For Quick Alerts
ALLOW NOTIFICATIONS  
For Daily Alerts

ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?

|

ಗೌತಮ್ ಅದಾನಿಯ ಸಂಸ್ಥೆ ಅದಾನಿ ಗ್ರೂಪ್ ಭಾರೀ ವಂಚನೆಯನ್ನು ಮಾಡಿದೆ. ಮನಿ ಲಾಂಡರಿಂಗ್, ತೆರಿಗೆ ವಂಚನೆ, ಭ್ರಷ್ಟಾಚಾರವನ್ನು ಮಾಡಿದೆ ಎಂದು ತನಿಖಾ ಸಂಸ್ಥೆ ಹಿಂಡೆನ್‌ಬರ್ಗ್ ವರದಿ ಮಾಡಿದೆ. ಇದಾದ ಬೆನ್ನಲ್ಲೇ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಾಣುತ್ತಿದೆ. ಸಂಸ್ಥೆಯು ನಿರಂತರವಾಗಿ ನಷ್ಟವನ್ನೇ ಕಾಣುತ್ತಿದೆ. ಶುಕ್ರವಾರ ಸಂಸ್ಥೆಯ 10 ಸ್ಟಾಕ್‌ಗಳು ಕೂಡಾ ರೆಡ್‌ ಝೋನ್‌ನಲ್ಲಿತ್ತು.

ಈ ನಡುವೆ ಹಿಂಡನ್‌ಬರ್ಗ್ ವರದಿಯ ಪರಿಣಾಮವಾಗಿ ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಗೌತಮ್ ಅದಾನಿ ಎರಡು ದಿನದಲ್ಲೇ ಬರೋಬ್ಬರಿ 22.5 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆಯ ಎಲ್ಲ ಸ್ಟಾಕ್‌ಗಳು ನಷ್ಟವನ್ನು ಕಂಡಿದ್ದು, ಸ್ಟಾಕ್ ಶೇಕಡ 20ರಷ್ಟು ಇಳಿದಿದೆ.

ಹಿಂಡನ್‌ಬರ್ಗ್ vs ಅದಾನಿ ನಡುವೆ ಎಲ್‌ಐಸಿ, ಎಸ್‌ಬಿಐ ಉಳಿತಾಯ ರಿಸ್ಕ್‌ನಲ್ಲಿದೆಯೇ?ಹಿಂಡನ್‌ಬರ್ಗ್ vs ಅದಾನಿ ನಡುವೆ ಎಲ್‌ಐಸಿ, ಎಸ್‌ಬಿಐ ಉಳಿತಾಯ ರಿಸ್ಕ್‌ನಲ್ಲಿದೆಯೇ?

ಸಾಮಾನ್ಯವಾಗಿ ಶ್ರೀಮಂತ ವ್ಯಕ್ತಿಗಳ ಆದಾಯವು ಸ್ಟಾಕ್ ಮಾರುಕಟ್ಟೆಯಲ್ಲಿನ ಬೆಳವಣಿಗೆ ಮೇಲೆ ನಿಂತಿರುತ್ತದೆ. ಎಲಾನ್‌ ಮಸ್ಕ್ ಟ್ವಿಟ್ಟರ್‌ನ ನಷ್ಟದ ಬಳಿಕ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಒಂದನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಇಳಿದಂತೆ, ಗೌತಮ್ ಅದಾನಿ ಕೂಡಾ ಶ್ರೀಮಂತರ ಪಟ್ಟಿಯಲ್ಲಿ ಕೆಳಕ್ಕಿಳಿದಿದ್ದಾರೆ. ಅದು ಕೂಡಾ ಎರಡು ದಿನದಲ್ಲೇ 3ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 3ನೇ ಸ್ಥಾನದಿಂದ 7ನೇ ಸ್ಥಾನಕ್ಕೆ

