For Quick Alerts
ALLOW NOTIFICATIONS  
For Daily Alerts

ಜೀವನ ಪ್ರಮಾಣಪತ್ರ ಸಲ್ಲಿಕೆಗೆ 5 ಸುಲಭ ವಿಧಾನ ತಿಳಿಯಿರಿ

|

ಪಿಂಚಣಿ ಯಾರಿಗೆ ಬೇಡ ಹೇಳಿ?, ನಮ್ಮ ವೃದ್ಧಾಪ್ಯದಲ್ಲಿ ನಮಗೆ ಆರ್ಥಿಕವಾಗಿ ಸಹಾಯಕವಾಗುವುದೇ ಪಿಂಚಣಿ. ನಮಗೆ ದುಡಿಯಲು ಸಾಧ್ಯವಾಗದ ಕಾಲದಲ್ಲಿ ನಮ್ಮ ಕೈಹಿಡಿಯುವುದೇ ಪಿಂಚಣಿ. ಆದರೆ ನಾವು ಈ ಪಿಂಚಣಿಯನ್ನು ಪ್ರತಿ ತಿಂಗಳು ಪಡೆಯಬೇಕಾದರೆ ನಾವು ಜೀವಂತವಾಗಿ ಇದ್ದೇವೆ ಎಂಬುವುದನ್ನು ವರ್ಷಕ್ಕೆ ಒಂದು ಬಾರಿ ಸಾಬೀತುಪಡಿಸಬೇಕಾಗುತ್ತದೆ.

ಹೌದು, ಕೇಂದ್ರ ಸರ್ಕಾರದಿಂದ ಮಾಸಿಕವಾಗಿ ಪಿಂಚಣಿಯನ್ನು ಪಡೆಯುವವರು ಜೀವನ ಪ್ರಮಾಣ ಪತ್ರ ಅಥವಾ ವಾರ್ಷಿಕ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದು ಮುಖ್ಯವಾಗಿದೆ. ಇದಕ್ಕೆ ಜೀವನ ಪ್ರಮಾಣ ಎಂದು ಕೂಡಾ ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾವು ಜೀವನ ಪ್ರಮಾಣ ಪತ್ರವನ್ನು ಪಿಂಚಣಿ ವಿತರಣಾ ಸಂಸ್ಥೆಗೆ ಸಲ್ಲಿಕೆ ಮಾಡಬೇಕಾಗುತ್ತದೆ. ಇದು ನಾವು ಬದುಕುಳಿದಿದ್ದೇವೆ ಎಂಬುವುದಕ್ಕೆ ಸಾಕ್ಷಿಯಾಗಿದ್ದು, ಇದನ್ನು ಸಲ್ಲಿಕೆ ಮಾಡದಿದ್ದರೆ ನಮ್ಮ ಪಿಂಚಣಿ ಸ್ಥಗಿತವಾಗಬಹುದು.

ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?ಇಪಿಎಫ್‌ಒ ಹೊಸ ಮಾರ್ಗಸೂಚಿ; ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುವುದು ಹೇಗೆ?

ಪ್ರತಿ ವರ್ಷವು ಪಿಂಚಣಿದಾರರು ನವೆಂಬರ್ 1ರಿಂದ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವುದನ್ನು ಆರಂಭ ಮಾಡಬೇಕು. ಸರ್ಕಾರವು 80 ವರ್ಷಕ್ಕಿಂತ ಮೇಲ್ಪಟ್ಟವರು ಜೀವನ ಪ್ರಮಾಣಪತ್ರವನ್ನು ಬ್ಯಾಂಕ್‌ಗೆ ಬಂದು ಸಲ್ಲಿಕೆ ಮಾಡುವುದು ಕಷ್ಟವೆಂದು ಬೇರೆ ವಿಧಾನವನ್ನು ಕೂಡಾ ಜಾರಿ ಮಾಡಿದೆ. 80 ವರ್ಷಕ್ಕಿಂತ ಮೇಲ್ಪಟ್ಟವರು ಅಕ್ಟೋಬರ್‌ 1ರಿಂದಲೇ ಲೈಫ್ ಸರ್ಟಿಫಿಕೇಟ್ ಅನ್ನು ಸಲ್ಲಿಕೆ ಮಾಡಬಹುದು. ಹಾಗೆಯೇ ಸರ್ಕಾರ ಈ ಪತ್ರ ಸಲ್ಲಿಕೆಗೆ ಹಲವಾರು ಆಯ್ಕೆಗಳನ್ನು ನೀಡಿದೆ. ಇಲ್ಲಿ ನಾವು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡುವ ಐದು ಸುಲಭ ವಿಧಾನವನ್ನು ವಿವರಿಸಿದ್ದೇವೆ. ಮುಂದೆ ಓದಿ...

 ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಇರುವ ಆಯ್ಕೆಗಳು

ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಇರುವ ಆಯ್ಕೆಗಳು

ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡುವ ಮೊದಲ ವಿಧಾನ ನೇರವಾಗಿ ಪಿಂಚಣಿ ವಿತರಣಾ ಸಂಸ್ಥೆಗಳಿಗೆ ಭೇಟಿ ನೀಡುವುದು. ಅಂದರೆ ಬ್ಯಾಂಕ್‌ಗೆ, ಅಂಚೆ ಕಚೇರಿಗೆ, ರಾಜ್ಯ/ಕೇಂದ್ರಾಡಳಿತ ಕಚೇರಿಗೆ ಭೇಟಿ ನೀಡುವುದು. ನೀವು ಡಿಜಿಟಲ್ ಆಗಿಯೂ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು. ಒಂದು ವೇಳೆ ಪಿಂಚಣಿದಾರರು ತಾವಾಗಿಯೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಗೆ ಭೇಟಿ ನೀಡಲು ಸಾಧ್ಯವಾಗುವುದಿಲ್ಲ ಎಂದಾದರೆ, ಲಿಖಿತವಾಗಿ ನಿರ್ಧಿಷ್ಟ ಅಧಿಕಾರಿಗಳ ಸಹಿಯುಲ್ಲ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಬಹುದು. ಅಂಚೆ ಕಚೇರಿ ಸಿಬ್ಬಂದಿಗಳು ಕೂಡಾ ಈ ಕಾರ್ಯವನ್ನು ಮಾಡುತ್ತಾರೆ.

ಡಿಜಿಲಾಕರ್‌ನಲ್ಲಿ ಪೆನ್ಷನ್ ಸರ್ಟಿಫಿಕೇಟ್ ಸೇರಿ ಹೊಸ ಸೇವೆಗಳುಡಿಜಿಲಾಕರ್‌ನಲ್ಲಿ ಪೆನ್ಷನ್ ಸರ್ಟಿಫಿಕೇಟ್ ಸೇರಿ ಹೊಸ ಸೇವೆಗಳು

 ಜೀವನ ಪ್ರಮಾಣ ಪೋರ್ಟಲ್

ಜೀವನ ಪ್ರಮಾಣ ಪೋರ್ಟಲ್

ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಆನ್‌ಲೈನ್ ಮೂಲಕವೂ ಸಲ್ಲಿಕೆ ಮಾಡಬಹುದು. ಜೀವನ ಪ್ರಮಾಣ ಪೋರ್ಟಲ್ ಮೂಲಕ ಸರ್ಟಿಫಿಕೇಟ್ ಸಲ್ಲಿಕೆ ಮಾಡಬಹುದು. ಇಲ್ಲಿ ನೀವು ಜೀವನ ಪ್ರಮಾಣ ಅರ್ಜಿಯನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಅರ್ಜಿ ಭರ್ತಿ ಮಾಡಬೇಕಾಗುತ್ತದೆ. ಇಲ್ಲಿ ಬಯೋಮೆಟ್ರಿಲ್ ಡೇಟಾವನ್ನು ಕೂಡಾ ಸಲ್ಲಿಕೆ ಮಾಡಬೇಕಾಗುತ್ತದೆ.

 ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಆಪ್ ಮೂಲಕ

ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಆಪ್ ಮೂಲಕ

ಕೇಂದ್ರ ಸಚಿವಾಲಯ ಹಾಗೂ ಭಾರತದ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) 2020ರಲ್ಲಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಮನೆ ಮನೆಗೆ ಹೋಗಿ ಸಹಾಯ ಮಾಡುವ ಯೋಜನೆ ಆರಂಭ ಮಾಡಿದೆ. ಇದರಲ್ಲಿ ಅಂಚೆ ಕಚೇರಿ ಸಿಬ್ಬಂದಿಗಳು ಪಿಂಚಣಿದಾರರ ಮನೆಗೆ ಹೋಗಿ ಗೂಗಲ್ ಪ್ಲೇಸ್ಟೋರ್‌ನಲ್ಲಿರುವ ಪೋಸ್ಟ್‌ಇನ್ಫೋ ಆಪ್ ಮೂಲಕ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡುತ್ತಾರೆ. ಪಿಂಚಣಿದಾರರು ಕೂಡಾ ಈ ಆಪ್‌ನ ಸದುಪಯೋಗ ಮಾಡಬಹುದು.

