mAadhaar ಅಪ್ಲಿಕೇಷನ್ ಇನ್ ಸ್ಟಾಲ್ ಮಾಡಿ, 35ಕ್ಕೂ ಹೆಚ್ಚು ಸೇವೆ ಪಡೆಯಿರಿ
ಈಚಿನ mAadhaar ಅಪ್ಲಿಕೇಷನ್ ಇನ್ ಸ್ಟಾಲ್ ಮಾಡಿಕೊಂಡು, ಹಳೆಯದನ್ನು ಅನ್ ಇನ್ ಸ್ಟಾಲ್ ಮಾಡಿಕೊಳ್ಳುವಂತೆ ಯೂನಿಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ. UIDAIನಿಂದ ಭಾರತೀಯ ನಾಗರಿಕರಿಗೆ ನೀಡಿರುವ ಆಧಾರ್ ಅನ್ನು 12 ಅಂಕಿಯಿಂದ ವೆರಿಫೈ ಮಾಡಬಹುದು.
ಇಆಧಾರ್ ಡೌನ್ ಲೋಡ್, ಸ್ಥಿತಿಯ ಅಪ್ ಡೇಟ್, ಆಧಾರ್ ಕೇಂದ್ರವನ್ನು ಗುರುತಿಸುವುದು ಮುಂತಾದವನ್ನು ಸ್ಮಾರ್ಟ್ ಫೋನ್ ಮೂಲಕ ಒಂದೇ ಆಪ್ ನಲ್ಲಿ ಪರಿಶೀಲಿಸಬಹುದು. mAadhaar ಅಪ್ಲಿಕೇಷನ್ ಹದಿಮೂರು ಭಾಷೆಗಳಲ್ಲಿ ದೊರೆಯುತ್ತದೆ. ಜತೆಗೆ 35ಕ್ಕೂ ಹೆಚ್ಚು ಆಧಾರ್ ಆನ್ ಲೈನ್ ಸೇವೆಗಳು ದೊರೆಯುತ್ತವೆ.
For best experience of the #mAadhaar App, uninstall any previously installed versions. Download the latest version from:https://t.co/62MEOf8J3P (Android)https://t.co/GkwPFzM9eq (iOS) pic.twitter.com/fS9mCzc62x
— Aadhaar (@UIDAI) February 9, 2021
"eAadhaar, ಸ್ಥಿತಿಯ ಅಪ್ ಡೇಟ್, ಆಧಾರ್ ಕೇಂದ್ರಗಳನ್ನು ಗುರುತಿಸುವುದು ಮುಂತಾದ 35ಕ್ಕೂ ಹೆಚ್ಚು ಸೇವೆಗಳನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪಡೆಯಬಹುದು," ಎಂದು ಟ್ವಿಟ್ ನಲ್ಲಿ UIDAI ತಿಳಿಸಿದೆ.
mAadhaar ಯಾರು ಆಯ್ಕೆ ಮಾಡಿಕೊಳ್ಳಬಹುದು?
ಯಾರ ಆಧಾರ್ ಕಾರ್ಡ್ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್ ಮ್ಯಾಪ್ ಆಗಿರುತ್ತದೋ ಅಂಥವರು mAadhaar ಅಪ್ಲಿಕೇಷನ್ ಆಧಾರ್ ಪ್ರೊಫೈಲ್ ಸೃಷ್ಟಿಸಬಹುದು.

ಹೊಸ ಅಪ್ಲಿಕೇಷನ್ ಡೌನ್ ಲೋಡ್ ನಂತರ ದೊರೆಯುವ ಸೇವೆಗಳಿವು:
* ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಬಹುದು, ಅದರಲ್ಲೂ ಐ.ಡಿ. ಪ್ರೂಫ್ ತೋರಿಸುವ ಸಂದರ್ಭದಲ್ಲಿ ಬೇಕಾಗುತ್ತದೆ.
* ಕಾಗದರಹಿತವಾಗಿ eKYC ಅಥವಾ QR ಕೋಡ್ ಹಂಚಿಕೊಳ್ಳಬಹುದು.
* ಮೇಲ್/ಇಮೇಲ್ ವೆರಿಫೈ ಮಾಡಬಹುದು.
* ಆಧಾರ್ ಅಥವಾ ಬಯೋಮೆಟ್ರಿಕ್ಸ್ ಲಾಕಿಂಗ್ ಮಾಡುವ ಮೂಲಕ ಆಧಾರ್ ಪಡೆಯಬಹುದು.
* VID ಜನರೇಟ್ ಅಥವಾ ರಿಟ್ರೀವ್ ಮಾಡಬಹುದು.
* ಆಫ್ ಲೈನ್ ಇದ್ದಾಗಲೂ ಆಧಾರ್ ಎಸ್ಸೆಮ್ಮೆಸ್ ಸೇವೆಗಳನ್ನು ಪಡೆಯಬಹುದು.
* ಡ್ಯಾಶ್ ಬೋರ್ಡ್ ನಲ್ಲಿ ಸೇವಾ ಮನವಿಯ ಸ್ಥಿತಿಗತಿಯನ್ನು ಸುಲಭವಾಗಿ ಪರಿಶೀಲಿಸಬಹುದು.
* ದಾಖಲೆಗಳ ಅಥೆಂಟಿಕೇಷನ್ ಮತ್ತು ಅಪ್ ಡೇಟೆಡ್ ಇತಿಹಾಸಕ್ಕೆ ಮನವಿ ಸಲ್ಲಿಸಬಹುದು.
* ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ಅಪಾಯಿಂಟ್ ಮೆಂಟ್ ಬುಕ್ ಮಾಡಬಹುದು,
* ನೋಂದಣಿ ಕೇಂದ್ರವನ್ನು ಗುರುತಿಸಬಹುದು (EC).
* ಆಧಾರ್ ವ್ಯಾಲಿಡೇಷನ್ ಪತ್ರಕ್ಕೆ ಮನವಿ ಮಾಡಬಹುದು.
* ಸಮಯ ಆಧಾರಿತ ಒನ್ ಟೈಮ್ ಪಾಸ್ ವರ್ಡ್ ಪಡೆಯಬಹುದು (TOTP).
mAadhaar ಅಪ್ಲಿಕೇಷನ್ ಭಾರತದಲ್ಲಿ ಆಂಡ್ರಾಯಿಡ್, ಐಒಎಸ್ ಎರಡೂ ಬಳಕೆದಾರರಿಗೆ ದೊರೆಯುತ್ತದೆ. mAadhaar ಹಳೇ ಆಪ್ ಅನ್ ಇನ್ ಸ್ಟಾಲ್ ಮಾಡಿಕೊಂಡು, ಹೊಸದನ್ನು ಇನ್ ಸ್ಟಾಲ್ ಮಾಡುವುದು ಉತ್ತಮ. ಆದರೆ ಈ ಅಪ್ಲಿಕೇಷನ್ ಮೂಲಕ ನಿಮ್ಮ ಹೆಸರು, ಜನ್ಮ ದಿನಾಂಕ, ಮೊಬೈಲ್ ನಂಬರ್ ಇಂಥ ವಿವರಗಳನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ.