For Quick Alerts
ALLOW NOTIFICATIONS  
For Daily Alerts

ಐದು ಮಂದಿ ಶತ ಕೋಟ್ಯಧಿಪತಿಗಳು ಹೇಳಿದ ಬದುಕಿನ ಅದ್ಭುತ ಸೂತ್ರಗಳು

|

ಈ ವಿಶ್ವದಲ್ಲಿ 2,604ಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಶತಕೋಟ್ಯಧಿಪತಿಗಳು ಇದ್ದಾರೆ. ಅಥವಾ ಅವರ ಸಂಖ್ಯೆ ಭೂಮಿ ಮೇಲಿನ ಒಟ್ಟು ಜನಸಂಖ್ಯೆಯ 0.0002ನಷ್ಟಿದೆ. ಈ ಶತಕೋಟ್ಯಧಿಪತಿಗಳಲ್ಲಿ 67 ಪರ್ಸೆಂಟ್ ನಷ್ಟು ಮಂದಿ ತಾವೇ ಈ ಎತ್ತರಕ್ಕೆ ಏರಿದವರು. ಅಪ್ಪ- ಅಮ್ಮ ಹಾಗೂ ಕುಟುಂಬದ ಹಿನ್ನೆಲೆಯ ಬೆಂಬಲ ಇಲ್ಲದೆ ಈ ಎತ್ತರಕ್ಕೆ ಏರಿದವರು.

ಈ ಹಂತವನ್ನು ತಲುಪುವುದು ಅಷ್ಟು ಸಲೀಸಾದ ಸಂಗತಿ ಅಲ್ಲ. ಯಶಸ್ಸು ಸುಮ್ಮಸುಮ್ಮನೆ ಸಿಕ್ಕಿಬಿಡಲ್ಲ. ಇಲ್ಲಿ ಯಶಸ್ಸು ಅಂದರೆ, ವೃತ್ತಿ ಬದುಕಿನಲ್ಲಿ ಅವರು ಸಾಧಿಸಿರುವ ಎತ್ತರ. ತಮ್ಮ ಪಯಣದಲ್ಲಿ ಪಡೆದುಕೊಂಡ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಎಲ್ಲರೂ ಅಲ್ಲ. ಆಯ್ದ ಐವರ ಸಲಹೆಯನ್ನು ನಿಮಗಾಗಿ ಇಲ್ಲಿ ನೀಡಲಾಗುತ್ತಿದೆ.

ಅವುಗಳು ನಿಜಕ್ಕೂ ಅಷ್ಟು ಮೌಲ್ಯಯುತವಾಗಿವೆ ಎಂದರೆ ಆರಿಸಿಕೊಳ್ಳಿ, ಅಳವಡಿಸಿಕೊಳ್ಳಿ. ನಿಮ್ಮ ಸ್ನೇಹಿತರು- ಸಂಬಂಧಿಕರು, ಪ್ರೀತಿಪಾತ್ರರಿಗೂ ತಿಳಿಸಿ.

ವಾರೆನ್ ಬಫೆಟ್
 

ವಾರೆನ್ ಬಫೆಟ್

"ನೀವು ಮಾಡಬಹುದಾದ ಅತ್ಯುತ್ತಮವಾದ ಹೂಡಿಕೆ ಅಂದರೆ, ನಿಮ್ಮ ಮೇಲೆ ನೀವು ಮಾಡಬಹುದಾದ ಬಂಡವಾಳ ಹೂಡಿಕೆ. ಬರವಣಿಗೆ ಇರಲಿ, ಮೌಖಿಕವಾಗಿ ಇರಲಿ ಅದ್ಭುತವಾದ ಸಂವಹನ ಕೌಶಲ ಬೆಳೆಸಿಕೊಳ್ಳಿ. ಇದರಿಂದ ನಿಮ್ಮ ಮೌಲ್ಯ ಕನಿಷ್ಠ ಐವತ್ತು ಪರ್ಸೆಂಟ್ ಹೆಚ್ಚಾಗುತ್ತದೆ. ನೀವು ಮತ್ತೊಬ್ಬರಿಗೆ ಏನು ಹೇಳಬೇಕೋ ಅದನ್ನು ತಿಳಿಸಲು ಆಗದಿದ್ದರೆ ಕತ್ತಲಲ್ಲಿ ನಿಂತು ಸುಂದರವಾದ ಹುಡುಗಿಗೆ ಕಣ್ಣು ಮಿಟುಕಿಸಿದ ಹಾಗೆ. ಅದರಿಂದ ಯಾವುದೇ ಪ್ರಯೋಜನ ಇಲ್ಲ" ಎನ್ನುತ್ತಾರೆ ಹೂಡಿಕೆಯ ಜಗದ್ಗುರು ವಾರೆನ್ ಬಫೆಟ್.

