ನೀವು ಬೆಂಗಳೂರಿನಲ್ಲಿದ್ದು ಕರ್ನಾಟಕದ ಪ್ರಮುಖ ಪ್ರದೇಶಗಳಿಗೆ ಪ್ರವಾಸ ಹೋಗಲು ಬಯಸಿದರೆ ಇಲ್ಲಿ ನಿಮಗೊಂದು ಉತ್ತಮ ಅವಕಾಶವಿದೆ. ರೈಲ್ವೆಯ ಗ್ಲಿಂಪ್ಸಸ್ ಆಫ್ ಕರ್ನಾಟಕ ಪ್ರವಾಸ ಪ್ಯಾಕೇಜ್ ಮೂಲಕ ನೀವು 4 ದಿನ 3 ರಾತ್ರಿಗಳ ಕಾಲ ಪ್ರವಾಸ ಮಾಡಬಹುದು.
ರಾಜಧಾನಿ ಬೆಂಗಳೂರಿನಲ್ಲಿ ಪ್ರಾರಂಭವಾಗುವ ಈ ಪ್ರವಾಸ ಬೆಂಗಳೂರಿನಲ್ಲೇ ಕೊನೆಯಾಗುತ್ತದೆ. ನೀವು ಕರ್ನಾಟಕದ ಸಾಂಸ್ಕೃತಿಕ ಪ್ರದೇಶಗಳಿಗೆ ಈ ಪ್ರವಾಸದಲ್ಲಿ ಭೇಟಿ ನೀಡಬಹುದಾಗಿದೆ. ಇದು ಐಷಾರಾಮಿ ಪ್ರಯಾಣವಾಗಿರಲಿದ್ದು, ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾದ ಬಂಡೀಪುರ, ಮೈಸೂರು ಮತ್ತು ಹಂಪಿಗೆ ನೀವು ಹೋಗಬಹುದು.

ಈ ಜನಪ್ರಿಯ ಪ್ರವಾಸ ಪ್ಯಾಕೇಜ್‌ನಲ್ಲಿ ನಾವು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ಹೋಗಬಹುದು. ಪ್ರವಾಸವು ಪ್ರಮುಖವಾಗಿ ಭಾನುವಾರ ಆರಂಭವಾಗುತ್ತದೆ. ಮುಂದಿನ ಪ್ರವಾಸ ಜನವರಿ ಆರರಂದು ಆರಂಭವಾಗಲಿದೆ. ಈ ಪ್ರವಾಸದಲ್ಲಿ ಬೆಂಗಳೂರಿನಿಂದ ಐಷಾರಾಮಿ ರೈಲಿನಲ್ಲಿ ನಂಜನಗೂಡು, ಮೈಸೂರು, ಹೊಸಪೇಟೆಗೆ ಪ್ರವಾಸ ಮಾಡಬಹುದು. ಈ ಪ್ಯಾಕೇಜ್ ವಿವರ ಇಲ್ಲಿದೆ ಮುಂದೆ ಓದಿ...
ಯಾವೆಲ್ಲ ದಿನ ಪ್ರವಾಸ?
2024: ಜನವರಿ 6
2024: ಫೆಬ್ರವರಿ 3
2024: ಮಾರ್ಚ್ 2
2024: ಅಕ್ಟೋಬರ್ 12
2024: ನವೆಂಬರ್ 9
2024: ಡಿಸೆಂಬರ್ 7, 28
2025: ಜನವರಿ 25
2025: ಫೆಬ್ರವರಿ 22
2025: ಮಾರ್ಚ್ 22
ದಿನ 1: ಶನಿವಾರ (ಬೆಂಗಳೂರಿನಿಂದ ನಂಜನಗೂಡು)
08:30 ಗಂಟೆಯಿಂದ ನೋಂದಣಿ ಮತ್ತು ಚೆಕ್ ಇನ್. ಯಶವಂತಪುರ ರೈಲ್ವೆ ಸ್ಟೇಷನ್‌ನಿಂದ ಬೆಳಿಗ್ಗೆ ನಿರ್ಗಮನ (09:45 ಗಂಟೆಗಳು). ನಂಜನಗೂಡಿಗೆ ರೈಲು ಬರುತ್ತಿದ್ದಂತೆ ರೈಲಿನಲ್ಲಿಯೇ ಮಧ್ಯಾಹ್ನದ ಊಟ. ನಂಜನಗೂಡಿನಲ್ಲಿ ಪ್ರವಾಸ. ಸಂಜೆ ಸಫಾರಿ (4:30 ರಿಂದ 6:30 ಗಂಟೆಗಳು). 8:15 ಕ್ಕೆ ರೈಲು ನಿಲ್ದಾಣಕ್ಕೆ ಆಗಮನ. ರೈಲಿನಲ್ಲಿ ಮೈಸೂರಿಗೆ ಪ್ರವಾಸ, ಪ್ರಯಾಣದಲ್ಲಿಯೇ ಊಟ. ಮೈಸೂರಿನಲ್ಲಿಯೇ ರಾತ್ರಿ ರೈಲಿನಲ್ಲಿ ತಂಗುವುದು.
