For Quick Alerts
ALLOW NOTIFICATIONS  
For Daily Alerts

ಡಿಜಿಟಲ್‌ ಹೆಲ್ತ್‌ ಐಡಿ ಪಡೆಯಲು ಯಾವೆಲ್ಲಾ ದಾಖಲೆ ಬೇಕು?, ಇಲ್ಲಿದೆ ಮಾಹಿತಿ

|

ಈ ವರ್ಷದ ಸೆಪ್ಟೆಂಬರ್‌ 27 ರಂದು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ (ಎಬಿಡಿಎಂ) ಅನ್ನು ಆರಂಭ ಮಾಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಸಮಗ್ರ ಡಿಜಿಟಲ್ ಆರೋಗ್ಯ ಮೂಲಸೌಕರ್ಯವನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಆರಂಭ ಮಾಡಿದ್ದಾರೆ.

ಈ ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಈ ಮಿಷನ್‌ನಿಂದಾಗಿ ದೇಶದ ಆರೋಗ್ಯ ಮೂಲ ಸೌಕರ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಉಂಟಾಗಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಈ ಯೋಜನೆಯನ್ನು ಆರು ಕೇಂದ್ರಾಡಳಿತ ಪ್ರದೇಶದಲ್ಲೂ ಆರಂಭ ಮಾಡಲಾಗಿದೆ.

ವಿದ್ಯಾರ್ಥಿಗಳೇ ಖರ್ಚು ಮಿತಿ ಮೀರುತ್ತಿದೆಯೇ?, ಇಲ್ಲಿದೆ ನಿಮಗೆ ಅಗತ್ಯ ಸಲಹೆವಿದ್ಯಾರ್ಥಿಗಳೇ ಖರ್ಚು ಮಿತಿ ಮೀರುತ್ತಿದೆಯೇ?, ಇಲ್ಲಿದೆ ನಿಮಗೆ ಅಗತ್ಯ ಸಲಹೆ

ಹಾಗಾದರೆ ಈ ಡಿಜಿಟಲ್‌ ಹೆಲ್ತ್‌ ಐಡಿಯನ್ನು ನಾವು ಪಡೆಯುವುದು ಹೇಗೆ, ಅದಕ್ಕಾಗಿ ಯಾವೆಲ್ಲಾ ವಿಧಾನವನ್ನು ನೀವು ಪಾಲಿಸಬೇಕು, ಅಷ್ಟಕ್ಕೂ ಈ ಡಿಜಿಟಲ್‌ ಹೆಲ್ತ್‌ ಐಡಿ ಯಾತಕ್ಕಾಗಿ ಎಂಬುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

 ಡಿಜಿಟಲ್‌ ಹೆಲ್ತ್‌ ಐಡಿ ಬಗ್ಗೆ ಮಾಹಿತಿ

ಡಿಜಿಟಲ್‌ ಹೆಲ್ತ್‌ ಐಡಿ ಬಗ್ಗೆ ಮಾಹಿತಿ

ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ (ಎಬಿಡಿಎಂ) ಜೊತೆ ಲಿಂಕ್‌ ಹೊಂದಲು ಬಯಸಿದವರು ಹಾಗೂ ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್‌ ರೂಪದಲ್ಲಿ ಇರಿಸಲು ಬಯಸುವವರು ಮೊದಲು ಡಿಜಿಟಲ್‌ ಹೆಲ್ತ್‌ ಐಡಿಯನ್ನು ಮಾಡಬೇಕಾಗುತ್ತದೆ. ಡಿಜಿಟಲ್‌ ಹೆಲ್ತ್‌ ಐಡಿ ಎಂದರೆ 14 ಅಂಕೆಗಳ ಸಂಖ್ಯೆಯಾಗಿದೆ. ಅವರ ಆರೋಗ್ಯದ ದಾಖಲೆಗಳನ್ನು ಈ ಮೂಲಕ ಪಡೆಯಲು ಸಾಧ್ಯವಾಗುತ್ತದೆ.