"ನಿಮಗಿರುವುದು ಒಂದೇ ದೇಹ ಮತ್ತು ಒಂದೇ ಮನಸು. ಅದರ ಬಗ್ಗೆ ಚಿಕ್ಕ ವಯಸ್ಸಿನಿಂದಲೇ ಗಮನ ನೀಡಿ. ಐವತ್ತನೇ ವಯಸ್ಸಿನಿಂದ ಅದರ ಬಗ್ಗೆ ಎಚ್ಚರ ವಹಿಸುತ್ತೀನಿ ಎನ್ನಲು ಆಗಲ್ಲ. ಏಕೆಂದರೆ ಅಷ್ಟರಲ್ಲಾಗಲೇ ಅವು ದುರ್ಬಲ ಆಗಿಬಿಟ್ಟಿರುತ್ತವೆ. ಆದ್ದರಿಂದ ಆಗ ನೀವೇನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಈ ವಿಚಾರದಲ್ಲೂ ನಿಮ್ಮ ಮೇಲೆ ಹೂಡಿಕೆ ಮಾಡಿ, ಅದನ್ನು ಯಾರೂ ಕದಿಯಲು ಆಗಲ್ಲ" ಎನ್ನುತ್ತಾರೆ ಬಫೆಟ್.

"ನಿಮ್ಮ ಯಶಸ್ಸು ಗೊತ್ತಾಗುವುದು ಅರವತ್ತೈದು- ಎಪ್ಪತ್ತು ಮತ್ತು ನಂತರದ ವಯಸ್ಸಿನಲ್ಲಿ. ನೀವು ಪ್ರೀತಿಸುವ ಜನರು ನಿಮ್ಮನ್ನು ನಿಜವಾಗಲೂ ಪ್ರೀತಿಸಬೇಕಾದ ಸಮಯ ಅದು. ಹಾಗೆ ಅದು ಸಾಧ್ಯವಾದರೆ ನೀವು ಯಶಸ್ಸು ಸಾಧಿಸಿದಂತೆಯೇ" ಎನ್ನುತ್ತಾರೆ.

ಜೆಫ್ ಬೆಜೋಸ್

ಜೆಫ್ ಬೆಜೋಸ್

ಅಮೆಜಾನ್ ನಂತಹ ದೊಡ್ಡ ಕಂಪೆನಿ ಆಗುವ ಮುಂಚೆ, ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಗ್ಯಾರೇಜ್ ನಲ್ಲಿ ಪುಸ್ತಕ ಮಾರಾಟ ಮಾಡುವುದರೊಂದಿಗೆ ಆರಂಭವಾದ ಬೆಜೋಸ್ ಪಯಣವು ಇಂದು ಅವರ ಬಳಿ ನೂರು ಬಿಲಿಯನ್ ಡಾಲರ್ ಗೂ ಹೆಚ್ಚು ಆಸ್ತಿ ಇದೆ. ಅವರು ನೀಡುವ ಮುಖ್ಯ ಸಲಹೆ ಏನೆಂದರೆ, ಬದಲಾವಣೆಗೆ ಮುಕ್ತ ಮನಸ್ಥಿತಿ ಹೊಂದಿರಬೇಕು.

"ಯಾವುದೇ ಮಾಹಿತಿ ದೊರೆಯದಿದ್ದರೂ ತಮ್ಮ ಮನಸು ಬದಲಿಸುವ ಸರಿಯಾದ ಜನರನ್ನು ನಾನು ನೋಡಿದ್ದೇನೆ" ಎನ್ನುತ್ತಾರೆ ಬೆಜೋಸ್. "ಆರಂಭದಲ್ಲಿ ಅವರ ಬಳಿ ಯಾವ ಡೇಟಾ ಇರುತ್ತದೋ ಅದೇ ಇರುತ್ತದೆ. ಆದರೆ ಅವರು ಎಚ್ಚರವಾಗಿ ಎಲ್ಲ ವಿಷಯಗಳನ್ನು ಪುನರಾವಲೋಕನ ಮಾಡುತ್ತಾರೆ. ಮತ್ತೆ ಹೊಸದಾಗಿ ತೀರ್ಮಾನಕ್ಕೆ ಬರುತ್ತಾರೆ ಹಾಗೂ ತಮ್ಮ ಮನಸನ್ನು ಬದಲಾಯಿಸುತ್ತಾರೆ" ಎನ್ನುತ್ತಾರೆ.

