For Quick Alerts
ALLOW NOTIFICATIONS  
For Daily Alerts

ವಾಟ್ಸಾಪ್‌ ಬಳಸಿಕೊಂಡು ಆಧಾರ್, ಪ್ಯಾನ್ ಡೌನ್‌ಲೋಡ್ ಹೀಗೆ ಮಾಡಿ

|

ಡಿಜಿಲಾಕರ್, ಭಾರತೀಯ ಆನ್‌ಲೈನ್ ಡಿಜಿಟಲೀಕರಣ ಸೇವೆಯನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಒಂದೆರಡು ವರ್ಷಗಳ ಹಿಂದೆ ಪ್ರಾರಂಭ ಮಾಡಿತು. ಈ ಡಿಜಿಲಾಕರ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ ಮತ್ತು ನಮ್ಮ ಶಿಕ್ಷಣದ ಮಾರ್ಕ್ ಶೀಟ್‌ನಂತಹ ದಾಖಲೆಗಳನ್ನು ಡಿಜಿಟಲ್ ಸ್ವರೂಪದಲ್ಲಿ ಪಡೆಯಲು ಸಾಧ್ಯವಾಗಲಿದೆ.

 

ಆಧಾರ್ ಹೊಂದಿರುವವರು ಮೀಸಲಾದ ಡಿಜಿಲಾಕರ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ಗೆ ಆಕ್ಸಸ್‌ ಹೊಂದಿದ್ದರೆ, ಅದರ ಸೇವೆಯನ್ನು ವಾಟ್ಸಾಪ್‌ನಲ್ಲಿಯೂ ಪಡೆಯಲು ಸಾಧ್ಯವಾಗಲಿದೆ. MyGov Helpdesk WhatsApp ಚಾಟ್‌ಬಾಟ್ ಅನ್ನು ಬಳಸಿಕೊಂಡು, ಜನರು ತಮ್ಮ ದಾಖಲೆಗಳನ್ನು ಡಿಜಿಲಾಕರ್‌ನಿಂದ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಅಂದರೆ ಪ್ಯಾನ್, ಆಧಾರ್ ಕಾರ್ಡ್‌ನಂತಹ ದಾಖಲೆಗಳನ್ನು ಕೂಡಾ ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ.

MyGov ಹೆಲ್ಪ್‌ಡೆಸ್ಕ್ ಚಾಟ್‌ಬಾಟ್ ಅನ್ನು ಬಳಸಿಕೊಂಡು, ಕೆಲವು ಸರಳ ಹಂತಗಳಲ್ಲಿ ನಾವು ಯಾವುದೇ ಅಧಿಕೃತ ದಾಖಲೆಗಳನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಆಧಾರ್ ಕಾರ್ಡ್, ಪ್ಯಾನ್, ಡ್ರೈವಿಂಗ್ ಲೈಸೆನ್ಸ್, ಮಾರ್ಕ್ ಶೀಟ್‌ಗಳು ಮತ್ತು ಇತರ ದಾಖಲೆಗಳು ಡೌನ್‌ಲೋಡ್ ಮಾಡಲು ಸಾಧ್ಯವಾಗಲಿದೆ.

ಡಿಜಿಲಾಕರ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಬಳಕೆ ಮಾಡದವುರ ವಾಟ್ಸಾಪ್ ಚಾಟ್‌ಬಾಟ್ ಸೇವೆಯು ಸಹಾಯ ಮಾಡಬಹುದು. ನಿಮ್ಮ ಆಧಾರ್ ಕಾರ್ಡ್‌ನಿಂದ ನಿಮ್ಮ ಪ್ಯಾನ್ ಮತ್ತು ನಿಮ್ಮ ಮಾರ್ಕ್ ಶೀಟ್‌ಗಳು ಸಹ ನಿಮಗೆ ವಾಟ್ಸಾಪ್‌ನಲ್ಲೇ ಲಭ್ಯವಾಗಲಿದೆ. ಹಾಗಾದರೆ ನೀವು ದಾಖಲೆಗಳನ್ನು ಹೇಗೆ ಡೌನ್‌ಲೋಡ್ ಮಾಡುವುದು ಎಂದು ಈ ಕೆಳಗೆ ವಿವರಿಸಲಾಗಿದೆ ಮುಂದೆ ಓದಿ...

