For Quick Alerts
ALLOW NOTIFICATIONS  
For Daily Alerts

Economic Survey: ನವೆಂಬರ್‌ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್, 12-ಡಿಜಿಟ್ ಪ್ರಾಮುಖ್ಯತೆ ತಿಳಿಯಿರಿ

|

2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭವಾಗಿದೆ. ಅಧಿವೇಶನವು ರಾಷ್ಟ್ರಪತಿ ದ್ರೌಪತಿ ಮುರ್ಮು ಭಾಷಣದೊಂದಿಗೆ ಆರಂಭವಾಗಿದೆ. ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆಯನ್ನು ಮಂಡನೆ ಮಾಡಿದ್ದಾರೆ. ಈ ಆರ್ಥಿಕ ಸಮೀಕ್ಷೆಯಲ್ಲಿ 2022ರ ನವೆಂಬರ್‌ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್ ಮಾಡಲಾಗಿದೆ ಎಂದು ಉಲ್ಲೇಖಿತವಾಗಿದೆ.

 

2022ರ ನವೆಂಬರ್‌ವರೆಗೆ 135.2 ಕೋಟಿ ಆಧಾರ್ ಸಂಖ್ಯೆ ಜನರೇಟ್ ಮಾಡಲಾಗಿದ್ದು, ಸುಮಾರು 71.1 ಕೋಟಿ ಆಧಾರ್ ಸಂಖ್ಯೆಯನ್ನು ಅಪ್‌ಡೇಟ್ ಮಾಡಲಾಗಿದೆ. ದೇಶದಲ್ಲಿ ಪ್ರಸ್ತುತ ಎಲ್ಲ ಕಾರ್ಯಗಳಿಗೂ ಮುಖ್ಯವಾಗಿರುವ 12 ಡಿಜಿಟಲ್‌ ವಿಶಿಷ್ಠ ಸಂಖ್ಯೆಯು ಈಗ ಪ್ರಮುಖ ಅಸ್ತ್ರದಂತಾಗಿದೆ ಎಂಬುವುದುನ್ನು ಇದು ಸೂಚಿಸುತ್ತದೆ.

ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!

ಪ್ರಸ್ತುತ ಎಲ್ಲ ವಹಿವಾಟಿಗೂ ಆಧಾರ್ ಕಾರ್ಡ್ ಅತೀ ಮುಖ್ಯ ಸಾಧನವಾಗಿದೆ. ಅತೀ ಮುಖ್ಯ ದಾಖಲೆಗಳಲ್ಲಿ ಒಂದಾದ ಪ್ಯಾನ್ ಕಾರ್ಡ್‌ಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಪ್ಯಾನ್ ಆಧಾರ್‌ ಲಿಂಕ್‌ಗೆ ಮಾರ್ಚ್ 31 ಕೊನೆಯ ದಿನವಾಗಿದೆ. ಅದಾದ ಬಳಿಕ ಪ್ಯಾನ್ ನಿಷ್ಕ್ರೀಯವಾಗುವ ಸಾಧ್ಯತೆಯಿದೆ. ಹಾಗೆಯೇ ಸರ್ಕಾರದ ಯಾವುದೇ ಒಂದು ಯೋಜನೆಯ ಫಲಾನುಭವಿಗಳು ನಾವಾಗಬೇಕಾದರೆ ನಮ್ಮ ಬಳಿ ಆಧಾರ್ ಕಾರ್ಡ್ ಇರಬೇಕಾಗುತ್ತದೆ. ಆಧಾರ್ ಇದ್ದರೆ ಮಾತ್ರ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ. ಈ ಆಧಾರ್ ಕಾರ್ಡ್ ಬಳಸಿ ಯಾವೆಲ್ಲ ಕಾರ್ಯಗಳನ್ನು ಮಾಡಲಾಗಿದೆ ತಿಳಿಯೋಣ ಮುಂದೆ ಓದಿ....

 ಯಾವೆಲ್ಲ ಕಾರ್ಯಗಳಿಗೆ ಆಧಾರ್ ಬಳಕೆ ಮಾಡಲಾಗಿದೆ?

ಯಾವೆಲ್ಲ ಕಾರ್ಯಗಳಿಗೆ ಆಧಾರ್ ಬಳಕೆ ಮಾಡಲಾಗಿದೆ?

