For Quick Alerts
ALLOW NOTIFICATIONS  
For Daily Alerts

ಬಜೆಟ್ ನಿರ್ವಹಣೆ ಮಾಡಲು 5 ಸರಳ ವಿಧಾನ ತಿಳಿಯಿರಿ

|

ಬಹುತೇಕ ಜನರು ತಮ್ಮ ಬಜೆಟ್ ಅನ್ನು ನಿರ್ವಹಣೆ ಮಾಡಲು ಬಯಸುತ್ತಾರೆ. ಅದು ಕೂಡಾ ಮುಖ್ಯವಾಗಿ ಹಣದುಬ್ಬರ ಅಧಿಕವಾಗುತ್ತಿರುವಾಗ ಜನರು ತಮ್ಮ ಸಂಪಾದನೆಯನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಲು ಬಯಸುತ್ತಾರೆ. ಆದರೆ ಅದು ಹೇಗೆ ಎಂದು ಹಲವಾರು ಜನರಿಗೆ ತಿಳಿದಿಲ್ಲ. ಇಲ್ಲಿ ನಾವು 5 ಸರಳ ವಿಧಾನವನ್ನು ವಿವರಿಸಿದ್ದೇವೆ.

 

ನಾವು ಸಂಪಾದನೆ ಮಾಡುವ ಹಣವನ್ನು ನಾವು ಎಲ್ಲಿ ಖರ್ಚು ಮಾಡುತ್ತಿದ್ದೇವೆ, ಎಷ್ಟು ಖರ್ಚು ಮಾಡುತ್ತಿದ್ದೇವೆ ಎಂದು ತಿಳಿಯುವುದು ಮುಖ್ಯವಾಗಿದೆ. ಅದಕ್ಕೆ ನಮಗೆ ಬಜೆಟ್ ಸಹಾಯ ಮಾಡುತ್ತದೆ. ನಮ್ಮ ಪ್ರಸ್ತುತ ಜೀವನದ ನಿರ್ವಹಣೆ ಎಷ್ಟು ಖರ್ಚು ಮಾಡಬೇಕು, ಭವಿಷ್ಯಕ್ಕೆ ಎಷ್ಟು ಉಳಿತಾಯ ಮಾಡಬೇಕು ಎಂಬುವುದನ್ನು ಬಜೆಟ್ ನಮಗೆ ತಿಳಿಸುತ್ತದೆ.

ಆದಾಯ ತೆರಿಗೆ, ಜಿಎಸ್‌ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?ಆದಾಯ ತೆರಿಗೆ, ಜಿಎಸ್‌ಟಿ ಅಪರಾಧ ಕಾನೂನು ಬದಲಾವಣೆ: ಆರ್ಥಿಕ ಚೇತರಿಕೆಗೆ ಸಿಐಐ ನೀಡಿದ ಸಲಹೆಗಳೇನು?

ಬಜೆಟ್ ಎನ್ನುವುವುದು ಸರಳ ಹಣಕಾಸು ಯೋಜನೆಯಾಗಿದೆ. ನೀವು ಬಜೆಟ್ ಅನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬುವುದನ್ನು ನಾವಿಲ್ಲಿ ವಿವರಿಸಿದ್ದೇವೆ. ಇಲ್ಲಿದೆ ಸರಳ 5 ವಿಧಾನ ಮುಂದೆ ಓದಿ...

