For Quick Alerts
ALLOW NOTIFICATIONS  
For Daily Alerts

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳಲ್ಲಿ ಮಳಿಗೆಗಳ ಬಾಡಿಗೆ ಎಷ್ಟು? ಹೇಗೆ ನಿರ್ಧರಿಸಲಾಗುತ್ತೆ?

|

ಮಹಾ ನಗರಗಳೇ ಆಗಲಿ, ನಗರ ಪ್ರದೇಶಗಳೇ ಇರಲಿ ಜನರು ಅಂಗಡಿಗಳಿಗಿಂತ ಹೆಚ್ಚಾಗಿ ಶಾಪಿಂಗ್ ಮಾಲ್‌ಗಳಿಗೆ ತೆರಳುವುದು ರೂಢಿಯಾಗಿಬಿಟ್ಟಿದೆ. ಮನರಂಜನೆ ಸೇರಿದಂತೆ ಮನೆಗೆ ಬೇಕಾಗುವ ಎಲ್ಲಾ ಸರಕುಗಳು ಒಂದೇ ಜಾಗದಲ್ಲಿ ಸಿಗುವುದರಿಂದ ಗ್ರಾಹಕರು ಶಾಪಿಂಗ್ ಮಾಲ್‌ಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ.

ವೀಕೆಂಡ್ ಬಂದ ಕೂಡಲೇ ನಗರದ ಶಾಪಿಂಗ್‌ ಮಾಲ್‌ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಆದರೆ ವಾರದ ದಿನಗಳಲ್ಲಿ ಹೆಚ್ಚಾಗಿ ಜನರು ಕಾಣಿಸೋದೆ ಇಲ್ಲ. ಗ್ರಾಹಕರು ತೆರಳುವುದು ತುಂಬಾ ಕಡಿಮೆ ಇರುತ್ತದೆ. ಅದರಲ್ಲೂ ಕೆಲವು ಬ್ರ್ಯಾಂಡೆಡ್ ಅಂಗಡಿಗಳಲ್ಲಂತೂ ಜನರಿಲ್ಲದೆ ನೊಣ ಹೊಡಿಯುವಂತೆ ಕಂಡುಬರುತ್ತೆ.

ಅನೇಕ ಜನರಲ್ಲಿ ಈ ಪ್ರಶ್ನೆ ಮೂಡುವುದು ಬಹಳ ಸಹಜ. ಅದೇನಂದ್ರೆ ಈ ಶಾಪ್‌ಗಳಲ್ಲಿ ಜನರೇ ಇಲ್ಲದಿದ್ರೂ ಹೇಗೆ ದುಡ್ಡು ಮಾಡ್ತಾರೆ? ಗ್ರಾಹಕರು ಕಡಿಮೆ ಇದ್ರೆ ನಷ್ಟ ಆಗಲ್ವಾ? ಶಾಪಿಂಗ್‌ ಮಾಲ್‌ಗಳಲ್ಲಿ ಬಾಡಿಗೆ ಎಷ್ಟಿರುತ್ತೆ? ಯಾವ ಆಧಾರದ ಮೇಲೆ ಬಾಡಿಗೆ ನಿರ್ಧಾರವಾಗುತ್ತೆ? ಹೀಗೆ ಗ್ರಾಹಕರ ಮನದಲ್ಲಿ ಸಹಜವಾಗಿ ಮೂಡುವ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಈ ಲೇಖನದಲ್ಲಿದೆ ಮುಂದೆ ಓದಿ.

ವಿಸ್ತೀರ್ಣದ ಆಧಾರದ ಮೇಲೆ ಬಾಡಿಗೆ
 

ವಿಸ್ತೀರ್ಣದ ಆಧಾರದ ಮೇಲೆ ಬಾಡಿಗೆ

ಯಾವುದೇ ಶಾಪಿಂಗ್ ಮಾಲ್ ಇರಲಿ ನೂರಾರು ಶಾಪ್‌ಗಳನ್ನು ನೀವು ನೋಡಬಹುದು. ಇಲ್ಲಿ ಎಲ್ಲಾ ಶಾಪ್‌ಗಳಿಗೂ ಒಂದೇ ರೀತಿಯ ಬಾಡಿಗೆ ಇರೋದಿಲ್ಲ. ಬ್ರ್ಯಾಂಡೆಡ್ ಶಾಪ್ ಆದ್ರೂ ಕೂಡ ಸ್ಕ್ವೇರ್ ಫೀಟ್ ಆಧಾರದ ಮೇಲೆ ಬಾಡಿಗೆಯನ್ನು ನಿರ್ಧರಿಸಲಾಗುತ್ತೆ.

