For Quick Alerts
ALLOW NOTIFICATIONS  
For Daily Alerts

FASTag Balance : ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

|

ನಾವು ಆತುರದಲ್ಲಿ ಅಥವಾ ಯಾವುದೋ ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ಇರುವಾಗ ಟೋಲ್ ಪ್ಲಾಜಾದಲ್ಲಿ ವಾಹನ ನಿಲ್ಲಿಸಿ ಟೋಲ್ ಶುಲ್ಕ ಕಟ್ಟುವುದು ದೊಡ್ಡ ಕೆಲಸದಂತೆ ಭಾಸವಾಗುತ್ತದೆ. ಈ ಸಂದರ್ಭದಲ್ಲಿ ನಮಗೆ ಇರುವ ಉತ್ತಮ ಆಯ್ಕೆಯೇ ಫಾಸ್ಟ್ಯಾಗ್ ಆಗಿದೆ. ಫಾಸ್ಟ್ಯಾಗ್ ನಮ್ಮ ಸಮಯವನ್ನು ಉಳಿತಾಯ ಮಾಡುವ ವ್ಯವಸ್ಥೆಯಾಗಿದೆ.

ಎನ್‌ಎಚ್‌ಎಐ ಈ ಫಾಸ್ಟ್ಯಾಗ್ ಕಾರ್ಯಕ್ರಮವನ್ನು ಆರಂಭ ಮಾಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಸುಲಭವಾಗಲಿ ಎಂಬ ನಿಟ್ಟಿನಲ್ಲಿ ಫಾಸ್ಟ್ಯಾಗ್ ಅನ್ನು ಆರಂಭ ಮಾಡಲಾಗಿದೆ. ಎಲ್ಲ ವಾಹನಗಳನ್ನು ಫಾಸ್ಟ್ಯಾಗ್ ಅನ್ನು ಬಳಕೆ ಮಾಡಿಯೇ ಟೋಲ್ ತೆರಬೇಕು ಎಂದು ಸರ್ಕಾರ ಆದೇಶಿಸಿದೆ. ಫಾಸ್ಟ್ಯಾಗ್ ಅನ್ನು ಕಡ್ಡಾಯ ಮಾಡಲಾಗಿದೆ. ಟೋಲ್‌ಗಳಲ್ಲಿ ವಾಹನದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಎಸ್‌ಬಿಐ ಎಸ್ಎಂಎಸ್ ಸೇವೆ ಮೂಲಕ FASTag ಬ್ಯಾಲೆನ್ಸ್ ಚೆಕ್ ಹೇಗೆ?ಎಸ್‌ಬಿಐ ಎಸ್ಎಂಎಸ್ ಸೇವೆ ಮೂಲಕ FASTag ಬ್ಯಾಲೆನ್ಸ್ ಚೆಕ್ ಹೇಗೆ?

ಪ್ರಸ್ತುತ ನಮಗೆ ಹಲವಾರು ಮಂದಿಗೆ ಇದರ ಅಪ್ಲಿಕೇಶನ್, ರಿಚಾರ್ಜ್ ಮಾಡುವ ವಿಧಾನ ತಿಳಿದಿದೆ. ಆದರೆ ನಮ್ಮ ಫಾಸ್ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇದೆಯೇ ಎಂದು ಚೆಕ್ ಮಾಡುವುದು ಹೇಗೆ ಎಂದು ತಿಳಿದಿದೆಯೇ? ಆದ್ದರಿಂದಾಗಿ ನಾವಿಲ್ಲಿ ಫಾಸ್ಟ್ಯಾಗ್‌ನ ಬ್ಯಾಲೆನ್ಸ್ ಅನ್ನು ಹೇಗೆ ಪರಿಶೀಲನೆ ಮಾಡುವುದು ಎಂದು ಹಂತ ಹಂತವಾಗಿ ವಿವರಿಸಿದ್ದೇವೆ. ಮುಂದೆ ಓದಿ...

