For Quick Alerts
ALLOW NOTIFICATIONS  
For Daily Alerts

ಉಚಿತವಾಗಿ ಡಿಮ್ಯಾಟ್ ಅಕೌಂಟ್ ತೆರೆಯಲು ಇಲ್ಲಿ ನೋಡಿ

|

ನೀವು ಷೇರುಗಳನ್ನು ಖರೀದಿ ಮಾಡಲು ಮತ್ತು ಹೊಂದಲು ಬಯಸಿದರೆ ಡಿಮ್ಯಾಟ್ ಖಾತೆಯ ಅವಶ್ಯಕತೆ ಇದೆ. ಯಾವುದೇ ಶುಲ್ಕವಿಲ್ಲದೆ ಡಿಮ್ಯಾಟ್ ಖಾತೆಯನ್ನು ತೆರೆಯಲು ಎದುರು ನೋಡುತ್ತಿದ್ದವರಿಗೆ ಇಲ್ಲಿದೆ ಮಾಹಿತಿ.

ಉಳಿತಾಯ ಖಾತೆಯಂತೆಯೇ ಕಾರ್ಯನಿರ್ವಹಿಸುವ ಡಿಮ್ಯಾಟ್ ಖಾತೆಯಲ್ಲಿ ಕೇವಲ ಒಂದು ಬದಲಾವಣೆ ಎಂದರೆ ಉಳಿತಾಯ ಖಾತೆಯಲ್ಲಿ ಹಣ ಬಾಕಿ ಇರುವುದು ಮತ್ತು ಡಿಮ್ಯಾಟ್ ಖಾತೆಯಲ್ಲಿ ಷೇರುಗಳನ್ನು ಹಿಡಿದಿಟ್ಟುಕೊಳ್ಳುವುದು. ನೀವು ಡಿಮ್ಯಾಟ್ ಖಾತೆಯನ್ನು ಹೊಂದಿಲ್ಲದಿದ್ದರೆ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ.

ಡಿಮ್ಯಾಟ್ ಖಾತೆ ತೆರೆಯುವುದು ಹೇಗೆ?

ಡಿಮ್ಯಾಟ್ ಖಾತೆ ತೆರೆಯಲು ಮೊದಲು ನೀವು ಬ್ರೋಕಿಂಗ್ ಖಾತೆಯನ್ನು ತೆರೆಯುವ ದಲ್ಲಾಳಿಗಳಲ್ಲಿ(ಬ್ರೋಕರ್) ಒಬ್ಬರನ್ನು ಕರೆಯಬೇಕು. ಅವರು ನಿಮಗೆ ಖಾತೆಯನ್ನು ತೆರೆಯಲು ಸಹಾಯ ಮಾಡುವರು ಜೊತೆಗೆ ಖಾತೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.

ಡಿಮ್ಯಾಟ್ ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳು

ಪ್ಯಾನ್ ಕಾರ್ಡ್

ಪಾಸ್‌ಪೋರ್ಟ್‌ ಅಳತೆಯ ಫೋಟೋ

ವಿಳಾಸ ದಾಖಲೆ ಪತ್ರ (ಅಡ್ರೆಸ್ ಪ್ರೂಫ್)

ಗುರುತಿನ ಪ್ರಮಾಣ ಪತ್ರ

ಬ್ಯಾಂಕ್ ಖಾತೆ ಸಂಖ್ಯೆ

ಗುರುತಿನ ಪ್ರಮಾಣಕ್ಕೆ ಈ ಕೆಳಗಿನವುಗಳಲ್ಲಿ ಯಾವುದಾದರೊಂದನ್ನು ನೀಡಬಹುದು

ಪಾಸ್ ಪೋರ್ಟ್

ಚುನಾವಣಾ ಗುರುತಿನ ಚೀಟಿ

ಚಾಲನೆ ಪರವಾನಗಿ ಚೀಟಿ (ಡ್ರೈವಿಂಗ್ ಲೈಸೆನ್ಸ್)

ಪ್ಯಾನ್ ಕಾರ್ಡ್ (ಭಾವಚಿತ್ರದೊಂದಿಗೆ)

ಪ್ರಸ್ತುತ ಅನೇಕ ದಲ್ಲಾಳಿ ಸಂಸ್ಥೆಗಳು ಉಚಿತವಾಗಿ ಡಿಮ್ಯಾಟ್ ಖಾತೆಯನ್ನು ನೀಡುತ್ತಿವೆ. ಅವುಗಳಲ್ಲಿ ಕೆಲವನ್ನು ನಾವು ಈ ಕೆಳಗೆ ತಿಳಿಸಿದ್ದೇವೆ.