ಯಾವ ಫ್ಲೋರ್ ಎಂಬುದರ ಮೇಲೂ ಬಾಡಿಗೆ ನಿರ್ಧಾರ

ಯಾವ ಫ್ಲೋರ್ ಎಂಬುದರ ಮೇಲೂ ಬಾಡಿಗೆ ನಿರ್ಧಾರ

ಶಾಪಿಂಗ್ ಮಾಲ್‌ಗಳಲ್ಲಿ ಬಾಡಿಗೆಯೂ ಫ್ಲೋರ್‌ಗಳ ಮೇಲೂ ನಿರ್ಧಾರವಾಗುತ್ತೆ. ಸಾಮಾನ್ಯವಾಗಿ ಗ್ರೌಂಡ್ ಫ್ಲೋರ್‌ನಲ್ಲಿರುವ ಮಳಿಗೆಗಳಿಗೆ ಹೆಚ್ಚಿನ ಬಾಡಿಗೆ ಇರುತ್ತದೆ. ಇನ್ನುಳಿದಂತೆ ಮೊದಲನೇ ಫ್ಲೋರ್, ಸೆಕೆಂಡ್ ಫ್ಲೋರ್ ಹೀಗೆ ಹಂತ ಹಂತವಾಗಿ ವಿಸ್ತ್ರೀರ್ಣ ಹಾಗೂ ಫ್ಲೋರ್ ಮೇಲೆ ಬಾಡಿಗೆ ನಿರ್ಧಾರವಾಗುತ್ತೆ. ಜೊತೆಗೆ ಲಿಫ್ಟ್‌ ಸೌಲಭ್ಯವಿಲ್ಲದಿದ್ರೆ ಕೂಡ ಮೇಲಿನ ಫ್ಲೋರ್‌ಗಳಿಗೆ ಬಾಡಿಗೆ ಕಡಿಮೆ ಇರುತ್ತೆ.

ಶಾಪಿಂಗ್ ಮಾಲ್ ಎಂಟ್ರಿಗಳಲ್ಲಿನ ಮಳಿಗೆಗಳಿಗೆ ಹೆಚ್ಚಿನ ದರ

ಶಾಪಿಂಗ್ ಮಾಲ್ ಎಂಟ್ರಿಗಳಲ್ಲಿನ ಮಳಿಗೆಗಳಿಗೆ ಹೆಚ್ಚಿನ ದರ

ದೊಡ್ಡ ಶಾಪಿಂಗ್ ಮಾಲ್‌ಗಳಲ್ಲಿ ಸಾಮಾನ್ಯವಾಗಿ ಎರಡು ಇಲ್ಲವೇ ಮೂರು ಎಂಟ್ರಿ ಇರುತ್ತದೆ. ಈ ಎಂಟ್ರಿಗಳಲ್ಲಿ ಇರುವಂತಹ ಮಳಿಗೆಗಳಿಗೆ ಸಾಮಾನ್ಯವಾಗಿ ಹೆಚ್ಚಿನ ಬಾಡಿಗೆ ದರವಿರುತ್ತದೆ. ಏಕೆಂದರೆ ಆರಂಭದಲ್ಲಿನ ಶಾಪ್‌ಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆ. ಮತ್ತು ತೆರಳಲು ಅತ್ಯಂತ ಸುಲಭವಾಗಿರುತ್ತೆ. ಹೀಗಾಗಿ ಇಲ್ಲಿ ಬಹುತೇಕ ದೊಡ್ಡ ದೊಡ್ಡ ಬ್ರ್ಯಾಂಡೆಡ್ ಸರಕುಗಳನ್ನೇ ನೀವು ಕಾಣಬಹುದು.