 ಫಾಸ್ಟ್ಯಾಗ್ ಬಗ್ಗೆ ಮಾಹಿತಿ

ಫಾಸ್ಟ್ಯಾಗ್ ಬಗ್ಗೆ ಮಾಹಿತಿ

ಫಾಸ್ಟ್ಯಾಗ್ ಎಂಬುವುದು ರೆಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ತಂತ್ರಜ್ಞಾನವಾಗಿದೆ. ವಾಹನ ಸಂಚಾರವಾಗುವ ಸಂದರ್ಭದಲ್ಲೇ ಟೋಲ್ ಪಾವತಿಯಾಗುವ ವ್ಯವಸ್ಥೆ ಇದಾಗಿದೆ. ಜನರು ತಮ್ಮ ಫಾಸ್ಟ್ಯಾಗ್ ಸ್ಕ್ಯಾನರ್ ಅನ್ನು ತಮ್ಮ ವಾಹನಕ್ಕೆ ಹಾಕುವ ಮೂಲಕ ನೇರವಾಗಿ ಫಾಸ್ಟ್ಯಾಗ್ ಪಾವತಿ ಮಾಡಬಹುದಾಗಿದೆ. ಟೋಲ್ ಸಿಬ್ಬಂದಿಗಳು ನಿಮ್ಮ ಫಾಸ್ಟ್ಯಾಗ್ ಅನ್ನು ಸ್ಕ್ರೀನಿಂಗ್ ಮಾಡಿಕೊಳ್ಳುತ್ತಾರೆ. ಈ ಮೂಲಕ ನೀವು ಹೆಚ್ಚು ಸಮಯವನ್ನು ಟೋಲ್‌ನಲ್ಲಿ ವ್ಯತ್ಯ ಮಾಡದೆಯೇ ಮುಂದೆ ಸಾಗಬಹುದಾಗಿದೆ.

 ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಹೇಗೆ ಚೆಕ್ ಮಾಡುವುದು

ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಬ್ಯಾಲೆನ್ಸ್ ಹೇಗೆ ಚೆಕ್ ಮಾಡುವುದು

ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಬೇರೆ ಬೇರೆ ರೀತಿಯಲ್ಲಿ ಚೆಕ್ ಮಾಡಲು ಸಾಧ್ಯವಿದೆ. ಎಸ್‌ಎಂಎಸ್‌ ಮೂಲಕ, ಮೊಬೈಲ್ ಅಪ್ಲಿಕೇಷನ್ ಮೂಲಕ, ಗ್ರಾಹಕರ ಸಹಾಯವಾಣಿ ಮೂಲಕ ಚೆಕ್ ಮಾಡಿಕೊಳ್ಳಬಹುದು. ನೀವು ಆನ್‌ಲೈನ್ ಮೂಲಕ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನವನ್ನು ಈ ಕೆಳಗೆ ಹಂತ ಹಂತವಾಗಿ ವಿವರಿಸಲಾಗಿದೆ.

ಹಂತ 1: ಮೊದಲು ನಿಮ್ಮ ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಲಾಗಿನ್ ಆಗುವ ಮೂಲಕ ಫಾಸ್ಟ್ಯಾಗ್ ಪೋರ್ಟಲ್‌ ಆಕ್ಸಸ್ ಮಾಡಿ
ಹಂತ 3: ಮೆನುವಿನಲ್ಲಿರುವ View Balance ಮೇಲೆ ಕ್ಲಿಕ್ ಮಾಡಿ

ನೀವು ಮೊಬೈಲ್ ಆಪ್‌ ಮೂಲಕವೂ ಫಾಸ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಬಹುದು. ಇಟೋಲ್ ಆಪ್‌ಗೆ ಲಾಗಿನ್ ಆಗಿ ನಿಮ್ಮ ಫಾಸ್ಟ್ಯಾಗ್‌ನಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ನೋಡಲು ಸಾಧ್ಯವಾಗುತ್ತದೆ.

 

 ಎಸ್‌ಎಂಎಸ್‌ ಸಂದೇಶದ ಮೂಲಕ ಬ್ಯಾಲೆನ್ಸ್ ಪರಿಶೀಲನೆ

ಎಸ್‌ಎಂಎಸ್‌ ಸಂದೇಶದ ಮೂಲಕ ಬ್ಯಾಲೆನ್ಸ್ ಪರಿಶೀಲನೆ

ನೀವು ಫಾಸ್ಟ್ಯಾಗ್ ಸೇವೆಗೆ ಸೈನ್ ಅಪ್ ಆಗಿದ್ದರೆ, ಟೋಲ್‌ನಲ್ಲಿ ಶುಲ್ಕ ಕಡಿತವಾದಾಗಲೆಲ್ಲ ನಿಮಗೆ ಎಸ್‌ಎಂಎಸ್ ಬರಲಿದೆ. ಈ ಎಸ್‌ಎಂಎಸ್ ಮೂಲಕ ನೀವು ಬ್ಯಾಲೆನ್ಸ್ ಎಷ್ಟಿದೆ ಎಂದು ಚೆಕ್ ಮಾಡಿಕೊಳ್ಳಬಹುದು. ಹಾಗೆಯೇ ಫಾಸ್ಟ್ಯಾಗ್ ಬ್ಯಾಲೆನ್ಸ್ ಕಡಿಮೆ ಇದ್ದಾಗ ಅದರ ನೊಟೀಫಿಕೇ‍ಶನ್ ಕೂಡಾ ಎಸ್‌ಎಂಎಸ್ ಮೂಲಕ ದೊರೆಯಲಿದೆ. ರಿಚಾರ್ಜ್ ಮಾಡಿದ ಬಗ್ಗೆ, ಕಡಿತದ ಬಗ್ಗೆ ಎಲ್ಲವೂ ಎಸ್‌ಎಂಎಸ್ ಮೂಲಕ ಮಾಹಿತಿ ಲಭ್ಯವಾಗಲಿದೆ.

