For Quick Alerts
ALLOW NOTIFICATIONS  
For Daily Alerts

Trademark Registration : ನಿಮ್ಮ ಸಂಸ್ಥೆಯ ಟ್ರೇಡ್‌ ಮಾರ್ಕ್ ಆನ್‌ಲೈನ್ ಮೂಲಕ ರಿಜಿಸ್ಟ್ರೇಷನ್ ಹೀಗೆ ಮಾಡಿ

|

ಸಾಮಾನ್ಯವಾಗಿ ಯಾವುದೇ ಒಂದು ಸಂಸ್ಥೆಯಾಗಲಿ, ವಸ್ತುವಾಗಲಿ, ಸೇವೆಯಾಗಲಿ ತನ್ನದೇ ಆದ ಟ್ರೇಡ್‌ ಮಾರ್ಕ್ ಅನ್ನು ಹೊಂದಿರುತ್ತದೆ. ಟ್ರೇಡ್‌ ಮಾರ್ಕ್ ಅನ್ನು ನೋಡಿಯೇ ಇದು ಯಾವ ಸಂಸ್ಥೆಯ ವಸ್ತು ಎಂದು ಗುರುತಿಸುವವರು ಅದೆಷ್ಟೋ ಮಂದಿ ಇದ್ದಾರೆ. ನೀವು ಕೂಡಾ ಹೊಸ ಸಂಸ್ಥೆಯನ್ನು ಆರಂಭ ಮಾಡಿದ್ದು ಅದರ ಟ್ರೇಡ್‌ ಮಾರ್ಕ್ ರಿಜಿಸ್ಟ್ರೇಷನ್ ಮಾಡಲು ಮುಂದಾಗಿದ್ದೀರಾ?

 

ಒಂದು ಸರಕು ಅಥವಾ ಸೇವೆಯನ್ನು ನಿಖರವಾಗಿ ಈ ಸಂಸ್ಥೆಯೇ ನೀಡುತ್ತಿದೆ ಎಂಬುವುದನ್ನು ಗುರುತಿಸುವ ನಿಟ್ಟಿನಲ್ಲಿ ಟ್ರೇಡ್‌ ಮಾರ್ಕ್ ಅನ್ನು ಗೊತ್ತುಮಾಡಲಾಗುತ್ತದೆ. ಟ್ರೇಡ್ ಮಾರ್ಕ್ ಅನ್ನು ಸಾಮಾನ್ಯವಾಗಿ ಒಂದು ಡಿಸೈನ್, ಚಿತ್ರ, ಚಿಹ್ನೆ ಕೂಡಾ ಆಗಿರಬಹುದು.

1999ರಲ್ಲಿ ಟ್ರೇಡ್‌ ಮಾರ್ಕ್ ಕಾಯ್ದೆ ಜಾರಿಯಾಗಿದ್ದು, ಇದು ಒಂದು ಸಂಸ್ಥೆಯ ಗುರುತನ್ನು ಬೇರೆ ಸಂಸ್ಥೆ ನಕಲು ಮಾಡುವುದಕ್ಕೆ ತಡೆಯೊಡ್ಡುತ್ತದೆ. ನಿಮ್ಮ ಸಂಸ್ಥೆ ಕೂಡಾ ಟ್ರೇಡ್‌ ಮಾರ್ಕ್ ಅನ್ನು ಹೊಂದಿದ್ದರೆ, ಅದರ ದುರ್ಬಳಕೆಯನ್ನು ತಡೆಯಲು ನೀವು ಟ್ರೇಡ್ ಮಾರ್ಕ್ ಅನ್ನು ರಿಜಿಸ್ಟ್ರೇಷನ್ ಮಾಡುವುದು ಮುಖ್ಯವಾಗಿದೆ. ಟ್ರೇಡ್‌ ಮಾರ್ಕ್ಅನ್ನು ರಿಜಿಸ್ಟ್ರೇಷನ್ ಮಾಡುವುದು ಹೇಗೆಂದು ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

 ಟ್ರೇಡ್ ಮಾರ್ಕ್ ಎಂದರೇನು?

