ಆಧಾರ್‌ನಲ್ಲಿ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಹೀಗೆ ಬದಲಾಯಿಸಿಕೊಳ್ಳಿ..
ಆಧಾರ್ ಕಾರ್ಡ್ ಎಲ್ಲಾ ನಾಗರಿಕರಿಗೆ ಕಡ್ಡಾಯ ಮತ್ತು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ, ಇದನ್ನು ಸರಾಸರಿ ಪ್ರತಿಯೊಬ್ಬ ಭಾರತೀಯ ನಾಗರಿಕರು ಹೊಂದಿದ್ದಾರೆ. ಈ ಡಾಕ್ಯುಮೆಂಟ್ ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿ ಅವಶ್ಯಕವಾಗಿದೆ. ಪ್ಯಾನ್, ರೇಷನ್ ಕಾರ್ಡ್ ಎಲ್ಲಾದರಲ್ಲೂ ಆಧಾರ್ ಲಿಂಕ್ ಕಡ್ಡಾಯವಾಗಿದೆ.
ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ವಾರ್ಷಿಕ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. 2022 ರ ಬಜೆಟ್ ಹಲವಾರು ನಿರೀಕ್ಷೆಗಳನ್ನು ಹೊಂದಿದೆ. ಇ ಆಡಳಿತ, ಆಧಾರ್ ಬಳಕೆ, ಬ್ಯಾಂಕಿಂಗ್ ಕೃಷಿ, ಆರೋಗ್ಯ ಮತ್ತು ರಿಯಲ್ ಎಸ್ಟೇಟ್ ಅಥವಾ ಉದ್ಯಮಿಗಳು ಮತ್ತು ಸಂಬಳ ವೃತ್ತಿಪರರಂತಹ ವ್ಯಕ್ತಿಗಳಿಗೆ ಈ ಬಜೆಟ್ ಮೇಲೆ ಹಲವಾರು ನಿರೀಕ್ಷೆಗಳು ಇದೆ.
ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಯ ಸರಿಯಾಗಿರುವುದು ಸಹ ಮುಖ್ಯವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ, ಖಾಸಗಿ ಮತ್ತು ಸರ್ಕಾರಿ ಏಜೆನ್ಸಿಗಳು ನೀಡುವ ಸೇವೆಗಳನ್ನು ಪಡೆಯಲು ಆಧಾರ್ ಪ್ರಮುಖ ಗುರುತಿನ ಪುರಾವೆಯಾಗಿದೆ. ಆದರೆ ಡಿಜಿಟಲ್ ಸೇವೆ ಪಡೆಯಲು ಕೂಡಾ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಕಾರ್ಡ್‌ಗಳನ್ನು ಫೋನ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಬೇಕಾಗಿದೆ. ಒಂದು ವೇಳೆ ನೀವು ಫೋನ್ ಸಂಖ್ಯೆಯನ್ನು ಬದಲಾಯಿಸಿದರೆ, ಅದನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿದ ಫೋನ್ ಸಂಖ್ಯೆಯೊಂದಿಗೆ ನವೀಕರಿಸಬಹುದು.
ಆಧಾರ್ ಅಸಲಿಯೇ, ನಕಲಿಯೇ?: ಹೀಗೆ ತಿಳಿಯಿರಿ..
ಸಾಮಾನ್ಯವಾಗಿ, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳಿಗೆ ಒಟಿಪಿ ಮೂಲಕ ಆಧಾರ್ ಕಾರ್ಡ್‌ಗಳ ಆನ್‌ಲೈನ್ ಪರಿಶೀಲನೆ ಅಗತ್ಯವಿರುತ್ತದೆ. ಆಧಾರ್ ಕಾರ್ಡ್ ಅನ್ನು ಫೋನ್ ಸಂಖ್ಯೆಯೊಂದಿಗೆ ಲಿಂಕ್ ಮಾಡದಿದ್ದರೆ, ವಿವರಗಳನ್ನು ಪರಿಶೀಲಿಸಲು ಸಾಧ್ಯವಾಗದು. ಆದ್ದರಿಂದ, ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯೊಂದಿಗೆ ಆಧಾರ್ ಕಾರ್ಡ್‌ಗಳನ್ನು ನವೀಕರಿಸುವುದು ಅಗತ್ಯವಿದೆ.