3ನೇ ಸ್ಥಾನದಿಂದ 7ನೇ ಸ್ಥಾನಕ್ಕೆ

ಫೋರ್ಬ್ಸ್‌ನ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯ ಪ್ರಕಾರ ಶುಕ್ರವಾರ ಅದಾನಿ ವಿಶ್ವದ ಶ್ರಿಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಇಳಿದಿದ್ದಾರೆ. ಹಿಂಡನ್‌ಬರ್ಗ್ ವರದಿಗೂ ಮುನ್ನ ಅದಾನಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಜನವರಿ 27, 2023ರಂದು ಅದಾನಿ ನಿವ್ವಳ ಆದಾಯವು 96.5 ಬಿಲಿಯನ್ ಡಾಲರ್ ಆಗಿದ್ದು, ಸುಮಾರು 22.7 ಬಿಲಿಯನ್ ಡಾಲರ್‌ಗೂ ಅಧಿಕ ಅಂದರೆ ಶೇಕಡ 20ರಷ್ಟು ನಷ್ಟವನ್ನು ಅದಾನಿ ಕಂಡಿದ್ದಾರೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌ಗೂ ನಂತರದ ಸ್ಥಾನದಲ್ಲಿ ಅದಾನಿ ಇದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಅದಾನಿ ಸಂಪತ್ತು 100 ಬಿಲಿಯನ್‌ ಡಾಲರ್‌ಗೂ ಕೆಳಕ್ಕೆ ಇಳಿದಿರುವುದಾಗಿದೆ.

 ಅದಾನಿ ಗ್ರೂಪ್ ಷೇರು ಕುಸಿತ

ಅದಾನಿ ಗ್ರೂಪ್ ಷೇರು ಕುಸಿತ

ಕಳೆದ ಎರಡು ದಿನಗಳಿಂದ ಅದಾನಿ ಗ್ರೂಪ್‌ನ ಷೇರುಗಳು ಇಳಿಕೆ ಕಾಣುತ್ತಿದೆ. ಪ್ರಮುಖವಾಗಿ ಅದಾನಿ ಗ್ರೂಪ್ ವಂಚನೆಯಲ್ಲಿ ಭಾಗಿಯಾಗಿದೆ ಎಂಬ ಹಿಂಡನ್‌ಬರ್ಗ್ ವರದಿಯ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ. ಅದಾನಿ ಟ್ರಾನ್ಸ್‌ಮಿಷನ್ ಷೇರು ಶೇಕಡ 19ರಷ್ಟು ಇಳಿಕೆಯಾಗಿದೆ, ಅದಾನಿ ಟೋಟಲ್ ಗ್ಯಾಸ್ ಷೇರು ಶೇಕಡ 19.1ರಷ್ಟು ಇಳಿದಿದೆ. ಇದು ಮಾರ್ಚ್ 2020 ಬಳಿಕ ಕಂಡು ಬಂದ ಭಾರೀ ಪ್ರಮಾಣದ ಇಳಿಕೆಯಾಗಿದೆ. ಅದಾನಿ ಗ್ರೀನ್ ಎನರ್ಜಿ ಷೇರು ಶೇಕಡ 16ರಷ್ಟು ಕುಸಿದಿದೆ.

 ಹಿಂಡನ್‌ಬರ್ಗ್ ವರದಿ ಏನು ಹೇಳಿದೆ?

ಹಿಂಡನ್‌ಬರ್ಗ್ ವರದಿ ಏನು ಹೇಳಿದೆ?

