For Quick Alerts
ALLOW NOTIFICATIONS  
For Daily Alerts

ಪಿಎನ್‌ಜಿ ಬಿಲ್ ಲೆಕ್ಕಾಚಾರ ಹೇಗೆ, ರಿಫಂಡ್ ಪಡೆಯುವುದು ಹೇಗೆ?

|

ಪೈಪ್ಡ್ ಅಡುಗೆ ಅನಿಲ ಎಂದೂ ಕರೆಯಲ್ಪಡುವ ಪೈಪ್ಡ್ ನೈಸರ್ಗಿಕ ಅನಿಲದ (ಪಿಎನ್‌ಜಿ) ಬೆಲೆಯು ದೆಹಲಿ-ಎನ್‌ಸಿಆರ್‌ನಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಇನ್‌ಪುಟ್ ವೆಚ್ಚ ಅಧಿಕವಾಗಿದೆ ಎಂಬ ಕಾರಣದಿಂದಾಗಿ ಬೆಲೆ ಏರಿಕೆ ಮಾಡಲಾಗಿದೆ. ರಾಷ್ಟ್ರದ ಅತಿದೊಡ್ಡ ನೈಸರ್ಗಿಕ ಅನಿಲ ವಿತರಣಾ ಸಂಸ್ಥೆಗಳಲ್ಲಿ ಒಂದಾದ ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್‌) ದೆಹಲಿ-ಎನ್‌ಸಿಆರ್‌ನಲ್ಲಿರುವ ಮನೆಗಳಿಗೆ ಗ್ಯಾಸ್ ಒದಗಿಸಲಾಗುತ್ತದೆ. ಬಳಕೆದಾರರು ಅನಿಲವನ್ನು ಬಳಕೆ ಮಾಡಿದ ಬಳಿಕ ಬಿಲ್‌ ಅನ್ನು ಪಾವತಿ ಮಾಡಬೇಕಾಗುತ್ತದೆ.

ಪ್ರಮಾಣಿತ ಬಿಲ್ಲಿಂಗ್ ಪ್ರಕ್ರಿಯೆ ಪ್ರತಿ ಎರಡು ತಿಂಗಳಿಗೊಮ್ಮೆ ನಡೆಯುತ್ತದೆ. ಯೂನಿಟ್‌ಗಳಲ್ಲಿ ಇರುವ ಪಿಎನ್‌ಜಿ ಬಳಕೆಯ ಪ್ರಮಾಣವನ್ನು ನೋಡಿಕೊಂಡು ಗ್ರಾಹಕರಿಗೆ ಬಿಲ್ ವಿಧಿಸಲಾಗುತ್ತದೆ. ಬಳಕೆದಾರರ ಆವರಣದಲ್ಲಿ ಮೀಟರ್‌ ಅನ್ನು ಅಳವಡಿಕೆ ಮಾಡಲಾಗಿರುತ್ತದೆ. ಈ ಮೀಟರ್ ಆಧಾರಿಸಿ ಲೆಕ್ಕಾಚಾರ ಹಾಕಿ ಬಿಲ್ ನೀಡಲಾಗುತ್ತದೆ. ಇನ್ನು ಗ್ರಾಹಕರಿಗೆ ಸ್ವಯಂ ಬಿಲ್ಲಿಂಗ್ ಆಯ್ಕೆ ಕೂಡಾ ಇದೆ.

ಎಲ್‌ಪಿಜಿ ಸಬ್ಸಿಡಿ ಲಭ್ಯವಾಗುತ್ತಿದೆಯೇ, ಹೀಗೆ ಚೆಕ್ ಮಾಡಿಎಲ್‌ಪಿಜಿ ಸಬ್ಸಿಡಿ ಲಭ್ಯವಾಗುತ್ತಿದೆಯೇ, ಹೀಗೆ ಚೆಕ್ ಮಾಡಿ

