For Quick Alerts
ALLOW NOTIFICATIONS  
For Daily Alerts

ಅಂಚೆಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

|

ನಾವು ವಿದೇಶಕ್ಕೆ ಪ್ರವಾಸ ಮಾಡಬೇಕಾದರೆ ಪಾಸ್‌ಪೋರ್ಟ್ ಹೊಂದಿರುವುದು ಅತೀ ಮುಖ್ಯವಾಗಿದೆ. ದೇಶದಾದ್ಯಂತ ಪಾಸ್‌ಪೋರ್ಟ್‌ ಸೇವೆಯನ್ನು ನೀಡಲಾಗುತ್ತದೆ. ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲಿ ನಾವು ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಆದರೆ ಅಂಚೆಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ನಿಮಗೆ ತಿಳಿದಿದೆಯೇ?

 

ಅಂಚೆಕಚೇರಿ ಈಗ ಪಾಸ್‌ಪೋರ್ಟ್‌ಗೆ ಅರ್ಜಿಯನ್ನು ಸ್ವೀಕಾರ ಮಾಡುತ್ತದೆ. ಜನರಿಗೆ ಪಾಸ್‌ಪೋರ್ಟ್ ಸೇವೆಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ಅಂಚೆಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಕೂಡಾ ಆರಂಭ ಮಾಡಲಾಗಿದೆ.

ದೇಶದಲ್ಲಿ ಸುಮಾರು 428 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಒಪಿಎಸ್‌ಕೆ) ಇದೆ. ಈ ಪೈಕಿ 65 ಕೇಂದ್ರಗಳು ದೇಶದ ಪ್ರಮುಖ ನಗರಗಳಲ್ಲಿ ಇದೆ. ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ, ಈ ವ್ಯವಸ್ಥೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ, ಮುಂದೆ ಓದಿ...

 ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಎಂದರೇನು?

ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಎಂದರೇನು?

ಪಾಸ್‌ಪೋರ್ಟ್ ಸೇವಾ ಕೇಂದ್ರ ಹಾಗೂ ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಪಾಸ್‌ಪೋರ್ಟ್ ಸೇವೆಯನ್ನು ಸಲ್ಲಿಸುವ ಪಾಸ್‌ಪೋರ್ಟ್ ಕಚೇರಿಗಳು ಆಗಿದೆ. ಪಾಸ್‌ಪೋರ್ಟ್ ಜಾರಿ ಮಾಡುವುದು, ಅರ್ಜಿಯನ್ನು ಪರಿಶೀಲಿಸುವುದು ಇತರೆ ಕಾರ್ಯಗಳನ್ನು ಈ ಕಚೇರಿ ಮಾಡುತ್ತದೆ.

 ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗಿದೆ?

ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲೆಗಳು ಬೇಕಾಗಿದೆ?

* ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್‌ನಂತಹ ಗುರುತಿನ ಚೀಟಿ ಬೇಕಾಗುತ್ತದೆ.
* ಜನನ ಪ್ರಮಾಣ ಪತ್ರ, ವರ್ಗಾವಣೆ ಪ್ರಮಾಣ ಪತ್ರದಂತಹ ವಯಸ್ಸಿನ ಗುರುತು
* ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್
* ನೀರಿನ ಬಿಲ್‌, ಗ್ಯಾಸ್ ಬಿಲ್, ವಿದ್ಯುತ್ ಬಿಲ್‌ನಂತಹ ವಿಳಾಸ ಪುರಾವೆ
* ಫೋಟೋ ಇರುವ ಪಾಸ್‌ಬುಕ್
* ಬಾಡಿಗೆ ಮನೆಯಲ್ಲಿ ಇದ್ದರೆ ಬಾಡಿಗೆ ಅಗ್ರಿಮೆಂಟ್ ಪ್ರತಿ

 ಪೋಸ್ಟ್ ಆಫೀಸ್‌ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ
 

ಪೋಸ್ಟ್ ಆಫೀಸ್‌ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿ

ಹಂತ 1: passportindia.gov.inಗೆ ಭೇಟಿ ನೀಡಿ, ಇದು ಪಾಸ್‌ಪೋರ್ಟ್ ಸೇವೆಯ ಅಧಿಕೃತ ವೆಬ್‌ಸೈಟ್ ಆಗಿದೆ
ಹಂತ 2: ಆನ್‌ಲೈನ್ ಪಾಸ್‌ಪೋರ್ಟ್ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಕೆ ಮಾಡಿ
ಹಂತ 3: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಸ್ಥಳೀಯ ಅಂಚೆ ಕಚೇರಿಗೆ ಭೇಟಿ ನೀಡಿ
ಹಂತ 4: ಅಂಚೆ ಕಚೇರಿಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗುವಾಗ ಪ್ರಮುಖ ದಾಖಲೆಗಳು ನಿಮ್ಮ ಬಳಿ ಇರಲಿ
ಹಂತ 5: ಎಲ್ಲ ದಾಖಲೆ ಪರಿಶೀಲನೆಯ ಬಳಿಕ ನಿಮ್ಮ ಪಾಸ್‌ಪೋರ್ಟ್ 7ರಿಂದ 14 ದಿನದ ಒಳಗೆ ನಿಮಗೆ ಲಭ್ಯವಾಗಲಿದೆ.

ನೀವು ಆನ್‌ಲೈನ್ ಮೂಲಕವೇ ಸರಳ ಹಾಗೂ ಸುಲಭವಾಗಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ನೀವು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಪ್ರಮುಖ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿಯ ಪ್ರತಿ ಕೂಡಾ ನೀವು ಹೊಂದಿರಬೇಕು.

 

English summary

How to Apply for a Passport at a Nearby Post Office, Explained in Kannada

Post office passport seva- How to apply for a passport at a nearby post office?, steps Explained in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X