 ಡಿಜಿಟಲ್‌ ಹೆಲ್ತ್‌ ಐಡಿ ಜೆನರೇಟ್‌ ಮಾಡುವುದು ಹೇಗೆ?

ಡಿಜಿಟಲ್‌ ಹೆಲ್ತ್‌ ಐಡಿ ಜೆನರೇಟ್‌ ಮಾಡುವುದು ಹೇಗೆ?

ವ್ಯಕ್ತಿಯು ಡಿಜಿಟಲ್‌ ಹೆಲ್ತ್‌ ಐಡಿ ಜೆನರೇಟ್‌ ಮಾಡಲು ತಾವಾಗಿಯೇ ವೆಬ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಎಬಿಡಿಎಂನ ಆರೋಗ್ಯ ದಾಖಲೆ ಆಪ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ಇನ್ನು ಬೇರೆ ವ್ಯಕ್ತಿಗಳು ತಮ್ಮ ಕುಟುಂಬ ಸದಸ್ಯರಿಗೆ ಡಿಜಿಟಲ್‌ ಹೆಲ್ತ್‌ ಐಡಿ ಮಾಡಲು ಈ ಆಪ್‌ ಮೂಲಕ ಮನವಿಯನ್ನು ಮಾಡಬಹುದು. ಈ ಐಡಿಯು ಭಾರತದಾದ್ಯಂತ ಸಾರ್ವಜನಿಕ, ಖಾಸಗಿ, ಸಮುದಾಯ ಆರೋಗ್ಯ ಕೇಂದ್ರ, ಆರೋಗ್ಯ ಸೆಂಟರ್‌ನಲ್ಲಿ ಉಪಯುಕ್ತವಾಗಿದೆ.

ಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿಹೂಡಿಕೆ ಮಾಡಲು ಮುಂದಾಗಿದ್ದೀರಾ?, ಮೊದಲು ಇದನ್ನು ತಪ್ಪದೇ ಓದಿ

 ಡಿಜಿಟಲ್‌ ಹೆಲ್ತ್‌ ಐಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ಡಿಜಿಟಲ್‌ ಹೆಲ್ತ್‌ ಐಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕು?

ನೀವು ಮೊಬೈಲ್‌ ನಂಬರ್‌ ಮೂಲಕ ಡಿಜಿಟಲ್‌ ಹೆಲ್ತ್‌ ಐಡಿ ಮಾಡುವುದಾದರೆ, ನಿಮ್ಮ ಹೆಸರು, ನಿಮ್ಮ ಜನ್ಮ ದಿನಾಂಕ-ವರ್ಷದ ವಿವರ, ನಿಮ್ಮ ಲಿಂಗ, ನಿಮ್ಮ ವಿಳಾಸ, ಮೊಬೈಲ್‌ ಸಂಖ್ಯೆ ಬೇಕಾಗುತ್ತದೆ. ನೀವು ಆಧಾರ್‌ ಸಂಖ್ಯೆಯ ಮೂಲಕ ನಿಮ್ಮ ಹೆಸರು, ನಿಮ್ಮ ಜನ್ಮ ದಿನಾಂಕ-ವರ್ಷದ ವಿವರ, ನಿಮ್ಮ ಲಿಂಗ, ನಿಮ್ಮ ವಿಳಾಸ, ಮೊಬೈಲ್‌ ಸಂಖ್ಯೆ, ಆಧಾರ ಸಂಖ್ಯೆ ಬೇಕಾಗುತ್ತದೆ. ನಿಮಗೆ ಆಧಾರ್‌ ಬಳಸಿ ಆರೋಗ್ಯ ಐಡಿಯನ್ನು ಮಾಡಲು ಬೇಡ ಎಂದಾದರೆ ನೀವು ನಿಮ್ಮ ಮೊಬೈಲ್‌ ಸಂಖ್ಯೆಯನ್ನು ಮಾತ್ರ ಹಾಕಿದರೆ ಸಾಕಾಗುತ್ತದೆ. ಇನ್ನು ಈ ಬಗ್ಗೆ ನಿಮಗೆ ಯಾವುದೇ ಮಾಹಿತಿಯನ್ನು healthid.ndhm.gov.in. ಮೂಲಕ ಪಡೆಯಬಹುದು.

