For Quick Alerts
ALLOW NOTIFICATIONS  
For Daily Alerts

ಬಾಡಿಗೆ ಮನೆಗೆ ಹೋಗುವ ಮುನ್ನ, Rent Agreement ಬಗ್ಗೆ ಅರಿವಿರಲಿ

By ಶಾರ್ವರಿ
|

ಭಾರತದ ಪ್ರಮುಖ ನಗರಗಳಲ್ಲಿ ವಲಸೆ ಬಂದು ದುಡಿಯುವ ಜನಸಂಖ್ಯೆಯ ಬಹುಪಾಲು ಮಂದಿ ಬಾಡಿಗೆ ಮನೆಗಳನ್ನೇ ಆಶ್ರಯಿಸಿದ್ದಾರೆ. ಮನೆ ಮಾಲೀಕತ್ವದ ಹೊಣೆ ನಿಭಾಯಿಸಲಾಗದಿರುವುದೂ‌ ಇದಕ್ಕೊಂದು ಕಾರಣ. ಎಷ್ಟರಮಟ್ಟಿಗೆಂದರೆ, ದೇಶದಲ್ಲಿ ಈ ವಿಭಾಗದ ವಸತಿಗಳನ್ನು ಉತ್ತೇಜಿಸಲು ಅನೇಕ ರಾಜ್ಯಗಳು ಪ್ರಸ್ತುತ ಭವಿಷ್ಯದ ಹೊಂದಾಣಿಕೆಯ ಬಾಡಿಗೆ ನೀತಿಗಳ ವಿವರಗಳನ್ನು ರೂಪಿಸುವಲ್ಲಿ ನಿರತವಾಗಿವೆ. ವಾಸ್ತವವಾಗಿ, ಕೇಂದ್ರ ಕ್ಯಾಬಿನೆಟ್ ಇತ್ತೀಚೆಗೆ ಮಾಡೆಲ್ ಟೆನೆನ್ಸಿ ಆಕ್ಟ್, 2019ಗೆ ಅನುಮೋದನೆ ನೀಡಿತು. ಇದು ಭಾರತದಲ್ಲಿ ಬಾಡಿಗೆ ರಿಯಲ್ ಎಸ್ಟೇಟ್ ಮಾರುಕಟ್ಟೆಯನ್ನು ಗಮನಾರ್ಹವಾಗಿ ಸುಧಾರಿಸುವ ಸಾಧ್ಯತೆಯ ಶಾಸನವಾಗಿದೆ.

ಹೌದು! ಬಾಡಿಗೆ ಒಪ್ಪಂದವು ಕಾನೂನು ಬದ್ಧವಾಗಿರಲಿದೆ. ಇದರ ಅಡಿಯಲ್ಲಿ ಮಾಲೀಕರು ಮತ್ತು ಬಾಡಿಗೆದಾರರು ನಿಯಮಗಳಿಗೆ ಬದ್ಧರಾಗಲು ಒಪ್ಪುತ್ತಾರೆ. ಈ ಒಪ್ಪಂದವನ್ನು ರಿಯಲ್ ಎಸ್ಟೇಟ್ ಏಜೆಂಟ್ ಮೂಲಕ ರಚಿಸಲಾಗುತ್ತದೆ. ಇವರಿಬ್ಬರು ಆಸ್ತಿ‌ ಫಲಾನುಭವಿಗಳಲ್ಲದ ಮತ್ತಿಬ್ಬರ ಉಪಸ್ಥಿತಿಯಲ್ಲಿ ಸಾಕ್ಷಿಗಾಗಿ ಸಹಿ ಮಾಡಬೇಕಾಗುತ್ತದೆ. ಹೆಚ್ಚುವರಿ‌ ಅಗತ್ಯವಿದ್ದಾಗ ರಿಯಲ್ ಎಸ್ಟೇಟ್ ಏಜೆಂಟ್ ಸಹ ಸಾಕ್ಷಿಯಾಗಿ ಇರುತ್ತಾನೆ.

ಆದರೆ ಬಾಡಿಗೆ ಮನೆ ಒಪ್ಪಂದಗಳಲ್ಲೂ ಹಲವು ವಿಧಾನಗಳಿವೆ. ಇದರಿಂದ ನೀವು ಹಣಕಾಸಿನ ಅಥವಾ ಕಾನೂನು ಬದ್ಧತೆಗೆ ಒಳಗಾಗದೆಯೂ ಇರಬಹುದು. ಹಾಗಾಗಿ ನೀವು ಪರಿಶೀಲಿಸಬೇಕಾದ ಪ್ರಮುಖ 5 ಅಂಶಗಳನ್ನು ಇಲ್ಲಿ ಕಾಣಬಹುದು.

1. ನೈಜ ಸ್ಥಳ ಪರಿಶೀಲನೆ:

1. ನೈಜ ಸ್ಥಳ ಪರಿಶೀಲನೆ:

ಯಾವುದೇ ಬಾಡಿಗೆದಾರರು ಗುತ್ತಿಗೆ ಅಥವಾ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಒಮ್ಮೆಯಾದರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ನೈಜವಾಗಿ ಪರಿಶೀಲಿಸಿ ಸ್ಥಳದ ಮಾಹಿತಿಯನ್ನು ಖಚಿತಪಡಿಸಿಕೊಳ್ಳಬೇಕು. ಮನೆ ಪರಿಶೀಲನೆ ಮಾತ್ರವಲ್ಲದೇ ವಿದ್ಯುತ್, ನೀರಿನ ಸಂಪರ್ಕಗಳು ಕಾರ್ಯ ನಿರ್ವಹಿಸುತ್ತಿವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ‌‌ ಆಸ್ತಿಗೆ ಯಾವುದಾದರೂ ಹಾನಿಯಾಗಿರುವುದು ಕಂಡುಬಂದಲ್ಲಿ ಅದನ್ನು ಸೆರೆಹಿಡಿಯಲು ಛಾಯಾಚಿತ್ರ ಅಥವಾ ವಿಡಿಯೋ ತೆಗೆದುಕೊಳ್ಳುವುದು ಒಳ್ಳೆಯದು.

2. ಒಪ್ಪಂದದ ನಿಯಮಗಳನ್ನು ಅರ್ಥಮಾಡಿಕೊಳ್ಳಿ:
 

2. ಒಪ್ಪಂದದ ನಿಯಮಗಳನ್ನು ಅರ್ಥಮಾಡಿಕೊಳ್ಳಿ:

ಬಾಡಿಗೆ ಒಪ್ಪಂದಗಳಿಗೆ ನೀವು ಸಹಿ ಮಾಡುವ ಮುನ್ನ ಅದರಲ್ಲಿನ ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಬಹಳ‌ ಮುಖ್ಯ. ಏಕೆಂದರೆ ನಿರ್ದಿಷ್ಟವಾಗಿ ಎರಡೆರಡು ಬಾರಿ ಪರಿಶೀಲಿಸಬೇಕಾದ ಅಂಶಗಳು ಇದರಲ್ಲಿ ಇರಲಿವೆ. ಅವುಗಳನ್ನಿಲ್ಲಿ ನೋಡೋಣ