ಗ್ರಾಹಕರು ತಮ್ಮ ಫೋನ್‌ನೊಂದಿಗೆ ಮೀಟರ್‌ನ ಚಿತ್ರವನ್ನು ತೆಗೆದುಕೊಂಡು ಅದನ್ನು ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಆಗ ಸ್ವಯಂಚಾಲಿತವಾಗಿ ಬಿಲ್ ಎಷ್ಟು ಎಂದು ಮಾಹಿತಿ ಲಭ್ಯವಾಗಲಿದೆ. ಇದು ಎಸ್‌ಎಂಎಸ್, ಇಮೇಲ್ ಮೂಲಕ ಲಭ್ಯವಾಗಲಿದೆ. ಹಾಗಾದರೆ ಈ ಬಿಲ್ ಅನ್ನು ಹೇಗೆ ಲೆಕ್ಕಾಚಾರ ಮಾಡುವುದು, ರಿಫಂಡ್ ಅನ್ನು ಹೇಗೆ ಪಡೆಯುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಬಿಲ್ಲಿಂಗ್ ಮಾಡುವ ಮಾನದಂಡ ಹೇಗೆ?

ಬಿಲ್ಲಿಂಗ್ ಮಾಡುವ ಮಾನದಂಡ ಹೇಗೆ?

ನೀವು ಪೈಪ್ಡ್ ಗ್ಯಾಸ್ ಸಂಪರ್ಕವನ್ನು ಬಳಸದಿರುವ ಸಂದರ್ಭದಲ್ಲಿ ಮೀಟರ್ ರೀಡಿಂಗ್ ಅನ್ನು ಅಪ್ಲೋಡ್ ಮಾಡಬೇಕಾಗಿಲ್ಲ. ನೀವು ಬಳಕೆ ಮಾಡದಿದ್ದರೂ ಬಿಲ್ ಪಾವತಿ ಮಾಡವು ನೋಟಿಫಿಕೇಶನ್ ಲಭ್ಯವಾಗುತ್ತಿದೆಯೇ? ಇತರ ಸಂದರ್ಭಗಳಲ್ಲಿ, ಪೈಪ್ ಮಾಡಿದ ಅಡುಗೆ ಅನಿಲವನ್ನು ಒಂದೇ ದಿನವೂ ಬಳಸದಿದ್ದರೂ ಗ್ರಾಹಕರು ಬಿಲ್‌ಗಳನ್ನು ಪಡೆದಿದ್ದಾರೆ ಎಂದು ಅರ್ಥವಾಗಿದೆ. ಆದ್ದರಿಂದ, ಬಿಲ್ಲಿಂಗ್ ಮಾಡುವ ಮಾನದಂಡವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಎರಡು ತಿಂಗಳ ಬಿಲ್ಲಿಂಗ್ ಅವಧಿಯಲ್ಲಿ ಗ್ರಾಹಕರು 4 SCM ಗಿಂತ ಕಡಿಮೆ ಪೈಪ್ಡ್ ನೈಸರ್ಗಿಕ ಅನಿಲವನ್ನು ಬಳಸಿದ್ದಾರೆ ಎಂದುಕೊಳ್ಳೋಣ. ಗ್ರಾಹಕರು ಪ್ರಸ್ತುತ ಪಿಎನ್‌ಜಿ ದರದಲ್ಲಿ 4 SCM ಗೆ ಸಮಾನವಾದ ಕನಿಷ್ಠ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ಎಸ್‌ಸಿಎಂ ಎಂದರೆ ಗ್ಯಾಸ್ ವಾಲ್ಯೂಮ್‌ಗೆ ಕನಿಷ್ಠ ಬಿಲ್ಲಿಂಗ್ ಆಗಿದೆ.

ಶುಭ ಸುದ್ದಿ: ಸತತವಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ!ಶುಭ ಸುದ್ದಿ: ಸತತವಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ!

 ಗ್ರಾಹಕನಿಗೆ ಹೆಚ್ಚುವರಿ ಶುಲ್ಕ ವಿಧಿಸಿದರೆ?

ಗ್ರಾಹಕನಿಗೆ ಹೆಚ್ಚುವರಿ ಶುಲ್ಕ ವಿಧಿಸಿದರೆ?