15 ವರ್ಷಕ್ಕಿಂತ ಹಳೆಯ ವಾಹನ ನೋಂದಣಿ ನವೀಕರಣ ಇನ್ಮುಂದೆ ಭಾರೀ ದುಬಾರಿ!15 ವರ್ಷಕ್ಕಿಂತ ಹಳೆಯ ವಾಹನ ನೋಂದಣಿ ನವೀಕರಣ ಇನ್ಮುಂದೆ ಭಾರೀ ದುಬಾರಿ!

 ಡಿಜಿಟಲ್‌ ಹೆಲ್ತ್‌ ಐಡಿಯಿಂದ ಏನು ಉಪಯೋಗ?

ಡಿಜಿಟಲ್‌ ಹೆಲ್ತ್‌ ಐಡಿಯಿಂದ ಏನು ಉಪಯೋಗ?

ಪ್ರಮುಖವಾಗಿ ಡಿಜಿಟಲ್‌ ಹೆಲ್ತ್‌ ಐಡಿಯಿಂದಾಗಿ ನಿಮಗೆ ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯ ದಾಖಲೆಯನ್ನು ಡಿಜಿಟಲ್‌ ಮೂಲದಲ್ಲಿ ಸಂಗ್ರಹಿಸಿ ಇಡಬಹುದಾಗಿದೆ. ನಿಮ್ಮ ಆರೋಗ್ಯ ದಾಖಲೆಯನ್ನು ನಿಮ್ಮ ವೈದ್ಯರಿಗೆ ಕಳುಹಿಸಲು ಇದು ಸಹಕಾರಿಯಾಗಲಿದೆ. ನೀವು ಮಾಡಿಸಿಕೊಂಡ ಎಲ್ಲಾ ಪರೀಕ್ಷೆಗಳ ಮಾಹಿತಿ ಈ ಡಿಜಿಟಲ್‌ ಹೆಲ್ತ್‌ ಐಡಿಯಲ್ಲಿ ಇರುತ್ತದೆ. ಈ ಹಿಂದೆ ನಿಮಗೆ ಇದ್ದ ಯಾವುದೇ ಆರೋಗ್ಯ ಸಮಸ್ಯೆ, ಪ್ರಸ್ತುತ ಇರುವ ಆರೋಗ್ಯ ಸಮಸ್ಯೆಗಳ ಸಂಪೂರ್ಣ ಮಾಹಿತಿ ಡಿಜಿಟಲ್‌ ಹೆಲ್ತ್‌ ಐಡಿಯಲ್ಲಿ ಇರುವ ಕಾರಣದಿಂದಾಗಿ ವೈದ್ಯರಿಗೆ ನಿಮ್ಮ ಆರೋಗ್ಯದ ಬಗ್ಗೆ ಸರಿಯಾಗಿ ತಿಳಿದು ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ನಿಮ್ಮ ಆರೋಗ್ಯ ದಾಖಲೆಯನ್ನು ಕೈಯಲ್ಲಿ ಹಿಡಿದು ಅಲೆದಾಡುವ ಸಮಸ್ಯೆ ನಿಮಗೆ ಇರಲ್ಲ. ಡಿಜಿಟಲ್‌ ಮೂಲವಾಗಿಯೇ ಎಲ್ಲವೂ ಲಭಿಸುತ್ತದೆ. ನೀವು ಯಾವೆಲ್ಲಾ ಔಷಧಿಯನ್ನು ಪಡೆದುಕೊಂಡಿದ್ದೀರಿ, ಯಾವೆಲ್ಲಾ ವೈದ್ಯರನ್ನು ಭೇಟಿಯಾಗಿದ್ದೀರಿ ಎಂಬ ಮಾಹಿತಿ ಇದರಲ್ಲಿ ಇರುತ್ತದೆ.

English summary

Digital Health ID: Know How To Apply For It, Documents Needed And Other Details in Kannada

Digital Health ID: Know How To Apply For It, Documents Needed And Other Details in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X