ಜೀವನದಲ್ಲಿ ಯಶಸ್ಸು ಪಡೆದವರು ಯಾವುದು ನಂಬಿಕೆ ಅಥವಾ ಯಾವುದು ಪೂರ್ವಗ್ರಹ ಎಂಬುದನ್ನು ಗುರುತಿಸುತ್ತಾರೆ. ಯಾವುದರ ಬಗ್ಗೆ ಅನುಮಾನ ಬರುತ್ತದೋ ಆಗ ಸಾಕ್ಷಿಗಳನ್ನು ಹುಡುಕಿಕೊಳ್ಳುತ್ತಾರೆ. ಇಂಥ ಮನಸ್ಥಿತಿ ಇದ್ದರೆ ನಿಮ್ಮ ಬಿಜಿನೆಸ್ ಹೆಚ್ಚು ಕ್ರಿಯೇಟಿವ್, ಹೆಚ್ಚು ಯಶಸ್ವಿ ಆಗುತ್ತದೆ.

ಬಿಲ್ ಗೇಟ್ಸ್
 

ಬಿಲ್ ಗೇಟ್ಸ್

ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಅದೆಷ್ಟು ಅಂಕಿಗಳು ಹೆಚ್ಚುತ್ತಾ ಹೋಗುತ್ತದೋ ಅಷ್ಟು ಪ್ರಮಾಣದಲ್ಲಿ ತಲೆಯಲ್ಲಿ ನಾನಾ ಬಗೆಯ 'ಹುಳ'ಗಳು ಓಡಾಡುತ್ತವೆ. ಆದರೆ ತನ್ನ ಮೂವತ್ತೊಂದನೇ ವಯಸ್ಸಿಗೆ ಶತಕೋಟ್ಯಧಿಪತಿ ಆದ ಬಿಲ್ ಗೇಟ್ಸ್ ಏನು ಹೇಳುತ್ತಾರೆ ಗೊತ್ತಾ? ಯಾವಾಗೆಲ್ಲ ನನ್ನೊಳಗೆ ಅಹಂಕಾರ ತಲೆ ಎತ್ತುತ್ತದೆ ಎಂಬ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುತ್ತೀನಿ ಎನ್ನುತ್ತಾರೆ.

ಪ್ರತಿ ರಾತ್ರಿ ಊಟದ ನಂತರ ತಟ್ಟೆ- ಪಾತ್ರೆಗಳನ್ನು ತೊಳೆದಿಡುವ, ತಾನೇ ಕಾರು ಡ್ರೈವ್ ಮಾಡಿಕೊಂಡು ಮಕ್ಕಳನ್ನು ಶಾಲೆಗೆ ಹೋಗಿಬಿಡುವ ಬಿಲ್ ಗೇಟ್ಸ್ ವಿನಯವಂತಿಕೆಗೆ ಉದಾಹರಣೆಯಾಗಿ ಸಿಗುತ್ತಾರೆ. "ನಾನು ಯಾವಾಗೆಲ್ಲ ಅಹಂಕಾರದಿಂದ ಊದಿಕೊಂಡ ಬಲೂನಿನಂತೆ ಆಗುತ್ತೇನೋ ಆಗೆಲ್ಲ ಅದಕ್ಕೆ ಸೂಜಿ ಮೊನೆ ತಾಗಿಸುವವರು ನನ್ನ ಸುತ್ತ ಇದ್ದಾರೆ. ಅದರಲ್ಲಿ ನನ್ನ ಹೆಂಡತಿ ಮೆಲಿಂಡಾ, ಅತ್ಯಾಪ್ತ ಸ್ನೇಹಿತ ವಾರೆನ್ ಬಫೆಟ್ ಇದ್ದಾರೆ" ಎಂದು ಬಿಲ್ ಗೇಟ್ಸ್ ಹೇಳಿಕೊಂಡಿದ್ದಾರೆ.

