For Quick Alerts
ALLOW NOTIFICATIONS  
For Daily Alerts

Budget 2023 Cheaper & Costlier Items : ಕೇಂದ್ರ ಬಜೆಟ್ ಬಳಿಕ ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ಐದನೇ ಬಾರಿಗೆ ಮಂಡನೆ ಮಾಡುತ್ತಿರುವ ಬಜೆಟ್ ಇದಾಗಿದೆ. ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ಕೆಲವೊಂದು ರಿಲೀಫ್ ನೀಡಿದರೆ, ಕೆಲವು ವಲಯಗಳಿಗೆ ಶಾಕ್ ನೀಡಿದ್ದಾರೆ. ಮುಖ್ಯವಾಗಿ ಕಸ್ಟಮ್‌ ಸುಂಕವನ್ನು ಏರಿಳಿತ ಮಾಡಲಾಗಿದೆ.

Budget 2023 Live: ಕೇಂದ್ರ ಬಜೆಟ್‌ಗೂ ಮುನ್ನ ಷೇರುಪೇಟೆ ಶುಭಾರಂಭBudget 2023 Live: ಕೇಂದ್ರ ಬಜೆಟ್‌ಗೂ ಮುನ್ನ ಷೇರುಪೇಟೆ ಶುಭಾರಂಭ

ಕಳೆದ ವರ್ಷದಲ್ಲಿ ದೇಶದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಏರಿಕೆಯಾಗಿದೆ. ಆದ್ದರಿಂದಾಗಿ ಹಣಕಾಸು ಸಚಿವೆ ನಿರ್ದಿಷ್ಟ ಮೊಬೈಲ್ ಫೋನ್ ತಯಾರಿ ಮಾಡಲು ಬಳಸಲಾಗುವ ವಸ್ತುಗಳ ಆಮದು ಸುಂಕವನ್ನು ಕಡಿತ ಮಾಡಿದೆ. ಕ್ಯಾಮೆರಾ ಲೆನ್ಸ್, ಲಿಥಿಯನ್ ಸೆಲ್‌ಗಳ ಆಮದು ಸುಂಕವನ್ನು ಇಳಿಸಲಾಗಿದೆ. ಹಾಗೆಯೇ ಟೆಲಿವಿಜನ್ ವಸ್ತುಗಳ ಸುಂಕವನ್ನು ಕೂಡಾ ಇಳಿಸಲಾಗಿದೆ.

Union Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿUnion Budget 2023: ನಿರ್ದಿಷ್ಟ ಸರ್ಕಾರಿ ಏಜೆನ್ಸಿಗಳ ಎಲ್ಲ ಡಿಜಿಟಲ್ ವ್ಯವಸ್ಥೆ ವ್ಯಾಪ್ತಿಗೆ PAN, ಏನಿದು ತಿಳಿಯಿರಿ

ಎಲೆಕ್ಟ್ರಾನಿಕ್ ಕಿಚನ್ ವಸ್ತುಗಳು ದುಬಾರಿಯಾಗಲಿದೆ, ಹೀಟ್ ಕಾಯಿಲ್‌ಗಳು ಅಗ್ಗವಾಗಲಿದೆ. ರೈತರಿಗೆ ಸಹಾಯಕವಾಗುವಂತೆ ಕೆಲವು ವಸ್ತುಗಳ ಆಮದು ಸುಂಕವನ್ನು ಕೂಡಾ ಇಳಿಸಲಾಗಿದೆ. ಹಾಗಾದರೆ ಯಾವೆಲ್ಲ ವಸ್ತುಗಳು ಬಜೆಟ್ ಬಳಿಕ ದುಬಾರಿಯಾಗಲಿದೆ, ಯಾವೆಲ್ಲ ವಸ್ತುಗಳ ಅಗ್ಗವಾಗಲಿದೆ ಎಂದು ತಿಳಿಯೋಣ ಮುಂದೆ ಓದಿ...

Budget 2023: ಯಾವೆಲ್ಲ ವಸ್ತುಗಳು ಅಗ್ಗ, ದುಬಾರಿ?

ಯಾವೆಲ್ಲ ವಸ್ತುಗಳು ದುಬಾರಿ?