1. ಕಾರ್ವಿ ಆನ್‌ಲೈನ್ ಉಚಿತ ಡಿಮ್ಯಾಟ್ ಖಾತೆ

1. ಕಾರ್ವಿ ಆನ್‌ಲೈನ್ ಉಚಿತ ಡಿಮ್ಯಾಟ್ ಖಾತೆ

ಕಾರ್ವಿ ಆನ್‌ಲೈನ್ ಉಚಿತ ಡಿಮ್ಯಾಟ್ ಖಾತೆಯನ್ನು ನೀಡುತ್ತದೆ ಮತ್ತು ಬ್ರೋಕ್‌ರೇಜ್‌ಗಳನ್ನು 5,500 ರುಪಾಯಿವರೆಗೂ ರಿವರ್ಸ್ ಮಾಡುವ ಅವಕಾಶವನ್ನು ನೀಡುತ್ತದೆ. ಬ್ರೋಕರೇಜ್ ರಿವರ್ಸಲ್ ಪಡೆಯಲು ದಯವಿಟ್ಟು ನಿಯಮಗಳು ಮತ್ತು ಷರತ್ತುಗಳನ್ನು ಅಧ್ಯಯನ ಮಾಡಿ.

ಈ ಕಂಪನಿಯು ತನ್ನ ಗ್ರಾಹಕರಿಗೆ ಉಚಿತ ಸಲಹಾ ಸೇವೆಗಳು ಮತ್ತು ಸಂಶೋಧನಾ ವರದಿಯನ್ನು ಸಹ ನೀಡುತ್ತದೆ. ಕಾರ್ವಿ ಆನ್‌ಲೈನ್ ಸುದೀರ್ಘ ಸೇವೆ ಸಲ್ಲಿಸಿದ ದಾಖಲೆಯನ್ನು ಹೊಂದಿದೆ.

 

2. ಅಪ್‌ಸ್ಟಾಕ್ಸ್ ಉಚಿತ ಡಿಮ್ಯಾಟ್ ಖಾತೆ

2. ಅಪ್‌ಸ್ಟಾಕ್ಸ್ ಉಚಿತ ಡಿಮ್ಯಾಟ್ ಖಾತೆ

ಅಪ್‌ಸ್ಟಾಕ್ಸ್ ಉಚಿತ ಡಿಮ್ಯಾಟ್ ಖಾತೆಯನ್ನು ನೀಡುವ ಮತ್ತೊಂದು ಸಂಸ್ಥೆಯಾಗಿದೆ. ಆಸಕ್ತಿದಾಯಕ ಸಂಗತಿಯೆಂದರೆ, ಈಕ್ವಿಟಿ ವಿತರಣೆಗಳು ಉಚಿತವಾದರೆ, ಇಂಟ್ರಾ-ಡೇ ಮಾಡುವವರಿಗೆ 20 ರುಪಾಯಿ ಶುಲ್ಕವನ್ನು ವಿಧಿಸುತ್ತದೆ. ಇದು ಸ್ವಲ್ಪ ಮಟ್ಟಿನ ಕಡಿಮೆ ಶುಲ್ಕವಾಗಿದ್ದು, ಹಣ ಉಳಿತಾಯ ಮಾಡುತ್ತದೆ.