ನನ್ನ ಚಿಕ್ಕ ಮಗಳು ಇನ್ ಸ್ಟಾಗ್ರಾಮ್ ನಲ್ಲಿ, ಮತ್ತೊಂದು ಮಗು ವಾಟ್ಸಾಪ್ ನಲ್ಲಿ ಸಂವಹನ ಮಾಡುವುದರಿಂದ ಅವೆರಡು ಬಳಸುತ್ತೇನೆ ಎಂದು ಕಾರ್ಯಕ್ರಮವೊಂದರಲ್ಲಿ ಗೇಟ್ಸ್ ಹೇಳಿದ್ದರು. ಮಕ್ಕಳ ಮನವಿ ಕೇಳಿಸಿಕೊಳ್ಳದಿದ್ದರೆ, ಅವರ ಬಗ್ಗೆ ನಾನು ಅಷ್ಟಾಗಿ ಗಮನ ನೀಡುತ್ತಿಲ್ಲ ಎಂಬುದನ್ನು ಹೇಳುತ್ತಾರೆ ಎನ್ನುತ್ತಾರೆ ಬಿಲ್ ಗೇಟ್ಸ್.

ಜಾಕ್ ಮಾ

ಜಾಕ್ ಮಾ

ನಾನೇ ಶತಕೋಟ್ಯಧಿಪತಿ ಆಗಬಹುದು ಅಂದರೆ ಯಾರು ಬೇಕಾದರೂ ಶ್ರೀಮಂತರಾಗಬಹುದು ಎನ್ನುತ್ತಾರೆ 'ಅಲಿಬಾಬ' ಸ್ಥಾಪಕ ಜಾಕ್ ಮಾ. ಅವರು ಚೀನಾದವರು. ಇಂಗ್ಲಿಷ್ ಶಿಕ್ಷಕ ಆಗುವ ಮುನ್ನ ಮೂವತ್ತು ಉದ್ಯೋಗಗಳಲ್ಲಿ ಅವರನ್ನು ತಿರಸ್ಕರಿಸಲಾಗಿತ್ತು. ಇಪ್ಪತ್ನಾಲ್ಕು ವರ್ಷದ ಹಿಂದೆ ಇಂಟರ್ ನೆಟ್ ಪರಿಚಯವಾದ ಮೇಲೆ ಅವರಿಗೆ ಹೊಳೆದ ಆಲೋಚನೆಯೇ ಅಲಿಬಾಬ ಚೈನೀಸ್ ಇ ಕಾಮರ್ಸ್ ವೆಬ್ ಸೈಟ್. ಅದು ಯಾವುದೇ ಕೌಶಲ ಅಥವಾ ಹಣ ಇಲ್ಲದೆ ಆರಂಭಿಸಿದರು.

ಇಂದು ಜಾಕ್ ಮಾ ಅವರ ಆಸ್ತಿ ಮೌಲ್ಯ ನಲವತ್ತಾರು ಬಿಲಿಯನ್ ಅಮೆರಿಕನ್ ಡಾಲರ್. "ಶ್ರಮ ಹಾಕಿದರೆ ನನಗನಿಸುತ್ತದೆ, ಪ್ರತಿಯೊಬ್ಬರೂ ಯಶಸ್ವಿ ಆಗಬಹುದು" ಎನ್ನುತ್ತಾರೆ ಜಾಕ್ ಮಾ.

"ನಾನು ಇಪ್ಪತ್ತು ವರ್ಷದ ಹಿಂದೆ ಒಂದು ಅಪಾರ್ಟ್ ಮೆಂಟ್ ನಲ್ಲಿ ಅಲಿಬಾಬ ಗ್ರೂಪ್ ಆರಂಭಿಸಿದೆ. ಆಗ ಸ್ಥಾಪಕರು ಹೇಳಿದರು: ಒಂದು ವೇಳೆ ಜಾಕ್ ಮಾ ಮತ್ತು ಅವರ ತಂಡ ಯಶಸ್ವಿಯಾದರೆ ಜಗತ್ತಿನ ಶೇಕಡಾ ಎಂಬತ್ತರಷ್ಟು ಜನರು ಯಶಸ್ವಿ ಆಗಬಹುದು. ಏಕೆಂದರೆ ನಮ್ಮ ಬಳಿ ಏನೂ ಇರಲಿಲ್ಲ. ಆದರೆ ಭವಿಷ್ಯವನ್ನು ನಾವು ನಂಬಿದೆವು" ಎಂದಿದ್ದಾರೆ.

ಒಂದು ವೇಳೆ ಯಾವುದನ್ನಾದರೂ ಎಲ್ಲರೂ ಒಪ್ಪಿದ್ದಾರೆ ಅಂದರೆ ಅಲ್ಲಿ ಅವಕಾಶ ಇಲ್ಲ ಅಂತಲೇ ಅರ್ಥ ಎನ್ನುವ ಜಾಕ್ ಮಾ, ಯಾರೂ ಈ ವರೆಗೂ ಯಾರೂ ಆಲೋಚನೆ ಮಾಡದಿದ್ದನ್ನು ಕೈಗೊಂಡರೆ ಮಾತ್ರ ಯಶಸ್ಸು ಸಾಧ್ಯ ಎಂದಿದ್ದಾರೆ. ಇನ್ನೊಂದು ಮಾತು, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಹತ್ತು ಬಾರಿ ಜಾಕ್ ಮಾ ಅವರನ್ನು ತಿರಸ್ಕರಿಸಲಾಗಿತ್ತು.