ಗ್ರಾಹಕರು ಮನೆಯಲ್ಲಿ ಹಲವಾರು ದಿನಗಳಿಂದ ಇಲ್ಲ ಎಂದುಕೊಳ್ಳಿ. ನೀವು ಒಂದು ಯೂನಿಟ್ ಕೂಡಾ ಬಳಕೆ ಮಾಡಿಲ್ಲ ಎಂದುಕೊಳ್ಳೋಣ. ಈ ಸಂದರ್ಭದಲ್ಲಿ, ಗ್ರಾಹಕರಿಗೆ 4 SCM ಕನಿಷ್ಠ ಶುಲ್ಕವನ್ನು ಪಾವತಿ ಮಾಡಲು ಬಿಲ್ ಕಳುಹಿಸಲಾಗುತ್ತದೆ. ಬಿಲ್ ಮೊತ್ತವು ಅಧಿಕವಾಗಿದೆ ಎಂದು ಗ್ರಾಹಕರು ಭಾವಿಸಿದರೆ, ಗ್ರಾಹಕರು ಪಿಎನ್‌ಜಿ ಗ್ರಾಹಕ ಸೇವೆಯನ್ನು ಸಂಪರ್ಕಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಕಂಪನಿಯ ನೀತಿಗಳು, ನಿಯಮಗಳು ಮತ್ತು ಷರತ್ತುಗಳಿಂದಾಗಿ ಗ್ರಾಹಕರಿಗೆ ಅಧಿಲ ಶುಲ್ಕ ವಿಧಿಸಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ರಿಫಂಡ್ ಆಯ್ಕೆಯನ್ನು ಕಂಪನಿಯು ನೀಡುತ್ತದೆ. ನೀವು ಕಂಪನಿಗೆ ವಿನಂತಿ ಮಾಡಿದರೆ, ಕಂಪನಿಯು ಲೆಕ್ಕಾಚಾರ ಮಾಡಿಕೊಂಡು ರಿಫಂಡ್ ಮಾಡುತ್ತದೆ.

 ದೇಶೀಯವಾಗಿ ಪಿಎನ್‌ಜಿ ಬೆಲೆ ಎಷ್ಟಿದೆ?

ದೇಶೀಯವಾಗಿ ಪಿಎನ್‌ಜಿ ಬೆಲೆ ಎಷ್ಟಿದೆ?

ದೆಹಲಿಯ ಎನ್‌ಸಿಟಿ: ಪ್ರತಿ ಎಸ್‌ಸಿಎಂಗೆ ರೂ.50.59/-
ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್: ಪ್ರತಿ ಎಸ್‌ಸಿಎಂಗೆ ರೂ. 50.46/-
ಕರ್ನಾಲ್ & ರೆವಾರಿ: ಪ್ರತಿ ಎಸ್‌ಸಿಎಂಗೆ ರೂ.49.40/-
ಗುರುಗ್ರಾಮ್: ಪ್ರತಿ ಎಸ್‌ಸಿಎಂಗೆ ರೂ.48.79/-
ಮುಜಾಫರ್‌ನಗರ, ಮೀರತ್ ಮತ್ತು ಶಾಮ್ಲಿ: ಪ್ರತಿ ಎಸ್‌ಸಿಎಂಗೆ ರೂ.53.97/-
ಅಜ್ಮೀರ್, ಪಾಲಿ ಮತ್ತು ರಾಜ್‌ಸಮಂದ್: ಪ್ರತಿ ಎಸ್‌ಸಿಎಂಗೆ ರೂ.56.23/-
ಕಾನ್ಪುರ್, ಹಮೀರ್ಪುರ್ ಮತ್ತು ಫತೇಪುರ್: ಪ್ರತಿ ಎಸ್‌ಸಿಎಂಗೆ ರೂ.53.10/-

English summary

How to Calculate PNG Bill, How to Claim Refund, Explained Here in Kannada

Cooking gas customers alert: How to Calculate PNG Bill, How to Claim Refund, Explained Here in Kannada. Read on.
Story first published: Saturday, August 27, 2022, 12:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X