For Quick Alerts
ALLOW NOTIFICATIONS  
For Daily Alerts

ತೆರಿಗೆ ದರ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಪ್ರಯೋಜನ ನೋಡಿ!

|

ಸಾಮಾನ್ಯವಾಗಿ ಇತರರಿಗಿಂತ ಹಿರಿಯ ನಾಗರಿಕರಿಗೆ ಎಲ್ಲ ವಿಚಾರದಲ್ಲಿ ವಿನಾಯಿತಿ, ಲಾಭ ಅಧಿಕವಾಗಿರುತ್ತದೆ. ಪ್ರಮುಖವಾಗಿ ಹಣಕಾಸು ಸಂಬಂಧಿತ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚು ಲಾಭದಾಯಕ ಯೋಜನೆಗಳಿವೆ. ಇದರ ಮುಖ್ಯ ಉದ್ದೇಶ ವಯಸ್ಸಾದ ಬಳಿಕ ಹಣಕಾಸು ಸಮಸ್ಯೆ ಉಂಟಾಗದ ವೃದ್ಧಾಪ್ಯ ಜೀವನ ಕಳೆಯಲಿ ಎಂಬುವುದು ಆಗಿದೆ.

 

ಬ್ಯಾಂಕ್‌ನಲ್ಲಿ ಫಿಕ್ಸಿಡ್ ಡೆಪಾಸಿಟ್ ಆಗಲಿ, ಆರ್‌ಡಿ ಆಗಲಿ, ಯಾವುದೇ ಹೂಡಿಕೆ ವ್ಯವಸ್ಥೆಯಾಗಲಿ ಹಿರಿಯ ನಾಗರಿಕರಿಗೆ ಹೆಚ್ಚು ಪ್ರಯೋಜನವಿರುತ್ತದೆ. ಫಿಕ್ಸಿಡ್ ಡೆಪಾಸಿಟ್‌ನಲ್ಲಿ ಹಿರಿಯ ನಾಗರಿಕರಿಗೆ ಸಾಮಾನ್ಯ ಜನರಿಗಿಂತ ಅಧಿಕ ಬಡ್ಡಿದರ ನೀಡಲಾಗುತ್ತದೆ. ಆರ್‌ಡಿಯಲ್ಲಿಯೂ ಕೂಡಾ ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿದರ ನೀಡಲಾಗುತ್ತದೆ.

ಅಟಲ್ ಪಿಂಚಣಿ ಯೋಜನೆ ಹೂಡಿಕೆ ನಿಯಮ ಬದಲಾವಣೆ, ಹೊಸತೇನು?

ಇನ್ನು ನಾವು ತೆರಿಗೆ ವಿಚಾರಕ್ಕೆ ಬಂದಾಗ ಹಿರಿಯ ನಾಗರಿಕರಿಗೆ ಹಾಗೂ ಅತೀ ಹಿರಿಯ ನಾಗರಿಕರಿಗೆ ಅಧಿಕ ಪ್ರಯೋಜನಗಳು ಇದೆ. ಹಿರಿಯ ನಾಗರಿಕರಿಗೆ ಹೆಚ್ಚು ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಆದಾಯದ ಮೇಲೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. 2022-23 ಹಣಕಾಸು ವರ್ಷದಲ್ಲಿ ಹಿರಿಯ ನಾಗರಿಕರಿಗೆ, ಅತೀ ಹಿರಿಯ ನಾಗರಿಕರಿಗೆ ಎಷ್ಟು ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಹಿರಿಯ ನಾಗರಿಕರಿಗೆ ಎಷ್ಟಿದೆ ತೆರಿಗೆ ವಿನಾಯಿತಿ

