For Quick Alerts
ALLOW NOTIFICATIONS  
For Daily Alerts

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಈ ದೇಶಗಳಲ್ಲಿ ಪುಕ್ಕಟೆ ಶಿಕ್ಷಣ, ಕಡಿಮೆ ಫೀ

|

ವಿದೇಶದಲ್ಲಿ ಓದಬೇಕು. ಅದರಲ್ಲೂ ಯಾವ ಕೋರ್ಸ್ ಗೆ ಯಾವ ದೇಶದಲ್ಲಿ ಅತ್ಯುತ್ತಮವಾದ ಶಿಕ್ಷಣ ಇದೆಯೋ ಅಲ್ಲಿ ಕಲಿಯಬೇಕು ಎಂಬುದು ಬಹುತೇಕರ ಆಸೆಯಾಗಿರುತ್ತದೆ. ಆದರೆ ಆಸೆ ಮಾತ್ರ ಇದ್ದರೆ ಆಗಲ್ಲ. ಅದಕ್ಕೆ ತಗಲುವ ವೆಚ್ಚವನ್ನು ಭರಿಸುವ ಆರ್ಥಿಕ ಚೈತನ್ಯ ಇರಬೇಕು. ಹಲವರಿಗೆ ವಿದ್ಯಾರ್ಥಿ ವೇತನ ಸಿಗಬಹುದು. ಅದರಿಂದ ಪೋಷಕರ ಮೇಲಿನ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ.

ಟ್ಯೂಷನ್ ಫೀ ಎಂಬುದಕ್ಕೆ ವಿದ್ಯಾರ್ಥಿ ವೇತನ ಸಿಕ್ಕರೆ ಒಳ್ಳೆಯದು. ಇನ್ನು ಶೈಕ್ಷಣಿಕ ಸಾಲ ಪಡೆದುಕೊಂಡರೆ ವಿದ್ಯಾರ್ಥಿಗಳ ಮೇಲೆ ಹೊರೆ ಬೀಳುತ್ತದೆ. ಈ ಲೇಖನದಲ್ಲಿ ಕೆಲವು ದೇಶಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಈ ದೇಶಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಒಂದೋ ಟ್ಯೂಷನ್ ಫೀ ಶೂನ್ಯ ಅಥವಾ ತೀರಾ ಕಡಿಮೆ.

ಹಾಗಂತ ಎಲ್ಲರಿಗೂ ಈ ವಿನಾಯಿತಿ ದೊರೆಯುತ್ತದೆಯಾ? ಇಲ್ಲ. ಕೆಲವು ಅರ್ಹತಾ ಮಾನದಂಡಗಳು ಇರಬೇಕಾಗುತ್ತದೆ. ಅವುಗಳನ್ನು ಪೂರೈಸಿದರೆ ಮಾತ್ರ ವಿನಾಯಿತಿ ದೊರೆಯುತ್ತದೆ. ಇರಲಿ, ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಯಾವ ದೇಶದಲ್ಲಿ ಎಂಥ ವಿನಾಯಿತಿ ಇದೆ ಎಂಬುದರ ಮಾಹಿತಿ ಇಲ್ಲಿದೆ.

 ಬ್ರೆಜಿಲ್

ಬ್ರೆಜಿಲ್

ಈ ದೇಶದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಟ್ಯೂಷನ್ ಫೀ ಶೂನ್ಯ. ಆದರೆ ಬ್ರೆಜಿಲ್ ನ ಪ್ರವೇಶ ಪರೀಕ್ಷೆಯಲ್ಲಿ ಪಾಸ್ ಆಗಬೇಕು. ಅಷ್ಟೇ ಅಲ್ಲ, ಸಿಇಎಲ್ ಪಿಇ- ಬ್ರಾಸ್- ಇದು ಪೋರ್ಚುಗೀಸ್ ಭಾಷೆಯ ಏಕೈಕ ಸರ್ಟಿಫಿಕೇಟ್ ಅನ್ನು ಪೂರ್ಣಗೊಳಿಸಬೇಕು. ಏಕೆಂದರೆ ಬ್ರೆಜಿಲ್ ನ ಅಧಿಕೃತ ಭಾಷೆ ಪೋರ್ಚುಗೀಸ್.