3. ಮೋತಿಲಾಲ್ ಓಸ್ವಾಲ್ ಉಚಿತ ಡಿಮ್ಯಾಟ್ ಖಾತೆ

3. ಮೋತಿಲಾಲ್ ಓಸ್ವಾಲ್ ಉಚಿತ ಡಿಮ್ಯಾಟ್ ಖಾತೆ

ಮೋತಿಲಾಲ್ ಓಸ್ವಾಲ್ ಕೂಡ ಉಚಿತ ಡಿಮ್ಯಾಟ್ ಖಾತೆಯನ್ನು ನೀಡುತ್ತದೆ. ಸಂಶೋಧನೆ ಮತ್ತು ಸಲಹಾ ಸೇವೆಗಳ ಮೂಲಕ ನೀವು ಈ ಸಾಧನಗಳಲ್ಲಿ ವ್ಯಾಪಾರ ಮಾಡಬಹುದು ಮತ್ತು ಕಂಪನಿಯ ಬ್ಯಾಕಪ್ ಬೆಂಬಲವನ್ನು ಪಡೆಯಬಹುದು. ಮೋತಿಲಾಲ್ ಓಸ್ವಾಲ್ 21ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ 230ಕ್ಕೂ ಹೆಚ್ಚು ಕಂಪನಿಗಳ 30 ಸಾವಿರಕ್ಕೂ ಹೆಚ್ಚು ಸಂಶೋಧನಾ ವರದಿಗಳನ್ನು ನೀಡುತ್ತದೆ. ದೈನಂದಿನ, ವಾರ ಮತ್ತು ತಿಂಗಳಿನ ಆದಾರದ ಮೇಲೆ ತಜ್ಞರಿಂದ ಶಿಫಾರಸುಗಳನ್ನು ನೀಡುತ್ತದೆ.

4. ಸ್ಯಾಮ್ಕೊ ಉಚಿತ ಡಿಮ್ಯಾಟ್ ಖಾತೆ

4. ಸ್ಯಾಮ್ಕೊ ಉಚಿತ ಡಿಮ್ಯಾಟ್ ಖಾತೆ

ಸ್ಯಾಮ್ಕೊ ಉಚಿತ ಡಿಮ್ಯಾಟ್ ಖಾತೆಯನ್ನು ನೀಡುವ ಮತ್ತೊಂದು ಕಂಪನಿಯಾಗಿದೆ. ಕಂಪನಿಯು ಮೊದಲ ತಿಂಗಳು ತನ್ನ ಬ್ರೋಕರೇಜ್ ನಲ್ಲಿ ಶೇಕಡಾ 100ರಷ್ಟು ಹಣವನ್ನು ಹಿಂದಿರುಗಿಸುತ್ತದೆ. ಗ್ರಾಹಕರ ವಹಿವಾಟನ್ನು ಲೆಕ್ಕಿಸದೆ ಪ್ರತಿ ವಹಿವಾಟಿಗೆ 20 ರುಪಾಯಿ ಶುಲ್ಕವನ್ನು ವಿಧಿಸುತ್ತದೆ. ಈ ಕಂಪನಿಯ ಮೊಬೈಲ್ ಆ್ಯಪ್ ಉತ್ತಮವಾಗಿದ್ದು ವ್ಯಾಪಾರ ಮಾಡಲು ಸುಲಭವಾಗಿದೆ.

5. ಏಂಜಲ್ ಬ್ರೋಕಿಂಗ್ ಉಚಿತ ಡಿಮ್ಯಾಟ್ ಖಾತೆ

5. ಏಂಜಲ್ ಬ್ರೋಕಿಂಗ್ ಉಚಿತ ಡಿಮ್ಯಾಟ್ ಖಾತೆ

ಮೇಲೆ ತಿಳಿಸಲಾಗಿರುವ ಎಲ್ಲರಂತೆ ಏಂಜಲ್ ಬ್ರೋಕಿಂಗ್ ಸಹ ಉಚಿತ ಡಿಮ್ಯಾಟ್ ಖಾತೆಯನ್ನು ನೀಡುತ್ತದೆ. ಈಕ್ವಿಟಿ ವಿತರಣಾ ಆಧಾರಿತ ವಹಿವಾಟು ಉಚಿತವಾಗಿದೆ. ವ್ಯಾಪಾರದ ಮೌಲ್ಯವನ್ನು ಲೆಕ್ಕಿಸದೆ ಇಂಟ್ರಾ-ಡೇ ವಹಿವಾಟು ಶುಲ್ಕಗಳು ಕೇವಲ 20 ರುಪಾಯಿ. ಈ ಕಂಪನಿಯಲ್ಲಿ ಕಾಗದರಹಿತವಾಗಿ ಖಾತೆ ತೆರೆಯಬಹುದು.