• ಬಾಡಿಗೆ ಅಧಿಕಾರ ಅವಧಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸ್ಥಳಾಂತರ ಮತ್ತು ಸ್ಥಳಾಂತರದ ದಿನಾಂಕಗಳನ್ನು ಗಮನಿಸಿ.
• ಭೂಮಾಲೀಕರ ವಿವರಗಳು - ಜಮೀನುದಾರನ ಮತ್ತು ಪ್ರತಿಯೊಬ್ಬ ಹಿಡುವಳಿದಾರನ ಹೆಸರು ಒಪ್ಪಂದದ ಮೇಲೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ
• ಕಟ್ಟುಪಾಡುಗಳು - ನೀವು ಬಾಡಿಗೆಗೆ ಇರುವಾಗ ನಿಮ್ಮ ಜವಾಬ್ದಾರಿಗಳನ್ನು ಗಮನಿಸಿ ಮತ್ತು ಅದನ್ನೂ ನೀವು ಒಪ್ಪುತ್ತೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
• ಭದ್ರತಾ ಮೊತ್ತ - ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಭದ್ರತಾ ಮೊತ್ತವನ್ನು (ಮುಂಗಡಹಣ) ನಮೂದಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ.
• ನವೀಕರಣ ನಿಯಮಗಳು- ನವೀಕರಣ ನಿಯಮಗಳ ಷರತ್ತು, ದಿನಾಂಕ ಹಾಗೂ ಅಧಿಕಾರದ ಅವಧಿಯನ್ನು ಗಮನಿಸಿ
• ಬಾಡಿಗೆ ಪಾವತಿ ದಿನಾಂಕ - ಒಪ್ಪಂದವು ಬಾಡಿಗೆಯನ್ನು ಯಾವ ದಿನಾಂಕದಲ್ಲಿ ಪಾವತಿಸಬೇಕು ಎಂಬುದನ್ನು ಒಳಗೊಂಡಿದೆಯೆ? ಎಂಬುದನ್ನು ದೃಢಪಡಿಸಿಕೊಳ್ಳಿ ಏಕೆಂದರೆ ಇದು ನಿರ್ಣಾಯಕ.
• ಜಮೀನುದಾರನು ಏನನ್ನು ಬದಲಾಯಿಸುತ್ತಾನೆ ಮತ್ತು ಬದಲಾಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು. ಜಮೀನುದಾರನ ತಪಾಸಣೆಯ (ಅವರೊಂದಿಗಿನ ಮಾತುಕತೆ ನಿಮ್ಮನ್ನು ವಿಚಾರಿಸುವ ರೀತಿ) ಷರತ್ತುಗಳನ್ನು ಪರೀಕ್ಷಿಸಿ. ಅವರು ನಿಮಗೆ ಅಶಾಂತಿ ಉಂಟುಮಾಡುತ್ತಾರೆಯೇ? ಎಂಬುದನ್ನು ಗಮನಿಸಿ. ನೀವು ಒಪ್ಪಂದಕ್ಕೆ ಸಹಿ ಮಾಡುವ ಮುನ್ನವೇ ಅಲ್ಲಿನ ನಿಯಮಗಳ‌ ಆಗು-ಹೋಗುಗಳ ಬಗ್ಗೆ ಮಾಲೀಕರೊಂದಿಗೆ ಮಾತನಾಡಿ.

3. ಬಾಡಿಗೆ ಮೊತ್ತವನ್ನು ಖಚಿತಪಡಿಸಿಕೊಳ್ಳಿ:

3. ಬಾಡಿಗೆ ಮೊತ್ತವನ್ನು ಖಚಿತಪಡಿಸಿಕೊಳ್ಳಿ:

ನಿಮ್ಮ ಒಪ್ಪಂದದ ಪ್ರಕಾರ ಬಾಡಿಗೆ ಮೊತ್ತವನ್ನು ಎಷ್ಟು ನಿಗದಿ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳುವುದು ತುಂಬಾನೇ ಮುಖ್ಯ. ಏಕೆಂದರೆ ಬಾಡಿಗೆ ವೆಚ್ಚದಲ್ಲಿ ಉಪಯುಕ್ತತೆ ಮಾತ್ರವೇ ಇರುವುದಿಲ್ಲ. ಇತರ ಮಾಸಿಕ ವೆಚ್ಚಗಳನ್ನೂ ಒಳಗೊಂಡಿರಬಹುದು. ಉದಾಹರಣೆಗೆ ಸೊಸೈಟಿ ನಿರ್ವಹಣೆ ಶುಲ್ಕ, ವಿದ್ಯುತ್ ಶುಲ್ಕ, ನೀರಿನ ಶುಲ್ಕ ಹಾಗೂ ಸೇವಾ ಶುಲ್ಕವನ್ನೂ ಭೂ ಮಾಲೀಕರು ವಿಧಿಸಬಹುದು. ಒಪ್ಪಂದಕ್ಕೆ ಸಹಿ ಮಾಡಿದ ನಂತರ ಅದನ್ನು ಬದಲಾಯಿಸುವುದಾಗಲಿ, ವಿನಾಯಿತಿ ಪಡೆಯುವುದಕ್ಕಾಗಲಿ ಸಾಧ್ಯವಿರುವುದಿಲ್ಲ. ಇದರೊಂದಿಗೆ ಪಾರ್ಕಿಂಗ್ ಸೌಲಭ್ಯದ ವಿವರಣೆ ಶುಲ್ಕವನ್ನು ಒಳಗೊಂಡಿರಬಹುದು. ಈ ಹೆಚ್ಚುವರಿ ಶುಲ್ಕ ಗಳಿಗೆ ಯಾರು ಜವಾಬ್ದಾರಿ ಎಂಬುದನ್ನು ಒಪ್ಪಂದದಲ್ಲಿ ಸ್ಪಷ್ಟವಾಗಿ ನಮೂದಿಸಬೇಕು.