ಟ್ರೇಡ್ ಮಾರ್ಕ್ ಎಂದರೇನು?

ಟ್ರೇಡ್ ಮಾರ್ಕ್ ಎಂಬುವುದು ಒಂದು ವಾಕ್ಯ, ಲೋಗೋ, ಡಿಸೈನ್, ಚಿಹ್ನೆ, ಆಕೃತಿ, ಬಣ್ಣ ಆಗಿರಬಹುದು. ಇದು ಒಂದು ಸಂಸ್ಥೆಯ ಗುರುತು ಆಗಿರುತ್ತದೆ. ಈ ಟ್ರೇಡ್ ಮಾರ್ಕ್ ಮೂಲಕ ಒಂದು ಸಂಸ್ಥೆಯನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ನಿಮ್ಮ ಸಂಸ್ಥೆಯು ಟ್ರೇಡ್ ಮಾರ್ಕ್ ಅನ್ನು ಹೊಂದಿದ್ದರೆ, ಗ್ರಾಹಕರು ಸುಲಭವಾಗಿ ನಿಮ್ಮ ಸಂಸ್ಥೆಯ ವಸ್ತು ಅಥವಾ ಸೇವೆಯನ್ನು ಗುರುತಿಸಲು ಸಾಧ್ಯವಾಗುತ್ತದೆ.

 ಟ್ರೇಡ್‌ ಮಾರ್ಕ್ ಅನ್ನು ಮೊದಲು ಸರಿಯಾಗಿ ಆಯ್ಕೆಮಾಡಿಕೊಳ್ಳಿ

ಟ್ರೇಡ್‌ ಮಾರ್ಕ್ ಅನ್ನು ಮೊದಲು ಸರಿಯಾಗಿ ಆಯ್ಕೆಮಾಡಿಕೊಳ್ಳಿ

ಟ್ರೇಡ್‌ ಮಾರ್ಕ್ ಅನ್ನು ನೀವು ಆಯ್ಕೆ ಮಾಡುವ ಸಂದರ್ಭದಲ್ಲಿ ಜಾಗರೂಕರಾಗಿ ಇರುವುದು ಅತೀ ಮುಖ್ಯ. ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಟ್ರೇಡ್‌ ಮಾರ್ಕ್‌ಗಳು ಇದೆ. ನೀವು ಆಯ್ಕೆ ಮಾಡಿದ ಟ್ರೇಡ್‌ ಮಾರ್ಕ್ ಬೇರೆ ಸಂಸ್ಥೆಯ ಟ್ರೇಡ್‌ ಮಾರ್ಕ್‌ನೊಂದಿಗೆ ಹೋಲಿಕೆಯಾದರೆ ಮುಂದೆ ಕಾನೂನು ಅಡಚಣೆ ಉಂಟಾಗಬಹುದು. ಆದರೆ ಲಕ್ಷಾಂತರ ಸಂಸ್ಥೆಗಳು ಇರುವಾಗ ಟ್ರೇಡ್‌ ಮಾರ್ಕ್ ಹೇಗೆ ತಿಳಿಯುತ್ತದೆ ಎಂಬ ಚಿಂತೆಯೇ? ಅದಕ್ಕೆ ಒಂದು ದಾರಿಯೂ ಇದೆ. ನೀವು ಟ್ರೇಡ್‌ ಮಾರ್ಕ್ ಅನ್ನು ಆಯ್ಕೆ ಮಾಡಿದ ಬಳಿಕ Trade Marks Registry's (ಟ್ರೇಡ್‌ ಮಾರ್ಕ್ಸ್ ರಿಜಿಸ್ಟ್ರೀ) ಡೇಟಾದಲ್ಲಿ ಒಮ್ಮೆ ಪರಿಶೀಲನೆ ಮಾಡಿಕೊಳ್ಳಿ.

 ಟ್ರೇಡ್‌ ಮಾರ್ಕ್ ಅರ್ಜಿ ಸಲ್ಲಿಕೆ ಹೇಗೆ?
 

