಸರ್ವ್ ರೇಶಿಯೋ (ಸಿಆರ್‌ಆರ್) ಪಾಲಿಸಬೇಕು. ಇತ್ತೀಚಿನ ಸಿಆರ್‌ಆರ್ ದರ ಶೇ. 3 ಇದೆ. ಅಂದರೆ ಮೂರು ಪ್ರತಿಶತದಷ್ಟು ಹಣವನ್ನು ಬ್ಯಾಂಕುಗಳು ಆರ್‌ಬಿಐನಲ್ಲಿ ಇಡಬೇಕು. ಇದೊಂದು ರೀತಿಯಲ್ಲಿ ಮುಂಗಡ ಠೇವಣಿ ಇದ್ದಂತೆ. ಬ್ಯಾಂಕ್ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಇದು ಎನ್‌ಬಿಎಫ್‌ಸಿಗೆ ಅನ್ವಯ ಆಗುವುದಿಲ್ಲ. ಎನ್‌ಬಿಎಫ್‌ಸಿಗಳು ಯಾವುದೇ ಸಿಆರ್‌ಆರ್ ನಿಧಿಯನ್ನು ಆರ್‌ಬಿಐನಲ್ಲಿ ಇಡುವ ಅಗತ್ಯ ಇರುವುದಿಲ್ಲ.

 

ಎನ್‌ಬಿಎಫ್‌ಸಿ ಕ್ರಮ ಸರಳ

ಎನ್‌ಬಿಎಫ್‌ಸಿ ಕ್ರಮ ಸರಳ

ಸಾಲ ನೀಡಲು ಬ್ಯಾಂಕುಗಳು ಬಹಳ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ, ಗ್ರಾಹಕರಿಂದ ಎಲ್ಲಾ ಅಗತ್ಯ ದಾಖಲೆಗಳು ಸಮರ್ಪಕವಾಗಿದ್ದರೆ ಮಾತ್ರ ಸಾಲದ ಪ್ರಕ್ರಿಯೆ ಮುಂದುವರಿಸುತ್ತವೆ. ಎಲ್ಲಾ ದಾಖಲೆ ಸರಿ ಇದ್ದರೂ ಸಾಲದ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚು ಸಮಯ ಹಿಡಿಯುತ್ತದೆ. ಅದೇ ಎನ್‌ಬಿಎಫ್‌ಸಿಯಾದರೆ ಡಾಕ್ಯುಮೆಂಟೇಶನ್ ತಲೆನೋವು ಕಡಿಮೆ, ಪ್ರೋಸಸಿಂಗ್ ಟೈಮ್ ಕೂಡ ಕಡಿಮೆ ಇರುತ್ತದೆ.

ಬಡ್ಡಿ ದರ
 

ಬಡ್ಡಿ ದರ

ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ ನಡುವೆ ಬಡ್ಡಿಯಲ್ಲಿ ಅಷ್ಟೇನೂ ವ್ಯತ್ಯಾಸ ಇರುವುದಿಲ್ಲ. ಬ್ಯಾಂಕುಗಳು ಗೃಹ ಸಾಲ ನೀಡುವಾಗ ಫ್ಲೋಟಿಂಗ್ ಇಂಟರೆಸ್ಟ್ ಹಾಕುತ್ತದೆ. ಅಂದರೆ ಸಾಂದರ್ಭಿಕವಾಗಿ ಬಡ್ಡಿ ವ್ಯತ್ಯಾಸವಾದರೆ ಸಾಲದ ಬಡ್ಡಿಯಲ್ಲೂ ಅನುಗುಣವಾಗಿ ಬಡ್ಡಿ ಬದಲಾಯಿಸಲಾಗುತ್ತದೆ. ಈಗ ಆರ್‌ಬಿಐ ರೆಪೋ ದರ ಶೇ. 5.9 ಇದೆ. ಈ ಸಂದರ್ಭದಲ್ಲಿ ನೀವು ಬ್ಯಾಂಕಲ್ಲಿ ಸಾಲ ಪಡೆದರೆ ವಾರ್ಷಿಕ ಬಡ್ಡಿ ದರ ಶೇ. 12 ಇದೆ ಎಂದಿಟ್ಟುಕೊಳ್ಳಿ. ಮುಂದೆ ಆರ್‌ಬಿಐ ರೆಪೋ ದರವನ್ನು ಶೇ. 5ಕ್ಕೆ ಇಳಿಸಿದರೆ ಬ್ಯಾಂಕ್‌ನಲ್ಲಿ ನಿಮ್ಮ ಸಾಲಕ್ಕೆ ಇದ್ದ ಬಡ್ಡಿ ದರವೂ ಇಳಿಯುತ್ತದೆ. ಒಂದು ವೇಳೆ ರೆಪೋ ದರ ಹೆಚ್ಚಿದರೆ ಬ್ಯಾಂಕ್ ಬಡ್ಡಿ ದರವೂ ಹೆಚ್ಚುತ್ತದೆ. ಫ್ಲೋಟಿಂಗ್ ಇಂಟರೆಸ್ಟ್ ಎಂದರೆ ಇದೆ. ಆರ್‌ಬಿಐ ದರ ವ್ಯತ್ಯಾಸ ಮಾಡಿದಾಕ್ಷಣ ಬ್ಯಾಂಕುಗಳು ಬಡ್ಡಿ ಬದಲಾವಣೆ ಮಾಡಬೇಕೆಂಬ ನಿಯಮ ಇಲ್ಲ, ಅದೆಲ್ಲವೂ ಬ್ಯಾಂಕಿನ ವಿವೇಚನೆಗೆ ಬಿಟ್ಟಿದ್ದು.