 ಗ್ರಾಹಕರ ಸಹಾಯವಾಣಿ ಮೂಲಕ ಬ್ಯಾಲೆನ್ಸ್ ಪರಿಶೀಲನೆ

ಗ್ರಾಹಕರ ಸಹಾಯವಾಣಿ ಮೂಲಕ ಬ್ಯಾಲೆನ್ಸ್ ಪರಿಶೀಲನೆ

ನೀವು ಗ್ರಾಹಕರ ಸಹಾಯವಾಣಿ ಮೂಲಕವು ಫಾಸ್ಟ್ಯಾಗ್ ಬ್ಯಾಲೆನ್ಸ್ ಅನ್ನು ಪರಿಶೀಲನೆ ಮಾಡಲು ಸಾಧ್ಯವಾಗಲಿದೆ. ಅದಕ್ಕಾಗಿ ನೀವು ETCBAL ಎಂದು 5676766 ಗೆ ಎಸ್‌ಎಂಎಸ್ ಮಾಡಬೇಕಾಗುತ್ತದೆ. ಅಥವಾ 8010928888 ಗೆ ಮಿಸ್ಡ್ ಕಾಲ್ ನೀಡಿದರೆ ಸಾಕಾಗುತ್ತದೆ. ಆದರೆ ನೀವು ಎಸ್‌ಎಂಎಸ್ ಅಥವಾ ಮಿಸ್ಡ್ ಕಾಲ್ ನೀಡುವ ಮೊಬೈಲ್ ಸಂಖ್ಯೆಯು ಎನ್‌ಎಚ್‌ಎಐನಲ್ಲಿ ರಿಜಿಸ್ಟಾರ್ ಆಗಿರುವ ನಂಬರ್ ಆಗಿರಬೇಕು. ಅದುವೇ ಸಂಖ್ಯೆಯಾಗಿದ್ದಾಗ ನಿಮಗೆ ಎಸ್‌ಎಂಎಸ್ ಮೂಲಕ ಮಾಹಿತಿ ಲಭ್ಯವಾಗಲಿದೆ. ನೀವು ಎನ್‌ಎಚ್‌ಎಐ ವ್ಯಾಲೆಟ್ ಮೂಲಕವು ಬ್ಯಾಲೆನ್ಸ್ ಚೆಕ್ ಮಾಡಬಹುದು.

 ಎನ್‌ಎಚ್‌ಎಐ ವ್ಯಾಲೆಟ್‌ನಲ್ಲಿ ಬ್ಯಾಲೆನ್ಸ್ ಚೆಕ್

ಎನ್‌ಎಚ್‌ಎಐ ವ್ಯಾಲೆಟ್‌ನಲ್ಲಿ ಬ್ಯಾಲೆನ್ಸ್ ಚೆಕ್

ನಿಮ್ಮ ಮೊಬೈಲ್ ಫೋನ್‌ನಲ್ಲಿ ಪ್ಲೇ ಸ್ಟೋರ್ ಅಥವಾ ಆಪ್‌ ಸ್ಟೋರ್ ಅನ್ನು ತೆರೆಯಿರಿ. My FASTag App ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಿಮ್ಮ ಮಾಹಿತಿ ನಮೂದಿಸಿ ಲಾಗಿನ್ ಆಗಿ. ಈಗ ನಿಮಗೆ ನಿಮ್ಮ ಫಾಸ್ಟ್ಯಾಗ್‌ನಲ್ಲಿರುವ ಉಳಿದ ಮೊತ್ತವನ್ನು ಪರಿಶೀಲನೆ ಮಾಡಲು ಸಾಧ್ಯವಾಗಲಿದೆ.

ಎಸ್‌ಬಿಐ ಯೋನೋ ಬಳಸಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಲು ಈ ಹಂತ ಪಾಲಿಸಿಎಸ್‌ಬಿಐ ಯೋನೋ ಬಳಸಿ ಫಾಸ್ಟ್‌ಟ್ಯಾಗ್ ರೀಚಾರ್ಜ್ ಮಾಡಲು ಈ ಹಂತ ಪಾಲಿಸಿ

English summary

How to Check Fastag Balance; Step by Step Guide in Kannada

Fastag is the easiest way to reduce this time. How to Check Fastag Balance; Step by Step Guide in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X