ಹಿಂಡನ್‌ಬರ್ಗ್ ತನಿಖಾ ವರದಿಯು ಅದಾನಿ ಗ್ರೂಪ್ ವಂಚನೆಯನ್ನು ಭಾಗಿಯಾಗಿದೆ. ದಶಕಗಳಿಂದ ವಂಚನೆ ನಡೆಸುತ್ತಿದೆ. ಅದಾನಿ ಗ್ರೂಪ್‌ ಬಗ್ಗೆ ಸುಮಾರು ಎರಡು ವರ್ಷಗಳ ಕಾಲ ತನಿಖೆಯನ್ನು ನಡೆಸಿ ಹಿಂಡನ್‌ಬರ್ಗ್ ಈ ವರದಿಯನ್ನು ನೀಡಿದೆ. ಅದಾನಿ ಗ್ರೂಪ್‌ನ ಹಲವಾರು ವ್ಯಕ್ತಿಗಳ ಸಂದರ್ಶನ ಮಾಡಲಾಗಿದೆ. ಮಾಜಿ ಹಿರಿಯ ಅಧಿಕಾರಿಗಳ ಸಂದರ್ಶನವನ್ನು ಕೂಡಾ ಮಾಡಲಾಗಿದೆ. ಹಲವಾರು ದಾಖಲೆಗಳನ್ನು ಕೂಡಾ ನಾವು ಪರಿಶೀಲನೆ ಮಾಡಿದ್ದೇವೆ. 12ರಷ್ಟು ದೇಶಗಳಿಗೆ ಭೇಟಿ ನೀಡಿ ಸ್ವತಃ ಸ್ಥಳ ಪರಿಶೀಲನೆ ಮಾಡಿದ್ದೇವೆ. ಇದರಿಂದಾಗಿ ಅದಾನಿ ಗ್ರೂಪ್‌ಯು ವಂಚನೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ ಎಂದು ವರದಿ ಹೇಳಿದೆ. ಅದಾನಿ ಕುಟುಂಬದ ಸದಸ್ಯರು ಹಾಗೂ ಕಂಪನಿಗೆ ಸಂಬಂಧಿಸಿದ ಅಧಿಕಾರಿಗಳು ಮಾರಿಷಸ್, ಯುಎಇ ಮತ್ತು ಕೆರಿಬಿಯನ್ ದ್ವೀಪಗಳಲ್ಲಿ ಕಡಲಾಚೆಯ ಶೆಲ್ ಘಟಕಗಳನ್ನು ರಚಿಸಲು ಸಹಕರಿಸಿದ್ದಾರೆ. ನಕಲಿ ಅಥವಾ ಕಾನೂನುಬಾಹಿರ ವಹಿವಾಟು ಮತ್ತು ಲಿಸ್ಟೆಡ್ ಕಂಪನಿಗಳಿಂದ ಹಣವನ್ನು ಪಡೆಯುವ ಪ್ರಯತ್ನ ಮಾಡಿದ್ದಾರೆ. ನಕಲಿ ಆಮದು/ರಫ್ತು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಹಿಂಡೆನ್‌ಬರ್ಗ್ ತನ್ನ ತನಿಖಾ ವರದಿಯಲ್ಲಿ ತಿಳಿಸಿದೆ.

 ಹೂಡಿಕೆದಾರರ ನಂಬಿಕೆ ಪಡೆಯುವಲ್ಲಿ ಸೋತ ಅದಾನಿ ಗ್ರೂಪ್

ಹೂಡಿಕೆದಾರರ ನಂಬಿಕೆ ಪಡೆಯುವಲ್ಲಿ ಸೋತ ಅದಾನಿ ಗ್ರೂಪ್

ಅದಾನಿ ಗ್ರೂಪ್ ಹಿಂಡನ್‌ಬರ್ಗ್ ತನಿಖಾ ವರದಿಯನ್ನು ತಳ್ಳಿಹಾಕಿದೆ. ಇದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ, ಸುಳ್ಳು ಆರೋಪವನ್ನು ಮಾಡುತ್ತಿದೆ ಎಂದು ಅದಾನಿ ಗ್ರೂಪ್ ಹೇಳಿದೆ. ಅದಾನಿ ಗ್ರೂಪ್ ಹೇಳಿಕೆಗೆ ಹಿಂಡನ್‌ಬರ್ಗ್ ಕೂಡಾ ಪ್ರತಿಕ್ರಿಯೆ ನೀಡಿದೆ. ನಾವು ವರದಿಯಲ್ಲಿ ಉಲ್ಲೇಖ ಮಾಡಿರುವ 88 ಪ್ರಶ್ನೆಗಳಿಗೆ ಅದಾನಿ ಗ್ರೂಪ್ ಉತ್ತರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ. ನಮ್ಮಲ್ಲಿ ಎಲ್ಲ ದಾಖಲೆಗಳು ಇದೆ ಎಂದು ಕೂಡಾ ಹಿಂಡನ್‌ಬರ್ಗ್ ವರದಿ ಹೇಳಿದೆ. ಈ ನಡುವೆ ಹೂಡಿಕೆದಾರರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಅದಾನಿ ಗ್ರೂಪ್ ಸೋತಂತೆ ಕಾಣುತ್ತಿದೆ. ಇದಕ್ಕೆ ಷೇರು ಮಾರುಕಟ್ಟೆಯಲ್ಲಿನ ಬೆಳವಣಿಗೆಯೇ ಸಾಕ್ಷಿಯಾಗಿದೆ.

English summary

Hindenberg Report: Gautam Adani Slips To 7th On World's Richest List

Asia's richest man Gautam Adani has lost around $22.5 billion in two days after Hindenburg Research accused the Adani Group of stock market manipulation. Gautam Adani Slips To 7th On World's Richest List.
Story first published: Saturday, January 28, 2023, 12:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X