ಹಿರಿಯ ನಾಗರಿಕರಿಗೆ ಎಷ್ಟಿದೆ ತೆರಿಗೆ ವಿನಾಯಿತಿ

ಸಾಮಾನ್ಯ ಜನರಿಗಿಂತ ಹಿರಿಯ ನಾಗರಿಕರಿಗೆ ಅಧಿಕ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ವಾಸವಿರುವ ಹಿರಿಯ ನಾಗರಿಕರಿಗೆ 3,00,000 ರೂಪಾಯಿ ತೆರಿಗೆ ವಿನಾಯಿತಿ ಲಭ್ಯವಿದೆ. ಸಾಮಾನ್ಯ ಜನರಿಗೆ 2,50,000 ರೂಪಾಯಿವರೆಗೆ ತೆರಿಗೆ ವಿನಾಯಿತಿ ಇದೆ. incometaxindia.gov.in ಪ್ರಕಾರ ಸಾಮಾನ್ಯ ಜನರಿಗೆ ಇರುವ ತೆರಿಗೆ ವಿನಾಯಿತಿಗಿಂತ ಹಿರಿಯ ನಾಗರಿಕರಿಗೆ 50,000 ರೂಪಾಯಿ ಅಧಿಕ ತೆರಿಗೆ ವಿನಾಯಿತಿ ಇದೆ ಎಂಬುವುದುನ್ನು ನಾವು ಇಲ್ಲಿ ಗಮನಿಸಬಹುದು.

 ಅತೀ ಹಿರಿಯ ನಾಗರಿಕರಿಗೆ ಎಷ್ಟು ತೆರಿಗೆ ವಿನಾಯಿತಿ?

ಅತೀ ಹಿರಿಯ ನಾಗರಿಕರಿಗೆ ಎಷ್ಟು ತೆರಿಗೆ ವಿನಾಯಿತಿ?

ಅತೀ ಹಿರಿಯ ನಾಗರಿಕರಿಗೆ ಇತರೆ ಜನರಿಗಿಂತ ಅಧಿಕ ತೆರಿಗೆ ವಿನಾಯಿತಿಯನ್ನು ನೀಡಲಾಗುತ್ತದೆ. 2022-23ರ ಹಣಕಾಸು ವರ್ಷದಲ್ಲಿ ಅತೀ ಹಿರಿಯ ನಾಗರಿಕರಿಗೆ 5,00,000 ರೂಪಾಯಿ ತೆರಿಗೆ ವಿನಾಯಿತಿ ಇದೆ. ಹಿರಿಯ ನಾಗರಿಕರಿಗೆ 3,00,000 ರೂಪಾಯಿ ಹಾಗೂ ಸಾಮಾನ್ಯ ಜನರಿಗೆ 2,50,000 ರೂಪಾಯಿವರೆಗೆ ತೆರಿಗೆ ವಿನಾಯಿತಿ ಇದೆ. ನಾವು ಇದನ್ನು ಹೋಲಿಕೆ ಮಾಡಿದಾಗ ಹಿರಿಯ ನಾಗರಿಕರು ಹಾಗೂ ಸಾಮಾನ್ಯ ಜನರಿಗಿಂತ ಅಧಿಕ ತೆರಿಗೆ ವಿನಾಯಿತಿ 80 ವರ್ಷಕ್ಕಿಂತ ಅಧಿಕ ವಯಸ್ಸಿನವರಿಗೆ ಲಭ್ಯವಾಗುತ್ತದೆ. ಸಾಮಾನ್ಯ ನಾಗರಿಕರಿಗಿಂತ 2,50,000 ರೂಪಾಯಿ ಅಧಿಕ ತೆರಿಗೆ ವಿನಾಯಿತಿ ಲಭ್ಯವಿದೆ.