ಟ್ರೇಡ್‌ ಮಾರ್ಕ್ ಅರ್ಜಿ ಸಲ್ಲಿಕೆ ಹೇಗೆ?

ಒಂದು ಸಂಸ್ಥೆಯ ಸೇವೆ ಹಾಗೂ ಸರಕು ಯಾವುದು ಎಂಬ ಆಧಾರದಲ್ಲಿ ಟ್ರೇಡ್‌ ಮಾರ್ಕ್ ರಿಜಿಸ್ಟ್ರೇಷನ್ ಅರ್ಜಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ಫಾರ್ಮ್ ಟಿಎಂ-ಎ ರಿಜಿಸ್ಟ್ರೇಷನ್ ಅಪ್ಲಿಕೇಷನ್ ಫಾರ್ಮ್ ಆಗಿದೆ. ಆನ್‌ಲೈನ್‌ನಲ್ಲಿಯೂ ಕೂಡಾ ಅರ್ಜಿ ಸಲ್ಲಿಕೆ ಮಾಡಬಹುದು. ಐಪಿ ಇಂಡಿಯಾದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ಟ್ರೇಡ್ ಮಾರ್ಕ್ ಕಚೇರಿಗೆ ಭೇಟಿ ನೀಡಯೂ ಅರ್ಜಿ ಸಲ್ಲಿಕೆ ಮಾಡಬಹುದು. ಹಲವಾರು ದಾಖಲೆಗಳನ್ನು ಕೂಡಾ ಇದರೊಂದಿಗೆ ಸಲ್ಲಿಕೆ ಮಾಡಬೇಕಾಗುತ್ತದೆ. ನಿಮ್ಮ ಸಂಸ್ಥೆಯ ಮಾಹಿತಿ ಇರಬೇಕಾಗುತ್ತದೆ.

 ಟ್ರೇಡ್‌ ಮಾರ್ಕ್ ಅಪ್ಲಿಕೇಷನ್ ಪರಿಶೀಲನೆ

ಟ್ರೇಡ್‌ ಮಾರ್ಕ್ ಅಪ್ಲಿಕೇಷನ್ ಪರಿಶೀಲನೆ

ಟ್ರೇಡ್ ಮಾರ್ಕ್ ಕಾಯ್ದೆ 2016ರ ಪ್ರಕಾರ ಕಡ್ಡಾಯವಾಗಿ ವರದಿ ಪರಿಶೀಲನೆ ಮಾಡಬೇಕಾಗುತ್ತದೆ. ಪರಿಶೀಲನೆ ಮಾಡುವ ಅಥಾರಿಟಿಯು ಕೆಲವು ನಿರ್ಬಂಧಗಳನ್ನು ತಿಳಿಸಬಹುದು ಅಥವಾ ತಿಳಿಸದೆಯೂ ಇರಬಹುದು. ರಿಜಿಸ್ಟ್ರೇಷನ್ ಅರ್ಜಿ ಸಲ್ಲಿಕೆಯ 30 ದಿನದಲ್ಲಿ ಅಥಾರಿಟಿ ಈ ಪರಿಶೀಲನೆ ಮಾಡಿ ವರದಿ ಸಲ್ಲಿಸಬೇಕು. ವರದಿಯನ್ನು ನೀಡಿದ 30 ದಿನದ ಒಳಗೆ ಅದಕ್ಕೆ ಪ್ರತ್ಯುತ್ತರವನ್ನು ಕೂಡಾ ನೀಡಬೇಕು. ಟ್ರೇಡ್ ಮಾರ್ಕ್ ಅಥಾರಿಟಿಯು ನೀವು ಪ್ರತ್ಯುತ್ತರದಿಂದಾಗಿ ಸಂತೃಪ್ತರಾಗಿಲ್ಲದಿದ್ದರೆ ಅಥವಾ ಯಾವುದೇ ತಡೆಗಳು ಇದ್ದರೆ ವಿಚಾರಣೆಯನ್ನು ನಡೆಸಲಾಗುತ್ತದೆ. ಟ್ರೇಡ್ ಮಾರ್ಕ್ ಪರಿಶೀಲಿಸುವ ಅಥಾರಿಟಿ ಈ ವಿಚಾರಣೆ ವೇಳೆ ನಿಮ್ಮ ಟ್ರೇಡ್‌ ಮಾರ್ಕ್‌ಗೆ ಒಪ್ಪಿಗೆ ಸೂಚಿಸಬಹುದು ಅಥವಾ ಸೂಚದೆಯೂ ಇರಬಹುದು.