ವಾಟ್ಸಾಪ್‌ ಬಳಸಿಕೊಂಡು ಆಧಾರ್, ಪ್ಯಾನ್ ಡೌನ್‌ಲೋಡ್ ಹೀಗೆ ಮಾಡಿ

ವಾಟ್ಸಾಪ್ ಮೂಲಕ ಆಧಾರ್, ಪ್ಯಾನ್ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ MyGov HelpDesk ಸಹಾಯವಾಣಿ +91-9013151515 ಅನ್ನು ಸೇವ್ ಮಾಡಿಕೊಳ್ಳಿ
ಹಂತ 2: ವಾಟ್ಸಾಪ್ ಅಪ್ಲಿಕೇಶನ್ ತೆರೆದು ರಿಫ್ರೆಶ್ ಮಾಡಿಕೊಳ್ಳಿ
ಹಂತ 3: MyGov HelpDesk ಸರ್ಚ್ ಮಾಡಿ ತೆರೆದು Namaste'/'Hi ಕಳುಹಿಸಿ
ಹಂತ 4: "CO-WIN Services" or the "Digilocker Services" ಎಂಬ ಆಯ್ಕೆಯನ್ನು ನೀಡಲಾಗುತ್ತದೆ
ಹಂತ 5: Digilocker Services ಎಂದು ಒತ್ತಿ, ನೀವು ಡಿಜಿಲಾಕರ್ ಖಾತೆಯನ್ನು ಹೊಂದಿದ್ದೀರಾ ಎಂದು ಕೇಳಲಾಗುತ್ತದೆ. Yes ಅಥವಾ NO ಆಯ್ಕೆ ಕ್ಲಿಕ್ ಮಾಡಿ
ಹಂತ 6: ಡಿಜಿಲಾಕರ್ ಖಾತೆಯನ್ನು ಹೊಂದಿಲ್ಲದಿದ್ದರೆ ಖಾತೆ ತೆರೆಯಬೇಕಾಗುತ್ತದೆ
ಹಂತ 7: ಚಾಟ್‌ಬಾಟ್ ಈಗ ನಿಮ್ಮ ಡಿಜಿಲಾಕರ್ ಖಾತೆಯನ್ನು ಲಿಂಕ್ ಮಾಡಲು ಮತ್ತು ದೃಢೀಕರಿಸಲು ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ಕೇಳುತ್ತದೆ. ಆಧಾರ್ ಸಂಖ್ಯೆ ಕಳುಹಿಸಿ
ಹಂತ 8: ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಬರಲಿದೆ, ಅದನ್ನು ಚಾಟ್‌ಬಾಟ್‌ಗೆ ನೀಡಿ
ಹಂತ 9: ನಿಮ್ಮ ಡಿಜಿಲಾಕರ್ ಖಾತೆಯೊಂದಿಗೆ ಲಿಂಕ್ ಮಾಡಲಾದ ಡಾಕ್ಯುಮೆಂಟ್‌ಗಳ ಪಟ್ಟಿಯನ್ನು ಚಾಟ್‌ಬಾಟ್ ನೊಮಗೆ ತೋರಿಸುತ್ತದೆ.
ಹಂತ 10: ಡಾಕ್ಯೂಮೆಂಟ್ ಸಂಖ್ಯೆಯನ್ನು ಟೈಪ್ ಮಾಡಿ ಕಳುಹಿಸಿ, ನಿಮಗೆ PDF ಫಾರ್ಮ್ಯಾಟ್‌ನಲ್ಲಿ ಡಾಕ್ಯೂಮೆಂಟ್ ಲಭ್ಯವಾಗಲಿದೆ.

English summary

How to Download Aadhaar, Other Documents on Your Phone Using WhatsApp, Steps Here

How to Download Aadhaar, PAN Card, Other Documents on Your Phone Using WhatsApp: Step By Step Guide Here. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X