 ನಿಮ್ಮ ವೇತನ ಎಷ್ಟು ಎಂಬುವುದು ಗಮನದಲ್ಲಿರಲಿ

ನಿಮ್ಮ ವೇತನ ಎಷ್ಟು ಎಂಬುವುದು ಗಮನದಲ್ಲಿರಲಿ

ನೀವು ಬಜೆಟ್ ಅನ್ನು ನಿರ್ವಹಣೆ ಮಾಡುವಾಗ ಮೊದಲಾಗಿ ನಿಮಗೆ ಎಷ್ಟು ವೇತನವಿದೆ ಎಂಬುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಟೇಕ್ ಹೋಮ್ ಸ್ಯಾಲರಿ ಎಷ್ಟಿದೆಯೋ ಅದು ನಿಮ್ಮ ವೇತನ ಎಂದು ಲೆಕ್ಕಹಾಕಿಕೊಳ್ಳಿ. ಅದು ಕೂಡಾ ತೆರಿಗೆ, ವಿಮೆ, ನಿವೃತ್ತಿ ಯೋಜನೆಗೆ ಕಡಿತವಾಗುವ ಮೊತ್ತ ಎಲ್ಲ ಕಡಿತವಾಗಿ ಬಳಿಕ ಉಳಿಯುವ ಮೊತ್ತವೇ ನಿಮ್ಮ ಟೇಕ್ ಹೋಮ್ ಸ್ಯಾಲರಿ. ಈ ಮೊತ್ತವನ್ನೇ ನೀವು ಬಜೆಟ್ ನಿರ್ವಹಣೆ, ಲೆಕ್ಕಾಚಾರ ಮಾಡಬೇಕು. ನೀವು ತೆರಿಗೆ ಮೊದಲಾದವು ಕಡಿತವಾಗದೆ ಇರುವ ಮೊತ್ತವನ್ನೇ ನಿಮ್ಮ ಕೈಯಲ್ಲಿರುವ ಮೊತ್ತ ಎಂದುಕೊಂಡರೆ ಅದು ತಪ್ಪು. ನೀವು ನಿಮ್ಮಲ್ಲಿ ಅಧಿಕ ಮೊತ್ತವಿದೆ ಎಂದುಕೊಳ್ಳುತ್ತೀರಿ. ಆದರೆ ನಿವ್ವಳ ಆದಾಯವನ್ನು ನೀವು ತಿಳಿದಿರಬೇಕು. ಹಾಗಾದಾಗ ಮಾತ್ರ ಬಜೆಟ್ ನಿರ್ವಹಣೆ ಸಾಧ್ಯವಾಗುತ್ತದೆ.

 ಎಷ್ಟು ಮೊತ್ತ, ಎಲ್ಲಿ ವೆಚ್ಚವಾಗುತ್ತಿದೆ ನೋಡಿ
 

ಎಷ್ಟು ಮೊತ್ತ, ಎಲ್ಲಿ ವೆಚ್ಚವಾಗುತ್ತಿದೆ ನೋಡಿ

ನೀವು ನಿಮ್ಮ ವೆಚ್ಚವನ್ನು ನಿರ್ವಹಣೆ ಮಾಡುವುದು ಹೇಗೆ, ಎಲ್ಲಿ ಎಷ್ಟು ಖರ್ಚು ಮಾಡಬೇಕು ಎಂಬುವುದನ್ನು ವಿಭಜನೆ ಮಾಡುವುದು ಅತೀ ಮುಖ್ಯವಾಗಿದೆ. ನೀವು ಎಲ್ಲಿ ಅಧಿಕ ಖರ್ಚು ಮಾಡುತ್ತಿದ್ದೀರಿ, ಅಲ್ಲಿ ಅಧಿಕ ಖರ್ಚು ಮಾಡುವುದು ಮುಖ್ಯವೇ ಎಂದು ನಿರ್ಧಾರ ಮಾಡಿಕೊಳ್ಳಿ. ಎಷ್ಟು ಉಳಿತಾಯ ಮಾಡುತ್ತಿದ್ದೀರಿ ಎಂದು ಕೂಡಾ ಲೆಕ್ಕಾಚಾರ ಹಾಕಿಕೊಳ್ಳಿ. ನೀವು ಮಾಸಿಕವಾಗಿ ಎಷ್ಟು ಖರ್ಚು ಮಾಡುತ್ತೀರಿ, ಯಾವುದಕ್ಕೆಲ್ಲ ಅಗತ್ಯವಾಗಿ ಖರ್ಚು ಮಾಡಬೇಕು ಎಂಬುವುದನ್ನು ಪಟ್ಟಿ ಮಾಡಿಕೊಳ್ಳಿ. ಮಾಸಿಕವಾಗಿ ಬಾಡಿಗೆ, ಬಿಲ್‌ಗಳು, ಸಾರಿಗೆ ವೆಚ್ಚ ಎಲ್ಲವನ್ನು ಪಟ್ಟಿಮಾಡಿಕೊಳ್ಳಿ. ಅದಕ್ಕಾಗಿ ಮೊತ್ತವನ್ನು ಪ್ರತ್ಯೇಕವಾಗಿ ಇಟ್ಟುಕೊಳ್ಳಿ. ದಿನಸಿ, ಗ್ಯಾಸ್, ಮನರಂಜನೆ ಎಲ್ಲವನ್ನು ಪಟ್ಟಿಮಾಡಿಕೊಂಡು ಅದಕ್ಕಾಗಿ ಹಣವನ್ನು ಪ್ರತ್ಯೇಕವಾಗಿ ಇರಿಸಿ.