6. ರಿಲಯನ್ಸ್ ಸ್ಮಾರ್ಟ್ ಮನಿ ಉಚಿತ ಡಿಮ್ಯಾಟ್ ಖಾತೆ

6. ರಿಲಯನ್ಸ್ ಸ್ಮಾರ್ಟ್ ಮನಿ ಉಚಿತ ಡಿಮ್ಯಾಟ್ ಖಾತೆ

ರಿಲಯನ್ಸ್ ಸ್ಮಾರ್ಟ್ ಮನಿ ಕೂಡ ಉಚಿತ ಡಿಮ್ಯಾಟ್ ಖಾತೆಯನ್ನು ನೀಡುತ್ತದೆ. ಯಾವುದೇ ಶುಲ್ಕವಿಲ್ಲದೆ ಖಾತೆ ತೆರೆಬಹುದಾಗಿದೆ. ಈ ಕಂಪನಿಯ ವೇದಿಕೆಯು ಉತ್ತಮವಾಗಿದ್ದು, ಹೂಡಿಕೆದಾರರ ಸಂಶೋಧನೆಯಿಂದ ಖಾತೆಯು ಸಹ ಬೆಂಬಲಿತವಾಗಿದೆ.

7. 5 ಪೈಸಾ. ಕಾಮ್ ಉಚಿತ ಡಿಮ್ಯಾಟ್ ಖಾತೆ

7. 5 ಪೈಸಾ. ಕಾಮ್ ಉಚಿತ ಡಿಮ್ಯಾಟ್ ಖಾತೆ

ಉಚಿತ ಡಿಮ್ಯಾಟ್ ಮತ್ತು ವ್ಯಾಪಾರ ಖಾತೆಯನ್ನು ತೆರೆಯಲು ಪೈಸಾ.ಕಾಮ್ ಉತ್ತಮ ಸ್ಥಳವಾಗಿದೆ. ಇಲ್ಲಿ ಪ್ರತಿ ವಹಿವಾಟಿಗೆ ಕೇವಲ 10 ರುಪಾಯಿ ವಿಧಿಸಲಾಗುತ್ತದೆ. ಅಲ್ಲದೆ ನಿಮ್ಮ ಎಲ್ಲಾ ಹೂಡಿಕೆಗಳನ್ನು ಒಂದೇ ವೇದಿಕೆಯಲ್ಲಿ ನಿರ್ವಹಿಸಬಹುದು.

ಉಚಿತ ಡಿಮ್ಯಾಟ್ ಖಾತೆ ತೆರೆಯಲು ಹಲವು ಸ್ಥಳಗಳಿವೆ. ಆದಾಗ್ಯೂ, ನೀವು ಕಂಪನಿಯು ವಿಧಿಸುವ ಇತರ ಶುಲ್ಕಗಳನ್ನು ಗಮನಿಸಬೇಕಾಗಿರುವುದು ಬಹಳ ಮುಖ್ಯ. ಇವುಗಳಲ್ಲಿ ವಹಿವಾಟು ಶುಲ್ಕಗಳು ಮತ್ತು ಸಂಸ್ಕರಣಾ ಒಳಗೊಂಡಿರುತ್ತದೆ. ನೀವು ಉಚಿತ ಖಾತೆಯನ್ನು ತೆರೆದರೂ ವಹಿವಾಟು ಶುಲ್ಕಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಖಾತೆಯನ್ನು ತೆರೆಯುವ ಮೊದಲು ಎಲ್ಲಾ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಅಲ್ಲದೆ ಖಾತೆಯನ್ನು ತೆರೆಯುವ ಮೊದಲೇ ನೀವು ಸ್ವಲ್ಪ ತಿಳಿದುಕೊಂಡು ಮುಂದುವರಿಯುವುದು ಒಳಿತು.

 

English summary

Best Places To Open A Free Demat Account In India

If you need to have a demat account, These are the 7 best places to open a free demat account in india.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X