ದಿನ 2: ಭಾನುವಾರ (ಮೈಸೂರು)
ರೈಲಿನಲ್ಲಿಯೇ ಉಪಾಹಾರ ಮಾಡುವುದು. ಮೈಸೂರು ಅರಮನೆಗೆ ಭೇಟಿ ನೀಡುವುದು. ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಬಳಿಕ ರೈಲು ನಿಲ್ದಾಣಕ್ಕೆ ವಾಪಾಸ್ ಬರುವುದು. ಹೊಸಪೇಟೆಗೆ ರೈಲು ಪ್ರಯಾಣ (8:20 ಗಂಟೆ). ನೀರು, ಇಂಧನ ತುಂಬುವ ಸಂದರ್ಭದಲ್ಲಿ ರಾತ್ರಿ ಊಟ.
ದಿನ 3: ಸೋಮವಾರ (ಹೊಸಪೇಟೆ)
ರೈಲಿನಲ್ಲಿಯೇ ಉಪಾಹಾರ ಮಾಡುವುದು. ಹಂಪಿಗೆ ಭೇಟಿ ನೀಡಿ ಬಳಿಕ ರೈಲಿನಲ್ಲಿಯೇ ಊಟ ಮಾಡುವುದು. ಸಂಜೆ ವಿರಾಮ ಸಮಯ ಇರಲಿದೆ. ರಾತ್ರಿ ಪ್ರಯಾಣದಲ್ಲಿಯೇ ಊಟ. ರೈಲು ಬೆಂಗಳೂರಿಗೆ ಸಂಚಾರ ಮಾಡುತ್ತದೆ.
ದಿನ 4: ಮಂಗಳವಾರ (ಬೆಂಗಳೂರು)
ರೈಲಿನಲ್ಲಿಯೇ ಉಪಾಹಾರ ಮಾಡುವುದು. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತಲುಪಿದರೆ ಪ್ರಯಾಣ ಕೊನೆಯಾಗುತ್ತದೆ.
ಐಷಾರಾಮಿ ಪ್ರವಾಸ ಪ್ಯಾಕೇಜ್ ದರ ಎಷ್ಟಿದೆ?
ಈ ಪ್ಯಾಕೇಜ್ ಪ್ರಮುಖವಾಗಿ ಐಷಾರಾಮಿಯಾಗಿ, ಆರಾಮವಾಗಿ ಪ್ರವಾಸ ಮಾಡಲು ಬಯಸುವ ಪ್ರವಾಸಿಗರಿಗಾಗಿದೆ. ರೈಲಿನಲ್ಲೇ ಎಲ್ಲ ಸೌಕರ್ಯಗಳು ಈ ಪ್ಯಾಕೇಜ್‌ನಲ್ಲಿ ಲಭ್ಯವಾಗಲಿದೆ. ಡಿಲಕ್ಸ್ ಕ್ಯಾಬಿನ್‌ಗೆ ಪ್ರತಿ ವ್ಯಕ್ತಿಗೆ ಪ್ಯಾಕೇಜ್ ದರವು 83319 ರೂಪಾಯಿ ಅಥವಾ 1000 ಡಾಲರ್ ಎಂದು ಇಂಡಿಯನ್ ಲಕ್ಸೂರಿ ಟ್ರೇನ್ ಡಾಟ್ ಕಾಮ್ ವರದಿ ಮಾಡಿದೆ.
ಕಡಿಮೆ ಎಂದರೆ ಪ್ಯಾಕೇಜ್ ದರವು 62489 ರೂಪಾಯಿ ಅಥವಾ 750 ಡಾಲರ್ ಎಂದು ಉಲ್ಲೇಖಿಸಲಾಗಿದೆ. ಆದರೆ ಪ್ಯಾಕೇಜ್ ದರದ ಖಚಿತ ಮಾಹಿತಿಗಾಗಿ ನೀವು 8595931021 ಗೆ ಕರೆ ಮಾಡಬಹುದು ಅಥವಾ [email protected] ಇಮೇಲ್ ಮಾಡಬಹುದು.


Click it and Unblock the Notifications