 ಎಲ್ಲವನ್ನು ಪ್ಲ್ಯಾನ್ ಮಾಡಿಕೊಳ್ಳಿ

ಎಲ್ಲವನ್ನು ಪ್ಲ್ಯಾನ್ ಮಾಡಿಕೊಳ್ಳಿ

ನೀವು ಯಾವುದಕ್ಕಾಗಿ ಖರ್ಚು ಮಾಡುತ್ತಿದ್ದೀರಿ ಹಾಗೂ ನೀವು ಯಾವುದಕ್ಕೆ ಖರ್ಚು ಮಾಡಲು ಬಯಸುತ್ತೀರಿ ಎಂಬುವುದು ಮುಖ್ಯವಾಗಿದೆ. ನೀವು ಮುಂದಿನ ತಿಂಗಳಿನಲ್ಲಿ ಎಷ್ಟು ಖರ್ಚು ಮಾಡುತ್ತೀರಿ ಎಂದು ಮೊದಲೇ ಪ್ಲ್ಯಾನ್ ಮಾಡಿಕೊಳ್ಳಿ. ಆ ಪ್ಲ್ಯಾನ್ ಪ್ರಕಾರವಾಗಿ ವೆಚ್ಚ ನಿರ್ವಹಣೆ ಮಾಡಿ. ನಿಮ್ಮ ಲೀಸ್ಟ್ ನಿವ್ವಳ ಆದಾಯಕ್ಕಿಂತ ಅಧಿಕವಾಗಿದ್ದರೆ, ಯಾವುದು ತೀರಾ ಅಗತ್ಯವೋ ಅದಕ್ಕಾಗಿ ಮಾತ್ರ ಖರ್ಚು ಮಾಡಿ. ಉಳಿತಾಯವು ಕೂಡಾ ಈ ಪ್ಲ್ಯಾನ್‌ನ ಭಾಗವಾಗಿರಲಿ. ಎಲ್ಲ ಹಣವನ್ನು ಖರ್ಚು ಮಾಡಿದರೆ, ಅನಿರೀಕ್ಷಿತವಾಗಿ ಹಣದ ಅಗತ್ಯ ಉಂಟಾದಾಗ ತೊಂದರೆಯಾಗುತ್ತದೆ. ಅದಕ್ಕಾಗಿ ಇತರೆ ಖರ್ಚಿಗಾಗಿಯೂ ಹಣವನ್ನು ಇರಿಸಿಕೊಳ್ಳಿ.