ನಿಮ್ಮ ಕೌಶಲವನ್ನು ಸರಿಯಾಗಿ ಬಳಸಿಕೊಳ್ಳಿ. ನನಗೆ ಗೊತ್ತಿದ್ದದ್ದು ಜನರ ಬಗ್ಗೆ ಮಾತ್ರ. ನಾನು ಇ ಕಾಮರ್ಸ್ ಶುರು ಮಾಡಿದಾಗ ತಂತ್ರಜ್ಞಾನ, ಕಾನೂನು, ಮಾರ್ಕೆಟಿಂಗ್ ಯಾವುದರ ಬಗ್ಗೆಯೂ ಗೊತ್ತಿರಲಿಲ್ಲ. ಜನರ ಸಲುವಾಗಿ ಸಮಯ ಮೀಸಲಿಟ್ಟರೆ, ಅವರು ಸಂತೋಷವಾದರೆ ನೀವು ಗೆದ್ದಂತೆಯೇ ಎನ್ನುತ್ತಾರೆ ಜಾಕ್ ಮಾ.

ಓಪ್ರಾ ವಿನ್ ಫ್ರೇ

ಓಪ್ರಾ ವಿನ್ ಫ್ರೇ

ರಾತ್ರೋ ರಾತ್ರಿ ಯಶಸ್ಸು ಪಡೆಯಲು ಸಾಧ್ಯವಿಲ್ಲ ಎಂಬುದು ಓಪ್ರಾ ವಿನ್ ಫ್ರೇ ಅವರ ಮಾತು. "ಎಲ್ಲರೂ ಹೇಳುವ ಜೀವನದಲ್ಲಿ ಏನೋ ದೊಡ್ಡದು ಘಟಿಸುತ್ತದೆ ಎಂದು ಕಾಯಬೇಡಿ ಎನ್ನುವ ಸಲುವಾಗಿ ನಾನು ಇಲ್ಲಿದ್ದೇನೆ" ಎಂದು ಕಾರ್ಯಕ್ರಮದಲ್ಲಿ ಹೇಳಿದ್ದರು ವಿನ್ ಫ್ರೇ. "ಒಂದು ಸಮಯಕ್ಕೆ ಜೀವನ ಬದಲಿಸುವ ಒಂದು ಹೆಜ್ಜೆ ಇಡಲು ಸಾಧ್ಯ" ಎಂದಿದ್ದರು.

ಯಶಸ್ಸು ಎಂಬುದು ಒಂದು ಪ್ರಕ್ರಿಯೆ. ಯಾರೆಲ್ಲ ಯಶಸ್ವಿ ಆಗಿದ್ದಾರೋ ಅವರನ್ನೇ ಕೇಳಿ ನೋಡಿ ಎನ್ನುತ್ತಾರೆ ಅವರು. ಆ ಪ್ರಕ್ರಿಯೆಯಲ್ಲಿ ಹಿನ್ನಡೆ- ವೈಫಲ್ಯ ಎಲ್ಲವೂ ಉಂಟು ಎಂದು ಹೇಳಿದ್ದಾರೆ.

ಕೆಲವು ಸಂದರ್ಭದಲ್ಲಿ ಯಶಸ್ಸು ನಿಮ್ಮ ಕೈ ಅಳತೆ ಮೀರಿದ್ದು ಎಂಬುದು ನಿಮಗೇ ಗೊತ್ತಾಗುತ್ತದೆ. ನೀವು ಅಂದುಕೊಂಡ ಗುರಿ ತಲುಪುವುದು, ದೃಷ್ಟಿಕೋನವನ್ನು ರೂಪಿಸುವುದು, ಈ ಜಗತ್ತಿನ ಸಲುವಾಗಿ ಒಳ್ಳೆಯದನ್ನು ಮಾಡುವುದು ಎನ್ನುತ್ತಾರೆ ಅವರು.

English summary

Billionaires Life Lessons To Success

Bill Gates, Warren Buffet and other 3 billionaires life lessons to success.
Story first published: Friday, January 3, 2020, 17:31 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more