ಆದರೆ, ಎನ್‌ಬಿಎಫ್‌ಸಿಯಲ್ಲಿ ನೀವು ಸಾಲ ಪಡೆಯುವಾಗ ಎಷ್ಟು ಬಡ್ಡಿ ದರ ನಿಗದಿಯಾಗಿರುತ್ತದೋ ಕೊನೆಯವರೆಗೂ ಅದೇ ದರ ಇರುತ್ತದೆ. ಹೀಗಾಗಿ, ಗೃಹ ಸಾಲ ಪಡೆಯುವಾಗ ಬ್ಯಾಂಕುಗಳಲ್ಲಿ ಬಡ್ಡಿ ದರ ಎಷ್ಟಿದೆ, ಎನ್‌ಬಿಎಫ್‌ಸಿಯಲ್ಲಿ ಬಡ್ಡಿ ದರ ಎಷ್ಟಿದೆ ಎಂಬುದನ್ನು ಮೊದಲು ಗಮನಿಸಿ ನಂತರ ಮುಂದುವರಿಯಿರಿ.

 

ಕ್ರೆಡಿಟ್ ಸ್ಕೋರ್ ಮತ್ತು ಸಾಲ

ಕ್ರೆಡಿಟ್ ಸ್ಕೋರ್ ಮತ್ತು ಸಾಲ

ಈಗಂತೂ ಸಾಲ ಪಡೆಯಬೇಕಾದರೆ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು. ಸಾಲ ತೀರಿಸುವ ನಿಮ್ಮ ಸಾಮರ್ಥ್ಯ ಎಷ್ಟಿದೆ ಮತ್ತು ನಿಮ್ಮ ಹಿಂದಿನ ಸಾಲ ಮರುಪಾವತಿಯ ಇತಿಹಾಸ ಏನು ಎಂಬುದನ್ನು ಕ್ರೆಡಿಟ್ ಸ್ಕೋರ್ ಬಿಂಬಿಸುತ್ತದೆ. ಬ್ಯಾಂಕಾಗಲೀ ಎನ್‌ಬಿಎಫ್‌ಸಿಯಾಗಲೀ ಸಾಲ ನೀಡುವ ಮೊದಲು ಗ್ರಾಹಕನ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತದೆ. ನೀವು ನಿವೇಶನ ಪತ್ರವನ್ನು ಅಡಮಾನವಾಗಿ ಇಟ್ಟರೂ ಕ್ರೆಡಿಟ್ ಸ್ಕೋರ್ ಉತ್ತಮವಾಗಿಲ್ಲದೇ ಇದ್ದಲ್ಲಿ ಬ್ಯಾಂಕುಗಳು ಸಾಲ ಕೊಡುವುದು ಅನುಮಾನ.

ಆದರೆ, ಎನ್‌ಬಿಎಫ್‌ಸಿಗಳು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಬಹುತೇಕ ಸಾಲ ಕೊಡುತ್ತವೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸ್ವಲ್ಪ ಹೆಚ್ಚು ಬಡ್ಡಿ ದರ ವಿಧಿಸುತ್ತವೆ. ಈ ಅಂಶವನ್ನೂ ನೀವು ಪರಿಗಣನೆಗೆ ತೆಗೆದುಕೊಳ್ಳಬಹುದು.

