For Quick Alerts
ALLOW NOTIFICATIONS  
For Daily Alerts

ಗೌಪ್ಯತೆ ಕಾಪಾಡಿಕೊಳ್ಳಲು ಸುರಕ್ಷಿತ ಆಧಾರ್‌: ಹೀಗೆ ಡೌನ್‌ಲೋಡ್‌ ಮಾಡಿ

|

ಆಧಾರ್ ಕಾರ್ಡ್ ಇದು ಸರ್ಕಾರದಿಂದ ನೀಡಲಾಗುವ ಅತ್ಯಂತ ಮಹತ್ವದ ಗುರುತಿನ ಚೀಟಿಗಳಲ್ಲೊಂದಾಗಿದೆ. ಆಧಾರ್ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ನೀಡಿದ 12-ಅಂಕಿಯ ಗುರುತಿಸುವಿಕೆಯ ಸಂಖ್ಯೆಯಾಗಿದೆ. ಆಧಾರ್‌ ಕಾರ್ಡ್ ಸಂಖ್ಯೆ ಈಗ ಭಾರತದಲ್ಲಿ ಬಹುಮುಖ್ಯವಾದ ಸಂಖ್ಯೆಯಾಗಿದೆ. ಆಧಾರ್‌ ಅನ್ನು ಜನರು ಐಡಿ ರೂಪದಲ್ಲಿಯೂ ಬಳಸುತ್ತಾರೆ. ಹಾಗಾಗಿ ಎಲ್ಲಾ ವಲಯದಲ್ಲೂ ಆಧಾರ್‌ ಕಾರ್ಡ್ ಈಗ ಪ್ರಮುಖವಾಗಿದೆ. ಆದರೆ ಆಧಾರ್‌ ಕಾರ್ಡ್‌ನಲ್ಲಿರುವ ನಿಮ್ಮ ಅಗತ್ಯ ಗೌಪ್ಯ ಮಾಹಿತಿಯನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಅದಕ್ಕಾಗಿ ನಿಮಗೆ ಸುರಕ್ಷಿತ ಆಧಾರ್‌ ಕಾರ್ಡ್ ಇದೆ.

ಆಧಾರ್‌ ಅಸಲಿಯೇ, ನಕಲಿಯೇ?: ಹೀಗೆ ತಿಳಿಯಿರಿ..ಆಧಾರ್‌ ಅಸಲಿಯೇ, ನಕಲಿಯೇ?: ಹೀಗೆ ತಿಳಿಯಿರಿ..

ಆಧಾರ್‌ ಎಂಬ ಹೆಸರೇ ಹೇಳುವಂತೆ ಇದು ನಮ್ಮ ಆಧಾರದಂತೆ ಆಗಿದೆ. ಈ 12-ಅಂಕಿಯ ಗುರುತಿಸುವಿಕೆಯ ಸಂಖ್ಯೆಯ ಸುರಕ್ಷಿತ ಆಧಾರ್‌ ಕಾರ್ಡ್‌ ನಿಮ್ಮ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ. ನಿಮ್ಮ ಆಧಾರ್‌ ಕಾರ್ಡ್‌ನ ನಾಲ್ಕು ಡಿಜಿಟ್‌ ಅಂಕಿಗಳನ್ನು ಮಾತ್ರ ಈ ಸುರಕ್ಷಿತ ಆಧಾರ್‌ ಕಾರ್ಡ್‌ನಲ್ಲಿ ಇರಲಿದೆ. ಉಳಿದ ಎಂಟು ಡಿಜಿಟ್‌ ಸಂಖ್ಯೆಗಳು ಸುರಕ್ಷಿತವಾಗಿರುತ್ತದೆ.

ಸುರಕ್ಷಿತ ಆಧಾರ್‌ ಡೌನ್‌ಲೋಡ್‌ ಮಾಡುವುದು ಹೇಗೆ?

ನೀವು ಡೌನ್‌ಲೋಡ್‌ ಮಾಡಿದ ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಆಧಾರ್‌ ಕಾರ್ಡ್‌ನ 12-ಅಂಕಿಗಳ ಪೈಕಿ ಎಂಟು ಅಂಕಿಗಳನ್ನು ಯಾರಿಗೂ ಕಾಣದಂತೆ ಸುರಕ್ಷಿತವಾಗಿರಿಸುವ ಕಾರ್ಯವನ್ನು ಈ ಸುರಕ್ಷಿತ ಆಧಾರ್‌ ಕಾರ್ಡ್ ಮಾಡಲಿದೆ. ಈ ಸುರಕ್ಷಿತ ಆಧಾರ್‌ ಕಾರ್ಡ್‌ನಲ್ಲಿ ಮೊದಲ ಎಂಟು ಅಂಕಿಗಳು xxxx-xxxx ಎಂದು ಕಾಣಲಿದೆ. ಉಳಿದ ನಾಲ್ಕು ಆಧಾರ್‌ ಸಂಖ್ಯೆಗಳು ಮಾತ್ರ ಕಾಣಲಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಹೇಳಿದೆ. ಆಧಾರ್‌ ನಂಬರ್‌ ಅಗತ್ಯವಾಗಿರದ ಕೆವೈಸಿಗಾಗಿ ನೀವು ಈ ಸುರಕ್ಷಿತ ಆಧಾರ್‌ ಕಾರ್ಡ್ ಅನ್ನು ಬಳಕೆ ಮಾಡಬಹುದು. ಹಾಗಾದರೆ ಈ ಆಧಾರ್‌ ಕಾರ್ಡ್ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ...