ಸಾಮಾನ್ಯವಾಗಿ ಬಜೆಟ್‌ನಲ್ಲಿ ಮಾಡುವ ಯಾವುದೇ ಘೋಷಣೆಗಳು ಕೂಡಾ ಜನಸಾಮಾನ್ಯರ ಮೇಲೆ ನೇರ ಪ್ರಭಾವವನ್ನು ಉಂಟು ಮಾಡುತ್ತದೆ. ಅಗತ್ಯ-ಅನಗತ್ಯ ವಸ್ತುಗಳ ದರವು ಏರಿಕೆಯಾಗುತ್ತಿದ್ದಂತೆ ಅದು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರುತ್ತದೆ. 2023ರ ಬಜೆಟ್‌ನಲ್ಲಿ ಆಭರಣಗಳು, ಚಿನ್ನ, ಎಲೆಕ್ಟ್ರಾನಿಕ್‌ ಆಟದ ಸಾಮಾನು, ಬೆಳ್ಳಿ, ಸಿಗರೇಟ್‌ ಬೆಲೆ ಏರಿಕೆಯಾಗಿದೆ.

ಆಭರಣಗಳು
ಛತ್ರಿಗಳು
ಚಿನ್ನ, ಬೆಳ್ಳಿ ಹಾಗೂ ಪ್ಲಾಟಿನ್ಂ
ಸಿಗರೇಟ್‌
ವಿದೇಶಿ ವಾಹನ
ಬ್ರಾಂಡೆಡ್‌ ಬಟ್ಟೆ
ಹೆಡ್‌ಫೋನ್‌, ಇಯರ್‌ಫೋನ್‌
ಸ್ಮಾಟ್‌ ಮೀಟರ್‌ಗಳು, ಸೋಲಾರ್‌ ಸೆಲ್ಸ್‌
ಎಕ್ಸ್‌ರೇ ಮಿಷಿನ್‌, ವೈದ್ಯಕೀಯ ವಸ್ತುಗಳು
ಎಲೆಕ್ಟ್ರಾನಿಕ್‌ ಆಟದ ಸಾಮಾನು

ಯಾವೆಲ್ಲ ವಸ್ತುಗಳ ಅಗ್ಗ?

2023ರಲ್ಲಿ ಆಹಾರ ಹಣದುಬ್ಬರವು ಕೆಟ್ಟ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ. ಕಾಟನ್‌ ಮೇಲೆ ಶೇಕಡ 11ರಷ್ಟು ಆಮದು ಸುಂಕವನ್ನು ಕಡಿತಗೊಳಿಸಲಾಗಿದೆ. ಆದ್ದರಿಂದಾಗಿ ಕೇಂದ್ರ ಬಜೆಟ್ ಸಾಮಾನ್ಯ ಜನರ ಮೇಲೆ ಪ್ರಭಾವ ಉಂಟು ಮಾಡಿದೆ. ಕ್ಯಾಮೆರಾ ಲೆನ್ಸ್, ಲಿಥಿಯನ್ ಸೆಲ್‌ಗಳಂತಹ ಮೊಬೈಲ್ ಫೋನ್‌ ಉತ್ಪಾದನೆಗೆ ಬಳಸಲಾಗುವ ವಸ್ತುಗಳ ಆಮದು ಸುಂಕವನ್ನು ಇಳಿಸಲಾಗಿದೆ.

ಸಿಮೆಂಟ್ ಮತ್ತು ಉಕ್ಕು
ಮೊಬೈಲ್ ಫೋನ್‌ಗಳು
ಎಲೆಕ್ಟ್ರಾನಿಕ್ ವಸ್ತುಗಳು
ಟಿವಿ
ಎಲೆಕ್ಟಿಕ್‌ ವಾಹನ
ಎಲೆಕ್ಟ್ರಿಕ್‌ ಚಿಮಣಿ
ಕ್ಯಾಮರಾ ಲೆನ್ಸ್‌
ಚಾರ್ಜರ್‌
ಇಂಗು, ಕೋಕೋ ಬೀನ್ಸ್
ಮೀಥೈಲ್ ಆಲ್ಕೋಹಾಲ್,
ಕತ್ತರಿಸಿ ನಯಗೊಳಿಸಿದ ವಜ್ರಗಳು

English summary

Union Budget 2023: Full List of Cheaper and Costlier Items in Kannada

Union Budget 2023: here;s Full List of Cheaper and Costlier Items after union budget 2023-24 in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X