ಆಧಾರ್ ಕಾರ್ಡ್ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು ಅದನ್ನು ಕಾರ್ಡ್‌ದಾರರಿಗೆ ನೀಡಲಾಗುತ್ತದೆ. ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭಾರತದಲ್ಲಿ ಆಧಾರ್ ಕಾರ್ಡ್ ಅನ್ನು ನೀಡಿದೆ. ಈ ಶಾಸನಬದ್ಧ ಸಂಸ್ಥೆಯು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ನವೀಕರಣಗಳನ್ನು ನಿರ್ವಹಿಸುತ್ತದೆ. ಹಾಗಾದರೆ ನೀವು ಆಧಾರ್ ಕಾರ್ಡ್‌ನಲ್ಲಿ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಬದಲಾವಣೆ ಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ..
ಆಧಾರ್ ಕಾರ್ಡ್‌ನಲ್ಲಿ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ಬದಲಾಯಿಸುವುದು ಹೇಗೆ?
ಹಂತ 1: ಅಧಿಕೃತ ವೆಬ್‌ಸೈಟ್ https://uidai.gov.in/ ಮೂಲಕ ಆನ್‌ಲೈನ್ ಅಪಾಯಿಂಟ್‌ಮೆಂಟ್‌ಗೆ ಸಂಪರ್ಕಿಸಿದ ನಂತರ ಹತ್ತಿರದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ
ಹಂತ 2: https://appointments.uidai.gov.in/bookappointment.aspx ನಲ್ಲಿ ನೇರವಾಗಿ ಆನ್‌ಲೈನ್‌ನಲ್ಲಿ ಪೋರ್ಟಲ್‌ಗೆ ಭೇಟಿ ನೀಡಬಹುದು.
ಹಂತ 3: ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ಸ್ಥಳವನ್ನು ಆಯ್ಕೆ ಮಾಡಿ ಮತ್ತು UIDAI ಆಧಾರ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡಲು ಮುಂದಿನ ಹಂತ ಪಾಲಿಸಿ
ಹಂತ 4: ನಂತರ ವಿವರಗಳನ್ನು ಭರ್ತಿ ಮಾಡಲು ಆಧಾರ್ ಅಪ್ಡೇಟ್/ತಿದ್ದುಪಡಿ ಫಾರ್ಮ್ ಅನ್ನು ಆಯ್ಕೆಮಾಡಿ
ಹಂತ 5: ಈಗ ನೀವು ಆಧಾರ್ ನೋಂದಣಿ ಕೇಂದ್ರದಲ್ಲಿ ಆಧಾರ್ ಕಾರ್ಯನಿರ್ವಾಹಕರೊಂದಿಗೆ ಫಾರ್ಮ್ ಅನ್ನು ಹಂಚಿಕೊಳ್ಳಬಹುದು
ಹಂತ 6: ಸೇವೆಗಾಗಿ ನೀವು ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಹಂತ 7: ಹಾಜರಿರುವ ಅಧಿಕಾರಿಯು ಒದಗಿಸಿದ ಯುಆರ್‌ಎನ್ ನೊಂದಿಗೆ ಸ್ವೀಕೃತಿ ಚೀಟಿಯನ್ನು ಹಂಚಿಕೊಳ್ಳುತ್ತಾರೆ
ಹಂತ 8: ಸ್ಥಿತಿಯನ್ನು ಪರಿಶೀಲಿಸಲು ನೀವು ಯುಆರ್‌ಎನ್ ಅನ್ನು ಬಳಸಬಹುದು.
ಹಂತ 9: ಅಂತಿಮವಾಗಿ, ಮೂರು ತಿಂಗಳ ಅವಧಿಯಲ್ಲಿ ಆಧಾರ್ ಮಾಹಿತಿಯಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಲಾಗುತ್ತದೆ.
