For Quick Alerts
ALLOW NOTIFICATIONS  
For Daily Alerts

ಆನ್‌ಲೈನ್‌ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

|

ನಾವು ಟ್ರಾನ್ಸ್‌ಯೂನಿಯನ್ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (ಸಿಬಿಲ್) ಭಾರತದಲ್ಲಿ ಲಕ್ಷಾಂತರ ಗ್ರಾಹಕರು ಮತ್ತು ವ್ಯವಹಾರಗಳ ಮೇಲೆ ಕ್ರೆಡಿಟ್-ಸಂಬಂಧಿತ ಮಾಹಿತಿಯನ್ನು ಇರಿಸುವ ಕ್ರೆಡಿಟ್ ಮಾಹಿತಿ ಕಂಪನಿಯಾಗಿದೆ. ನಾವು ಸಾಲವನ್ನು ಪಡೆಯುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಅತೀ ಮುಖ್ಯವಾಗಿದೆ. ನಮ್ಮ ಸಿಬಿಲ್ ಸ್ಕೋರ್ ಅನ್ನು ನೋಡಿಕೊಂಡು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲವನ್ನು ನೀಡುತ್ತದೆ.

 

ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸೂಚಿಸುವ ಸಂಖ್ಯೆಯಾಗಿದೆ. ನಾವು ಗೃಹ ಸಾಲದಂತಹ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಮುಖ್ಯವಾಗಿದೆ.

CIBIL ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸುವುದುCIBIL ಕ್ರೆಡಿಟ್ ಸ್ಕೋರ್ ಎಂದರೇನು? ಅದನ್ನು ಹೇಗೆ ಹೆಚ್ಚಿಸುವುದು

ನಿಮ್ಮ ಕ್ರೆಡಿಟ್ ವರದಿಯಿಂದ ಡೇಟಾವನ್ನು ಬಳಸಿಕೊಂಡು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ರಚಿಸಲು ಏಜೆನ್ಸಿಗಳು ಸ್ಕೋರಿಂಗ್ ಮಾಡೆಲ್ ಎಂಬ ಗಣಿತದ ಸೂತ್ರವನ್ನು ಬಳಸುತ್ತವೆ. ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಪರಿಶೀಲಿಸುವುದು ಸರಳವಾಗಿದೆ. ಸಿಬಿಲ್ ಸ್ಕೋರ್ ಬಗ್ಗೆ ಅಧಿಕ ಮಾಹಿತಿ, ಹಾಗೂ ಸಿಬಿಲ್ ಸ್ಕೋರ್ ಹೇಗೆ ಪರಿಶೀಲಿಸುವುದು ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ. ಮುಂದೆ ಓದಿ...

ಸಿಬಿಲ್ ಸ್ಕೋರ್ ಬಗ್ಗೆ ಅಧಿಕ ಮಾಹಿತಿ

ಸಿಬಿಲ್ ಸ್ಕೋರ್ ಬಗ್ಗೆ ಅಧಿಕ ಮಾಹಿತಿ

ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಮಾಹಿತಿ ವರದಿಯಿಂದ (ಸಿಐಆರ್) ಕ್ರೆಡಿಟ್ ಇತಿಹಾಸದ ಮಾಹಿತಿಯನ್ನು ಬಳಸಿಕೊಂಡು ರಚನೆ ಮಾಡಲಾಗುತ್ತದೆ. ಇದನ್ನು ನಿಮ್ಮ ಸಿಬಿಲ್ ವರದಿ ಎಂದು ಕೂಡಾ ಕರೆಯಲಾಗುತ್ತದೆ. ಇದರಲ್ಲಿ ನೀವು ಯಾವ ಬ್ಯಾಂಕ್‌ನಲ್ಲಿ, ಯಾವ ವರ್ಷದಲ್ಲಿ ಸಾಲ ಪಡೆದಿದ್ದೀರಿ, ಯಾವುದಕ್ಕಾಗಿ ಸಾಲವನ್ನು ಪಡೆಯಲಾಗಿದೆ. ಮರುಪಾವತಿಯನ್ನು ಸರಿಯಾಗಿ ಮಾಡಲಾಗಿದೆಯೇ ಎಂಬ ಬಗ್ಗೆ ವಿವರವನ್ನು ಹಾಕಲಾಗುತ್ತದೆ. ನೀವು ಎಷ್ಟು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಸಾಲವನ್ನು ಮರುಪಾವತಿ ಮಾಡಿದ್ದೀರಿ ಎಂಬುವುದರ ಮೇಲೆ ಇದು ಆಧರಿಸಿದೆ. 300 ರಿಂದ 900 ರವರೆಗಿನ ಹೆಚ್ಚಿನ ಸಿಬಿಲ್ ಸ್ಕೋರ್ ಯೋಗ್ಯವಾಗಿದೆ. ಸಿಬಿಲ್ ಸ್ಕೋರ್ ನಿಮಗೆ ಸಾಲ ಸುಲಭವಾಗಿ ಲಭ್ಯವಾಗಲು ಸಹಾಯಕವಾಗಿದೆ.