ಯಾವ ಫ್ಲೋರ್‌ಗೆ ಎಷ್ಟು ಬಾಡಿಗೆ?
 

ಯಾವ ಫ್ಲೋರ್‌ಗೆ ಎಷ್ಟು ಬಾಡಿಗೆ?

ಈ ಮೇಲೆ ತಿಳಿಸಿದಂತೆ ಪ್ರತಿ ಫ್ಲೋರ್‌ಗೆ ಬೇರೆಯದ್ದೇ ಆದ ಬಾಡಿಗೆ ದರವಿರುತ್ತದೆ. ಡೆಪಾಸಿಟ್ ಅಮೌಂಟ್ ಪಾವತಿ ಮಾಡಿರುವ ಶಾಪ್‌ಗಳ ಮಾಲೀಕರು ಗ್ರೌಂಡ್‌ ಫ್ಲೋರ್‌ನಲ್ಲಿ ಬಾಡಿಗೆ ಗೆ ಇದ್ದರೆ ಹೆಚ್ಚಿನ ಹಣ ಪಾವತಿಸುತ್ತಾರೆ. ಸಾಮಾನ್ಯವಾಗಿ ಗ್ರೌಂಡ್ ಫ್ಲೋರ್‌ಗೆ 15 ರಿಂದ 20 ಪರ್ಸೆಂಟ್ ಬಾಡಿಗೆ ದರವಿದ್ರೆ, ಫಸ್ಟ್, ಸೆಕೆಂಡ್ ಫ್ಲೋರ್‌ಗಳಿಗೆ 10 ರಿಂದ 15 ಪರ್ಸೆಂಟ್ ಬಾಡಿಗೆ ಇರುತ್ತದೆ.

ಉತ್ಪನ್ನಗಳ ಮಾರಾಟದ ಮೇಲೆ ಪರ್ಸೆಂಟ್‌ನಲ್ಲಿ ಕಮಿಷನ್

ಉತ್ಪನ್ನಗಳ ಮಾರಾಟದ ಮೇಲೆ ಪರ್ಸೆಂಟ್‌ನಲ್ಲಿ ಕಮಿಷನ್

ವಿಸ್ತ್ರೀರ್ಣ, ಫ್ಲೋರ್ ಹಾಗೂ ಶಾಪಿಂಗ್ ಮಾಲ್ ಎಂಟ್ರಿ ಕುರಿತಾಗಿ ಬಾಡಿಗೆ ನಿರ್ಧಾರದ ಕುರಿತು ತಿಳಿಸಲಾಯ್ತು. ಆದರೆ ಈ ಪರ್ಸೆಂಟೇಜ್ ರೀತಿಯಲ್ಲಿ ಬಾಡಿಗೆ ನೀಡುವುದು ಎಷ್ಟು ಮಾರಾಟ ಆಗಿದೆ ಎಂಬುದರ ಮೇಲೆ. ಉದಾಹರಣೆಗೆ ಮೊಬೈಲ್ ಅಂಗಡಿಯಾಗಿದ್ದರೆ, ಎಷ್ಟು ಮೊಬೈಲ್ ಮಾರಾಟವಾಯ್ತು, ಎಷ್ಟು ದರ ಎಂಬುದರ ಆಧಾರದ ಮೇಲೆ ಈ ಮೇಲೆ ವಿಧಿಸಲಾದ ಪರ್ಸೆಂಟೇಜ್ ಬಾಡಿಗೆ ಪ್ರತಿನಿತ್ಯ ಕಟ್ ಆಗುತ್ತೆ.