 ಜಾಹೀರಾತು ಬಗ್ಗೆ ತಿಳಿಯಿರಿ

ಜಾಹೀರಾತು ಬಗ್ಗೆ ತಿಳಿಯಿರಿ

ರಿಜಿಸ್ಟ್ರೇಷನ್ ಅಪ್ಲಿಕೇಷನ್ ಅನ್ನು ಅನುಮೋದನೆ ಮಾಡಿದ ಬಳಿಕ ನಿಮ್ಮ ಸಂಸ್ಥೆಯ ಟ್ರೇಡ್‌ ಮಾರ್ಕ್ ಅನ್ನು ನಿರಂತರವಾಗಿ ನಾಲ್ಕು ತಿಂಗಳುಗಳ ಕಾಲ ಟ್ರೇಡ್ ಮಾರ್ಕ್ಸ್ ಜರ್ನಲ್‌ನಲ್ಲಿ ಪ್ರಕಟ ಮಾಡಲಾಗುತ್ತದೆ ಅಥವಾ ಜಾಹೀರಾತು ರೂಪದಲ್ಲಿ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಜನರು ಅಥವಾ ಸಂಸ್ಥೆಗಳು ಈ ಟ್ರೇಡ್ ಮಾರ್ಕ್‌ಗೆ ಯಾವುದೇ ವಿರೋಧವಿದ್ದರೂ ಅಥಾರಿಟಿಗೆ ತಿಳಿಸಬಹುದು. ಈ ಪತ್ರಿಕೆಯು ಟ್ರೇಡ್ ಮಾರ್ಕ್ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

 ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್ ಹೀಗೆ ಮಾಡಿ

ಟ್ರೇಡ್ ಮಾರ್ಕ್ ರಿಜಿಸ್ಟ್ರೇಷನ್ ಹೀಗೆ ಮಾಡಿ

ಈ ಪ್ರಕ್ರಿಯೆಯಲ್ಲಿ ಕೊನೆಯ ಹಂತವೇ ರಿಜಿಸ್ಟ್ರೇಷನ್ ಆಗಿದೆ. ನೀವು ಸಲ್ಲಿಕೆ ಮಾಡಿರುವ ಟ್ರೇಡ್ ಮಾರ್ಕ್‌ಗೆ ಯಾವುದೇ ವಿರೋಧ ಬಂದಿಲ್ಲದಿದ್ದರೆ ಮಾತ್ರ ರಿಜಿಸ್ಟ್ರೇಷನ್ ಮಾಡಲಾಗುತ್ತದೆ. ನಾಲ್ಕು ತಿಂಗಳ ಕಾಲ ಪ್ರಕಟ ಮಾಡಲಾಗುವ ಟ್ರೇಡ್ ಮಾರ್ಕ್‌ಗೆ ಯಾವುದೇ ವಿರೋಧ ಬರದಿದ್ದರೆ ಅದಾದ ಒಂದು ವಾರದಲ್ಲೇ ನೋಂದಣಿ ಪತ್ರ ನಿಮಗೆ ಲಭ್ಯವಾಗಲಿದೆ. ಒಂದು ಬಾರಿ ಈ ಪ್ರಕ್ರಿಯೆ ಪೂರ್ಣವಾದರೆ ಪ್ರತಿ 10 ವರ್ಷಕ್ಕೊಮ್ಮೆ ನೀವು ಮರುನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.

English summary

How to Apply for Registration of Trademark of your Company Online, Details in Kannada

A trademark is the unique identity that sets your company, product, or service apart from the competition. Here;s How to Apply for Trademark Registration Online. read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X