ನವೆಂಬರ್‌ 2022ರವರೆಗೆ ಆಧಾರ್ ಅಡಿಯಲ್ಲಿ 8,621.2 ಕೋಟಿ ದೃಢೀಕರಣ ಮಾಡಲಾಗಿದೆ. ಹಾಗೆಯೇ ಈವರೆಗೆ ಆಧಾರ್ ಬಳಿಸಿಕೊಂಡು 1,350.2 ಕೋಟಿ ಇಕೆವೈಸಿ ಮಾಡಲಾಗಿದೆ. ಆರ್ಥಿಕ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 75.3 ಕೋಟಿ ಕಟುಂಬವು ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಂಡಿದ್ದಾರೆ. 27.9 ಕೋಟಿ ಜನರು ತಮ್ಮ ಆಧಾರ್ ಅನ್ನು ಎಲ್‌ಪಿಜಿ ಸಬ್ಸಿಡಿಗೆ ಲಿಂಕ್ ಮಾಡಿಕೊಂಡಿದ್ದಾರೆ. ಇನ್ನು 75.4 ಕೋಟಿ ಬ್ಯಾಂಕ್ ಖಾತೆಗಳು ಆಧಾರ್‌ನೊಂದಿಗೆ ಲಿಂಕ್ ಆಗಿದೆ. ಆಧಾರ್ ಪಾವತಿ ವಿಧಾನದಿಂದ (AePS) 1,549.8 ಕೋಟಿ ವಹಿವಾಟು ನಡೆದಿದೆ.

 ಆಧಾರ್ ಪ್ರಾಮುಖ್ಯತೆ ತಿಳಿಯಿರಿ

ಆಧಾರ್ ಪ್ರಾಮುಖ್ಯತೆ ತಿಳಿಯಿರಿ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ದೇಶದಲ್ಲಿ ಆಧಾರ್ ಕಾರ್ಡ್ ಪ್ರಕ್ರಿಯೆಯನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ಹೊಂದಿದೆ. ಪ್ರತಿ ವ್ಯಕ್ತಿಗೂ ಆಧಾರ್ ಸಂಖ್ಯೆ ನೀಡುವಲ್ಲಿ ಯುಐಡಿಎಐ ಪಾತ್ರ ಪ್ರಮುಖವಾಗಿದೆ. ಆಧಾರ್ ಸುರಕ್ಷತೆ ಹಾಗೂ ಆಧಾರ್ ದುರ್ಬಲಕೆಯಾಗದಂತೆ ನೋಡಿಕೊಳ್ಳುವ ಕಾರ್ಯವನ್ನು ಕೂಡಾ ಯುಐಡಿಎಐ ಮಾಡುತ್ತಾ ಬಂದಿದೆ. 318 ಕೇಂದ್ರ ಯೋಜನೆಗಳು ಮತ್ತು 720 ರಾಜ್ಯದ ನೇರ ಪ್ರಯೋಜನ ವರ್ಗಾವಣೆ ಯೋಜನೆಗಳಿಗೆ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಹಣಕಾಸು ಸೇವೆ, ಸಬ್ಸಿಡಿ ಹಾಗೂ ಇತರೆ ಯೋಜನೆಗಳ ಲಾಭ ಪಡೆಯಲು ಆಧಾರ್ ಮುಖ್ಯವಾಗಿದೆ.

 AePS ವಹಿವಾಟಿನ ಬಗ್ಗೆ ಮಾಹಿತಿ
 

AePS ವಹಿವಾಟಿನ ಬಗ್ಗೆ ಮಾಹಿತಿ

ಆಧಾರ್ ಪಾವತಿ ವಿಧಾನದಿಂದ (AePS) ಬ್ಯಾಂಕಿಂಗ್ ವಹಿವಾಟು ಮತ್ತು ವಿತ್‌ಡ್ರಾ ಮಾಡಲು ಸಾಧ್ಯವಾಗುತ್ತದೆ. ನಗದು ಡೆಪಾಸಿಟ್‌ ಮಾಡಲು, ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಲೂ ಆಗುತ್ತದೆ. ಬರೀ ಬ್ಯಾಂಕ್ ಖಾತೆದಾರರ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಈ ವಹಿವಾಟು ನಡೆಸಬಹುದಾಗಿದೆ. ಕೋವಿಡ್ ಸಂದರ್ಭದಲ್ಲಿ ಮನೆ ಬಾಗಿಲಿಗೆ ತಲುಪಿ ಆಧಾರ್ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡಲಾಗಿದೆ. PAHAL ಮತ್ತು MGNREGSನಂತಹ ಕೇಂದ್ರ ಯೋಜನೆಗಳು ಆಧಾರ್ ವಹಿವಾಟಿನ ಅಡಿಯಲ್ಲಿ ನವೆಂಬರ್ 2022ರವರೆಗೆ 1,010 ಕೋಟಿ ಯಶಸ್ವಿ ವಹಿವಾಟಿನಲ್ಲಿ 7,66,055.9 ಕೋಟಿ ರೂಪಾಯಿ ಪಾವತಿ ಮಾಡಿದೆ. ಕೋವಿನ್‌ ಪ್ಲಾಟ್‌ಫಾರ್ಮ್‌ನಲ್ಲಿಯೂ ಆಧಾರ್ ಮುಖ್ಯ ಪಾತ್ರ ವಹಿಸಿದೆ.

English summary

Economic Survey 2023: 135.2 crore Aadhaar numbers generated till November 2022, details in Kannada

union budget 2023: Economic Survey 2023: About 135.2 crore Aadhaar numbers have been generated as of November 2022 while 71.1 crore Aadhaar numbers have been updated. details in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X