For Quick Alerts
ALLOW NOTIFICATIONS  
For Daily Alerts

ಗಾಂಧಿ ಚಿತ್ರದ ಬಳಿ ಹಸಿರು ಪಟ್ಟಿಯಿದ್ದ 500 ರೂ. ನೋಟು ನಕಲಿಯೇ?

|

ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತ ವಿವಿಧ ತಂತ್ರಗಳ ಮೂಲಕ ಬ್ಯಾಂಕ್ ನೋಟುಗಳ ದೃಢೀಕರಣವನ್ನು ಪರಿಶೀಲನೆ ಮಾಡುವ ಸಂದೇಶಗಳು ಹಾಗೂ ವಿಡಿಯೋಗಳು ಹರಿದಾಡುತ್ತಿದೆ. ಈ ನಡುವೆ ಕೆಲವು ರೀತಿಯ 500 ರೂ ನೋಟುಗಳು ನಕಲಿ ಎಂದು ಸಂದೇಶವೊಂದು ಹೇಳುತ್ತಿದೆ.

 

ಹಸಿರು ಪಟ್ಟಿಯು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಅವರ ಸಹಿಯ ಬಳಿ ಇಲ್ಲ ಆದರೆ ಮಹಾತ್ಮ ಗಾಂಧಿಯವರ ಫೋಟೋದ ಬಳಿ ಇದೆ. ಈ ತರಹದ ನೋಟುಗಳು ನಕಲಿ ಎಂದು ವಿಡಿಯೋದಲ್ಲಿ ಪ್ರತಿಪಾದನೆ ಮಾಡಲಾಗಿದೆ.

ನೋಟ್‌ ಬ್ಯಾನ್‌ ಆಗಿ ಐದು ವರ್ಷ: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಹೆಚ್ಚಳ

ವೀಡಿಯೊ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಸಹಿಯ ಪಕ್ಕದಲ್ಲಿ ಹಸಿರು ಪಟ್ಟಿಯನ್ನು ಹೊಂದಿರುವ ನೋಟುಗಳು ಮಾತ್ರ ನಿಜವಾದ ನೋಟುಗಳಾಗಿವೆ. ಇಲ್ಲವಾದರೆ ಅವೆಲ್ಲವೂ ನಕಲಿ ನೋಟು ಎಂದು ಈ ವಿಡಿಯೋದಲ್ಲಿ ಪ್ರತಿಪಾದನೆ ಮಾಡಿದೆ.

 ಗಾಂಧಿ ಚಿತ್ರದ ಬಳಿ ಹಸಿರು ಪಟ್ಟಿಯಿದ್ದ ನೋಟು ನಕಲಿಯೇ?

ಸ್ಪಷ್ಟಣೆ ನೀಡಿದ ಭಾರತ ಸರ್ಕಾರ

ಈ ವಿಡಿಯೋವನ್ನು ಪರಿಶೀಲನೆ ಮಾಡಿದ ಕೇಂದ್ರ ಸರ್ಕಾರವು ಟ್ವಿಟ್ಟರ್‌ನಲ್ಲಿನ ಭಾರತ ಸರ್ಕಾರದ ಫ್ಯಾಕ್ಟ್ ಚೆಕಿಂಗ್ ಹ್ಯಾಂಡಲ್‌ನಿಂದ ಸ್ಪಷ್ಟಣೆಯನ್ನು ನೀಡಿದೆ. "500 ರೂಪಾಯಿ ನೋಟು ನಕಲಿ ಎಂದು ಸಂದೇಶದಲ್ಲಿ ಹೇಳಲಾಗುತ್ತಿದೆ, ಅದರಲ್ಲಿ ಹಸಿರು ಪಟ್ಟಿಯು ಆರ್‌ಬಿಐ ಗವರ್ನರ್ ಅವರ ಸಹಿಯ ಬಳಿ ಇಲ್ಲ, ಆದರೆ ಗಾಂಧೀಜಿ ಅವರ ಚಿತ್ರದ ಬಳಿ ಇದೆ. ಆದ್ದರಿಂದ ಇದು ನಕಲಿ ನೋಟು ಎಂದು ಹೇಳಲಾಗುತ್ತಿದೆ," ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಕ್ ಹ್ಯಾಂಡಲ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.

"ಈ ಹಕ್ಕು ನಕಲಿ ಆಗಿದೆ. ಆರ್‌ಬಿಐ ಪ್ರಕಾರ ಎರಡೂ ರೀತಿಯ ನೋಟುಗಳು ಮಾನ್ಯವಾಗಿರುತ್ತವೆ," ಎಂದು ಫ್ಯಾಕ್ಟ್ ಚೆಕ್ ಹ್ಯಾಂಡಲ್ ಸ್ಪಷ್ಟಪಡಿಸಿದೆ. ನೋಟುಗಳ ವಿವಿಧ ವೈಶಿಷ್ಟ್ಯಗಳ ಬಗ್ಗೆ ಮತ್ತು ನಕಲಿ ಬಿಲ್‌ಗಳಿಂದ ಅಧಿಕೃತವಾದವುಗಳನ್ನು ಹೇಗೆ ಪ್ರತ್ಯೇಕಿಸುವುದು ಎಂಬುದರ ಕುರಿತು ಬಳಕೆದಾರರಿಗೆ ತಿಳಿಯಲು ಭಾರತೀಯ ಕರೆನ್ಸಿಯ ರೂ 500 ನೋಟಿಗೆ ಮಾರ್ಗದರ್ಶಿಯ ಲಿಂಕ್ ಅನ್ನು ಪಿಐಬಿ ಹಂಚಿಕೊಂಡಿದೆ.

English summary

Govt Clarification on Rs 500 notes where green strip is near Mahatma Gandhi's photo are fake

Govt of India clarification for message claiming that certain type of Rs 500 notes which the green strip is near the photo of Mahatma Gandhi are fake.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X