 ಜರ್ಮನಿ

ಜರ್ಮನಿ

ಜರ್ಮನಿಯಲ್ಲಿ ಒಂದು ಸೆಮಿಸ್ಟರ್ ಗೆ ನೂರರಿಂದ ಮುನ್ನೂರು ಅಮೆರಿಕನ್ ಡಾಲರ್ ನಷ್ಟು ಖರ್ಚಾಗಬಹುದು. ಅದು ಕೂಡ ಆಡಳಿತಾತ್ಮಕ ವೆಚ್ಚವನ್ನು ಭರಿಸುವ ಸಲುವಾಗಿ. ಕಾಲೇಜಿನ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದೇ ಅರ್ಹತಾ ಮಾನದಂಡ.

 ಫಿನ್ ಲ್ಯಾಂಡ್

ಫಿನ್ ಲ್ಯಾಂಡ್

ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಫಿನ್ ಲ್ಯಾಂಡ್ ನಲ್ಲಿ ಟ್ಯೂಷನ್ ಫೀ ಶೂನ್ಯ. ಕಾಲೇಜಿನ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಹಾಗೂ ವಿದ್ಯಾರ್ಥಿಯು ತನ್ನ ತಿಂಗಳ ಖರ್ಚಿಗೆ ಆರು ನೂರಾ ಹದಿನೇಳು ಡಾಲರ್ ಇರಿಸಿಕೊಳ್ಳುವುದು ಅರ್ಹತಾ ಮಾನದಂಡ.

 ಫ್ರಾನ್ಸ್

ಫ್ರಾನ್ಸ್

ಫ್ರಾನ್ಸ್ ನ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ನೋಂದಣಿ ಶುಲ್ಕ ಇನ್ನೂರಾ ಇಪ್ಪತ್ತರಿಂದ ನಾನೂರಾ ನಲವತ್ತು ಅಮೆರಿಕನ್ ಡಾಲರ್ ನೋಂದಣಿ ಶುಲ್ಕ ವರ್ಷಕ್ಕೆ ಖರ್ಚಾಗುತ್ತದೆ. ಆದರೆ ಪ್ರತಿಷ್ಠಿತ ವಿ.ವಿ. ಗಳಲ್ಲಿ ವರ್ಷಕ್ಕೆ ಐದೂವರೆ ಸಾವಿರದಿಂದ ಹದಿನಾರೂವರೆ ಸಾವಿರ ಅಮೆರಿಕನ್ ಡಾಲರ್ ಆಗುತ್ತದೆ. ಕಾಲೇಜಿನ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅರ್ಹತಾ ಮಾನದಂಡವಾಗುತ್ತದೆ.

 ನಾರ್ವೆ

ನಾರ್ವೆ

ನಾರ್ವೆಯಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕ ಐವತ್ತೈದು ಅಮೆರಿಕನ್ ಡಾಲರ್ ನಷ್ಟು ಆಗುತ್ತದೆ. ಪದವಿಪೂರ್ವ ಶಿಕ್ಷಣವನ್ನು ನಾರ್ವೆಯನ್ ಭಾಷೆಯಲ್ಲಿ ನೀಡಲಾಗುತ್ತದೆ. ಆದ್ದರಿಂದ ಆ ಭಾಷೆ ಕಲಿತಿರುವುದು ಕಡ್ಡಾಯ.

 ಸ್ಪೇನ್

ಸ್ಪೇನ್

ಯುರೋಪಿಯನ್ ಒಕ್ಕೂಟದೊಳಗಿನ ದೇಶಗಳು, ಯುರೋಪಿಯನ್ ಆರ್ಥಿಕ ಪ್ರದೇಶ ಅಥವಾ ಸ್ವಿಟ್ಜರ್ ಲೆಂಡ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಉಳಿದಂತೆ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ವಾರ್ಷಿಕ ಏಳು ನೂರಾ ಐವತ್ತರಿಂದ ಸಾವಿರದಾ ನಾನೂರು ಅಮೆರಿಕನ್ ಡಾಲರ್ ವೆಚ್ಚವಾಗುತ್ತದೆ. ಕಾಲೇಜಿನ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುವುದು ಮಾನದಂಡ.