ಸುರಕ್ಷಿತ ಆಧಾರ್‌ ಅನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

*ಮೊದಲು https://eaadhaar.uidai.gov.in/#/ ಕ್ಕೆ ಭೇಟಿ ನೀಡಿ
* ನಿಮಗೆ ಸಾಮಾನ್ಯ ಆಧಾರ್‌ ಕಾರ್ಡ್ ಅಥವಾ ಸುರಕ್ಷಿತ ಆಧಾರ್‌ ಕಾರ್ಡ್ ಬೇಕೇ ಎಂದು ಆಯ್ಕೆ ಮಾಡಿ
* ನಿಮ್ಮ ಆಧಾರ್‍ ಸಂಖ್ಯೆ ಮೊದಲಾದವುಗಳನ್ನು ಉಲ್ಲೇಖ ಮಾಡಿ
* ನಿಮ್ಮ ಹೆಸರು, ಪಿನ್‌ ಕೋಡ್‌ಗಳನ್ನು ಹಾಕಿ
* ಬಳಿಕ ಒಟಿಪಿಯನ್ನು ಜನರೇಟ್‌ ಮಾಡಿ
* ಒಟಿಪಿ ನಿಮ್ಮ ಮೊಬೈಲ್‌ ಸಂಖ್ಯೆಗೆ ಬರಲಿದೆ.
* ಒಟಿಪಿಯನ್ನು ಹಾಕಿ
* ಈಗ ನಿಮಗೆ ಸುರಕ್ಷಿತ ಆಧಾರ್‌ ಕಾರ್ಡ್ ಡೌನ್‌ಲೋಡ್‌ ಮಾಡಲು ಸಾಧ್ಯವಾಗಲಿದೆ

ಈ ಸುರಕ್ಷಿತ ಆಧಾರ್‌ ಕೂಡಾ ಇ ಆಧಾರ್‌ನಂತೆಯೇ ಪಾಸ್‌ವರ್ಡ್ ಇದ್ದರೆ ಮಾತ್ರ ತೆರೆಯಲು ಸಾಧ್ಯವಾಗಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಡಿಜಿಟಲ್‌ ರೂಪದಲ್ಲಿ ಸಹಿ ಹಾಕಿದ ಆಧಾರ್‌ ಇದಾಗಿದೆ. ಆಧಾರ್‌ ಆಕ್ಟ್‌ ಪ್ರಕಾರ, ಇ ಆಧಾರ್‌ ನಮ್ಮ ಕೈಯಲ್ಲಿ ಇರುವ ಆಧಾರ್‌ನಷ್ಟೇ ಮಾನ್ಯವಾಗಿದೆ.

ಎಲ್‌ಐಸಿಗೆ ಪ್ಯಾನ್‌, ಆಧಾರ್‌ ಶೀಘ್ರ ಅಪ್‌ಡೇಟ್‌ ಮಾಡಿಕೊಳ್ಳಿ: ಇಲ್ಲಿದೆ ವಿವರಎಲ್‌ಐಸಿಗೆ ಪ್ಯಾನ್‌, ಆಧಾರ್‌ ಶೀಘ್ರ ಅಪ್‌ಡೇಟ್‌ ಮಾಡಿಕೊಳ್ಳಿ: ಇಲ್ಲಿದೆ ವಿವರ

ಆಧಾರ್‌ ಕಾರ್ಡ್ ನಕಲಿಯೇ ಅಸಲಿಯೇ ಎಂದು ಕೂಡಾ ನೀವು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಮೊದಲು ನೀವು ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡನಬೇಕು. ಬಳಿಕ Aadhaar services ಇರುವ ಪುಟಕ್ಕೆ ಹೋಗಬೇಕು. Verify an Aadhaar number ಮೇಲಿ ಕ್ಲಿಕ್‌ ಮಾಡಬೇಕು. Verify Aadhaar ಪುಟದಲ್ಲಿ ನಿಮ್ಮ 12 ಅಂಕಿಗಳ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ಕಾಪ್ಚಾವನ್ನು ನಮೂದಿಸಿ, Proceed to Verify ಮೇಲೆ ಕ್ಲಿಕ್‌ ಮಾಡಬೇಕು. ಈ ವೇಳೆ ಈ ಆಧಾರ್‌ ಸಂಖ್ಯೆ ಇದೆಯೇ, ಈ ಆಧಾರ್‌ ಕಾರ್ಡ್‌ನಲ್ಲಿ ಇರುವ ಎಲ್ಲಾ ಮಾಹಿತಿಗಳು ಸರಿಯಾಗಿದೆಯೇ ಎಂಬುವುದು ಇರಲಿದೆ. ಈ ಮೂಲಕ ಆಧಾರ್‌ ಕಾರ್ಡ್ ನಕಲಿಯೇ, ಅಸಲಿಯೇ ಎಂದು ನೀವು ತಿಳಿಯಲು ಸಾಧ್ಯವಾಗುತ್ತದೆ.

English summary

Get Masked Aadhaar Card to protect your privacy: How to download, Here's Steps

Get Masked Aadhaar to protect your privacy: How to download, Here's Steps.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X