 ತೆರಿಗೆ ವಿನಾಯಿತಿ ಪಡೆಯಲಿರುವ ಮಾನದಂಡ
 

ತೆರಿಗೆ ವಿನಾಯಿತಿ ಪಡೆಯಲಿರುವ ಮಾನದಂಡ

ನಾವು ಹಿರಿಯ ನಾಗರಿಕರಿಗೆ ಮತ್ತು ಅತೀ ಹಿರಿಯ ನಾಗರಿಕರಿಗೆ ಲಭ್ಯವಿರುವ ತೆರಿಗೆ ವಿನಾಯಿತಿಯನ್ನು ನೋಡುವಾಗ ಪ್ರಮುಖವಾದ ಒಂದು ವಿಚಾರವನ್ನು ತಿಳಿದಿರಬೇಕಾಗುತ್ತದೆ. ಈ ತೆರಿಗೆ ವಿನಾಯಿತಿಯು ದೇಶದಲ್ಲಿ ವಾಸವಿರುವ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯವಿರಲಿದೆ. ಭಾರತದಲ್ಲಿ ವಾಸವಿಲ್ಲದ ಹಿರಿಯ ನಾಗರಿಕರಿಗೆ ಈ ತೆರಿಗೆ ವಿನಾಯಿತಿಯು ಲಭ್ಯವಿರುವುದಿಲ್ಲ.

 ಹಿರಿಯ ನಾಗರಿಕರು, ಅತೀ ಹಿರಿಯ ನಾಗರಿಕರು ಯಾರು?

ಹಿರಿಯ ನಾಗರಿಕರು, ಅತೀ ಹಿರಿಯ ನಾಗರಿಕರು ಯಾರು?

ಭಾರತದಲ್ಲಿ ಹಿರಿಯ ನಾಗರಿಕರಲ್ಲಿ ಎರಡು ವಿಭಾಗವನ್ನು ಮಾಡಲಾಗುತ್ತದೆ. 60 ವರ್ಷಕ್ಕಿಂತ ಅಧಿಕ ವಯಸ್ಸಿನವರನ್ನು ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಹಿರಿಯ ನಾಗರಿಕರು ಎಂದು ಕರೆದರೆ, 80 ವರ್ಷಕ್ಕಿಂತ ಅಧಿಕ ವಯಸ್ಸಿನವರನ್ನು ಭಾರತದಲ್ಲಿ ಅತೀ ಹಿರಿಯ ನಾಗರಿಕರು ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲೇ ವಾಸವಾಗಿರುವ ಭಾರತೀಯ ನಾಗರಿಕರಾದರೆ ಮಾತ್ರ ಈ ತೆರಿಗೆ ವಿನಾಯಿತಿ ಲಭ್ಯವಾಗಲಿದೆ.

 ಹಿರಿಯ ನಾಗರಿಕರಿಗೆ ಇರುವ ಯೋಜನೆಗಳು

ಹಿರಿಯ ನಾಗರಿಕರಿಗೆ ಇರುವ ಯೋಜನೆಗಳು

ಭಾರತದಲ್ಲಿ ಹಿರಿಯ ನಾಗರಿಕರಿಗೆ ಹಲವಾರು ಪಿಂಚಣಿ ಯೋಜನೆಗಳು ಇದೆ. ರಾಷ್ಟ್ರೀಯ ಪಿಂಚಣಿ ಯೋಜನೆ, ಅಟಲ್ ಪಿಂಚಣಿ ಯೋಜನೆ, ಪ್ರಧಾನ ಮಂತ್ರಿ ವಯವಂದನ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ಹಿರಿಯ ನಾಗರಿಕರ ಪಿಂಚಣಿ ಯೋಜನೆ, ಉದ್ಯೋಗಿಗಳ ಪಿಂಚಣಿ ಯೋಜನೆ, ವರಿಷ್ಠ ಪಿಂಚಣಿ ಬಿಮಾ ಯೋಜನೆ ಪ್ರಮುಖ ಯೋಜನೆಗಳು ಆಗಿದೆ.

English summary

Benefits For Senior Citizens, Very Senior Citizens In Respect Of Tax Rates, Explained in Kannada

Senior citizens and a very senior citizen are granted a higher exemption limit as compared to normal tax payers, Explained in Kannada. Read on.
Story first published: Friday, August 12, 2022, 13:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X