 ಖರ್ಚಿನಲ್ಲಿ ಮಿತಿ ಇರಲಿ

ಖರ್ಚಿನಲ್ಲಿ ಮಿತಿ ಇರಲಿ

ನೀವು ಬಜೆಟ್ ಅನ್ನು ಮಾಡಿದ ಬಳಿಕ, ಅಂದರೆ ನಿಮ್ಮ ವೇತನ ಹಾಗೂ ಖರ್ಚಿನ ಲೆಕ್ಕಾಚಾರವನ್ನು ಸರಿಯಾದ ರೀತಿಯಲ್ಲಿ ಮಾಡಿದ ಬಳಿಕ ಅದರ ಪ್ರಕಾರವಾಗಿ ನಡೆಯುವುದು ಹಾಗೂ ಖರ್ಚಿನಲ್ಲಿ ಮಿತಿ ಇರುವುದು ಕೂಡಾ ಮುಖ್ಯವಾಗಿದೆ. ನೀವು ಏನೆಲ್ಲ ಬಯಸುತ್ತೀರಿ ಎಂಬ ಪಟ್ಟಿಯಲ್ಲಿ ಕೆಲವು ವಸ್ತುಗಳನ್ನು ತೆಗೆದುಹಾಕುವುದು ಕೂಡಾ ಬಜೆಟ್ ನಿರ್ವಹಣೆಗೆ ಸಹಾಯಕ. ಯಾವುದು ವಸ್ತು ನಿಮಗೆ ತೀರಾ ಅಗತ್ಯ, ಯಾವ ವಸ್ತು ಅಷ್ಟೊಂದು ಅಗತ್ಯವಲ್ಲ ಎಂಬುವುದು ನಿಮಗೆ ತಿಳಿದಿರಬೇಕು. ನೀವು ನಿಮ್ಮ ಆಸೆ, ಬಯಕೆಗಳಿಗೆ ಈಗಾಗಲೇ ಬ್ರೇಕ್ ಹಾಕಿದ್ದರೂ ಬಜೆಟ್ ನಿರ್ವಹಣೆ ಸರಿಯಾಗುತ್ತಿಲ್ಲವೆಂದಾದರೆ ಮಾಸಿಕವಾಗಿ ವ್ಯಯಿಸುವ ಮೊತ್ತದ ಕಡೆ ಕಣ್ಣಾಯಿಸಿ. ಪ್ರತಿ ತಿಂಗಳು ನೀವು ಮಾಡುವ ಖರ್ಚಿನಲ್ಲಿ ಯಾವುದು ಅನಗತ್ಯ ಖರ್ಚು ಎಂದೆನಿಸುತ್ತದೋ ಅದನ್ನು ಕಡಿತ ಮಾಡಿ.

 ಬಜೆಟ್ ಅನ್ನು ಸರಿಯಾಗಿ ನಿರ್ವಹಿಸಲಾಗಿದೆಯೇ?

ಬಜೆಟ್ ಅನ್ನು ಸರಿಯಾಗಿ ನಿರ್ವಹಿಸಲಾಗಿದೆಯೇ?

ನೀವು ಮೊದಲೇ ಪಟ್ಟಿ ಮಾಡಿರುವ ಬಜೆಟ್ ಅನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಿ. ರೈಲು ಹಳಿಯಲ್ಲಿ ಇದ್ದರೆ ಉತ್ತಮವಲ್ಲವೇ? ಹಾಗೆಯೇ ಬಜೆಟ್ ಎಂಬ ರೈಲು ಹಳಿಯಲ್ಲಿಯೇ ಇದೆಯೇ ಹಳಿ ತಪ್ಪಿಹೋಗಿದೆಯೇ ಪರಿಶೀಲಿಸಿ. ನಿಮ್ಮ ವೇತನ ಅಧಿಕವಾದಾಗ ಅಥವಾ ಕಡಿತವಾದಾಗ ಈ ಬಜೆಟ್ ಅನ್ನು ಮರುಹೊಂದಿಸುವುದು ಉತ್ತಮ.

English summary

Budget Management: Simple Ways to Maintain a Budget, Explained in Kannada

The majority of people want to track their money every month. But dont know how, here;s Simple Ways to Maintain a Budget, Explained in Kannada. read on.
Story first published: Tuesday, November 22, 2022, 13:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X