For Quick Alerts
ALLOW NOTIFICATIONS  
For Daily Alerts

Explainer: ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?

|

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುತ್ತಾರೆ ಎಂಬ ನಾಣ್ನುಡಿ ಕೇಳಿರುತ್ತೇವೆ. ಹಾಗೆಯೇ, ಅಮೆರಿಕಕ್ಕೆ ನೆಗಡಿಯಾದರೆ ವಿಶ್ವದ ಇತರ ದೇಶಗಳಿಗೆ ಶೀತ ಅಂಟಿಕೊಳ್ಳುತ್ತದಂತೆ. ಅಮೆರಿಕದಲ್ಲಾಗುವ ಬೆಳವಣಿಗೆಗಳು ಇಡೀ ವಿಶ್ವದ ಮೇಲೆ ಪರಿಣಾಮ ಬೀರುತ್ತವೆ. ಜಾಗತಿಕ ಆರ್ಥಿಕತೆ ಅಮೆರಿಕದ ಮೇಲೆ ಅವಲಂಬಿತವಾಗಿದೆ. ಅಮೆರಿಕದ ಆರ್ಥಿಕತೆ ಜಾಗತಿಕ ಆರ್ಥಿಕತೆಯ ಮೇಲೆ ಅವಲಂಬಿತವಾಗಿದೆ. ಅಮೆರಿಕವನ್ನು ಎತ್ತಿ ಬೆಳೆಸುವುದು ಬೇರೆಲ್ಲಾ ದೇಶಗಳಿಗೆ ಅನಿವಾರ್ಯ ಹೊರೆಯಾಗಿದೆ ಎನ್ನುತ್ತಾರೆ ಕೆಲ ಆರ್ಥಿಕ ತಜ್ಞರು.

ಇದೇ ವೇಳೆ, ಅಮೆರಿಕದ ಆರ್ಥಿಕತೆಗೆ ಈಗ ಗ್ರಹಣ ಸ್ಥಿತಿ ಬಂದಿದೆ. ಹಣದುಬ್ಬರ ಕೈಮೀರಿ ಹೋಗುವಂತೆ ತೋರುತ್ತಿದೆ. ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಸತತ ಮೂರು ಬಾರಿ ಏರಿಕೆ ಮಾಡಿದೆ. ಇನ್ನೂ ಒಂದೆರಡು ಬಾರಿ ದರ ಏರಿಕೆ ಮಾಡುವ ಸಾಧ್ಯತೆ ಇದೆ. ಇದರ ಪರಿಣಾಮ ವಿಶ್ವಾದ್ಯಂತ ಆರ್ಥಿಕತೆಗಳ ಮೇಲಾಗುತ್ತಿದೆ. ವಿಶ್ವದ ಇತರ ಷೇರುಪೇಟೆಗಳು ತತ್ತರಿಸಿಹೋಗುತ್ತಿವೆ. ಭಾರತವೂ ಸೇರಿ ಬಹುತೇಕ ಎಲ್ಲಾ ದೇಶಗಳ ಕರೆನ್ಸಿ ಮೌಲ್ಯ ಕಡಿಮೆ ಆಗುತ್ತಿದೆ.

ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಇದು ರುಪಾಯಿ ಕುಸಿತ ಅಲ್ಲ, ಡಾಲರ್ ಬಲವರ್ಧನೆ ಅಷ್ಟೇ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಭಾರತದಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಇಲ್ಲಿಂದ ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆಗಳು ಕಾಲ್ತೆಗೆಯುತ್ತಿವೆ. ಹೂಡಿಕೆದಾರರು ತಮ್ಮ ಹಣವನ್ನು ಭಾರತದಿಂದ ಅಮೆರಿಕಕ್ಕೆ ವಾಪಸ್ ತೆಗೆದುಕೊಂಡು ಹೋಗುತ್ತಿದ್ದಾರೆ. ಇದೆಲ್ಲಾ ಅಮೆರಿಕದಲ್ಲಿ ಅಲ್ಲಿನ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ಏರಿಸಿದ ಫಲ ಎಂದೆನ್ನಲಾಗುತ್ತಿದೆ.

ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?

ಬಡ್ಡಿ ದರ ಏರಿಕೆಯಿಂದ ಯಾಕೆ ಎಫೆಕ್ಟ್?

ಅಮೆರಿಕದಲ್ಲಿರುವುದಕ್ಕಿಂತ ಬಹಳ ಹೆಚ್ಚು ಬಡ್ಡಿ ದರವನ್ನು ಭಾರತದಲ್ಲಿ ನಿಗದಿ ಮಾಡಲಾಗುತ್ತದೆ. ಇದು ಡಾಲರ್ ಕರೆನ್ಸಿಯ ಸಂಗ್ರಹವನ್ನು ಹೆಚ್ಚಿಸಲು ಆರ್‌ಬಿಐ ಮಾಡುವ ತಂತ್ರ. ಆದರೆ, ಇತ್ತೀಚೆಗೆ ಅಮೆರಿಕದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರಗಳನ್ನು ಗಣನೀಯವಾಗಿ ಹೆಚ್ಚಿಸಿದೆ. ಸದ್ಯ ಅಮೆರಿಕದಲ್ಲಿ ಬಡ್ಡಿ ದರ ಶೇ. 3-3.25 ಇದೆ. ಭಾರತದಲ್ಲಿ ಆರ್‌ಬಿಐ ನಿಗದಿ ಮಾಡಿರುವ ಬಡ್ಡಿ ದರ ಶೇ. 5.40 ಇದೆ.

ಅಮೆರಿಕದಲ್ಲಿ ಮೊದಲೆಲ್ಲಾ ಬಡ್ಡಿ ದರ ಬಹಳ ಕಡಿಮೆ ಇತ್ತು. ಭಾರತ ಮತ್ತು ಅಮೆರಿಕ ಮಧ್ಯೆ ಇದ್ದ ಬಡ್ಡಿ ದರದ ಅಂತರ ಶೇ. 4ರವರೆಗೂ ಇತ್ತು. ಈಗ ಆ ಅಂತರ ಶೇ. 2ರ ಸುತ್ತಮುತ್ತ ಬಂದು ನಿಂತಿದೆ.

ಡಾಲರ್‌ಗೆ ಸಮವಾಗಿದ್ದ ರುಪಾಯಿ ಭಾರೀ ಕುಸಿತ ಕಂಡ ಪ್ರಮುಖ ಕಾಲಘಟ್ಟಗಳಿವುಡಾಲರ್‌ಗೆ ಸಮವಾಗಿದ್ದ ರುಪಾಯಿ ಭಾರೀ ಕುಸಿತ ಕಂಡ ಪ್ರಮುಖ ಕಾಲಘಟ್ಟಗಳಿವು

ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚುತ್ತಿರುವುದರಿಂದ ಡಾಲರ್ ಕರೆನ್ಸಿಯತ್ತ ಹೂಡಿಕೆದಾರರು ಮುಗಿಬೀಳುವುದು ಹೆಚ್ಚಾಗುತ್ತದೆ. ಭಾರತದಂಥ ಉದಯೋನ್ಮುಖ ಆರ್ಥಿಕತೆಯ ದೇಶಗಳಿಂದ ಎಫ್‌ಪಿಐ ಹೂಡಿಕೆಗಳು ಅಮೆರಿಕಕ್ಕೆ ವಾಪಸ್ ಹೋಗುತ್ತವೆ. ಅದರಲ್ಲೂ ಅನಿಶ್ಚಿತ ವಲಯಗಳಲ್ಲಿ ಮಾಡಲಾದ ಹೂಡಿಕೆಗಳನ್ನು ಹಿಂಪಡೆಯುವ ಸಾಧ್ಯತೆ ದಟ್ಟವಾಗಿರುತ್ತದೆ.

ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಾದರೆ ಭಾರತಕ್ಕೆ ಯಾಕೆ ಬಾಧೆ?

ಪರಿಣಾಮವಾಗಿ ಡಾಲರ್ ಕರೆನ್ಸಿ ಮೌಲ್ಯ ಹೆಚ್ಚುತ್ತದೆ, ರೂಪಾಯಿ ಮೌಲ್ಯ ಕುಸಿಯುತ್ತಿದೆ. ಬಡ್ಡಿ ದರ ಹೆಚ್ಚುವುದು, ಡಾಲರ್ ಮೌಲ್ಯ ಹೆಚ್ಚುವುದು ಒಂದು ರೀತಿಯಲ್ಲಿ ಭಾರತದ ಮೇಲೆ ವಿಷವರ್ತುಲದ ಎಫೆಕ್ಟ್ ಕೊಡುತ್ತವೆ.

ಡಾಲರ್ ಪ್ರಾಬಲ್ಯ ತಪ್ಪಿಸಲು ಭಾರತ ತನ್ನಲ್ಲಿರುವ ಕೆಲ ಡಾಲರ್ ಸಂಗ್ರಹವನ್ನು ಮಾರಬೇಕಾಗಿದೆ. ಪರಿಣಾಮವಾಗಿ ವಿದೇಶೀ ವಿನಿಮಯ ಮೀಸಲು ನಿಧಿ (ಫೋರೆಕ್ಸ್ ರಿಸರ್ವ್) ಕಡಿಮೆಗೊಳ್ಳುತ್ತಿದೆ. 573 ಬಿಲಿಯನ್ ಡಾಲರ್ (ಸುಮಾರು 47 ಲಕ್ಷ ಕೋಟಿ ರೂಪಾಯಿ) ಇದ್ದ ಫಾರೀನ್ ರಿಸರ್ವ್ಸ್ ಇದೀಗ ಸುಮಾರು 550 ಡಾಲರ್ (ಸುಮಾರು 45 ಲಕ್ಷ ಕೋಟಿ ರೂಪಾಯಿ) ಮಟ್ಟಕ್ಕೆ ಇಳಿದಿದೆ. ಆದರೆ, ರೂಪಾಯಿ ಮೌಲ್ಯ ಕುಸಿತವನ್ನು ತುಸು ಮಟ್ಟಿಗಾದರೂ ತಡೆಯಲು ಆರ್‌ಬಿಐಗೆ ಈ ಕ್ರಮ ಅನಿವಾರ್ಯ.

ಹಾಗೆಯೇ ಎಫ್‌ಪಿಐಗಳ ಹೂಡಿಕೆ ವಲಸೆ ಮತ್ತು ರೂಪಾಯಿ ಮೌಲ್ಯ ಕುಸಿತವನ್ನು ತಪ್ಪಿಸಲು ಆರ್‌ಬಿಐಗೆ ಬಡ್ಡಿ ದರ ಹೆಚ್ಚಿಸುವುದು ಕೂಡ ಅನಿವಾರ್ಯ ಎನ್ನಲಾಗುತ್ತಿದೆ. ಇದರಿಂದ ಅಮೆರಿಕದ ಹೂಡಿಕೆದಾರರನ್ನು ಮತ್ತೆ ಆಕರ್ಷಿಸಲು ಸಾಧ್ಯ, ಡಾಲರ್ ಸಂಗ್ರಹ ಹೆಚ್ಚಿಸಲು ಸಾಧ್ಯ ಎಂಬುದು ಭಾರತದ ತಂತ್ರ.

English summary

Explainer: Know How US Interest Rates Affect India and World Economy

The Indian economy is highly vulnerable to the US Federal Reserve interest rate action. High interest rate in the US will make Indian equities less attractive for foreign investors
Story first published: Sunday, October 16, 2022, 18:19 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X