ಯಾವ ವೆಬ್‌ಸೈಟ್‌ನಲ್ಲಿ ಸಿಬಿಲ್ ಸ್ಕೋರ್ ಉತ್ತಮ

ಯಾವ ವೆಬ್‌ಸೈಟ್‌ನಲ್ಲಿ ಸಿಬಿಲ್ ಸ್ಕೋರ್ ಉತ್ತಮ

ನೀವು ಸಿಬಿಲ್ ಸ್ಕೋರ್ ಅನ್ನು ಹಲವಾರು ಏಜೆನ್ಸಿಗಳ ಮೂಲಕ ಪರಿಶೀಲನೆ ಮಾಡಬಹುದಾಗಿದೆ. ಕೆಲವು ಏಜೆನ್ಸಿಗಳು ಉಚಿತವಾಗಿ ಸಿಬಿಲ್ ಸ್ಕೋರ್ ಪರಿಶೀಲನೆ ಮಾಡಲು ಅವಕಾಶ ನೀಡುತ್ತದೆ. ಹೆಚ್ಚೆಂದರೆ ನಿಮಗೆ ಸಬ್‌ಸ್ಕ್ರಿಪ್ಶನ್ ಶುಲ್ಕವನ್ನು ವಿಧಿಸುತ್ತದೆ. ನೀವು cibil.com ಅಧಿಕೃತ ವೆಬ್‌ಸೈಟ್ ಮೂಲಕ ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡುವುದು ಉತ್ತಮ. ಇಲ್ಲಿ ನೀವು ವಾರ್ಷಿಕವಾಗಿ ಒಂದು ಬಾರಿ ಉಚಿತವಾಗಿ ಸಿಬಿಲ್ ಸ್ಕೋರ್ ಅನ್ನು ಪಡೆಯಲು ಸಾಧ್ಯವಾಗಲಿದೆ.

ಆನ್‌ಲೈನ್‌ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
 

ಆನ್‌ಲೈನ್‌ನಲ್ಲಿ ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?

ಸಿಬಿಲ್ ಸ್ಕೋರ್ ಅನ್ನು ಪರಿಶೀಲನೆ ಮಾಡಲು ಈ ಕೆಳಗಿನ ಹಂತಗಳನ್ನು ಪಾಲನೆ ಮಾಡಿ...

ಹಂತ 1: ಅಧಿಕೃತ ವೆಬ್‌ಸೈಟ್ https://www.cibil.com/ ಗೆ ಭೇಟಿ ನೀಡಿ
ಹಂತ 2: GET FREE CIBIL SCORE & REPORT ಮೇಲೆ ಕ್ಲಿಕ್ ಮಾಡಿ
ಹಂತ 3: ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಹೆಸರು, ಐಡಿ ಸಂಖ್ಯೆ ಉಲ್ಲೇಖ ಮಾಡಿ. ನಿಮ್ಮ ಪ್ಯಾನ್, ಪಾಸ್‌ಪೋರ್ಟ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ರೇಷನ್ ಅನ್ನು ಐಡಿ ಪ್ರೂಫ್ ಆಗಿ ಬಳಕೆ ಮಾಡಬಹುದು.
ಹಂತ 4: Accept and Continue ಮೇಲೆ ಕ್ಲಿಕ್ ಮಾಡಿ
ಹಂತ 5: ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಅನ್ನು ಲಿಂಕ್ ಮಾಡಲು ಕೇಳಲಾಗುತ್ತದೆ. ಇದು ಸರಳವಾದ ಲಾಗಿನ್ ಪ್ರಕ್ರಿಯೆಯನ್ನು ಒದಗಿಸಲು ವೆಬ್‌ಸೈಟ್‌ಗೆ ಅನುವು ಮಾಡಿಕೊಡುತ್ತದೆ.
ಹಂತ 6: ಆಯ್ಕೆಗಳಲ್ಲಿ ಒಂದನ್ನು ಆಯ್ಕೆಮಾಡಿ, ನಂತರ Continue ಕ್ಲಿಕ್ ಮಾಡಿ.
ಹಂತ 7: You have successfully enrolled! ಮೇಲೆ ಕ್ಲಿಕ್ ಮಾಡಿ
ಹಂತ 8: ಮುಂದಿನ ಪುಟದಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಲಭ್ಯವಾಗಲಿದೆ.

 

ಇಲ್ಲಿ ಗಮನಿಸಿ

ಇಲ್ಲಿ ಗಮನಿಸಿ

ನೀವು ವಾರ್ಷಿಕವಾಗಿ ಒಂದಕ್ಕಿಂತ ಅಧಿಕ ಬಾರಿ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡಲು ಬಯಸಿದರೆ ಅದರ ಸೇವೆಗಾಗಿ ನೀವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಬೇರೆ ವೆಬ್‌ಸೈಟ್ ಅಥವಾ ಆಪ್‌ಗಳಲ್ಲಿ ನೀವು ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡಬಹುದು. ಆದರೆ ನಂಬಿಕೆಗೆ ಅರ್ಹವಾಗಿರಲಾರದು. ಸುರಕ್ಷತೆಯ ಅಪಾಯ ಕೂಡಾ ಇರಬಹುದು.

English summary

How to Check Your CIBIL Score Online, Here's A Step-By-Step Guide

How to Check Your CIBIL Score Online, Here's A Step-By-Step Guide in kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X