 ಸ್ವೀಡನ್

ಸ್ವೀಡನ್

ಯುರೋಪಿಯನ್ ಒಕ್ಕೂಟದೊಳಗಿನ ದೇಶಗಳು, ಯುರೋಪಿಯನ್ ಆರ್ಥಿಕ ಪ್ರದೇಶ ಅಥವಾ ಸ್ವಿಟ್ಜರ್ ಲೆಂಡ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಇಲ್ಲದಿದ್ದರೆ ವಾರ್ಷಿಕ ಎಂಟು ಸಾವಿರದ ಇನ್ನೂರು ಡಾಲರ್ ನಿಂದ ಹದಿನಾಲ್ಕು ಸಾವಿರದ ಮುನ್ನೂರು ಅಮೆರಿಕನ್ ಡಾಲರ್ ವೆಚ್ಚವಾಗುತ್ತದೆ. ಕಾಲೇಜು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

 ಆಸ್ಟ್ರಿಯಾ

ಆಸ್ಟ್ರಿಯಾ

ಆಸ್ಟ್ರಿಯಾದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಒಂದು ಸೆಮಿಸ್ಟರ್ ಗೆ ಎಂಟು ನೂರು ಅಮೆರಿಕನ್ ಡಾಲರ್ ಆಗುತ್ತದೆ. ಇಲ್ಲೂ ಕೂಡ ಅಷ್ಟೇ, ಕಾಲೇಜು ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು.

 ಗ್ರೀಸ್

ಗ್ರೀಸ್

ಯುರೋಪಿಯನ್ ಒಕ್ಕೂಟದೊಳಗಿನ ದೇಶಗಳು, ಯುರೋಪಿಯನ್ ಆರ್ಥಿಕ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಇತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಸಾವಿರದ ಆರು ನೂರಾ ಐವತ್ತು ಅಮೆರಿಕನ್ ಡಾಲರ್ ಆಗುತ್ತದೆ. ಕಾಲೇಜು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬುದು ಮಾನದಂಡ.

 ಜೆಕ್ ರಿಪಬ್ಲಿಕ್

ಜೆಕ್ ರಿಪಬ್ಲಿಕ್

ಜೆಕ್ ಭಾಷೆ ಬರುವಂಥ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕ ಹದಿನೇಳು ಅಮೆರಿಕನ್ ಡಾಲರ್. ಇನ್ನು ಇಂಗ್ಲಿಷ್ ನಲ್ಲಿ ಕೋರ್ಸ್ ಮಾಡುವವರಿಗೆ ಪ್ರತಿ ಸೆಮಿಸ್ಟರ್ ಗೆ ಒಂಬೈನೂರಾ ಇಪ್ಪತ್ತು ಅಮೆರಿಕನ್ ಡಾಲರ್ ಆಗುತ್ತದೆ. ಕಾಲೇಜಿನ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವುದೇ ಮಾನದಂಡ.

 ಡೆನ್ಮಾರ್ಕ್

ಡೆನ್ಮಾರ್ಕ್

ಯುರೋಪಿಯನ್ ಒಕ್ಕೂಟದೊಳಗಿನ ದೇಶಗಳು, ಯುರೋಪಿಯನ್ ಆರ್ಥಿಕ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಇತರ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಐದು ಸಾವಿರದ ಐನೂರಾ ಎಪ್ಪತ್ತೈದು ಡಾಲರ್ ನಿಂದ ಹದಿನಾಲ್ಕು ಸಾವಿರದ ಎಂಟು ನೂರು ಡಾಲರ್ ಆಗುತ್ತದೆ. ಕಾಲೇಜು ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸುವುದು ಅರ್ಹತಾ ಮಾನದಂಡ.

English summary

Free Education Or Less Fee For International Students In These Countries

Here is the list of countries, where free education or less fee for international students.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X