ವಾಟ್ಸಾಪ್ ಫೋಟೋ, ಚಾಟ್ Backup ಮಾಡುವುದು ಹೇಗೆ?
ಲಕ್ಷಾಂತರ ಜನರು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ವಾಟ್ಸಾಪ್ ಅನ್ನು ಬಳಕೆ ಮಾಡುತ್ತಿದ್ದಾರೆ. ಈ ಚಾಟ್‌ಗಳು ಬಳಕೆದಾರರಿಗೆ ಬಹಳ ಮುಖ್ಯವಾಗಿರಬಹುದು. ಇದಕ್ಕಾಗಿ ವಾಟ್ಸಾಪ್ ಜನರಿಗೆ ಗೂಗಲ್ ಡ್ರೈವ್‌ನಲ್ಲಿ ಚಾಟ್ ಹಿಸ್ಟರಿಯನ್ನು ಸೇವ್ ಮಾಡುವ ಆಯ್ಕೆಯನ್ನು ನೀಡಿದೆ.
ಬಳಕೆದಾರರು ನಿಮ್ಮ ಚಾಟ್‌ಗಳನ್ನು ಸೇವ್ ಮಾಡಲು ಸ್ವಯಂಚಾಲಿತ ಬ್ಯಾಕಪ್ ಫೀಚರ್ ಅನ್ನು ಸಕ್ರಿಯಗೊಳಿಸುವ ಆಯ್ಕೆಯನ್ನು ಕೂಡಾ ವಾಟ್ಸಾಪ್ ನೀಡುತ್ತದೆ. ಅದರಲ್ಲಿ ದೈನಂದಿನ (daily), ಸಾಪ್ತಾಹಿಕ (weekly) ಹಾಗೂ ಮಾಸಿಕ (monthly) ಎಂಬ ಆಯ್ಕೆಗಳನ್ನು ನಿಮಗೆ ನೀಡಲಾಗುತ್ತದೆ.
ವಾಟ್ಸಾಪ್ ಗ್ರಾಹಕರಿಗೆ ₹51 ಕ್ಯಾಶ್ಬ್ಯಾಕ್ ನೀಡುತ್ತಿದೆ, ಏಕೆ?
ಇನ್ನು ಹಲವಾರು ಮಂದಿಗೆ ತಮ್ಮ ಚಾಟ್ ಬ್ಯಾಕಪ್ ಮಾಡಿಕೊಳ್ಳಬೇಕಾಗಿರುತ್ತದೆ. ಆದರೆ ಸೆಟ್ಟಿಂಗ್ ಆಯ್ಕೆಯಲ್ಲಿ ಎಡವುತ್ತಾರೆ. ಬಳಿಕ ತಮ್ಮ ಮೊಬೈಲ್ ಬದಲಾವಣೆ ಸಂದರ್ಭದಲ್ಲಿಯೋ ಅಥವಾ ವಾಟ್ಸಾಪ್ ಮತ್ತೆ ಇನ್‌ಸ್ಟಾಲ್ ಮಾಡುವ ಸಂದರ್ಭದಲ್ಲಿಯೋ ತಮ್ಮ ವಾಟ್ಸಾಪ್ ಚಾಟ್, ಪೋಟೋ ಬ್ಯಾಕಪ್ ಆಗಿಲ್ಲ ಎಂದು ಚಿಂತೆಗೆ ಒಳಗಾಗುತ್ತಾರೆ. ಈ ಚಿಂತೆ ಇಲ್ಲದಂತೆ ಮಾಡುವುದು ಹೇಗೆ, ನಿಮ್ಮ ವಾಟ್ಸಾಪ್ ಅನ್ನು ಬ್ಯಾಕಪ್ ಮಾಡುವುದು ಹೇಗೆ, ಹಾಗೆಯೇ ಭದ್ರತಾ ಫೀಚರ್ ಅನ್ನು ಸಕ್ರಿಯಗೊಳಿಸುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..

ಗೂಗಲ್ ಡ್ರೈವ್‌ಗೆ ವಾಟ್ಸಾಪ್ ಚಾಟ್ ಬ್ಯಾಕಪ್ ಮಾಡುವುದು ಹೇಗೆ?