 ಮನೆಮನೆಗೆ ತೆರಳಿ ಸೇವೆ

ಮನೆಮನೆಗೆ ತೆರಳಿ ಸೇವೆ

ಜೀವನ ಪ್ರಮಾಣಪತ್ರ ಸಲ್ಲಿಕೆಗಾಗಿ ಸರ್ಕಾರವು ಮನೆ ಮನೆಗೆ ಬ್ಯಾಂಕಿಂಗ್ ಸೇವೆಯನ್ನು ನೀಡುವುದನ್ನು ಕೂಡಾ ಆರಂಭ ಮಾಡಿದೆ. ಈ ಸೇವೆ ನೀಡುವ ಬ್ಯಾಂಕುಗಳ ಪಟ್ಟಿಯಲ್ಲಿ 12 ಸಾರ್ವಜನಿಕ ಬ್ಯಾಂಕುಗಳು ಇದೆ. ಸುಮಾರು 100 ನಗರಗಳಲ್ಲಿ ಈ ಸೇವೆಯನ್ನು ನೀಡಲಾಗುತ್ತದೆ. ಪಿಂಚಣಿದಾರರು ಮೊಬೈಲ್ ಅಪ್ಲಿಕೇಷನ್ ಮೂಲಕ ಮನೆ ಬಾಗಿಲಿಗೆ ಸೇವೆಯನ್ನು ಪಡೆಯಲು ಬುಕ್ಕಿಂಗ್ ಮಾಡಬಹುದು. ಅಧಿಕೃತ ವೆಬ್‌ಸೈಟ್ ಮೂಲಕವು ಸೇವೆಗಾಗಿ ಬುಕ್ಕಿಂಗ್ ಮಾಡಬಹುದು. ಟೋಲ್‌ಫ್ರೀ ಸಂಖ್ಯೆ 18001213721 ಹಾಗೂ 18001037188ಕ್ಕೆ ಕರೆ ಮಾಡಿಯೂ ಸೇವೆಗೆ ಬುಕ್ಕಿಂಗ್ ಮಾಡಬಹುದು.

 ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿ

ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿ

ಫೇಸ್ ಅಥಾಂಟಿಫಿಕೇಷನ್ ಟೆಕ್ನಾಲಜಿಯನ್ನು ಬಳಸಿಕೊಂಡು ಕೂಡಾ ಜೀವನ ಪ್ರಮಾಣಪತ್ರವನ್ನು ಸಲ್ಲಿಕೆ ಮಾಡಲು ಸಾಧ್ಯವಾಗಲಿದೆ. ಯುಐಡಿಎಐ ಆಧಾರ್ ಸಾಫ್ಟ್‌ವೇರ್ ಅನ್ನು ಬಳಸಿಕೊಂಡು ಈ ಕಾರ್ಯವನ್ನು ಮಾಡಬಹುದು. ಇದು ಪಿಂಚಣಿದಾರರು ತಮ್ಮ ಅಂಡ್ರಾಯ್ಡ್ ಮೊಬೈಲ್‌ನಲ್ಲೇ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್ ಮಾಡಲು ಅನುವುಮಾಡುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಪಿಂಚಣಿದಾರರ ಲೈವ್ ಫೋಟೋವನ್ನು ಕ್ಲಿಕ್ ಮಾಡಬಹುದು. ಅದನ್ನು ಜೀವನ ಪ್ರಮಾಣ ಪತ್ರ ಆಪ್‌ನಲ್ಲಿ ಅಪ್‌ಲೋಡ್ ಮಾಡಿ ಡಿಜಿಟಲ್ ಜೀವನ ಪ್ರಮಾಣಪತ್ರ ಪಡೆಯಬಹುದು.

English summary

How Pensioners Can Submit Proof of Life Certificate Online, Here's 5 Easy Ways Explained in Kannada

Pensioners can submit life certificate any time, How Pensioners Can Submit Proof of Life Certificate Online, Here's 5 Easy Ways Explained in Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X