ಇನ್ನು ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದಾಗಿದೆ. ಅದಕ್ಕಾಗಿ ನೀವು ಮೊದಲಿಗೆ UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. 'ನನ್ನ ಆಧಾರ್' ಆಯ್ಕೆಯನ್ನು ಆರಿಸಿ. ಡಿಸ್‌ಪ್ಲೇ ಮೇಲೆ ಕಾಣುವ 'ಆರ್ಡರ್ ಆಧಾರ್ ಪಿವಿಸಿ ಕಾರ್ಡ್' ಆಯ್ಕೆಯನ್ನು ಕ್ಲಿಕ್ ಮಾಡಿ. 12 ಅಂಕಿಯ ಆಧಾರ್ ಸಂಖ್ಯೆ ಅಥವಾ ನಿಮ್ಮ 16 ಅಂಕಿಯ ವರ್ಚುವಲ್ ಗುರುತಿನ ಸಂಖ್ಯೆ (VID) ನಮೂದಿಸಬೇಕು.
ನೀಲಿ ಬಣ್ಣದ ಆಧಾರ್ ಕಾರ್ಡ್: ಯಾರಿಗೆ ಸಿಗಲಿದೆ? ಅಪ್ಲೈ ಮಾಡುವುದು ಹೇಗೆ?
ನೀವು ಭದ್ರತಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಈಗ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿಯಾಗಿಲ್ಲದಿದ್ದರೆ, ನೀವು 'ನನ್ನ ಮೊಬೈಲ್ ಸಂಖ್ಯೆ ನೋಂದಣಿಯಾಗಿಲ್ಲ' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಿಮ್ಮ ಪರ್ಯಾಯ ಸಂಖ್ಯೆ ನಮೂದಿಸಬೇಕು. ನಂತರ ನೀವು 'OTP ಕಳುಹಿಸಬೇಕು. 'ನಿಯಮಗಳು ಮತ್ತು ಷರತ್ತು' ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು ಅಂತಿಮವಾಗಿ, 'ಸಲ್ಲಿಸು' ಮೇಲೆ ಕ್ಲಿಕ್ ಮಾಡಿ. ನಿಮ್ಮ OTP ಯ ದೃಢೀಕರಣ ಸೇರಿದಂತೆ ಮೇಲಿನ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ.
ಮರು ಮುದ್ರಣಕ್ಕಾಗಿ ಹೆಚ್ಚಿನ ಪರಿಶೀಲನೆಗಾಗಿ 'ಪೂರ್ವವೀಕ್ಷಣೆ ಆಧಾರ್ ಪತ್ರ'ದೊಂದಿಗೆ ಒಂದು ಪೇಜ್ ಕಾಣಿಸಿಕೊಳ್ಳುತ್ತದೆ. ನೀವು 'ಪಾವತಿ ಮಾಡಿ' ಆಯ್ಕೆಯನ್ನು ಆರಿಸಬೇಕಾಗುತ್ತದೆ. ನಂತರ ನೀವು ಪಿಡಿಎಫ್ ಡೌನ್‌ಲೋಡ್ ಮಾಡಲು ನಿಮ್ಮ ಡಿಜಿಟಲ್ ಸಹಿಯನ್ನು ನೀಡಬೇಕು. ಪ್ರಕ್ರಿಯೆಯ ಕೊನೆಯಲ್ಲಿ, ಸೇವಾ ವಿನಂತಿಯ ಸಂಖ್ಯೆಯನ್ನು SMS ಮೂಲಕ ರಚಿಸಲಾಗುತ್ತದೆ. ಆಧಾರ್ ಪತ್ರವನ್ನು ಕಳುಹಿಸುವವರೆಗೆ ನಿಮ್ಮ ಅರ್ಜಿಯ ಸ್ಥಿತಿಯನ್ನು ಪತ್ತೆಹಚ್ಚಲು ನೀವು ಆ ಸಂಖ್ಯೆಯನ್ನು ಬಳಸಬೇಕಾಗುತ್ತದೆ. ಈ ರೀತಿಯಾಗಿ ನೀವು ಈಗ ನಿಮ್ಮ ಆಧಾರ್ ಕಾರ್ಡ್ ಅನ್ನು ನೋಂದಾಯಿತ ಮೊಬೈಲ್ ಸಂಖ್ಯೆಯಿಲ್ಲದೆ ಸುಲಭವಾಗಿ ಡೌನ್‌ಲೋಡ್ ಮಾಡಬಹುದು.