4. ಠೇವಣಿ (ಡೆಪಾಸಿಟ್) ಬಗ್ಗೆ ತಿಳಿಯಿರಿ:

4. ಠೇವಣಿ (ಡೆಪಾಸಿಟ್) ಬಗ್ಗೆ ತಿಳಿಯಿರಿ:

ನೀವು ಒಪ್ಪಂದ ಮಾಡಿಕೊಳ್ಳುವಾಗ ನಿಗದಿಪಡಿಸಿದ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ಗುತ್ತಿಗೆ ಅವಧಿ ಮುಗಿದ ನಂತರ ನೀವು ಅದನ್ನು ಯಾವಾಗ ಹಿಂಪಡೆಯುವಿರಿ ಎಂಬುದನ್ನೂ ಆಗಲೇ ಖಚಿತಪಡಿಸಿಕೊಳ್ಳಬೇಕಾಗುತ್ತದೆ‌. ಅದಕ್ಕೂ ಮುನ್ನ ಬಾಡಿಗೆ ಮನೆಗೆ ನೀಡುವ ಠೇವಣಿ ಭದ್ರತಾ ಕಾನೂನನ್ನು ಸಂಪೂರ್ಣ ಅರ್ಥಮಾಡಿಕೊಳ್ಳುವುದು ಒಳಿತು. ಇದರಿಂದ ಬಾಡಿಗೆ ಒಪ್ಪಂದದ ಬಗ್ಗೆ ಇನ್ನಷ್ಟು ತಿಳಿಯುವಿರಿ.

5. ಏನಿದು ನೋಟಿಸ್ ಅವಧಿ ಮತ್ತು ದಂಡ?:

5. ಏನಿದು ನೋಟಿಸ್ ಅವಧಿ ಮತ್ತು ದಂಡ?:

ಯಾವುದೇ ಫಲಾನುಭವಿ ಅಥವಾ ಮಾಲೀಕರು ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಎತ್ತಿಹಿಡಿಯಲು ವಿಫಲವಾದರೆ, ಅದು ಶೂನ್ಯ ಮತ್ತು ಅನೂರ್ಜಿತವಾಗುತ್ತದೆ (ತಿರಸ್ಕೃತವಾಗುತ್ತದೆ). ಇದರಿಂದ ಹಾನಿ ಅನುಭವಿಸಿದವರಿಗೆ ನಷ್ಟ ಕಟ್ಟಿ ಕೊಡಬೇಕಾಗುತ್ತದೆ. ಏಕೆಂದರೆ ಒಪ್ಪಂದವು ಸೂಚನೆ ಮತ್ತು ನಿರ್ದಿಷ್ಟ ಅವಧಿಯನ್ನು ಒಳಗೊಂಡಿರುತ್ತದೆ. ಅವಧಿ ಪೂರ್ಣಗೊಳ್ಳುವ ಮುನ್ನ ಒಪ್ಪಂದವನ್ನು ರದ್ದುಗೊಳಿಸುವುದು ಇದ್ದರೆ ಅದಕ್ಕೆ ದಂಡ ಶುಲ್ಕವನ್ನು ನಮೂದಿಸಲಾಗಿರುತ್ತದೆ. ದಂಡದಿಂದ ತಪ್ಪಿಸಿಕೊಳ್ಳಬೇಕಾದರೆ ಒಂದು ತಿಂಗಳ ಮುಂಚಿತವಾಗಿಯೇ ಸೂಚನೆ (ನೋಟಿಸ್ ಪೀರಿಯಡ್) ನೀಡಬೇಕಾಗುತ್ತದೆ.

English summary

Check it: Five Things To Check Before Signing A Rent Agreement

A rent agreement is often drafted by the real estate agent appointed by both the landlord and the renter.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X