ಒಂದು ವೇಳೆ ಯಾವುದೇ ಉತ್ಪನ್ನವು ಮಾರಾಟವಾಗದೇ ಇದ್ರೆ ಆ ದಿನ ಯಾವುದೇ ಹಣವನ್ನು ಬಾಡಿಗೆ ರೂಪದಲ್ಲಿ ಕಮಿಷನ್ ನೀಡುವುದು ಇರುವುದಿಲ್ಲ. ಎಷ್ಟು ಉತ್ಪನ್ನ ಮಾರಾಟ ಆಗಿದೆ ಎಂಬುದರ ಮೇಲೆ ಕಮಿಷನ್ ನೀಡಬೇಕಾಗುತ್ತದೆ. ಪ್ರತಿ ಶಾಪ್‌ನ ಬಿಲ್ಲಿಂಗ್‌, ಎಷ್ಟು ಉತ್ಪನ್ನಗಳು ಮಾರಾಟವಾಗಿವೆ ಎಂಬುದು ಶಾಪಿಂಗ್ ಮಾಲ್‌ನ ವ್ಯವಸ್ಥಾಪಕರಿಗೆ ಆನ್‌ಲೈನ್ ಮೂಲಕ ತಲುಪುತ್ತದೆ. ಇದರ ಆಧಾರದ ಮೇಲೆ ಪ್ರತಿದಿನ ಬಾಡಿಗೆ ಪಾವತಿಯಾಗುತ್ತೆ. ಈ ಮೂಲಕ ವೀಕೆಂಡ್‌ಗಳಲ್ಲಿ ಮಾತ್ರ ಜನರು ಬಂದ್ರೂ ಲಾಭ ಮಾಡುವ ಅವಕಾಶ ಒದಗಿಬರುತ್ತದೆ. ಆದರೆ ಎಷ್ಟು ಮಾರಾಟ ಆಗುತ್ತದೆ ಎಂಬುದು ಲಾಭದ ಪ್ರಮಾಣವನ್ನು ನಿರ್ಧರಿಸುತ್ತದೆ.

ಡೆಪಾಸಿಟ್ ಅಮೌಂಟ್ ಎಷ್ಟು?

ಡೆಪಾಸಿಟ್ ಅಮೌಂಟ್ ಎಷ್ಟು?

ಸ್ಟೋರ್ ಓಪನ್‌ಗೂ ಮುಂಚೆ ಎಷ್ಟು ವ್ಯಾಪಾರ ಆಗಬಹುದು ಎಂದು ಅಂದಾಜು ಮೌಲ್ಯವನ್ನು ನೀಡಬೇಕಾಗುವುದು. ಉದಾಹರಣೆಗೆ ಅಂದಾಜು 50 ಲಕ್ಷ ರುಪಾಯಿಯ ಉತ್ಪನ್ನ ಮಾರಾಟ ಮಾಡಬಹುದು ಎಂದರೆ, ನಿಮಗೆ ಕೊಟ್ಟಿರುವ ಪರ್ಸೆಂಟ್‌ ಆಧಾರದ ಮೇಲೆ ಠೇವಣಿ ಮಾಡಬೇಕಾದ ಹಣ ನಿರ್ಧಾರವಾಗುತ್ತೆ. ಅಂದರೆ ಈ ಮೇಲೆ ತಿಳಿಸಿದಂತೆ ಬಾಡಿಗೆ ದರವು 10 ಪರ್ಸೆಂಟ್ ಎಂದು ನಿರ್ಧಾರವಾದರೆ 50 ಲಕ್ಷ ಮಾರಾಟ / 10 ಪರ್ಸೆಂಟ್ ಅಂದರೆ 5 ಲಕ್ಷ ರುಪಾಯಿ ಠೇವಣಿ ಮಾಡಬೇಕಾಗುವುದು.

ಇಲ್ಲಿ ಬ್ರ್ಯಾಂಡೆಡ್‌ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಹಾಗ ISO ಸರ್ಟಿಫಿಕೇಟ್ ಇರಬೇಕು. ಇದಾದ ಮೇಲೆ ಮೊದಲೇ ಎಷ್ಟು ಮಾರಾಟವಾಗಬಹುದು ಅಂದಾಜು ಮೌಲ್ಯ ತಿಳಿಸಬೇಕು. ಬಹುತೇಕ ಬೆಂಗಳೂರಿನ ಶಾಪಿಂಗ್ ಮಾಲ್‌ಗಳಲ್ಲಿ ಇದರ ಆಧಾರದ ಮೇಲೆಯೇ ಠೇವಣಿ ಹಾಗೂ ಬಾಡಿಗೆ ಹಣ ನಿರ್ಧಾರವಾಗುತ್ತೆ.

English summary

How Much Is The Rent In Shopping Malls

how much does it cost to rent in a space mall in banglore
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more