ಹಂತ 1: ಮುಖ್ಯ ಪರದೆಯ ಮೇಲಿನ ಬಲ ಮೂಲೆಯಲ್ಲಿ ಗೋಚರಿಸುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 2: ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ, ಚಾಟ್ ಮೇಲೆ ಕ್ಲಿಕ್ ಮಾಡಿ
ಹಂತ 3: Chat backup ಮೇಲೆ ಕ್ಲಿಕ್ ಮಾಡಿ, ನಂತರ Back up to Google Drive ಆಯ್ಕೆ ಮಾಡಿ
ಹಂತ 4: Never ಎಂಬುವುದನ್ನು ಹೊರತುಪಡಿಸಿ ಬೇರೆ ಬ್ಯಾಕಪ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 5: ಈಗ, ನಿಮ್ಮ ಚಾಟ್ ಹಿಸ್ಟರಿಯನ್ನು ಬ್ಯಾಕಪ್ ಮಾಡಲು ನೀವು ಬಯಸುವ ಗೂಗಲ್ ಖಾತೆಯನ್ನು ಆಯ್ಕೆ ಮಾಡಿ
ಹಂತ 6: ನೀವು ಗೂಗಲ್ ಖಾತೆಯನ್ನು ಕನೆಕ್ಟ್ ಮಾಡದಿದ್ದರೆ, Add account ಅನ್ನು ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಬಳಿಕ ಲಾಗಿನ್ ಮಾಡಿಕೊಳ್ಳಬೇಕು
ಹಂತ 7: ಬ್ಯಾಕ್‌ಅಪ್‌ಗಳಿಗಾಗಿ ನೀವು ಬಳಸಲು ಬಯಸುವ ನೆಟ್‌ವರ್ಕ್ ಅನ್ನು ಆಯ್ಕೆ ಮಾಡಲು ಬ್ಯಾಕ್ ಅಪ್ ಟ್ಯಾಪ್ ಮಾಡಿ
ಗಮನಿಸಿ: ನೀವು ಬ್ಯಾಕಪ್ ಅನ್ನು ದೈನಂದಿನ, ಸಾಪ್ತಾಹಿಕ ಅಥವಾ ಮಾಸಿಕಕ್ಕೆ ಹೊಂದಿಸಬಹುದು. ಹಾಗೆಯೇ Only when I tap Back up (ನಾನು ಬ್ಯಾಕ್ ಅಪ್ ಅನ್ನು ಟ್ಯಾಪ್ ಮಾಡಿದಾಗ ಮಾತ್ರ) ಎಂಬ ಆಯ್ಕೆ ಕೂಡಾ ನಿಮಗೆ ಇದೆ. ಆದರೆ ಈ ಆಯ್ಕೆ ಒಳ್ಳೆಯದಲ್ಲ. ಯಾಕೆಂದರೆ ಬ್ಯಾಕಪ್ ಬೇಕಾದಾಗ ನೀವು ಸೆಟ್ಟಿಂಗ್‌ಗಳಿಗೆ ಹೋಗಬೇಕಾಗುತ್ತದೆ. ಇದು ಸಾಕಷ್ಟು ಕಿರಿಕಿರಿ. ದೈನಂದಿನ ಅಥವಾ ಸಾಪ್ತಾಹಿಕ ಆಯ್ಕೆಯನ್ನು ಆರಿಸುವುದು ಯಾವಾಗಲೂ ಉತ್ತಮ. ಈ ರೀತಿಯಾಗಿ, ನಿಮ್ಮ ಚಾಟ್‌ಗಳು ಕಾಲಕಾಲಕ್ಕೆ ಸ್ವಯಂಚಾಲಿತವಾಗಿ ಬ್ಯಾಕಪ್ ಆಗುತ್ತವೆ. ನೀವು ಯಾವುದೇ ಪ್ರಮುಖ ಮಾಹಿತಿಯನ್ನು ಕಳೆದುಕೊಳ್ಳುವ ಆತಂಕ ಇರುವುದಿಲ್ಲ.
ನೀವು ಸೆಲ್ಯುಲಾರ್ ಡೇಟಾ ನೆಟ್‌ವರ್ಕ್ ಮೂಲಕ ಬ್ಯಾಕಪ್ ಮಾಡಲು ಆರಿಸಿದರೆ, ನೀವು ಬಹಳಷ್ಟು ಡೇಟಾವನ್ನು ಕಳೆದುಕೊಳ್ಳಬಹುದು ಎಂಬುದನ್ನು ನೆನಪಿನಲ್ಲಿಡಿ. ವೈ-ಫೈ ಬಳಸಿ ಯಾವುದನ್ನಾದರೂ ಬ್ಯಾಕಪ್ ಮಾಡುವುದು ಮತ್ತು ತುರ್ತು ಸಮಯಕ್ಕಾಗಿ ಮೊಬೈಲ್ ಡೇಟಾವನ್ನು ಉಳಿಸುವುದು ಯಾವಾಗಲೂ ಉತ್ತಮ.
ವಾಟ್ಸಾಪ್ ಬ್ಯಾಕಪ್ ಭದ್ರತಾ ಫೀಚರ್ ಹೇಗೆ ಸಕ್ರಿಯಗೊಳಿಸುವುದು?
ನಿಮ್ಮ ಚಾಟ್‌ಗಳನ್ನು ನೀವು ಬ್ಯಾಕಪ್ ಮಾಡುವುದರಿಂದಾಗಿ ಚಾಟ್‌ಗಳಿಗೆ ಹೆಚ್ಚುವರಿ ಭದ್ರತೆಯನ್ನು ಹೊಂದುವುದು ಮುಖ್ಯವಾಗಿದೆ. ಅದಕ್ಕಾಗಿ ವಾಟ್ಸಾಪ್ ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಗೂಗಲ್ ಡ್ರೈವ್ ಬ್ಯಾಕಪ್‌ಗಾಗಿ ಬಳಕೆದಾರರು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸರಳವಾಗಿ ಆನ್ ಮಾಡಬಹುದು.
ಹಂತ 1: ವಾಟ್ಸಾಪ್ ತೆರೆದು ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ
ಹಂತ 2: Settings ಮೇಲೆ ಕ್ಲಿಕ್ ಮಾಡಿದ ಬಳಿಕ Chats ಆಯ್ಕೆ ಮಾಡಿ
ಹಂತ 3: ಚಾಟ್ ಬ್ಯಾಕಪ್ ಆಯ್ಕೆ ಮಾಡಿ, End-to-end encrypted backup ಟ್ಯಾಪ್ ಮಾಡಿ
ಹಂತ 4: Turn on ಮೇಲೆ ಕ್ಲಿಕ್ ಮಾಡಿ
ಹಂತ 5: ಈಗ, ಪಾಸ್‌ವರ್ಡ್ ರಚಿಸಿ ಅಥವಾ 64 ಅಂಕಿಗಳ ಎನ್‌ಕ್ರಿಪ್ಶನ್ ಕೀ ಬಳಸಿ, ಇಲ್ಲಿಗೆ ಎಲ್ಲ ಹಂತ ಪೂರ್ಣವಾಗಲಿದೆ