ಇನ್ನು, ಕಸ್ಟಮರ್ ಸರ್ವಿಸ್ ವಿಚಾರಕ್ಕೆ ಬಂದರೆ ಎನ್‌ಬಿಎಫ್‌ಸಿಗಳು ಹೆಚ್ಚು ಮುತುವರ್ಜಿ ತೋರುತ್ತವೆ ಎಂಬ ಮಾತಿದೆ. ಪ್ರತಿಯೊಬ್ಬ ಸಾಲ ಗ್ರಾಹಕರಿಗೂ ಸಹಾಯವಾಗಿ ಒಬ್ಬ ಪ್ರತಿನಿಧಿಯನ್ನು ನಿಯೋಜಿಸಲಾಗಿರುತ್ತದೆ. ಯಾವುದೇ ತೊಂದರೆ ಇದ್ದರೂ ಪರಿಹಾರ ಸಿಗುವ ಆಶಯ ಇರುತ್ತದೆ.

 

ಎನ್‌ಬಿಎಫ್‌ಸಿಗಳ ಟಾಪ್-10 ಪಟ್ಟಿ

ಎನ್‌ಬಿಎಫ್‌ಸಿಗಳ ಟಾಪ್-10 ಪಟ್ಟಿ

ಭಾರತದಲ್ಲಿ ಎನ್‌ಬಿಎಫ್‌ಸಿಗಳ ಸಂಖ್ಯೆ ಅಂದಾಜು 9 ಸಾವಿರಕ್ಕೂ ಹೆಚ್ಚು ಇವೆ. ಬ್ಯಾಂಕಿಂಗ್ ವ್ಯವಸ್ಥೆಗೆ ಪೂರಕವಾಗಿರುವಂತೆ ಮತ್ತು ಬ್ಯಾಂಕುಗಳಿಗೆ ಹೆಚ್ಚು ಹೊರೆಯಾಗಬಾರದೆಂಬ ಉದ್ದೇಶದಿಂದ ಎನ್‌ಬಿಎಫ್‌ಸಿಗಳಿಗೆ ಸರ್ಕಾರ ಉತ್ತೇಜನ ಕೊಡುತ್ತದೆ. ಇಂಥ ಸಾವಿರಾರು ಎನ್‌ಬಿಎಫ್‌ಸಿಗಳಲ್ಲಿ ಆಯ್ದ 10 ಹಣಕಾಸು ಸಂಸ್ಥೆಗಳು ಈ ಕೆಳಕಂಡಂತಿವೆ.

1) ಪವರ್ ಫೈನಾನ್ಸ್ ಕಾರ್ಪೊರೇಶನ್ ಲಿ
2) ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಕಂಪನಿ ಲಿ
3) ಬಜಾಜ್ ಫೈನಾನ್ಸ್ ಲಿ
4) ಮಹೀಂದ್ರ ಅಂಡ್ ಮಹೀಂದ್ರ ಫೈನಾನ್ಷಿಯಲ್ ಸರ್ವಿಸಸ್ ಲಿ
5) ಮುತೂಟ್ ಫೈನಾನ್ಸ್ ಲಿ
6) ಎಚ್‌ಡಿಬಿ ಫೈನಾನ್ಸ್ ಸರ್ವಿಸ್
7) ಚೋಳಮಂಡಲಂ ಇನ್ವೆಸ್ಟ್‌ಮೆಂಟ್ ಅಂಡ್ ಫೈನಾನ್ಸ್ ಕಂಪನಿ ಲಿ
8) ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವಿಸಸ್ ಲಿ
9) ಎಲ್ ಅಂಡ್ ಟಿ ಫೈನಾನ್ಸ್ ಲಿ
10) ಆದಿತ್ಯ ಬಿರ್ಲಾ ಫೈನಾನ್ಸ್ ಲಿ

 

English summary

Bank or NBFC; Which Is Better For Home Loan; Know The Difference in Kannada

Both bank and NBFC provide loans and receive deposits. But there is some difference in processing and swiftness in providing loan. Interest rate too can vary between them. Know few things before deciding on taking home loan.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X